ETV Bharat / health

ಪೋಷಕರೇ ಎಚ್ಚರ: ಮಕ್ಕಳು ಶಾಲೆಗೆ ಚಕ್ಕರ್​ ಹೊಡೆಯಲು ಕಾರಣವಾಗಬಹುದು ಈ ಮೊಬೈಲ್​ ಗೀಳು - too much time online linked to risk - TOO MUCH TIME ONLINE LINKED TO RISK

ಅತಿಯಾದ ಮೊಬೈಲ್​ ಬಳಕೆಯಿಂದ ಊಟ, ನಿದ್ರೆ, ವ್ಯಾಯಾಮದ ಮೇಲೆ ಗಮನ ತಪ್ಪಿ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ.

too much time online linked to risk of school absence among teens

author img

By IANS

Published : Apr 18, 2024, 10:25 AM IST

ನವದೆಹಲಿ: ಮೊಬೈಲ್​ ಚಟ ಎಲ್ಲ ವಯೋಮಾನದವರನ್ನು ಬಾಧಿಸುವ ಸಮಸ್ಯೆಯಾಗಿದೆ. ಅದರಲ್ಲೂ ಹದಿಹರೆಯದರಲ್ಲಿ ಹೆಚ್ಚಿನ ಮಟ್ಟದಲ್ಲಿರುವ ಈ ಗೀಳು ಅಗತ್ಯ ಚಟುವಟಿಕೆಗಳಾದ ತಿನ್ನುವುದು, ಮಲಗುವುದು ಮತ್ತು ವ್ಯಾಯಾಮಗಳನ್ನು ಮರೆಯುವ ಜೊತೆಗೆ ಶಾಲೆಗಳಿಗೆ ಗೈರಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಫಿನ್​​​ಲ್ಯಾಂಡ್​ ​ ಸಂಶೋಧಕರು ಪತ್ತೆ ಮಾಡಿದ್ದಾರೆ.

ಬಾಲಕರಿಗಿಂತ ಬಾಲಕಿಯರು ಅಧಿಕ ಮಟ್ಟದಲ್ಲಿ ಇಂಟರ್ನೆಟ್ ಬಳಕೆ ಮಾಡುತ್ತದೆ. ಯುವಕರಿಗಿಂತ ಸಾಮಾಜಿಕ ಮಾಧ್ಯಮದಲ್ಲಿ ಯುವತಿಯರು ಇದರ ಬಳಕೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತಾರೆ ಎಂಬುದು ಅಧ್ಯಯನದಲ್ಲಿ ಬಹಿರಂಗವಾಗಿದೆ. ಆದಾಗ್ಯೂ ಬಾಲಕಿಯರಿಗಿಂತ ಬಾಲಕರೇ ಶಾಲೆಗೆ ಗೈರಾಗುವ ಪ್ರಮಾಣ ಹೆಚ್ಚಿದೆ ಎಂದು ವರದಿ ಪತ್ತೆ ಮಾಡಿದೆ. ಇನ್ನು ಬಾಲಕಿಯರು ಗೈರಾದರೂ ಅವರು ವೈದ್ಯಕೀಯ ಕಾರಣಗಳಿಂದ ಗೈರಾಗುವುದು ಕಂಡು ಬಂದಿದೆ.

ಹೆಲ್ಸಿಂಕಿಯ ಯುನಿವರ್ಸಿಟಿ ಸಂಶೋಧಕರು ಈ ಅಧ್ಯಯನ ನಡೆಸಿದ್ದು, ರಾತ್ರಿ 8 ರಿಂದ10 ಗಂಟೆಗಳ ನಿದ್ರೆ, ವ್ಯಾಯಾಮ ಹಾಗೂ ಪೋಷಕರಲ್ಲಿ ವಿಶ್ವಾಸಾರ್ಹ ಸಂಬಂಧವು ರಕ್ಷಣಾತ್ಮಕವಾಗಿದೆ ಎಂದು ತಿಳಿಸಿದ್ದಾರೆ. ಈ ಅಧ್ಯಯನವನ್ನು ಆರ್ಕೈವ್ಸ್ ಆಫ್​ ಡೀಸಿಸ್​ ಇನ್​ ಚಿಲ್ಡ್ರನ್​ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ.

ಅಧ್ಯಯನಕ್ಕಾಗಿ ಸಂಶೋಧಕರು 14 ರಿಂದ 16 ವರ್ಷದ 86 ಸಾವಿರ ಹದಿಹರೆಯದವರ ದತ್ತಾಂಶವನ್ನು ವಿಶ್ಲೇಷಣೆ ನಡೆಸಿದರು. ಅವರ ಶಾಲಾ ಆರೋಗ್ಯ ಪ್ರಚಾರದ ಅಧ್ಯಯನ, ನ್ಯಾಷನಲ್​ ಬೈನ್ನಿಯಲ್​ ಸರ್ವೆಯಿಂದ ಮಾಹಿತಿ ಪಡೆದರು. ಜೊತೆಗೆ ಹದಿಹರೆಯದರಿಗೆ ತಮ್ಮ ಪೋಷಕರ ಜೊತೆಗಿನ ಸಂಬಂಧ ಸೇರಿದಂತೆ ಅವರ ಜೊತೆ ಮುಕ್ತವಾಗಿ ಮಾಹಿತಿ ಹಂಚಿಕೊಳ್ಳುವುವಿಕೆ, ಹಾಗೇ ನಿದ್ರೆ, ದೈಹಿಕ ಚಟುವಟಿಕೆ ಕುರಿತು ಮಾಹಿತಿ ಕೇಳಿದರು.

ಹದಿಹರೆಯದವರ ಇಂಟರ್ನೆಟ್​ ಬಳಕೆ ಮೌಲ್ಯಮಾಪನಕ್ಕೆ ಅತಿಯಾದ ಇಂಟರ್​ನೆಟ್​ ಬಳಕೆ (ಇಐಯು) ಎಂಬ ಸ್ಕೇಲ್​ ಬಳಕೆ ಮಾಡಿದ್ದಾರೆ. ಇದರಲ್ಲಿ ಆನ್​ಲೈನ್​ನಲ್ಲಿರುವ ಕಾರಣ ಕುಟುಂಬ, ಸ್ನೇಹಿತರು ಮತ್ತು ಅಧ್ಯಯನದ ನಿರ್ಲಕ್ಷ್ಯ, ಊಟ ಮತ್ತು ನಿದ್ರೆ ಕೊರತೆಯನ್ನು ಗಮನಿಸಲಾಗಿದೆ.

ಈ ವೇಳೆ ಹುಡುಗರಿಗಿಂತ ಹುಡುಗಿಯರು ಶೇ 96ರಷ್ಟಿ ಇಂಟರ್ನೆಟ್ ಬಳಕೆ ಇಷ್ಟಪಟ್ಟರೆ, 79ರಷ್ಟು ಯುವತಿಯರು ಅತಿಯಾದ ಬಳಕೆಯನ್ನು ಇಷ್ಟಪಡುತ್ತಾರೆ. ಮೂರನೇ ಒಂದು ಭಾಗದಷ್ಟು ಜನರು ವಾರದಲ್ಲಿ ಮೂರು ದಿನ ಇಂಟರ್​ನೆಟ್​ನಿಮದ ಎಂಟು ಗಂಟೆಗಿಂತ ಕಡಿಮೆ ನಿದ್ರಿಸುತ್ತಾರೆ. ಜೊತೆಗೆ ಅವರ ದೈಹಿಕ ಚಟುವಟಿಕೆ ಮಟ್ಟ ಕೂಡ ಕಡಿಮೆ ಇದೆ ಎಂಬುದು ಕಂಡು ಬಂದಿದೆ.

ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಕಳೆಯುವುದು ವೈದ್ಯಕೀಯ ಕಾರಣಗಳಿಂದಾಗಿ ಶೇ 38ರಷ್ಟು ಮಂದಿ ಅಪಾಯಕ್ಕೆ ಒಳಗಾಗುತ್ತಾರೆ. ಶೇ 24ರಷ್ಟು ಮಂದಿ ವೈದ್ಯಕೀಯ ಕಾರಣದಿಂದ ಶಾಲೆ ತಪ್ಪಿಸುತ್ತಾರೆ ಎಂಬುದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

ನಮ್ಮ ಅಧ್ಯಯನದ ಫಲಿತಾಂಶವೂ ವೃತ್ತಿಪರ ಸಂಘಟಕರು ಮತ್ತು ಶಾಲೆಗಳಲ್ಲಿ ಮಕ್ಕಳ ಆರೋಗ್ಯ ಸೇವೆ ನಡೆಸುವವರಿಗೆ ಸಹಾಯವಾಗಲಿದೆ. ವಿಶೇಷವಾಗಿ ಅವರು ಶಾಲೆಗೆ ಗೈರಾಗುವ ವಿಚಾರದಲ್ಲಿ ಸಮಸ್ಯೆ ಪತ್ತೆಗೆ ಸಹಾಯ ಮಾಡುತ್ತದೆ ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಮಕ್ಕಳು ಊಟ ಮಾಡುವಾಗ ಮಾತ್ರವೇ ಮೊಬೈಲ್​ ನೋಡಿದರೂ ಕಣ್ಣಿಗೆ ಅಪಾಯ: ವೈದ್ಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.