ನಿಮ್ಮ ನಾಲಿಗೆಯ ಬಣ್ಣ ನಿಮ್ಮ ಆರೋಗ್ಯದ ಬಗ್ಗೆ ಪ್ರಮುಖ ಸುಳಿವು ನೀಡುತ್ತದೆ. ಆರೋಗ್ಯವಂತ ವ್ಯಕ್ತಿಯ ನಾಲಿಗೆ ಸಾಮಾನ್ಯವಾಗಿ ತಿಳಿ ಗುಲಾಬಿ ಬಣ್ಣದಲ್ಲಿ ಕಾಣುತ್ತದೆ. ಕೆರಾಟಿನ್ನ ತಿಳಿ ಬಿಳಿ ಪದರ ಹೊಂದಿರಬಹುದು. ಕೆರಾಟಿನ್ನ ಈ ಪದರವು ರಕ್ಷಣಾತ್ಮಕ ಪ್ರೋಟೀನ್ ಆಗಿದ್ದು, ಅದು ತಿನ್ನುವ ಸಮಯದಲ್ಲಿ ನಾಲಿಗೆಗೆ ಹಾನಿಯಾಗದಂತೆ ತಡೆಯುತ್ತದೆ.
ಸಾಮಾನ್ಯ ನಾಲಿಗೆ ನಯವಾಗಿರಬೇಕು, ಚಪ್ಪಟೆಯಾಗಿರಬೇಕು ಮತ್ತು ಪಾಪಿಲ್ಲೆ ಎಂಬ ಸಣ್ಣ ಉಬ್ಬುಗಳಿಂದ ಮುಚ್ಚಿರಬೇಕಾಗಿರುತ್ತದೆ. ಇವುಗಳು ರುಚಿ ಗ್ರಹಿಕೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಆಹಾರವನ್ನು ಸುಲಭವಾಗಿ ನುಂಗಲು ಮತ್ತು ಆಹಾರದ ತಾಪಮಾನ ಮತ್ತು ಸ್ಪರ್ಶವನ್ನು ಗ್ರಹಿಸುತ್ತವೆ. ನಿಮ್ಮ ನಾಲಿಗೆ ಸಾಮಾನ್ಯವಾಗಿ ಇರುವುದಕ್ಕಿಂತ ವಿಭಿನ್ನವಾಗಿ ಕಂಡುಬಂದರೆ, ಅದು ಆರೋಗ್ಯದ ಸಮಸ್ಯೆಯ ಸಂಕೇತವನ್ನು ಸೂಚಿಸುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ನಾಲಿಗೆಯ ಮೇಲೆ ದಪ್ಪ ಬಿಳಿ ಚುಕ್ಕೆಗಳು: ಇವುಗಳು ಥ್ರಷ್ ಎಂಬ ಯೀಸ್ಟ್ ಸೋಂಕಿನ ಸಂಕೇತವಾಗಿರಬಹುದು. ಈ ರೀತಿಯ ಲಕ್ಷಣಗಳಿಂದ ಮಧುಮೇಹ, ಎಚ್ಐವಿ ಸೇರಿದಂತೆ ವಿವಿಧ ರೋಗಗಳ ಕುರಿತು ತಿಳಿಸುತ್ತದೆ. ಬಿಳಿ ಚುಕ್ಕೆಗಳು ಕೆಲವೊಮ್ಮೆ ಬಾಯಿ ಕ್ಯಾನ್ಸರ್‌ನ ಸಂಕೇತವೂ ಆಗಿರಬಹುದು.
ಕಂದು ಅಥವಾ ಕಪ್ಪು ನಾಲಿಗೆ: ಕಂದು ಅಥವಾ ಕಪ್ಪು ನಾಲಿಗೆಯ ಸಂಕೇತವು ಅಲ್ಲಿ ಪಾಪಿಲ್ಲೆಗಳು ಉದ್ದವಾಗುತ್ತವೆ ಮತ್ತು ಬ್ಯಾಕ್ಟೀರಿಯಾ ಮತ್ತು ವರ್ಣದ್ರವ್ಯವನ್ನು ಹಿಡಿಯುತ್ತವೆ. ಈ ಸ್ಥಿತಿಯು ಬಾಯಿಯ ಅನೈರ್ಮಲ್ಯ, ಕಾಫಿ ಅಥವಾ ಕಪ್ಪು ಚಹಾದ ಅತಿಯಾದ ಸೇವನೆ, ಧೂಮಪಾನ ಮತ್ತು ಕೆಲವು ಔಷಧಿಗಳಿಂದ ಕಂದು ಅಥವಾ ಕಪ್ಪು ನಾಲಿಗೆ ಕಾಣಿಸುತ್ತದೆ.
ಹೊಳೆಯುವ ಕೆಂಪು ನಾಲಿಗೆ: ಕೆಂಪಗೆ ಹೊಳೆಯುವ ನಾಲಿಗೆ ಕಾಣಿಸಿದರೆ, ವಿಟಮಿನ್-ಬಿ 12 ಕೊರತೆ ಅಥವಾ ಸ್ಕಾರ್ಲೆಟ್ ಜ್ವರದಂತ ಸೋಂಕಿನ ಸಂಕೇತವಾಗಿರಬಹುದು. ನಾಲಿಗೆಯ ಸುತ್ತಲೂ ಹೊಳುವು ಕೆಂಪು ಕಲೆಗಳು ನಿರುಪದ್ರವ ಸ್ಥಿತಿಯ ಸಂಕೇತವಾಗಿರಬಹುದು.
ನೋವಿನ ಹುಣ್ಣುಗಳು: ನಾಲಿಗೆ ಮೇಲಿನ ಕೆಂಪು ಅಥವಾ ಹಳದಿ ಹುಣ್ಣುಗಳು ಥ್ರಷ್, ಕ್ಯಾಂಕರ್ ಹುಣ್ಣುಗಳು ಅಥವಾ ಅಪರೂಪದ ಸಂದರ್ಭಗಳಲ್ಲಿ ಬಾಯಿಯ ಕ್ಯಾನ್ಸರ್ ಆಗಿರಬಹುದು.
ಹಲ್ಲು, ನಾಲಿಗೆ ಸ್ವಚ್ಛಗೊಳಿಸಿ: ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯಕ. ಬ್ಯಾಕ್ಟೀರಿಯಾ ಮತ್ತು ಕೊಳೆಯನ್ನು ತೆಗೆದುಹಾಕಲು ನಿಮ್ಮ ಹಲ್ಲುಗಳನ್ನು ಮತ್ತು ನಿಮ್ಮ ನಾಲಿಗೆಯನ್ನು ಬ್ರಷ್ ಮಾಡಿ ಅಥವಾ ಸ್ವಚ್ಛಗೊಳಿಸಿ.
ನಿಮ್ಮ ನಾಲಿಗೆಯಲ್ಲಿ ಯಾವುದೇ ಆತಂಕಕಾರಿ ಬದಲಾವಣೆಗಳನ್ನು ನೀವು ಗಮನಿಸಿದರೆ, ವಿಶೇಷವಾಗಿ ನೋಯುತ್ತಿರುವ ಗಂಟಲು ಅಥವಾ ಜ್ವರದಂತಹ ಇತರ ಲಕ್ಷಣಗಳು ಕಂಡುಬಂದರೆ, ಸಂಪೂರ್ಣ ಪರೀಕ್ಷೆಗಾಗಿ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ: ನೀವು ದೈಹಿಕವಾಗಿ ಫಿಟ್ ಆಗಿರಲು ಬಯಸುವಿರಾ? ವೈದ್ಯರು ನೀಡಿದ ಈ ಸಲಹೆಗಳನ್ನು ಇಂದಿನಿಂದಲೇ ಪಾಲಿಸಿ - Fitness Tips