ಹೈದರಾಬಾದ್: ಮಧುಮೇಹ ಎಂಬುದು ಸೈಲೆಂಟ್ ಕಿಲ್ಲರ್ನಂತೆ. ಇದರ ನಿಯಂತ್ರಣಕ್ಕೆ ನಿಯಮಿತ ವ್ಯಾಯಾಮ, ಡಯಟ್ ಅತ್ಯಗತ್ಯ. ಹೆಚ್ಚು ವ್ಯಾಯಾಮದ ಅಭ್ಯಾಸದ ಹೊರತಾಗಿಯೂ ಸರಳ ಆಹಾರ ಪದ್ಧತಿ ಬದಲಾವಣೆ ಮಾಡುವ ಮೂಲಕ ಈ ಮಧುಮೇಹ ನಿಯಂತ್ರಿಸಬಹುದು ಎನ್ನುತ್ತಾರೆ ತಜ್ಞರು. ದೈನಂದಿನ ಡಯಟ್ನಲ್ಲಿನ ಸಣ್ಣ ಬದಲಾವಣೆ ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹ ನಿಯಂತ್ರಣದಲ್ಲಿಡಲು ಸಮತೋಲಿತ ಆಹಾರ ಮತ್ತು ನಿಯಮಿತ ಚಟುವಟಿಕೆ ಅವಶ್ಯವಾಗಿದೆ. ಅದರಲ್ಲೂ ನಿಮ್ಮ ದೈನಂದಿನ ಆಹಾರದಲ್ಲಿ ಬೆಳಗಿನ ಸಮಯದಲ್ಲಿ ಈ ಆಹಾರ ಅಭ್ಯಾಸ ನಡೆಸುವುದು ಹೆಚ್ಚು ನಿರ್ಣಾಯಕವಾಗಿದೆ.
ಮಧುಮೇಹಿಗಳು ಬೆಳಗ್ಗಿನ ಹೊತ್ತು ಅರ್ಧ ಗಂಟೆಯ ವಾಕಿಂಗ್ ಜೊತೆಗೆ ಸರಳ ಕಾರ್ಬೋಹೈಡ್ರೇಟ್ ಆಹಾರ ಸೇವಿಸುವುದು ಅತ್ಯುತ್ತಮ. ಅದರಲ್ಲೂ ಕೆಲವು ಜ್ಯೂಸ್ಗಳು ಮಧುಮೇಹಕ್ಕೆ ರಾಮಬಾಣವಾಗಿದ್ದು, ಅವು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂದಿದ್ದಾರೆ.
ಹಾಗಲಕಾಯಿ: ಹಾಗಲಕಾಯಿ ಜ್ಯೂಸ್ ಕೂಡ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಬೆಳಗಿನ ಹೊತ್ತು ಇವುಗಳ ಸೇವನೆಯಿಂದ ಇನ್ಸುಲಿನ್ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹದ ಅಪಾಯವನ್ನು ತಡೆಯುತ್ತದೆ. ಇದರಲ್ಲಿನ ಪೊಲಿಪೆಟೈಡ್ - ಪಿಯು ಇನ್ಸುಲಿನ್ ಸುಧಾರಣೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ವಿಸಿನ್ ಮತ್ತು ಲೆಕ್ಟಿನ್ ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಸ್ರವಿಸುವಿಕೆ ಉತ್ತೇಜಿಸುತ್ತದೆ. ಗ್ಲೂಕೋಸ್ ನಿಧಾನಗತಿಯ ಬಳಕೆಗೆ ಕಾರಣವಾಗುತ್ತದೆ.
ಮೆಂತ್ಯೆ: ಮೆಂತ್ಯೆ ಮಧುಮೇಹ ನಿಯಂತ್ರಣಕ್ಕೆ ಅತ್ಯುತ್ತಮವಾಗಿದೆ. ರಾತ್ರಿ ನೆನಸಿದ ಮೆಂತ್ಯೆಯನ್ನು ಬೆಳಗ್ಗೆ ಸೇವಿಸುವುದರಿಂದ ಗ್ಲೆಸೆಮಿಕ್ ನಿಯಂತ್ರಣವಾಗುತ್ತದೆ. ಮೆಂತ್ಯೆ ಹಸಿವನ್ನು ಕಡಿಮೆ ಮಾಡಿ, ತೂಕ ನಿರ್ವಹಣೆ ಮಾಡುತ್ತದೆ. ಮೆಂತ್ಯ ಒಟ್ಟಾರೆ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಇದು ಔಷಧೀಯ ರೀತಿಯ ಕಾರ್ಯಾಚರಣೆ ನಡೆಸುವ ಮೂಲಕ ಮಧುಮೇಹಿಗಳಲ್ಲಿ ಹೃದಯ ಸಮಸ್ಯೆ ತಡೆಯುತ್ತದೆ.
ನೆಲ್ಲಿಕಾಯಿ: ವಿಟಮಿನ್ ಸಿ ಯಥೇಚ್ಛವಾಗಿರುವ ಇದರಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ವಿರೋಧಿ ಗುಣವಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದ ಸಕ್ಕರೆ ಮಟ್ಟ ನಿಯಂತ್ರಣವಾಗುತ್ತದೆ. ಬೆಳಗಿನ ಹೊತ್ತು ನೆಲ್ಲಿಕಾಯಿ ಜ್ಯೂಸ್ ಸೇವನೆಯಿಂದ ಮಧುಮೇಹ ತಡೆಗಟ್ಟುವ ಪರಿಣಾಮಕಾರಿ ತಂತ್ರವಾಗಿದೆ.
ಅರಿಶಿಣ: ಇದು ಕೂಡ ಉರಿಯೂತ ಮತ್ತು ಉತ್ಕರ್ಷಣ ವಿರೋದ ಪರಿಣಾಮ ಹೊಂದಿದೆ. ಇದು ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡಿ, ಇನ್ಸುಲಿನ್ ಸಂವೇದನಾ ಸುಧಾರಣೆ ಮಾಡುತ್ತದೆ. ನಿತ್ಯ ಹಾಲಿಗೆ ಒಂದು ಚಿಟಿಕೆ ಅರಿಶಿಣ ಬೇರಸಿ ಸೇವಿಸುವುದರಿಂದ ದಿನವೀಡಿ ಉತ್ಸಾಹದಿಂದಲೂ ಇರಬಹುದು.
ಚಕ್ಕೆ: ಇದು ಕೂಡ ಇನ್ಸುಲಿನ್ ಸಂವೇದನವನ್ನು ಸುಧಾರಿಸುತ್ತದೆ. ಗ್ಲುಕೋಸ್ ಚಯಾಪಚಯದ ಮೇಲೆ ಪ್ರಭಾವ ಬೀರುವ ಮೂಲಕ ಮಧುಮೇಹ ನಿಯಂತ್ರಣ ಮಾಡುತ್ತದೆ. ಇದರಲ್ಲಿ ಸಮೃದ್ಧ ಉತ್ಕರ್ಷಣಾ ವಿರೋಧಿ ಅಂಶ ಇದ್ದು, ಒತ್ತಡದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಈ ಹಿನ್ನೆಲೆಯಲ್ಲಿ ಟೀಗೆ ಒಂದು ಚಿಟಿಕೆ ಚಕ್ಕೆ ಸೇರಿಸುವುದು ಉತ್ತಮವಾಗಿದೆ.
ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಮತ್ತು ಸಲಹೆಗಳು ಕೇವಲ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಈ ಸಂಬಂಧಿತ ಪರಿಣತರ ಬಳಿ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ಎಣ್ಣೆ ಬೇಕಿಲ್ಲ, ಒಲೆಯ ಅಗತ್ಯವೂ ಇಲ್ಲ: ಈ ಹಸಿಮೆಣಸಿನಕಾಯಿ ಚಟ್ನಿ ತಿಂದರೆ ಆಹಾ ಎನ್ನದೇ ಇರಲ್ಲ!