ನವದೆಹಲಿ: ರೋಗ ಅಥವಾ ಇನ್ನಿತರ ಕಾಯಿಲೆಗಳನ್ನು ತಡೆಗಟ್ಟುವ ಉದ್ದೇಶದಿಂದ ಕಳೆದೊಂದು ವರ್ಷದಲ್ಲಿ ದೇಶದಲ್ಲಿ ಆಯುಷ್ ಚಿಕಿತ್ಸೆ ಬಳಕೆಗೆ ಜನರ ಮುಂದಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 46ರಷ್ಟು ಮತ್ತು ನಗರ ಪ್ರದೇಶದಲ್ಲಿ ಶೇ 53ರಷ್ಟು ಜನರು ಆಯುಷ್ ಆರೋಗ್ಯ ಸೇವೆಗೆ ಮುಂದಾಗಿದ್ದಾರೆ ಎಂದು ಮೊದಲ ಬಾರಿಗೆ ಅಖಿಲ ಭಾರತ ಮಟ್ಟದಲ್ಲಿ ನಡೆದ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (ಎನ್ಎಸ್ಎಸ್ಒ) ಅಲ್ಲಿ ಕಂಡು ಬಂದಿದೆ.
ರಾಷ್ಟ್ರೀಯ ಮಾದರಿ ಸಮೀಕ್ಷೆಯ ಭಾಗವಾಗಿ ಜುಲೈ 2022ರಿಂದ ಜೂನ್ 2023ರವರೆಗೆ ನಡೆದ ಸಮೀಕ್ಷೆಯಲ್ಲಿ ಈ ಮಾಹಿತಿ ಬಯಲಾಗಿದೆ. ಅಧ್ಯಯನದಲ್ಲಿ ಪತ್ತೆಯಾದಂತೆ ಗ್ರಾಮೀಣ ಪ್ರದೇಶದಲ್ಲಿ ಅಂದಾಜು ಶೇ 95ರಷ್ಟು ಮತ್ತು ನಗರ ಪ್ರದೇಶದಲ್ಲಿ ಶೇ 96ರಷ್ಟು ಮಂದಿ ಆಯುಷ್ ಬಗ್ಗೆ ಅರಿವು ಹೊಂದಿದ್ದಾರೆ. 1,81,298 ಮನೆಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ 1,04,195 ಮತ್ತು ನಗರ ಪ್ರದೇಶದಲ್ಲಿ 77,103 ಮನೆಗಳನ್ನ ಅಧ್ಯಯನದ ಭಾಗವಾಗಿಸಿಕೊಳ್ಳಲಾಗಿತ್ತು.
ಗ್ರಾಮೀಣ ಭಾರತದಲ್ಲಿ 15 ವರ್ಷ ಮೇಲ್ಪಟ್ಟ ಶೇ 95ರಷ್ಟು ಪುರುಷ ಮತ್ತು ಮಹಿಳೆಯರು ಆಯುಷ್ ಚಿಕಿತ್ಸೆ, ಔಷಧ ಗಿಡಗಳು, ಮನೆ ಮದ್ದು, ಸಾಂಪ್ರದಾಯಿಕ ಸ್ಥಳೀಯ ಆರೋಗ್ಯ ಚಿಕಿತ್ಸೆ, ಗ್ರಾಮೀಣ ಚಿಕಿತ್ಸೆಯ ಬಗ್ಗೆ ಜ್ಞಾನವನ್ನು ಹೊಂದಿದ್ದರೆ, ನಗರದಲ್ಲಿ ಈ ಸಂಖ್ಯೆ ಶೇ 96ರಷ್ಟಿದೆ.
ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಚಿಕಿತ್ಸೆಗೆ ಸಾಮಾನ್ಯವಾಗಿ ಆಯುರ್ವೇದ ಪದ್ಧತಿಯನ್ನು ಬಳಕೆ ಮಾಡಲಾಗುತ್ತಿದೆ. ಆಯುಷ್ ಚಿಕಿತ್ಸೆ ತಡೆಗಟ್ಟುವ ಚಿಕಿತ್ಸೆ, ಚೇತರಿಕೆಯಾಗಿ ಬಳಕೆ ಮಾಡಲಾಗುತ್ತಿದೆ. ಇದೆ ವೇಳೆ, ಸಮೀಕ್ಷೆಯಲ್ಲಿ ಮನೆಗಳಲ್ಲಿ ಆಯುಷ್ ವೈದ್ಯಕೀಯ ಚಿಕಿತ್ಸೆಗೆ ಬಳಕೆ ಮಾಡುತ್ತಿರುವ ವೆಚ್ಚಗಳ ಬಗ್ಗೆ ಕೂಡ ಮಾಹಿತಿ ಸಂಗ್ರಹಿಸಲಾಗಿದೆ.
ಸಾಂಪ್ರದಾಯಿಕ ಆರೋಗ್ಯ ವ್ಯವಸ್ಥೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸಮೀಕ್ಷೆ ಈ ಮಾಹಿತಿಯನ್ನು ಕಲೆ ಹಾಕುವ ಉದ್ದೇಶವನ್ನು ಹೊಂದಿದೆ. ರೋಗಗಳನ್ನು ತಡೆಯುವಲ್ಲಿ ಅಥವಾ ಚಿಕಿತ್ಸೆ ನೀಡುವಲ್ಲಿ ಆಯುಷ್ ಬಳಕೆ ಮತ್ತು ಮನೆ ಮದ್ದುಗಳ ಬಗ್ಗೆ ಮನೆಗಳಲ್ಲಿರುವ ಜಾಗೃತಿ, ಔಷಧೀಯ ಗಿಡ ಮತ್ತು ಸ್ಥಳೀಯ ಆರೋಗ್ಯ ಚಿಕಿತ್ಸೆ ಕುರಿತು ಅರಿವನ್ನು ಈ ಸಮೀಕ್ಷೆ ಹೊಂದಿದೆ.
ಭಾರತದಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಶೇ 79ರಷ್ಟು ಮನೆಗಳಲ್ಲಿ ಮತ್ತು ನಗರದ ಶೇ 80ರಷ್ಟು ಮನೆಗಳಲ್ಲಿ ಕನಿಷ್ಠ ಒಬ್ಬ ಸದಸ್ಯ ಇವುಗಳ ಕುರಿತು ಅರಿವು ಹೊಂದಿರುವುದು ಸಮೀಕ್ಷೆ ಫಲಿತಾಂಶದಲ್ಲಿ ಕಂಡು ಬಂದಿದೆ
ಆಯುಷ್ ಎಂಬುದು ಆಯುರ್ವೇದ, ಯೋಗ ಮತ್ತು ನೇಚರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಎಂಬ ಭಾರತದ ಆರು ಸಾಂಪ್ರದಾಯಿಕ ಚಿಕಿತ್ಸಾ ವ್ಯವಸ್ಥೆಯನ್ನು ಹೊಂದಿದೆ. (ಐಎಎಸ್ಎಸ್)
ಇದನ್ನೂ ಓದಿ: ಇಂದು 8ನೇ 'ಆಯುರ್ವೇದ ದಿನಾಚರಣೆ': ಆಯುರ್ವೇದ ಕೊಡುಗೆ ಏನು?..