ಹೈದರಾಬಾದ್: ವೇಗವಾಗಿ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಆಹಾರ ಶೈಲಿ ಕೂಡ ಬದಲಾಗಿದೆ. ದೇಹದ ಆರೋಗ್ಯ ವೃದ್ಧಿಗೆ ಬೇಕಾಗಿರುವ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳು ಈಗೀಗ ಸಿಗುತ್ತಿಲ್ಲ. ಇದರಿಂದ ಅನಾರೋಗ್ಯ ಸಮಸ್ಯೆಗೆ ಬೇಗ ತುತ್ತಾಗುವ ಸಾಧ್ಯತೆಗಳಿವೆ . ಈ ಹಿನ್ನೆಲೆ ದೇಹದ ಆರೋಗ್ಯವನ್ನು ವೃದ್ಧಿಸಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಅಗತ್ಯವಾಗಿದೆ.
ಕೋವಿಡ್ ಬಳಿಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಅವಶ್ಯ ಎಂಬುದು ಬಹುತೇಕರ ಅರಿವಿಗೆ ಬಂದಿದೆ. ಇದೇ ಕಾರಣದಿಂದ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಈ ಸೂಪರ್ಫುಡ್ಗಳನ್ನು ನಿಮ್ಮ ಆರೋಗ್ಯದಲ್ಲಿ ಸೇರಿಸುವುದು ಅವಶ್ಯವಾಗಿದೆ. ಅವುಗಳ ಪಟ್ಟಿ ಇಲ್ಲಿದೆ.
ವಿಟಮಿನ್ ಸಿ: ಇದು ದೇಹಕ್ಕೆ ಅತ್ಯಗತ್ಯವಾಗಿದೆ. ಕೋಸು, ಸ್ಟ್ರಾಬೆರಿ, ಕಿವಿ ಹಣ್ಣು, ದ್ರಾಕ್ಷಿ, ಕಿತ್ತಳೆಯಂತಹ ಆಹಾರದಲ್ಲಿ ಇದನ್ನು ಯಥೇಚ್ಛವಾಗಿ ಪಡೆಯಬಹುದು. ವಿಟಮಿನ್ ಸಿ ದೇಹದಲ್ಲಿನ ರೋಗಗಳ ವಿರುದ್ಧ ಹೋರಾಡಲು ಶಕ್ತಿಯನ್ನು ನೀಡುತ್ತದೆ.
ವಿಟಮಿನ್ ಇ: ಇದು ಕೂಡ ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬೀಜಗಳು ಮತ್ತು ಸೊಪ್ಪಿನಿಂದ ನಾವು ವಿಟಮಿನ್ ಇ ಅನ್ನು ಹೇರಳವಾಗಿ ಪಡೆಯುತ್ತೇವೆ. ವಿಟಮಿನ್ ಇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.
ಬೇರು ತರಕಾರಿಗಳು ಮತ್ತು ಸೊಪ್ಪಿನಿಂದ ಪಡೆದ ಬೀಟಾ- ಕ್ಯಾರೋಟಿನ್ ಸಹ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಬೀಟಾ ಕ್ಯಾರೋಟಿನ್ ಅನ್ನು ವಿಟಮಿನ್ ಎ ಆಗಿ ಪರಿವರ್ತಿಸಲಾಗುತ್ತದೆ. ಇದು ದೇಹದಲ್ಲಿ ಉರಿಯೂತ ಕಡಿಮೆ ಮಾಡಿ ಪ್ರತಿಕಾಯಗಳು ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬೀಟಾ ಕ್ಯಾರೋಟಿನ್ ಅನ್ನು ಏಪ್ರಿಕಾಟ್‌ಗಳು, ಸಿಹಿ ಆಲೂಗಡ್ಡೆ, ಸ್ಕ್ವ್ಯಾಷ್, ಕ್ಯಾಂಟಲೌಪ್, ಕ್ಯಾರೆಟ್, ಪಾಲಕದಿಂದ ಪಡೆಯಬಹುದಾಗಿದೆ.
ವಿಟಮಿನ್ ಡಿ: ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಹಸಿರು ಚಹಾವನ್ನು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ತೆಗೆದುಕೊಳ್ಳಬಹುದು. ಜೊತೆಗೆ ದೇಶಕ್ವಿಕೆ ಟಮಿನ್ ಡಿ ಕೂಡ ನಮಗೆ ಬಹಳ ಮುಖ್ಯ. ನಾವು ಅದನ್ನು ಸೂರ್ಯನ ಬೆಳಕು, ಮೀನು ಮತ್ತು ಮೊಟ್ಟೆಗಳಿಂದ ಪಡೆಯುತ್ತೇವೆ. ವಾರಕ್ಕೆ ಮೂರು ಬಾರಿ ಸೂರ್ಯನಿಗೆ 13 ರಿಂದ 15 ನಿಮಿಷಗಳ ಕಾಲ ಮೈಯೊಡ್ಡುವುದರಿಂದ ವಿಟಮಿನ್ ಡಿ ಪಡೆಯಬಹುದಾಗಿದೆ.
ದೇಹದ ನೀರಿನ ಕೊರತೆ ನಿವಾರಿಸುವ ಸೌತೆಕಾಯಿ, ಕಲ್ಲಂಗಡಿಗಳು ದೇಹವನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ. ಹಾಗೇ ನೀರಿನಲ್ಲಿ ನಿಂಬೆ, ಕಲ್ಲಂಗಡಿ, ಸೌತೆಕಾಯಿ ಅಥವಾ ಪುದೀನಾವನ್ನು ಬಳಸಿ ಡಿಟಾಕ್ಸ್ ನೀರನ್ನು ಕೂಡ ಪಡೆಯಬಹುದಾಗಿದೆ.
ಇದನ್ನೂ ಓದಿ: ಬಿಪಿ, ರಕ್ತದೊತ್ತಡದಿಂದ ಬಳಲುವವರಿಗೆ ಹರ್ಬಲ್ ಟೀ ರಾಮಬಾಣ