ETV Bharat / health

ತಾಯಂದಿರು ಚೆನ್ನಾಗಿ ನಿದ್ರೆ ಮಾಡಿದರೆ ಮಾತ್ರ ಮಕ್ಕಳು ಸ್ಮಾರ್ಟ್ ಅಂತೆ: ಹಾಗಾದ್ರೆ ಎಷ್ಟು ಹೊತ್ತು ನಿದ್ರಿಸಬೇಕು?

ಸಾಮಾನ್ಯವಾಗಿ, ಅನೇಕ ಗರ್ಭಿಣಿಯರು ರಾತ್ರಿ ಹೊತ್ತು ಮಲಗಲು ತೊಂದರೆಪಡುತ್ತಾರೆ. ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುವ ಗರ್ಭಿಣಿಯರಿಗೆ ಹುಟ್ಟುವ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

author img

By ETV Bharat Health Team

Published : 2 hours ago

PREGNANT WOMAN SLEEP HOURS  SLEEP IMPACT ON CHILD DEVELOPMENT  SLEEP IMPACT ON PREGNANCY  HOW BEST CAN A PREGNANT WOMAN SLEEP
ಸಾಂದರ್ಭಿಕ ಚಿತ್ರ (ETV Bharat)

Pregnant Woman Sleeping Hours: ಪ್ರತಿಯೊಬ್ಬ ಪೋಷಕರೂ ತಮಗೆ ಹುಟ್ಟುವ ಮಗು ಸುಂದರ, ಸ್ಮಾರ್ಟ್ ಮತ್ತು ಆ್ಯಕ್ಟಿವ್​ ಆಗಿರಬೇಕೆಂದು ಬಯಸುತ್ತಾರೆ. ಅದಕ್ಕಾಗಿ ವಿಶೇಷ ಆಹಾರದ ಜೊತೆಗೆ ವಿಶೇಷ ಕಾಳಜಿಯನ್ನೂ ವಹಿಸಬೇಕಾಗುತ್ತದೆ. ಆದರೆ, ಈ ಮುನ್ನೆಚ್ಚರಿಕೆಗಳ ಜೊತೆಗೆ ರಾತ್ರಿಯ ನಿದ್ದೆಯೂ ಮುಖ್ಯ ಎನ್ನುತ್ತಾರೆ ಸಂಶೋಧಕರು. ಇದಕ್ಕಾಗಿ ಗರ್ಭಧಾರಣೆಯ ಸಮಯದಿಂದ ಸರಿಯಾಗಿ ನಿದ್ರೆ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ರಾತ್ರಿ 7ಗಂಟೆಗಿಂತ ಕಡಿಮೆ ನಿದ್ರೆ ಮಾಡುವ ಗರ್ಭಿಣಿಯರಿಗೆ ಹುಟ್ಟುವ ಮಕ್ಕಳಲ್ಲಿ ಬೆಳವಣಿಗೆಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ಚೀನಾದ ಸಂಶೋಧನೆ ಬಹಿರಂಗಪಡಿಸಿದೆ. "Improving sleep habits during pregnancy may prevent or reduce the risk of neurodevelopmental issues in children" ಎಂಬ ಸಂಶೋಧನೆಯು Endocrine Society’s Journal of Clinical Endocrinology & Metabolismನಲ್ಲಿ ಸಂಶೋಧನಾ ವರದಿ ಪ್ರಕಟವಾಗಿದೆ. ಇದರ ಪ್ರಕಾರ, ಮಕ್ಕಳು ಮಾತನಾಡುವ, ಚಲಿಸುವ, ಇತರರೊಂದಿಗೆ ಸಂವಹನ ಮಾಡುವ ಸಾಮರ್ಥ್ಯ ಮತ್ತು ಗ್ರಹಿಕೆ ಕೌಶಲ್ಯಗಳನ್ನು ಪಡೆದುಕೊಳ್ಳುವುದು ವಿಳಂಬವಾಗಿದೆ ಎಂದು ಕಂಡುಬಂದಿದೆ. ಅದಕ್ಕಾಗಿ ಗರ್ಭಿಣಿಯರು ಸಂಪೂರ್ಣವಾಗಿ ರಾತ್ರಿ ನಿದ್ದೆ ಮಾಡುವುದು ಬಹಳ ಮುಖ್ಯ ಎಂದು ಈ ಅಧ್ಯಯನದ ನೇತೃತ್ವ ವಹಿಸಿರುವ ಡಾ.ಪೆಂಗ್ ಝು ಸಲಹೆ ನೀಡಿದ್ದಾರೆ.

ಇದಲ್ಲದೇ ಮಕ್ಕಳಲ್ಲಿ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಇತ್ತೀಚಿನ ಅಧ್ಯಯನದಲ್ಲಿ ತಿಳಿದುಬಂದಿದೆ. ಸಾಕಷ್ಟು ನಿದ್ರೆ ಮಾಡದ ಗರ್ಭಿಣಿಯರಿಗೆ ಜನಿಸಿದ ಮಕ್ಕಳಲ್ಲಿ ಮೆದುಳು ಮತ್ತು ಅಂಗಗಳ ನಡುವೆ ಸಂಕೇತಗಳನ್ನು ರವಾನಿಸುವ ವ್ಯವಸ್ಥೆಗಳು ಸರಿಯಾಗಿ ಬೆಳವಣಿಗೆಯಾಗುವುದಿಲ್ಲ ಎಂದು ಗೊತ್ತಾಗಿದೆ. ಪರಿಣಾಮವಾಗಿ, ಅರಿವಿನ ಸಾಮರ್ಥ್ಯಗಳು, ನಡವಳಿಕೆ ಮತ್ತು ಕಲಿಕೆಯ ಕೌಶಲ್ಯಗಳ ಕೊರತೆಯಿದೆ ಎಂದು ಅಧ್ಯಯನ ವಿವರಿಸಿದೆ. ಇವೆಲ್ಲವೂ ಗಂಡು ಮಕ್ಕಳಲ್ಲಿ ಹೆಚ್ಚು ಎಂದು ಹೇಳಲಾಗುತ್ತದೆ. ಇದರ ಜೊತೆಗೆ, ತಾಯಿಯ ಪರಿಸರ ಅಂಶಗಳಿಗೆ ಮಕ್ಕಳ ಪ್ರತಿಕ್ರಿಯೆಯಲ್ಲಿ ಲಿಂಗ ವ್ಯತ್ಯಾಸಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಈ ಅಧ್ಯಯನ ಹೇಳುತ್ತದೆ.

ಆದರೆ, ಗರ್ಭಿಣಿಯರಲ್ಲಿ ನಿದ್ರಾಹೀನತೆಗೆ ಹಾರ್ಮೋನ್ ಬದಲಾವಣೆ, ಪದೇ ಪದೇ ಮೂತ್ರ ವಿಸರ್ಜನೆ ಮತ್ತು ವಾಕರಿಕೆ ಕಾರಣ ಎಂದು ಹೇಳಲಾಗುತ್ತದೆ. ಪ್ರತಿ ಐದು ಗರ್ಭಿಣಿಯರಲ್ಲಿ ಸರಿಸುಮಾರು ಇಬ್ಬರು ಕಡಿಮೆ ನಿದ್ರೆ ಮಾಡುತ್ತಾರೆ. ಇದು ಇನ್ಸುಲಿನ್ ಪ್ರತಿರೋಧ ಮತ್ತು ಗರ್ಭಾವಸ್ಥೆಯ ಮಧುಮೇಹಕ್ಕೆ ಕಾರಣವಾಗುತ್ತದೆ ಎಂದು ಹಿಂದಿನ ಅಧ್ಯಯನಗಳು ತಿಳಿಸಿವೆ. ಇದಲ್ಲದೆ, ಗರ್ಭಾವಸ್ಥೆಯ ಮಧುಮೇಹದೊಂದಿಗೆ ಅವಧಿಪೂರ್ವ ಹೆರಿಗೆ, ಸಂಧಿವಾತ ಕಾಯಿಲೆ, ಸಿಸೇರಿಯನ್ ಮತ್ತು ಕಡಿಮೆ ರಕ್ತದ ಗ್ಲೂಕೋಸ್ ಮಟ್ಟಗಳಂತಹ ಅಡ್ಡಪರಿಣಾಮಗಳ ಅಪಾಯವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.