ETV Bharat / health

ವಯಸ್ಸಿಗೆ ಅನುಗುಣವಾಗಿ ದಿನಕ್ಕೆ ಎಷ್ಟು ಗಂಟೆ ನಿದ್ರೆ ಮಾಡಬೇಕು; ಇಲ್ಲಿದೆ ಮಾಹಿತಿ - Sleep According to Age

ಮನುಷ್ಯನಿಗೆ ನಿದ್ರೆ ಎಂಬುದು ಬಹಳ ಮುಖ್ಯವಾಗಿದೆ. ಹಾಗಾದ್ರೆ ಪ್ರತಿದಿನ ವಯಸ್ಸಿಗೆ ಅನುಗುಣವಾಗಿ ಒಬ್ಬ ವ್ಯಕ್ತಿ ಎಷ್ಟು ಸಮಯ ನಿದ್ರೆ ಮಾಡಬೇಕು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ದಿನಕ್ಕೆ ಎಷ್ಟು ಗಂಟೆ ನಿದ್ರೆ ಮಾಡಬೇಕು
ದಿನಕ್ಕೆ ಎಷ್ಟು ಗಂಟೆ ನಿದ್ರೆ ಮಾಡಬೇಕು (ETV Bharat)
author img

By ETV Bharat Karnataka Team

Published : Jul 18, 2024, 2:12 PM IST

Updated : Jul 18, 2024, 3:48 PM IST

Sleep According to Age: ನಮಗೆ ಆಹಾರ, ನೀರು ಮತ್ತು ಗಾಳಿ ಎಷ್ಟು ಮುಖ್ಯವೋ ನಿದ್ದೆಯೂ ಅಷ್ಟೇ ಮುಖ್ಯ. ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡದಿದ್ದರೆ ಅನೇಕ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸಂಶೋಧನೆಗಳು ಬಹಿರಂಗ ಪಡಿಸಿವೆ. ಹಾಗಾಗಿ ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡುವುದು ಆರೋಗ್ಯದ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ಹೆಚ್ಚಿನ ಪ್ರಯೋಜನ ಆಗಲಿದೆ ಎನ್ನುತ್ತಾರೆ ವೈದ್ಯರು.

ದಿನಕ್ಕೆ ಎಷ್ಟು ಗಂಟೆ ನಿದ್ರೆ ಮಾಡಬೇಕು
ದಿನಕ್ಕೆ ಎಷ್ಟು ಗಂಟೆ ನಿದ್ರೆ ಮಾಡಬೇಕು (Getty Images)

ಆದರೆ ಬಹುತೇಕ ಜನರಿಗೆ ದಿನಕ್ಕೆ ಎಷ್ಟು ಗಂಟೆ ನಿದ್ರೆ ಮಾಡಬೇಕೆಂಬುದರ ಬಗ್ಗೆ ಗೊಂದಲಗಳೂ ಇವೆ. ಕೆಲವರು ದಿನಕ್ಕೆ 7 ಗಂಟೆ ನಿದ್ರೆ ಮಾಡುವುದು ಉತ್ತಮ ಎಂದರೇ ಮತ್ತೆ ಕೆಲವರು 8 ಗಂಟೆ ಕಾಲ ನಿದ್ರೆ ಮಾಡಬೇಕೆಂದು ಹೇಳುತ್ತಾರೆ. ಆದರೇ ವೈದ್ಯರ ಪ್ರಕಾರ, ಒಬ್ಬ ವ್ಯಕ್ತಿ ತನ್ನ ವಯಸ್ಸಿಗೆ ಅನುಗುಣವಾಗಿ ನಿದ್ರೆ ಮಾಡುವುದರಿಂದ ಹೆಚ್ಚಿನ ಪ್ರಯೋಜನಗಳಾಗಲಿವೆ ಎನ್ನುತ್ತಾರೆ. ಹಾಗಾದ್ರೆ ಯಾವ ವಯಸ್ಸಿನವರು ಎಷ್ಟು ಗಂಟೆ ಕಾಲ ನಿದ್ರಿಸಬೇಕು ಎಂಬುದರ ಬಗ್ಗೆ ಈ ಸ್ಟೋರಿಯಲ್ಲಿ ತಿಳಿದುಕೊಳ್ಳೊಣ. ಇದಕ್ಕೂ ಮೊದಲು ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡದಿದ್ರೆ ಯಾವೆಲ್ಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅನ್ನೋದನ್ನು ಸಹ ತಿಳಿಯೋಣ.

ಇದನ್ನೂ ಓದಿ: ರಾತ್ರಿ ತಲೆಗೆ ಎಣ್ಣೆ ಹಚ್ಚಿ ಮಲಗುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ...? - Benefits of Oiling Hair At Night

ಕಡಿಮೆ ನಿದ್ರೆಯಿಂದ ಆರೋಗ್ಯ ಮೇಲೆ ಪರಿಣಾಮ: ಒಬ್ಬ ವ್ಯಕ್ತಿಯು ದಿನಕ್ಕೆ ಸರಿಯಾದ ನಿದ್ರೆ ಮಾಡದೇ ಇದ್ದಲ್ಲಿ ಮಧುಮೇಹದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಲ್ಲದೆ, ಮಹಿಳೆಯರು ಕಡಿಮೆ ನಿದ್ರೆ ಮಾಡುವುದರಿಂದ, ಸ್ತನ ಕ್ಯಾನ್ಸರ್​, ಹೃದಯ ಸಂಬಂಧಿತ ಗಂಭೀರ ಕಾಯಿಲೆಗಳಿಗೆ ತುತ್ತಾಗಬಹುದು ಎಂದು ಹೇಳಲಾಗುತ್ತದೆ. ಕಡಿಮೆ ನಿದ್ರೆ ಮಾಡುವುದರಿಂದ ದೇಹದ ಇತರ ಜೀವಕೋಶಗಳ ಮೇಲೂ ಕೆಟ್ಟ ಪರಿಣಾಮ ಬೀರುವುದಲ್ಲದೇ ಮೂಳೆಗಳು ಕ್ರಮೇಣ ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ ಎಂದು ವೈದ್ಯರು ಹೇಳುತ್ತಾರೆ.

ಇದನ್ನೂ ಓದಿ: ನೆಮ್ಮದಿ ನಿದ್ರೆಗೆ ಅಡ್ಡ ಬರುತ್ತಿದ್ಯಾ ಯೋಚನೆಗಳು; ಹಾಗಾದ್ರೆ ಬಟರ್​ಫ್ಲೈ ಟ್ಯಾಪಿಂಗ್​ ಟೆಕ್ನಿಕ್​ ಅನುಸರಿಸಿ - Butterfly tapping technique

ಯಾವ ವಯಸ್ಸಿನರು ಎಷ್ಟು ನಿದ್ರೆ ಮಾಡಬೇಕು: ನ್ಯಾಷನಲ್ ಸ್ಲೀಪ್ ಫೌಂಡೇಶನ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, 65 ವರ್ಷಕ್ಕಿಂತ ಮೇಲ್ಪಟ್ಟ ಜನರು ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು, ಕನಿಷ್ಠ ಅಂದರೆ 5 ರಿಂದ 6 ಗಂಟೆಯಾದ್ರೂ ಮಲಗಲೇಬೇಕು. ಏಕಕಾಲದಲ್ಲಿ ನಿದ್ರೆ ಬಾರದೇ ಇದ್ದಲ್ಲಿ ತಮ್ಮ ನಿದ್ರೆಯ ಅವಧಿಯನ್ನು ಎರಡು ಹಂತಗಳಲ್ಲಿ ವಿಭಜಿಸಿಕೊಳ್ಳಬಹುದಾಗಿದೆ. ಹಗಲಿನಲ್ಲಿ 2 ಗಂಟೆ ಮತ್ತು ರಾತ್ರಿ ಹೊತ್ತಲ್ಲಿ 6 ಗಂಟೆ ಕಾಲ ನಿದ್ರೆ ಮಾಡಬಹುದಾಗಿದೆ.

ಇದನ್ನೂ ಓದಿ: ಯುದ್ಧ ಭೂಮಿ ಗಾಜಾದಲ್ಲಿ ಪತ್ತೆಯಾಯ್ತು ಪೋಲಿಯೋ ಪ್ರಕರಣ - poliovirus detected in Gaza

ದಿನಕ್ಕೆ ಎಷ್ಟು ಗಂಟೆ ನಿದ್ರೆ ಮಾಡಬೇಕು
ದಿನಕ್ಕೆ ಎಷ್ಟು ಗಂಟೆ ನಿದ್ರೆ ಮಾಡಬೇಕು (ETV Bharat)

ನವಜಾತ ಶಿಶು: ನವಜಾತ ಶಿಶುಗಳು ದಿನಕ್ಕೆ 14 ರಿಂದ 17 ಗಂಟೆ ಕಾಲ ನಿದ್ರೆ ಮಾಡಬೇಕು.

  • 4 ರಿಂದ 11 ತಿಂಗಳ ಮಗು: 12 ರಿಂದ 15 ಗಂಟೆ ಕಾಲ ನಿದ್ರಿಸಬೇಕು.
  • 1 ರಿಂದ 2 : 1 ರಿಂದ 2 ವರ್ಷದ ಮಕ್ಕಳು ಪ್ರತಿದಿನ 11 ರಿಂದ 14 ಗಂಟೆ ಕಾಲ ನಿದ್ರೆ ಮಾಡಬೇಕು.
  • 3 ರಿಂದ 5: ಈ ಪ್ರಾಯದವರು ಪ್ರತಿದಿನ 10 ರಿಂದ 13 ಗಂಟೆ ಕಾಲ ನಿದ್ರೆ ಮಾಡಬೇಕು.
  • 6 ರಿಂದ 13 ವರ್ಷ: ಈ ಪ್ರಾಯದ ಮಕ್ಕಳು 9 ರಿಂದ 11 ಗಂಟೆ ನಿದ್ರೆ ಮಾಡಬೇಕು ಕನಿಷ್ಠ 7 ಗಂಟೆಯಾದ್ರೂ ನಿದ್ರಿಸಬೇಕು.
  • 26 ರಿಂದ 64: ಈ ಪ್ರಾಯದವರು ಪ್ರತಿದಿನ 7 ರಿಂದ 9 ಗಂಟೆ ನಿದ್ರೆ ಮಾಡಬೇಕು. ಕನಿಷ್ಠ 6 ಗಂಟೆ ಕಾಲವಾದ್ರೂ ನಿದ್ರಿಸಬೇಕು.

ಇದನ್ನೂ ಓದಿ: ಜೀನ್ಸ್​​ ಧರಿಸಿ ನಿದ್ರೆ ಮಾಡುತ್ತೀರಾ ಎಚ್ಚರ!: ಸ್ವಲ್ಪ ಯಾಮಾರಿದ್ರೂ ಈ ಸಮಸ್ಯೆಗೆ ತುತ್ತಾಗುತ್ತೀರಾ ಜಾಗ್ರತೆ - Side Effects of Sleeping in Jeans

Last Updated : Jul 18, 2024, 3:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.