Precautions to be taken by Pregnant Women: ತಾವು ಗರ್ಭಿಣಿ ಎಂದು ತಿಳಿದ ನಂತರ ಕೆಲವರು ತಮ್ಮ ಸ್ವಂತ ಕೆಲಸಗಳಿಗಾಗಿ ಬೇರೆ ಬೇರೆ ಊರುಗಳಿಗೆ ಸಂಚರಿಸುವುದನ್ನು ನಿಲ್ಲಿಸುತ್ತಾರೆ. ಇನ್ನೂ ಕೆಲವು ಗರ್ಭಿಯಣಿಯರು ಅನಿವಾರ್ಯ ಕಾರಣಗಳಿಂದ ಪ್ರಯಾಣ ಮಾಡುತ್ತಾರೆ. ಮತ್ತೆ ಕೆಲವು ತಮ್ಮ ಪ್ರಯಾಣ ಮಾಡುವುದನ್ನು ಮುಂದೂಡುತ್ತಾರೆ. ಏಕೆಂದರೆ, ಹೊಟ್ಟೆಯಲ್ಲಿರುವ ಮಗುವಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸುತ್ತಾರೆ.
ಆದರೆ, ಗರ್ಭಾವಸ್ಥೆಯಲ್ಲಿ ದೇಹ ಮತ್ತು ಆರೋಗ್ಯ ಸಹಕರಿಸಿದರೆ ಎಲ್ಲಾ ಕೆಲಸಗಳನ್ನು ಮಾಡಬಹುದು. ಮತ್ತು ಆ ಮೂಲಕ ಹೆಚ್ಚು ಕ್ರಿಯಾಶೀಲರಾಗಲು ಸಾಧ್ಯವಾಗುತ್ತದೆ ಎನ್ನುತ್ತಾರೆ ವೈದ್ಯರು. ಗರ್ಭಿಣಿಯರು ವೈದ್ಯರ ಸಲಹೆ ಪಡೆದು ಪ್ರಯಾಣ ಮಾಡಬಹುದು. ಪ್ರಯಾಣಿಸಲು ಬಯಸುವ ಗರ್ಭಿಣಿಯರು ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕಾಗುತ್ತದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ರಿಪೋರ್ಟ್ ಪ್ರಕಾರ ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಲಾಗಿದೆ. ಪ್ರೊಜೆಸ್ಟರಾನ್ ಹಾರ್ಮೋನ್ ಗರ್ಭಿಣಿಯರ ದೇಹದಲ್ಲಿ ಗರ್ಭಾಶಯಕ್ಕೆ ರಕ್ಷಣಾತ್ಮಕ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಗರ್ಭಾವಸ್ಥೆಯಲ್ಲಿ ಗರ್ಭಕಂಠವನ್ನು ಬಿಗಿಯಾಗಿ ಇಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಮೆಟ್ಟಿಲು ಹತ್ತುವುದು, ಸಣ್ಣಪುಟ್ಟ ಕಸರತ್ತು ಮಾಡುವುದು, ಪ್ರಯಾಣಿಸುವುದರಿಂದ ಗರ್ಭದಲ್ಲಿರುವ ಮಗುವಿಗೆ ಯಾವುದೇ ತೊಂದರೆಯಾಗುವುದಿಲ್ಲ ಎನ್ನುತ್ತಾರೆ ತಜ್ಞರು. ಆದರೆ, ಪ್ರತಿ ಗರ್ಭಿಣಿ ಮಹಿಳೆಯ ಆರೋಗ್ಯ ಸ್ಥಿತಿ ವಿಭಿನ್ನವಾಗಿರುತ್ತದೆ. ಕೆಲವರು ಕ್ರಿಯಾಶೀಲರಾಗಿದ್ದರೆ, ಇನ್ನೂ ಕೆಲವರು ದೀರ್ಘಕಾಲ ವಿಶ್ರಾಂತಿ ಪಡೆಯಬೇಕಾಗುತ್ತದೆ. ಆದಾಗ್ಯೂ, ಗರ್ಭಿಣಿಯರು ಪ್ರಯಾಣಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ವೈದ್ಯರಾದ ಡಾ. ಪ್ರಣತಿ ರೆಡ್ಡಿ ಹೇಳುತ್ತಾರೆ.
ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು:
- ಗರ್ಭಿಣಿಯರಲ್ಲಿ ವಾಂತಿ, ವಾಕರಿಕೆ ಮುಂತಾದ ಲಕ್ಷಣಗಳು ತಿಂಗಳುಗಟ್ಟಲೆ ಕಾಡುತ್ತಲೇ ಇರುತ್ತವೆ. ಹಾಗಾಗಿ ಪ್ರಯಾಣದ ವೇಳೆ ಇಂತಹ ತೊಂದರೆಗಳನ್ನು ತಪ್ಪಿಸಲು ಸುಲಭವಾಗಿ ಜೀರ್ಣವಾಗುವ ಪೌಷ್ಟಿಕಾಂಶವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು ಎಂದು ಡಾ. ಪ್ರಣತಿ ರೆಡ್ಡಿ ಸಲಹೆ ನೀಡುತ್ತಾರೆ.
- ಗರ್ಭಾವಸ್ಥೆಯ ವರದಿಗಳು, ವೈದ್ಯರ ಪ್ರಿಸ್ಕ್ರಿಪ್ಷನ್, ಔಷಧಿಗಳು ಇತ್ಯಾದಿಗಳನ್ನು ಯಾವಾಗಲೂ ಬ್ಯಾಗ್ನಲ್ಲಿ ಇಟ್ಟುಕೊಂಡಿರಬೇಕು. ಜೊತೆಗೆ ನೀರಿನ ಬಾಟಲಿಯನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಸಹ ಒಳ್ಳೆಯದು, ನಿಮಗೆ ಸಾಧ್ಯವಾದರೆ, ಎಳನೀರನ್ನು ಕುಡಿಯುವುದರಿಂದ ದೇಹದಲ್ಲಿನ ನೀರಿನ ಮಟ್ಟವು ಕಡಿಮೆಯಾದಂತೆ ಮಾಡುತ್ತದೆ. ಹಣ್ಣಿನ ರಸವನ್ನು ಕುಡಿಯಲು ಬಯಸುವವರು ಮನೆಯಲ್ಲಿಯೇ ತಯಾರಿಸಿ ತೆಗೆದುಕೊಂಡು ಹೋಗುವುದು ಉತ್ತಮ ಎನ್ನುತ್ತಾರೆ ವೈದ್ಯರು.
- ಪ್ರಯಾಣದ ವೇಳೆ ಬಿಗಿಯಾದ ಬಟ್ಟೆಗಳ ಬದಲಿಗೆ ಸಡಿಲವಾದ ಮತ್ತು ಆರಾಮದಾಯಕವಾದ ಬಟ್ಟೆಗಳನ್ನು ಧರಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ಹಾಗೆಯೇ ಕುಳಿತುಕೊಂಡರೂ ಅನಾನುಕೂಲವಾಗುವುದಿಲ್ಲ ಎಂದು ಸಲಹೆ ನೀಡಿದ್ದು, ಚಪ್ಪಲಿಗಳ ವಿಚಾರಕ್ಕೆ ಬಂದರೆ, ಫ್ಲಾಟ್ ಆಗಿರುವ ಚಪ್ಪಲಿಗಳನ್ನು ಆಯ್ಕೆ ಮಾಡಿಕೊಂಡರೆ ಆರಾಮಾಗಿ ನಡೆಯಲು ಸಾಧ್ಯವಾಗುತ್ತದೆ.
- ಟಾಯ್ಲೆಟ್‌ಗೆ ಹೋಗುವ ಸಮಯದಲ್ಲಿ ಹೆಚ್ಚು ಜಾಗೃತರಾಗಿರಬೇಕು. ಆಯಾ ವಾಶ್‌ರೂಮ್‌ಗಳ ಬಾಗಿಲು ಮತ್ತು ಚಿಲಕಗಳನ್ನು ಮುಟ್ಟಿದಾಗ ಕೈಗಳನ್ನು ಸ್ವಚ್ಛವಾಗಿ ತೊಳೆಯಲು ಮಿನಿ ಹ್ಯಾಂಡ್‌ವಾಶ್ ಬಾಟಲಿಯನ್ನು ಇಟ್ಟುಕೊಳ್ಳುವುದು ಉತ್ತಮ. ಆಗಾಗ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಲು ವೈದ್ಯರು ಸೂಚಿಸಿತ್ತಾರೆ.
- ಅವಳಿ ಮತ್ತು ತ್ರಿವಳಿ ಮಕ್ಕಳಿಗೆ ಜನ್ಮ ನೀಡಲಿರುವ ತಾಯಂದಿರು ವಿಮಾನದಲ್ಲಿ ಪ್ರಯಾಣಿಸದಿರುವುದೇ ಉತ್ತಮ ಎನ್ನುತ್ತಾರೆ. ಆದ್ರೆ, 35 ವಾರಕ್ಕಿಂತ ಹೆಚ್ಚು ಗರ್ಭಿಣಿಯಾಗಿರುವವರು ವಿಮಾನ ಪ್ರಯಾಣ ಮಾಡಬಾರದು. ಏಕೆಂದರೆ ಈ ವಿಷಯವನ್ನು ನಿರ್ಲಕ್ಷಿಸಿದರೆ, ಪ್ರೀ ಮೆಚ್ಯೂರ್ ಡೆಲಿವರಿ ಆಗುವ ಸಾಧ್ಯತೆಗಳು ಹೆಚ್ಚು. ನೀವು ತುರ್ತಾಗಿ ಹೋಗಿ ವೈದ್ಯರನ್ನು ತಲುಪಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ತಜ್ಞರು.
- ಇನ್ನು ಕಾರಿನಲ್ಲಿ ಪ್ರಯಾಣಿಸುವವರು ಸೀಟ್ ಬೆಲ್ಟ್ ಧರಿಸಿ, ಪ್ರಶಾಂತ ವಾತಾವರಣದಲ್ಲಿ ವಾಹನ ನಿಲ್ಲಿಸಿ ಸ್ವಲ್ಪ ಹೊತ್ತು ರಿಲ್ಯಾಕ್ಸ್ ಮಾಡಿ, ಪ್ರಯಾಣದ ಆಯಾಸ ತಪ್ಪಿಸಬೇಕು ಎಂದು ಹೇಳುತ್ತಾರೆ ವೈದ್ಯರು.
ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್ಸೈಟ್ಗೆ ಸಂಪರ್ಕಿಸಬಹುದು:
https://www.niddk.nih.gov/health-information/weight-management/healthy-eating-physical-activity-for-life/health-tips-for-pregnant-women
ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: