ETV Bharat / health

ಮುಖದ ಕಾಂತಿ ಹೆಚ್ಚಿಸಲು ಫೇರ್‌ನೆಸ್‌ ಕ್ರೀಂಗಳು ಯಾಕೆ?: ಇವುಗಳನ್ನು ಮಾಡಿ ಸಾಕು! ಹಣವೂ ಉಳಿತಾಯ, ಚರ್ಮವೂ ಸೇಫ್! - Skin Brightening Creams Issues

author img

By ETV Bharat Karnataka Team

Published : Aug 12, 2024, 6:31 PM IST

ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಜನರು ಹಲವು ರೀತಿಯ ಮಾರ್ಗಗಳು, ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಆದರೆ, ಇದರ ಸೈಡ್ ಎಫೆಕ್ಟ್ಸ್‌ ಏನೆಂಬುದು ನಿಮಗೆ ಗೊತ್ತೇ?

Skin Brightening Creams Issues
ಸಂಗ್ರಹ ಚಿತ್ರ (ETV Bharat)

ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಹಲವು ಜನರು ಫೇಷಿಯಲ್‌ ಮಾಡಿಸಿಕೊಂಡರೆ, ಇನ್ನು ಕೆಲವರು ತರಹೇವಾರಿ ಸೌಂದರ್ಯ ವರ್ಧಕಗಳನ್ನು ಬಳಸುವುದನ್ನು ಕಾಣುತ್ತೇವೆ. ಇದರಲ್ಲಿ ಹುಡುಗರಿಗಿಂತ ಹುಡುಗಿಯರೇ ಅಧಿಕ ಎನ್ನುವುದು ಗೊತ್ತಿರದ ವಿಚಾರವಲ್ಲ. ಕಪ್ಪು ಇರುವವರಂತೂ ಬಿಳಿಯಾಗಿ ಕಾಣಲು ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಫೇರ್‌ನೆಸ್ ಕ್ರೀಮ್​​ಗಳನ್ನು ಬಳಸುವುದುಂಟು. ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ, ಲೆಕ್ಕಕ್ಕಿಲ್ಲದಷ್ಟು ಸಮಯ ನೀಡುತ್ತಾರೆ, ಜಾಗ್ರತೆ ವಹಿಸುತ್ತಾರೆ. ಆದರೆ, ದೇಹದಲ್ಲಿ ಅತಿ ಸೂಕ್ಷ್ಮ ಅಂಗವೆನಿಸಿಕೊಂಡಿರುವ ಚರ್ಮವೂ ಉಸಿರಾಡುತ್ತದೆ! ಸಿಕ್ಕ ಸಿಕ್ಕ ಕ್ರೀಮುಗಳನ್ನು ಬಳಸಿ ಚರ್ಮದ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದೆಂಬ ಸೂಕ್ಷ್ಮವನ್ನು ಎಷ್ಟೋ ಜನ ಮರೆತುಬಿಡುತ್ತಾರೆ. ನೀವೂ ಕೂಡ ಫೇರ್‌ನೆಸ್ ಕ್ರೀಮ್‌ ಬಳಸುದ್ದೀರಾ? ಹಾಗಾದರೆ ಈ ಕೆಳಗಿನ ಮಾಹಿತಿ ನಿಮಗಾಗಿ.

ಸಾಮಾನ್ಯವಾಗಿ, ಚರ್ಮ ಕಿರಿಕಿರಿ ಉಂಟುಮಾಡಿದಾಗ ಅಥವಾ ಕಪ್ಪು ಚುಕ್ಕೆ ಕಾಣಿಸಿಕೊಂಡಾಗ ಫೇರ್‌ನೆಸ್ ಕ್ರೀಮ್‌ ಬಳಸಬಹುದು. ಅದರ ಹೊರತಾಗಿ ಅಂಗಡಿಗಳಲ್ಲಿ ಸಿಗುವ ತರಹೇವಾರಿ ಕ್ರೀಮುಗಳನ್ನು ಖರೀದಿಸಿ ಇಷ್ಟ ಬಂದಂತೆ ಬಳಸಿದರೆ ಅವುಗಳಿಂದ ಹಲವು ಅಡ್ಡ ಪರಿಣಾಮಗಳು ಉಂಟಾಗಬಹುದು ಎನ್ನುತ್ತಾರೆ ತಜ್ಞರು.

ಅಡ್ಡ ಪರಿಣಾಮಗಳೇನು?: ಕೆಲವು ಫೇರ್‌ನೆಸ್ ಕ್ರೀಮುಗಳಲ್ಲಿ ಪಾದರಸ ಹೆಚ್ಚಾಗಿರುವುದರಿಂದ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು. ನರಗಳಿಗೆ ಹಾನಿ ತರಬಹುದು, ಕೆಲವೊಮ್ಮೆ ಮೊಡವೆ ಬರಬಹುದು, ಚರ್ಮದ ಅಲರ್ಜಿ ಉಂಟಾಗಬಹುದು, ತ್ವಚೆಯ ಮೇಲೆ ಕೆಟ್ಟ ಪರಿಣಾಮ ಕೂಡ ಬೀರಬಹುದು. ವಿಶ್ವ ಆರೋಗ್ಯ ಸಂಸ್ಥೆ (WHO) 2019ರಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಆ ಪ್ರಕಾರ, ಫೇರ್‌ನೆಸ್ ಕ್ರೀಮ್‌ಗಳಲ್ಲಿನ ಪಾದರಸದಿಂದಾಗಿ, ಮನುಷ್ಯನ ನರ ಹಾನಿ ಮತ್ತು ಮೂತ್ರಪಿಂಡ ವೈಫಲ್ಯದಂತಹ ಹಲವಾರು ಸಮಸ್ಯೆಗಳು ಉದ್ಭವಿಸಿರುವುದಾಗಿ ಉಲ್ಲೇಖಿಸಿದೆ. ಸಾರ್ವಜನಿಕ ಆರೋಗ್ಯ ಇಲಾಖೆಯ ವಿಜ್ಞಾನಿ ಡಾ.ಆನೆಟ್ ಪ್ರಸ್-ಉಸ್ಟನ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು ಎನ್ನುವುದನ್ನೂ ಕೂಡ ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿದೆ.

ತಜ್ಞರ ಸಲಹೆಗಳು: ಬಿಳಿಯಾಗುವ ಕ್ರೀಮುಗಳನ್ನು ಬಳಸುವ ಬದಲು, ನಿಮ್ಮ ಚರ್ಮವನ್ನು ಹಗುರಗೊಳಿಸಲು ಈ ನೈಸರ್ಗಿಕ ವಿಧಾನಗಳನ್ನು ಬಳಸಿ ಎನ್ನುತ್ತಾರೆ ತಜ್ಞರು.

  • ಮೊಸರು, ಕಡಲೆಹಿಟ್ಟು ಮತ್ತು ಸ್ವಲ್ಪ ನಿಂಬೆ ರಸ ಬೆರೆಸಿ ಚರ್ಮಕ್ಕೆ ಹಚ್ಚಿಕೊಳ್ಳಿ.
  • ಹತ್ತು ನಿಮಿಷಗಳ ನಂತರ ತೊಳೆಯಿರಿ.
  • ಈ ಕ್ರಮದಲ್ಲಿ ಮುಖದ ಮೇಲೆ ಟಾಲ್ಕಂ ಪೌಡರ್ ಮತ್ತು ಇತರೆ ಕ್ರೀಮುಗಳನ್ನು ಹಚ್ಚದಂತೆ ನೋಡಿಕೊಳ್ಳಬೇಕು. ಏಕೆಂದರೆ, ಸೂರ್ಯನೊಂದಿಗೆ ಅವುಗಳ ಪ್ರತಿಕ್ರಿಯೆಯಿಂದ ಚರ್ಮ ಕಪ್ಪಾಗುವ ಅಪಾಯವಿದೆ.
  • ಇದನ್ನು ನಿಯಮಿತವಾಗಿ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ನಿಂಬೆ ಮತ್ತು ಜೇನುತುಪ್ಪ: ನಿಂಬೆ ರಸವು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಜೇನು ತುಪ್ಪ ಚರ್ಮಕ್ಕೆ ತೇವಾಂಶ ನೀಡುತ್ತದೆ. ಹಾಗಾಗಿ ಇವೆರಡನ್ನೂ ಒಟ್ಟಿಗೆ ಮುಖಕ್ಕೆ ಹಚ್ಚುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಅದಕ್ಕಾಗಿ ನಿಂಬೆ ರಸ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಮುಖ, ಕೈ, ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ಕಾಲ ಒಣಗಲು ಬಿಡಿ. ಅದರ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆರಡು ಬಾರಿ ಹೀಗೆ ಮಾಡಿದರೆ ನಿಮ್ಮ ಮೈಬಣ್ಣ ಸುಧಾರಿಸುತ್ತದೆ.

ಪಪ್ಪಾಯಿ: ಪಪ್ಪಾಯಿಯಲ್ಲಿ ಪಪೈನ್ ಎಂಬ ಕಿಣ್ವವಿದೆ. ಇದು ಸ್ಕಿನ್ ಎಕ್ಸ್ ಫೋಲಿಯೇಶನ್‌ಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಅದಕ್ಕಾಗಿ ಹಣ್ಣಾದ ಪಪ್ಪಾಯಿಯ ತುಂಡನ್ನು ಮ್ಯಾಶ್ ಮಾಡಿ ಮುಖ, ಕೈ ಮತ್ತು ಕುತ್ತಿಗೆಗೆ ಹಚ್ಚಿ 20 ನಿಮಿಷಗಳ ನಂತರ ನೀರಿನಿಂದ ತೊಳೆದುಕೊಳ್ಳುವುದರಿಂದ ತ್ವಚೆ ಸುಂದರವಾಗಿ ಕಾಣುತ್ತದೆ.

ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಬಿಹಾರ: ಗಯಾದ ಬ್ರಹ್ಮಯೋನಿ ಬೆಟ್ಟದಲ್ಲಿ ಮಧುಮೇಹ ವಿರೋಧಿ ಗಿಡಮೂಲಿಕೆ ಪತ್ತೆ - Anti Diabetic Medicinal Plant

ETV Bharat Logo

Copyright © 2024 Ushodaya Enterprises Pvt. Ltd., All Rights Reserved.