ETV Bharat / health

ಮನೆಗೆ ಕೂಲರ್​ ಬೆಸ್ಟಾ? ಎಸಿನಾ?: ಆರೋಗ್ಯಕ್ಕೆ ಯಾವುದು ಅತ್ಯುತ್ತಮ ಅನ್ನೋದಕ್ಕೆ ಇಲ್ಲಿದೆ ಉತ್ತರ - Which cooler better - WHICH COOLER BETTER

metal or plastic Which cooler Best : ಬೇಸಿಗೆಯ ಬಿಸಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವೇನಾದರೂ ಕೂಲರ್ ಖರೀದಿಸಲು ಹೊರಟಿದ್ದರೆ, ಮಾರುಕಟ್ಟೆಗೆ ಹೋಗುವ ಮೊದಲು, ನಿಮ್ಮ ಮನೆಗೆ ಯಾವ ಕೂಲರ್ ಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಿ. ಯಾಕೆ ಅಂತಾ ನಾವು ಈ ಸ್ಟೋರಿಯಲ್ಲಿ ಹೇಳ್ತೇವೆ ಓದಿ.

Summer tips metal or plastic Which cooler better and gives more cold air
ಮನೆಗೆ ಕೂಲರ್​ ಬೆಸ್ಟಾ? ಎಸಿನಾ?: ಯಾವುದು ಅತ್ಯುತ್ತಮ ಅನ್ನೋದಕ್ಕೆ ಇಲ್ಲಿದೆ ಉತ್ತರ (ETV BHARAT)
author img

By ETV Bharat Karnataka Team

Published : May 6, 2024, 9:43 PM IST

ಹೈದರಾಬಾದ್: ವಿಪರೀತ ಬಿಸಿಲು, ದಗೆ, ಉಸಿರಾಡಲಿಕ್ಕೂ ಕಷ್ಟ. ಆಕಾಶದಿಂದ ಸುರಿವ ಬೆಂಕಿಯ ಉಂಡೆಯಂತಹ ಸೂರ್ಯನ ಪ್ರಖರತೆಯಿಂದ ಜನ ಜೀವನ ಹೈರಾಣಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಣ್ಣೀರು ಸೇವನೆ ಮಾಡಿ ದೇಹ ತಂಪು ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಜತೆಗೆ ಕೂಲರ್, ಎಸಿಯಂತಹ ಕೂಲ್ ಗ್ಯಾಜೆಟ್ ಗಳ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ, ನಿಮ್ಮ ಮನೆಯಲ್ಲಿ ಎಸಿ ಅಥವಾ ಕೂಲರ್ ಅನ್ನು ತರಲು ನೀವು ಯೋಜಿಸುತ್ತಿದ್ದೀರಾ? ಇಲ್ಲಿ ಕೆಲವು ವಿಷಯಗಳ ಬಗ್ಗೆ ಗಮನ ಕೊಡಬೇಕಾಗುತ್ತದೆ. ಲೋಹ ಅಥವಾ ಪ್ಲ್ಯಾಸ್ಟಿಕ್‌ ನಿಂದ ರೆಡಿ ಮಾಡಿರುವ ಕೂಲರ್ ಸೂಕ್ತವೇ, ಪ್ಲಾಸ್ಟಿಕ್​ನಿಂದ ತಯಾರಿಸಿರುವ ಕೂಲರ್​ ಬೇಕಾ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ? ಬನ್ನಿ ಯಾವುದು ಉತ್ತಮ ಎಂದು ನೋಡೋಣ

ಪ್ಲಾಸ್ಟಿಕ್ ಏರ್ ಕೂಲರ್:

1. ಪ್ಲಾಸ್ಟಿಕ್ ಬಾಡಿ ಕೂಲರ್‌ಗಳು ತೂಕದಲ್ಲಿ ಹಗುರವಾಗಿರುತ್ತವೆ.

2. ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವು ಸುರಕ್ಷಿತವೂ ಕೂಡಾ. ಏಕೆಂದರೆ ಇದು ಪ್ಲಾಸ್ಟಿಕ್ ಬಾಡಿ ಕೂಲರ್ ಅನ್ನು ಹೊಂದಿದ್ದು ವಿದ್ಯುತ್ ಆಘಾತದ ಅಪಾಯ ಇರುವುದಿಲ್ಲ.

3. ಪ್ಲಾಸ್ಟಿಕ್ ಬಾಡಿ ಕೂಲರ್ ಆಗಿರುವುದರಿಂದ ಮತ್ತೆ ಮತ್ತೆ ಪಾಲಿಶ್ ಮಾಡುವ ಅಗತ್ಯವಿಲ್ಲ.

4. ಮೆಟಲ್ ಬಾಡಿ ಕೂಲರ್‌ಗೆ ಹೋಲಿಸಿದರೆ ಪ್ಲಾಸ್ಟಿಕ್ ಬಾಡಿ ಕೂಲರ್ ಅನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗುವುದು ಸುಲಭ .

5. ಪ್ಲಾಸ್ಟಿಕ್ ಬಾಡಿ ಕೂಲರ್ ಸಣ್ಣ ಮನೆಗಳಿಗೆ ಆರಾಮದಾಯಕ.

ಮೆಟಲ್ ಬಾಡಿ ಕೂಲರ್:
1. ಮೆಟಲ್ ಬಾಡಿ ಕೂಲರ್‌ಗಳು ಪ್ಲಾಸ್ಟಿಕ್ ಬಾಡಿ ಕೂಲರ್‌ಗಳಿಗಿಂತ ಬಲವಾಗಿರುತ್ತವೆ.

2. ಮೆಟಲ್ ಬಾಡಿ ಕೂಲರ್ ಗಳು ದೊಡ್ಡ ಮನೆಗೆ ಹೆಚ್ಚಿನ ಕೂಲಿಂಗ್ ನೀಡುತ್ತವೆ.

3. ಮೆಟಲ್ ಬಾಡಿ ಕೂಲರ್ ಅನ್ನು ಮನೆಯ ಹೊರಗೆ ಕೂಡ ಹೊಂದಿಸಬಹುದು ಮತ್ತು ಅದು ಸುಲಭವಾಗಿ ಹಾಳಾಗುವುದಿಲ್ಲ.

ಏರ್ ಕೂಲರ್​ನ ಪ್ರಯೋಜನಗಳೇನು?

  • ಕೋಣೆನ್ನು ತಂಪಾಗಿಸುವ ಎಸಿಗೆ ಹೋಲಿಸಿದರೆ, ಏರ್ ಕೂಲರ್ ಬಿಸಿಗಾಳಿಯನ್ನು ತಂಪಾಗಿಸುತ್ತದೆ.
  • ಎಸಿಗೆ ಹೋಲಿಸಿದರೆ ಏರ್ ಕೂಲರ್‌ಗಳು ಅಗ್ಗದಲ್ಲಿ ದೊರೆಯುತ್ತವೆ.ಹಾಗೂ ಮೆಂಟೇನೆನ್ಸ್​ ಮಾಡುವುದು ಸುಲಭ
  • ಹವಾನಿಯಂತ್ರಣಗಳು ಹಾನಿಕಾರಕ ಕ್ಲೋರೊಫ್ಲೋರೋಕಾರ್ಬನ್‌ಗಳನ್ನು ಹೊಂದಿರುತ್ತವೆ ಮತ್ತು ಕೂಲರ್‌ಗಳು ಪರಿಸರ ಸ್ನೇಹಿಯಾಗಿರುತ್ತವೆ.
  • ಕೂಲರ್​ಗಳನ್ನು ಎಲ್ಲೆಂದರಲ್ಲಿ ಶಿಫ್ಟ್ ಮಾಡಬಹುದು. ಎಸಿಗೆ ಹೋಲಿಸಿದರೆ, ಮನೆಯಲ್ಲಿ ರೋಗಿಗಳು, ಮಕ್ಕಳು ಮತ್ತು ವೃದ್ಧರಿಗೆ ಕೂಲರ್ ಸುರಕ್ಷಿತ.

ಇದನ್ನು ಓದಿ: ಮತದಾನ ಮಾಡಿ ಕೇವಲ 5 ರೂಪಾಯಿಗೆ ಇಡ್ಲಿ ತಿನ್ನಿ: ವೋಟರ್ಸ್​​ಗೆ ಆಫರ್ ಕೊಟ್ಟ ಬೀದಿ ಬದಿ ವ್ಯಾಪಾರಿ - street vendor

ETV Bharat Logo

Copyright © 2025 Ushodaya Enterprises Pvt. Ltd., All Rights Reserved.