ETV Bharat / health

ಮಹಿಳೆಯರಿಗೇ ಹೆಚ್ಚಾಗಿ ಮೂಳೆ, ಕೀಲು ನೋವಿನ ಸಮಸ್ಯೆ ಕಾಡುವುದೇಕೆ? - JOINT PAIN IN WOMEN

author img

By ETV Bharat Karnataka Team

Published : Aug 5, 2024, 1:59 PM IST

ಭಾರತದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ಮೂರರಲ್ಲಿ ಓರ್ವ ಮಹಿಳೆ ಅಸ್ಥಿಸಂಧಿವಾತ ಸಮಸ್ಯೆ ಹೊಂದಿರುತ್ತಾರೆ.

one in three women suffer from chronic pain due to bone and joint issues
ಬೆನ್ನು ನೋವು (ಐಎಎನ್​ಎಸ್​​)

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮೂಳೆ ಮತ್ತು ಕೀಲು ನೋವಿನ ಸಮಸ್ಯೆ ಹೆಚ್ಚುತ್ತಿದೆ. ಅದರಲ್ಲೂ ಈ ಪ್ರಮಾಣ ಮಹಿಳೆಯರಲ್ಲಿ ಹೆಚ್ಚಿದೆ. ಮಹಿಳೆಯರು ಮತ್ತು ಪುರಷರಲ್ಲಿ ವಿಭಿನ್ನವಾದ ಕಾರಣಗಳಿಂದ ಈ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಈ ಕುರಿತು ಅಗತ್ಯ ಚಿಕಿತ್ಸೆಗಳ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.

ಪುರಷರಲ್ಲಿ ಈ ಬೆನ್ನು ಮತ್ತು ಮೂಳೆ ಸಮಸ್ಯೆಗೆ ಕಾರಣ, ಅತಿ ಹೆಚ್ಚು ಕ್ರೀಡೆಯಲ್ಲಿ ಭಾಗಿಯಾಗುವಿಕೆಯಿಂದ ಸಂಭವಿಸುವ ಅನಾಹುತು, ಔದ್ಯೋಗಿಕ ಆಪತ್ತು ಮತ್ತು ಕಳಪೆ ಆಹಾರ ಮತ್ತು ಧೂಮಪಾನ ಅಭ್ಯಾಸದಂತಹ ಜೀವನಶೈಲಿಗಳು ಕೂಡ ಈ ಸಮಸ್ಯೆಗೆ ಕಾರಣವಾಗುತ್ತವೆ. ಮಹಿಳೆಯರಲ್ಲಿ ಈ ಸಮಸ್ಯೆಗೆ ಕಾರಣ ಹಾರ್ಮೋನ್​ಗಳ ಬದಲಾವಣೆ. ಸ್ವಯಂ ನಿರೋಧಕ ರೋಗ, ಕಡಿಮೆ ಕ್ಯಾಲ್ಸಿಯಂ ಮತ್ತು ವಿಟಮಿನ್​ ಡಿ ಕೊರತೆಗಳು ಪ್ರಾಥಮಿಕ ಕಾರಣವಾಗಿದೆ.

ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗುವುದರಿಂದ ಪುರುಷರು ಈ ಸಮಸ್ಯೆಗೆ ಹೆಚ್ಚು ಒಳಗಾಗಲಿದ್ದಾರೆ. ಮಹಿಳೆಯರಲ್ಲಿ ದೀರ್ಘಕಾಲದ ಪರಿಸ್ಥಿತಿಗಳು ಈ ದೀರ್ಘ ಬೆನ್ನು ನೋವಿಗೆ ಕಾರಣವಾಗುತ್ತದೆ. ಮಹಿಳೆಯರಲ್ಲಿನ ಹಾರ್ಮೋನ್​ಗಳ ಬದಲಾವಣೆಗಳಿಂದ ಉಂಟಾಗುವ ದೀರ್ಘಾವಧಿ ಅನಾರೋಗ್ಯಗಳು ಆಗಾಗ ಈ ಬೆನ್ನು ನೋವಿನ ಸಮಸ್ಯೆಗೆ ಕಾರಣವಾಗುತ್ತದೆ.

ಪುರುಷರು ಮತ್ತು ಮಹಿಳೆಯರು ಈ ಬೆನ್ನು ನೋವಿಗೆ ವಿಭಿನ್ನ ಅಗತ್ಯಕ್ಕೆ ತಕ್ಕಂತೆ ಪರಿಣಾಮಕಾರಿ ಚಿಕಿತ್ಸೆಯನ್ನು ಹೊಂದುವುದು ನೋವು ನಿವಾರಣೆಯಲ್ಲಿ ಪ್ರಮುಖವಾಗಿದ್ದು, ಸುಧಾರಿತ ಆರೋಗ್ಯ ಫಲಿತಾಂಶ ಪಡೆಯಲು ಇದು ನಿರ್ಣಾಯಕವಾಗಿದೆ.

ಭಾರತೀಯರು ಅದರಲ್ಲೂ ಮೆನೋಪಾಸ್​ ಬಳಿಕ ಮಹಿಳೆಯರಲ್ಲಿ ವಿಟಮಿನ್​ ಡಿ ಕೊರತೆಯಿಂದ ಅಸ್ಥಿಸಂಧಿವಾತ ಸಮಸ್ಯೆಗಳು ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ ಹೊಂದಿದೆ. ಈ ಗಂಭೀರ ಸಮಸ್ಯೆಯನ್ನು ತಡೆಯಲು ನಿರ್ಣಾಯಕವಾಗಿರುವ ಅಂಶ ಎಂದರೆ ಆರಂಭಿಕ ಹಂತದಲ್ಲೇ ಮೂಳೆಗಳ ದುರ್ಬಲತೆ ಪತ್ತೆ ಮಾಡಿ, ವೈದ್ಯರ ಸಹಾಯ ಪಡೆಯುವುದಾಗಿದೆ. ಮೂಳೆಗಳ ಸಮಸ್ಯೆಗಳಲ್ಲಿ ತಡೆಯುವಲ್ಲಿ ವಿಟಮಿನ್​ ಡಿ ಮತ್ತು ವಿಟಮಿನ್​ ಬಿ12 ಪ್ರಮುಖವಾಗಿದೆ.

ಶೇ 70 ರಿಂದ 90ರಷ್ಟು ಭಾರತೀಯರು ವಿಟಮಿನ್ ಡಿ ಕೊರತೆಯನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ. ಮೂಳೆಯ ಆರೋಗ್ಯಕ್ಕೆ ವಿಟಮಿನ್​ ಡಿ ನಿರ್ಣಾಯಕವಾಗಿದೆ. ಋತುಬಂಧಕ್ಕೊಳಗಾದ ಮಹಿಳೆಯರು ಇದರ ಅಪಾಯವನ್ನು ಹೆಚ್ಚು ಹೊಂದಿರುತ್ತಾರೆ. 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಮೂರರಲ್ಲಿ ಒಬ್ಬರು ಅಸ್ಥಿಸಂಧಿವಾತ ಸಮಸ್ಯೆ ಹೊಂದಿರುತ್ತಾರೆ. ಇಂತ ಸಮಸ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅವರು ವಿಟಮಿನ್​ ಡಿ ಮತ್ತು ವಿಟಮಿನ್​ ಡಿ 12 ಹೊಂದುವುದು ಅಗತ್ಯವಾಗಿದೆ ಎಂದು ಸಿಕೆ ಬಿರ್ಲಾ ಆಸ್ಪತ್ರೆಯ ಅಸ್ಥಿಸಂಧಿವಾತ ಮತ್ತು ಕೀಲು ತಜ್ಞರಾದ ಡಾ.ದೆಬಶಿಶ್​ ಚಂದ್​ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಮೂಳೆ ಸವೆತ ಮತ್ತು ಮಂಡಿನೋವು: ತಡೆಗಟ್ಟಲು ಇದೆ ತ್ರಿಸೂತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.