ETV Bharat / health

ಹಾವಿನ ಕಡಿತದಿಂದಾಗುವ ಸಾವು ತಪ್ಪಿಸಬಹುದು: ಅಧ್ಯಯನ - ಹಾವಿನ ಕಡಿತದ ಸಾವು

ಹಾವು ಕಡಿತ ಜಾಗತಿಕವಾಗಿ 1.4 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ಈ ಬಗ್ಗೆ ವಿಶೇಷ ಅಧ್ಯಯನ ನಡೆದಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
author img

By PTI

Published : Jan 25, 2024, 6:04 PM IST

ನವದೆಹಲಿ: ಜನರ ಬೆಂಬಲ ಮತ್ತು ಅರ್ಥೈಸಿಕೊಳ್ಳುವಿಕೆ ಜೊತೆಗೆ ಸ್ಥಳೀಯವಾಗಿ ಅಭ್ಯಾಸ ಮಾಡುತ್ತಿರುವ ಪ್ರಯೋಗ ಮಾದರಿಗಳನ್ನು ಉತ್ತೇಜಿಸುವ ಮೂಲಕ ಹಾವು ಕಡಿತದಿಂದ ಜನರ ಪ್ರಾಣವನ್ನು ರಕ್ಷಿಸಬಹುದು ಎಂದು ತಮಿಳುನಾಡಿನಲ್ಲಿ ನಡೆದ ಅಧ್ಯಯನವೊಂದು ತಿಳಿಸಿದೆ. ತಮಿಳುನಾಡಿನಲ್ಲಿನ ಗ್ರಾಮೀಣ ಕೃಷಿ ಸಮುದಾಯದ 535 ಮಂದಿಯನ್ನು ಈ ಬಗೆಗಿನ ಸಮೀಕ್ಷೆಗೆ ಒಳಪಡಿಸಲಾಗಿದೆ. ಅಧ್ಯಯನದಲ್ಲಿ ಅವರಿಗೆ ಹಾವು ಕಡಿತದ ವಿರುದ್ದದ ಕ್ರಮವನ್ನು ನಡೆಸಲು ತಿಳಿಸಲಾಗಿದೆ. ತಮ್ಮನ್ನು ಹೆಚ್ಚು ಸುರಕ್ಷಿತವಾಗಿಸಿಕೊಳ್ಳಲು ಯಾವ ಕ್ರಮವಹಿಸಲಾಗಿದೆ ಎಂಬುದನ್ನು ಗಮನಿಸಲಾಗಿದೆ.

ದೇಶದ ಜನಸಂಖ್ಯೆಯಲ್ಲಿ ತಮಿಳುನಾಡು ಶೇ 5ರಷ್ಟು ಪ್ರಮಾಣದಲ್ಲಿದ್ದರೂ, ದೇಶದಲ್ಲಿನ ಹಾವು ಕಡಿತದ ಪ್ರಕರಣದಲ್ಲಿ ಶೇ 20ರಷ್ಟು ಪ್ರಕರಣಗಳು ಇಲ್ಲಿ ದಾಖಲಾಗುತ್ತಿದ್ದು, ಅತಿ ಹೆಚ್ಚು ಹಾವು ಕಡಿತದಿಂದ ಸಾವಿಗೆ ಒಳಗಾಗುತ್ತಿರುವ ರಾಜ್ಯವಾಗಿದೆ. ಈ ಅಧ್ಯಯನವನ್ನು ಜರ್ನಲ್​ ಕನ್ಸರ್ವೇಷನ್​ ಅಂಡ್​ ಪ್ರಾಕ್ಟಿಸ್​ನಲ್ಲಿ ಪ್ರಕಟಿಸಲಾಗಿದೆ. ಫಲಿತಾಂಶದಲ್ಲಿ ಶೇ 69ರಷ್ಟು ಮಂದಿ ಹಾವು ಕಡಿತ ತಡೆಗಟ್ಟುವ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಈ ಕ್ರಮಗಳು ಯಾವಾಗಲೂ ಸಾಕ್ಷಿ ಆಧಾರಿತ ಸಲಹೆಗಳನ್ನು ಪ್ರತಿ ಬಿಂಬಿಸುವುದಿಲ್ಲ. ಇನ್ನು ಈ ಸುರಕ್ಷಿತ ಕ್ರಮವಹಿಸುವವರಲ್ಲಿ ಅರ್ಧದಷ್ಟು ಮಂದಿ ಅಂದರೆ ಶೇ 59ರಷ್ಟು ಮಂದಿ ಸಾಕ್ಷ್ಯ ಆಧಾರಿತ ಸಲಹೆ ಅಥವಾ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವುದಿಲ್ಲ.

ಮುಂಜಾಗ್ರತೆಯಾಗಿ ತಮ್ಮ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಶುಚಿ ಮತ್ತು ಶುದ್ದವಾಗಿಟ್ಟುಕೊಳ್ಳುವುದು ಅತಿ ಮುಖ್ಯವಾಗಿದೆ. ರಾತ್ರಿ ಹೊತ್ತು ಲೈಟ್​ ಬೆಳಕು ಬಳಕೆ ಮಾಡಿಕೊಳ್ಳುವುದು ಅತಿ ಮುಖ್ಯ ಎಂದು ಸಂಶೋಧಕರು ಹಾಗೂ ಮದ್ರಾಸ್​​​​ ಕ್ರೊಕೊಡೈಲ್​ ಬ್ಯಾಂಕ್​ ಟ್ರಸ್ಟ್​​ ತಿಳಿಸಿದೆ. ಆದಾಗ್ಯೂ, ಶೇ 41ರಷ್ಟು ಮಂದಿ ಸಂಶೋಧಕರು ಅಥವಾ ಅಧಿಕಾರಿಗಳು ತಿಳಿಸುವ ಸಾಮರ್ಥ್ಯದಾಯಕ ಮುನ್ನೆಚ್ಚರಿಕೆಯನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಅವಲಂಬಿಸಿದ್ದಾರೆ. ಅವು ಉಪ್ಪು, ಬೆಳ್ಳುಳ್ಳಿ, ಅರಿಶಿನ ಅಥವಾ ಬ್ಲೀಚ್ ನಂತಹ ನಿರೋಧಕಗಳ ಬಳಕೆಯಾಗಿದೆ.

ಅಧ್ಯಯನದಲ್ಲಿ ಪ್ರಮುಖವಾಗಿರುವ ಅಂಶ ಎಂದರೆ ಕೆಲವು ನಿರ್ದಿಷ್ಟ ಸ್ಥಳದಲ್ಲಿ ಕೆಲಸ ಮಾಡುವಾಗ ಬೇಕಾಗುವ ಪರಿಹಾರವಾಗಿದೆ. ಜನರು ಪ್ರಯೋಗಗಳನ್ನು ಕಂಡು ಕೊಳ್ಳಬೇಕಿದ್ದು, ಸುಲಭವಾಗಿ ಬಳಕೆ ಮಾಡಬೇಕಿದೆ ಎಂದು ಅಧ್ಯಯನದ ನೇತೃತ್ವವಹಿಸಿದ ಹ್ಯಾರಿಸನ್​ ಕಾರ್ಟೆರ್​ ತಿಳಿಸಿದ್ದಾರೆ. ಉದಾಹರಣೆಗೆ, ಈ ಹಿಂದೆ ಹಾವಿನ ಕಡಿತದಿಂದ ತಪ್ಪಿಸಿಕೊಳ್ಳಲು ತಮಿಳುನಾಡಿನ ಕೆಲವು ರೈತರಿಗೆ ಕೃಷಿ ಕೆಲಸ ಮಾಡುವಾಗ ಧರಿಸಲು ಬೂಟ್ಸ್​​ಗಳನ್ನು ನೀಡಲಾಗಿತ್ತು. ಆದರೆ, ಈ ಬೂಟ್ಸ್​​ಗಳು ಒದ್ದೆ ನೆಲದಲ್ಲಿ ಸಿಲುಕುತ್ತಿದ್ದವು. ಇದಾದ ಬಳಿಕ ಅವರಿಗೇನೇ ಸುರಕ್ಷತಾ ಕ್ರಮವಾಗಿ ಏನು ಬೇಕು ಎಂದು ಕೇಳಲಾಯಿತು.

ಯಾವುದೇ ಸುರಕ್ಷತಾ ಕ್ರಮವಹಿಸದ ಬಹುತೇಕ ಮಂದಿ, ಹಾವು ಕಚ್ಚಿದ ಸಂದರ್ಭದಲ್ಲಿ ತಮಗೇನು ತೋಚುತ್ತದೆಯೋ ಹಾಗೆ ಮಾಡಿದೆವು ಎಂಬ ಉತ್ತರ ನೀಡಿದ್ದರು. ಆದರೆ ಸರಳ ಮುನ್ನೆಚ್ಚರಿಕೆ ಕ್ರಮಗಳು ದೊಡ್ಡ ವ್ಯತ್ಯಾಸಕ್ಕೆ ಕಾರಣವಾಗುತ್ತಿದೆ ಎಂಬ ಅಂಶ ಅಧ್ಯಯನದ ವೇಳೆ ಕಂಡು ಬಂತು. ಜಗತ್ತಿನಾದ್ಯಂತ 1.4 ಲಕ್ಷ ಮಂದಿ ಪ್ರತಿ ವರ್ಷ ಹಾವು ಕಡಿತದಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಮತ್ತೆ 4 ಲಕ್ಷ ಮಂದಿ ಹಾವು ಕಡಿತದಿಂದ ಅಂಗವೈಕಲ್ಯತೆಗೆ ಒಳಗಾಗುತ್ತಿದ್ದಾರೆ ಎಂಬುದು ಸಮೀಕ್ಷೆಯಿಂದ ಬಯಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೂಡ ಹಾವು ಕಡಿತ ಎಂಬುದು ಉಷ್ಣವಲಯದ ದೊಡ್ಡ ಸಮಸ್ಯೆ ಎಂದಿದೆ. ತಮಿಳುನಾಡಿನಲ್ಲಿ ನಾಲ್ಕು ಬಗೆಯ ವಿಷಕಾರಿ ಹಾವಿನ ಕಡಿತವೂ ಮಾನವರಿಗೆ ಗಂಭೀರ ಪರಿಣಾಮವನ್ನುಂಟು ಮಾಡುತ್ತವೆ. ಅವು ಎಂದರೆ ನಾಗರಹಾವು, ರಸ್ಸೆಲ್ಸ್ ವೈಪರ್, ಸ್ಕೇಲ್ಡ್ ವೈಪರ್ ಮತ್ತು ಸಾಮಾನ್ಯ ಕ್ರೈಟ್ ಹಾವುಗಳಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಹಾವುಗಳು ಉಷ್ಣವಲಯದ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. (ಪಿಟಿಐ)

ಇದನ್ನೂ ಓದಿ: ಕೋವಿಡ್ ವೇಳೆ ಮಧುಮೇಹದಿಂದ ಸಾವಿಗೀಡಾದವರಲ್ಲಿ ಮಹಿಳೆಯರು, ಮಕ್ಕಳ ಸಂಖ್ಯೆ ಹೆಚ್ಚು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.