ನವದೆಹಲಿ: ಸರಳವಾಗಿ ಬಾಯಿ ಮುಕ್ಕಳಿಸುವಿಕೆ ಪ್ರಕ್ರಿಯೆ ಮೂಲಕ ಆರಂಭಿಕ ಹಂತದಲ್ಲಿ ಗ್ಯಾಸ್ಟಿಕ್ ಕ್ಯಾನ್ಸರ್ ಅಪಾಯವನ್ನು ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಬಹುದಾಗಿದೆ. ಜಾಗತಿಕ ಸಾವಿನಲ್ಲಿ ನಾಲ್ಕನೇ ಕಾರಣವಾಗಿರುವ ಈ ಗ್ಯಾಸ್ಟ್ರಿಕ್ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವ ಸುಲಭ ಮಾರ್ಗ ಇದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಅಮೆರಿಕದ ರಟ್ಜರ್ಸ್ ಯುನಿವರ್ಸಿಟಿ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಈ ಸರಳ ಬಾಯಿ ಮುಕ್ಕಳಿಸುವಿಕೆ ತಂತ್ರದ ಮೂಲಕ ವ್ಯಕ್ತಿಯಲ್ಲಿನ ಕ್ಯಾನ್ಸರ್ ಜೊತೆಗೆ ಬಾಯಲ್ಲಿರುವ ಬ್ಯಾಕ್ಟಿರಿಯಾಗಳನ್ನು ಪತ್ತೆ ಮಾಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಈ ಅಧ್ಯಯನದ ಮಾದರಿಗಳಲ್ಲಿ ಕೆಲವು ಸಣ್ಣ ವ್ಯತ್ಯಾಸಗಳಿಗೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಅನೇಕ ಬಾರಿ ಹೊಟ್ಟೆ ಪರಿಸರವು ಬದಲಾವಣೆಗಳಿಗೆ ಒಳಗಾಗಲು ಪ್ರಾರಂಭಿಸಿದ ತಕ್ಷಣ ಸೂಕ್ಷ್ಮ ಜೀವಿಯಲ್ಲಿನ ಬದಲಾವಣೆಗಳು ಸಂಭವಿಸಬಹುದು ಎಂದು ಸೂಚಿಸಲಾಗಿದೆ. ಅದು ಅಂತಿಮವಾಗಿ ಕ್ಯಾನ್ಸರ್ ಆಗಿ ಬದಲಾಗಬಹುದು ಎಂದು ಸಲಹೆ ನೀಡಲಾಗಿದೆ.
ಎಂಡೋಸ್ಕೋಪಿಗೆ ಒಳಗಾದ 98 ರೋಗಿಗಳ ಬಾಯಿಯ ಮಾದರಿಯಲ್ಲಿನ ಬ್ಯಾಕ್ಟೀರಿಯಾ ಮಾದರಿ ಮೇಲೆ ಫಲಿತಾಂಶ ನಿರ್ಧರಿಸಲಾಗಿದೆ. ಇದರಲ್ಲಿ 30 ಮಾದರಿಯಲ್ಲಿ ಗ್ಯಾಸ್ಟ್ರಿಕ್ ಕ್ಯಾನ್ಸರ್, 30ರಲ್ಲಿ ಆರಂಭಿಕ ಹಂತದ ಗ್ಯಾಸ್ಟ್ರಿಕ್ ಪರಿಸ್ಥಿತಿ ಮತ್ತು 38 ರಲ್ಲಿ ಆರೋಗ್ಯಯುತ ನಿಯಂತ್ರಣ ಕಂಡು ಬಂದಿದೆ.
ಬಾಯಿಯ ಸೂಕ್ಷ್ಮಜೀವಿ ಮತ್ತು ಹೊಟ್ಟೆಯ ಸೂಕ್ಷ್ಮಜೀವಿಗಳ ಸಂಪರ್ಕಿತವಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ಬಾಯಿಯಲ್ಲಿ ಯಾವ ಸಮಸ್ಯೆ ಇದೆ ಎಂಬುದನ್ನು ತಿಳಿದುಕೊಳ್ಳುವುದರ ಮೂಲಕ ಹೊಟ್ಟೆಯ ವಾತಾವರಣ ಹೇಗಿದೆ ಎಂದು ತಿಳಿಯಬಹುದಾಗಿದೆ ಎಂದು ರಟ್ಜರ್ಸ್ ರೊಬರ್ಟ್ ವುಡ್ ಜಾನ್ಸನ್ ಸ್ಕೂಲ್ ಆಫ್ ಮೆಡಿಸಿನ್ನ ಜನರಲ್ ಸರ್ಜರಿ ರೆಸಿಡೆಂಟ್ ಶ್ರುತಿ ರೆಡ್ಡಿ ಪೆರತಿ ತಿಳಿಸಿದ್ದಾರೆ.
ಬಾಯಿಯ ಬ್ಯಾಕ್ಟೀರಿಯಾಗಳು ಗ್ಯಾಸ್ಟ್ರಿಕ್ ಕ್ಯಾನ್ಸರ್ ಅಪಾಯದ ಬಯೋಮಾರ್ಕ್ ಆಗಿರಬಹುದು ಎಂದು ಫಲಿತಾಂಶ ತಿಳಿಸಿದೆ. ಅಧ್ಯಯನದಲ್ಲಿ ತಮ್ಮ ತಂಡ 13 ಬ್ಯಾಕ್ಟೀರಿಯಾ ತಳಿಗಳನ್ನು ಅಭಿವೃದ್ಧಿ ಪಡಿಸಿ ಪ್ರತಿನಿಧಿಸಲಾಗಿದೆ. ಇದು ನಿಯಂತ್ರಣ ಮತ್ತು ಕ್ಯಾನ್ಸರ್ ಮತ್ತು ಪೂರ್ವ ಕ್ಯಾನ್ಸರ್ ನಡುವಿನ ವ್ಯತ್ಯಾಸ ತಿಳಿಸುತ್ತದೆ. ಈ ಅಧ್ಯಯನದ ಫಲಿತಾಂಶವನ್ನು ವಾಷಿಂಗ್ಟನ್ ಡಿಸಿಯ ಡೈಜೆಸ್ಟಿವ್ ಡಿಸೀಸ್ ವೀಕ್ 2024 ಮಂಡಿಸಲಾಗಿದೆ.
ಗ್ಯಾಸ್ಟ್ರಿಕ್ ಕ್ಯಾನ್ಸರ್ ಪತ್ತೆಗೆ ಯಾವುದೇ ಮಾದರಿಗಳ ಮಾರ್ಗಸೂಚಿಯಯನ್ನು ಯುನೈಟೆಡ್ ಸ್ಟೇಟ್ಸ್ ಹೊಂದಿಲ್ಲ. ಬಹುತೇಕ ಪ್ರಕರಣದಲ್ಲಿ ಈ ಗ್ಯಾಸ್ಟ್ರಿಕ್ ಕ್ಯಾನ್ಸರ್ ಅಂತಿಮ ಹಂತದಲ್ಲಿ ಪತ್ತೆ ಯಾಗುತ್ತದೆ. (ಐಎಎನ್ಎಸ್)
ಇದನ್ನೂ ಓದಿ: ಪೋಷಕಾಂಶ ಕೊರತೆ, ಸ್ಥೂಲಕಾಯ, ಮಧುಮೇಹ ತಪ್ಪಿಸಲು ಈ ಆಹಾರ ಬೆಸ್ಟ್; ಐಸಿಎಂಆರ್