ETV Bharat / health

ಪ್ರಾಣಿಗಳಿಗೆ ಬರುವ ಎಲ್ಲಾ ರೋಗಗಳು ಮಾನವರಿಗೆ ಸಾಂಕ್ರಾಮಿಕವಲ್ಲ: ಪಶುಸಂಗೋಪನೆ ಇಲಾಖೆ ಮಾಹಿತಿ - World Zoonoses Day - WORLD ZOONOSES DAY

ಪ್ರಾಣಿಗಳಿಗೆ ಬರುವ ಎಲ್ಲಾ ರೋಗಗಳು ಮನುಷ್ಯರಿಗೆ ವರ್ಗಾವಣೆಯಾಗುವುದಿಲ್ಲ ಎಂದು ಪಶುಸಂಗೋಪನೆ ಇಲಾಖೆ ಹೇಳಿದೆ.

ಪ್ರಾಣಿಗಳಿಗೆ ಬರುವ ಎಲ್ಲಾ ರೋಗಗಳು ಮಾನವರಿಗೆ ಸಾಂಕ್ರಾಮಿಕವಲ್ಲ: ಪಶುಸಂಗೋಪನೆ ಇಲಾಖೆ ಮಾಹಿತಿ (ಸಾಂದರ್ಭಿಕ ಚಿತ್ರ)
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Jul 7, 2024, 6:26 PM IST

ನವದೆಹಲಿ: ರೇಬಿಸ್, ಆಂಥ್ರಾಕ್ಸ್, ಇನ್ಫ್ಲುಯೆಂಜಾ (ಎಚ್​1 ಎನ್​1 ಮತ್ತು ಎಚ್​5 ಎನ್​1), ನಿಪಾಹ್, ಕೋವಿಡ್ -19, ಬ್ರುಸೆಲ್ಲೋಸಿಸ್ ಮತ್ತು ಕ್ಷಯದಂತಹ ರೋಗಗಳು ಪ್ರಾಣಿಗಳಿಂದ ಮಾನವರಿಗೆ ಹರಡುವ ರೋಗಗಳಾದರೂ, ಪ್ರಾಣಿಗಳಿಗೆ ತಗಲುವ ಎಲ್ಲಾ ರೋಗಗಳು ಮನುಷ್ಯರಿಗೆ ಹರಡುವುದಿಲ್ಲ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (ಡಿಎಎಚ್​ಡಿ) ಭಾನುವಾರ ತಿಳಿಸಿದೆ. ಪ್ರಾಣಿಗಳಿಂದ ಮಾನವರಿಗೆ ಹರಡುವ ರೋಗಗಳನ್ನು ವೈಜ್ಞಾನಿಕವಾಗಿ ಝೂನೋಟಿಕ್ ಎಂದು ಕರೆಯಲಾಗುತ್ತದೆ.

ವಿಶ್ವ ಪ್ರಾಣಿಜನ್ಯ ರೋಗಗಳ ದಿನಾಚರಣೆ (World Zoonoses Day) ಅಂಗವಾಗಿ ಪಶುಸಂಗೋಪನೆ ಮತ್ತು ಹೈನುಗಾರಿಕೆ (ಎಎಚ್​ಡಿ) ಕಾರ್ಯದರ್ಶಿ ಅಲ್ಕಾ ಉಪಾಧ್ಯಾಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈ ಮಾಹಿತಿ ನೀಡಲಾಯಿತು.

ಪಶುಸಂಗೋಪನಾ ಇಲಾಖೆಯ ಪ್ರಕಾರ, ಸಾರ್ವಜನಿಕ ಆರೋಗ್ಯದ ಪರಿಣಾಮಕಾರಿ ನಿರ್ವಹಣೆಗೆ ಮತ್ತು ಪ್ರಾಣಿಜನ್ಯ ರೋಗಗಳ ಬಗೆಗಿನ ಅನಗತ್ಯ ಭಯ ನಿವಾರಿಸಲು ಯಾವ ರೋಗಗಳು ಝೂನೋಟಿಕ್ ಎಂದು ಅರ್ಥಮಾಡಿಕೊಳ್ಳುವುದು ಪ್ರಮುಖವಾಗಿದೆ.

"ಪ್ರಾಣಿಜನ್ಯ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದರಿಂದ ರೋಗವನ್ನು ಆರಂಭದಲ್ಲಿಯೇ ಪತ್ತೆ ಮಾಡಲು, ರೋಗ ಹರಡದಂತೆ ತಡೆಗಟ್ಟಲು ಸಹಾಯಕವಾಗುತ್ತದೆ ಮತ್ತು ಅಂತಿಮವಾಗಿ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಅನುಕೂಲವಾಗುತ್ತದೆ. ಝೂನೋಟಿಕ್ ಮತ್ತು ಝೂನೋಟಿಕ್ ಅಲ್ಲದ ರೋಗಗಳ ನಡುವಿನ ವ್ಯತ್ಯಾಸದ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದರಿಂದ ಅನಗತ್ಯ ಭಯವನ್ನು ಕಡಿಮೆ ಮಾಡಬಹುದು." ಎಂದು ಡಿಎಎಚ್​ಡಿ ಹೇಳಿದೆ.

ಪ್ರಾಣಿಜನ್ಯ ರೋಗಗಳ ಅಪಾಯವನ್ನು ತಗ್ಗಿಸಲು, ಡಿಎಎಚ್​ಡಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಆಕಳು ಕರುಗಳಿಗೆ ಬ್ರುಸೆಲ್ಲಾ ಲಸಿಕೆ ಮತ್ತು ರೇಬೀಸ್ ಲಸಿಕೆ ಹಾಕುವ ರಾಷ್ಟ್ರವ್ಯಾಪಿ ಅಭಿಯಾನ ಪ್ರಾರಂಭಿಸಿದೆ. ಆರ್ಥಿಕವಾಗಿ ಪ್ರಮುಖವಾದ ಪ್ರಾಣಿ ರೋಗಗಳಿಗಾಗಿ ಸಮಗ್ರ ರಾಷ್ಟ್ರವ್ಯಾಪಿ ಕಣ್ಗಾವಲು ಯೋಜನೆಯನ್ನು ಸಹ ಜಾರಿಗೆ ತರಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ಭಾರತವು 536 ಮಿಲಿಯನ್ ಜಾನುವಾರುಗಳು ಮತ್ತು 851 ಮಿಲಿಯನ್ ಕೋಳಿಗಳೊಂದಿಗೆ ಅತಿದೊಡ್ಡ ಜಾನುವಾರು ಜನಸಂಖ್ಯೆಯನ್ನು ಹೊಂದಿದೆ. ಇದು ಜಾಗತಿಕ ಜಾನುವಾರು ಮತ್ತು ಕೋಳಿ ಜನಸಂಖ್ಯೆಯ ಅನುಕ್ರಮವಾಗಿ ಶೇಕಡಾ 11 ಮತ್ತು 18 ರಷ್ಟಿದೆ. ಇದರೊಂದಿಗೆ ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ಮತ್ತು ಎರಡನೇ ಅತಿದೊಡ್ಡ ಮೊಟ್ಟೆ ಉತ್ಪಾದಕ ರಾಷ್ಟ್ರವಾಗಿದೆ. ಜುಲೈ 6, 1885 ರಂದು ಮೊದಲ ಯಶಸ್ವಿ ರೇಬೀಸ್ ಲಸಿಕೆಯನ್ನು ಕಂಡುಹಿಡಿದ ಲೂಯಿಸ್ ಪಾಶ್ಚರ್ ಅವರ ಗೌರವಾರ್ಥವಾಗಿ ವಿಶ್ವ ಝೂನೋಸಿಸ್ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ : ಆಹಾರ ​ಪೊಟ್ಟಣದ ಮೇಲೆ ಸಕ್ಕರೆ, ಉಪ್ಪಿನಂಶದ ಮಾಹಿತಿ ಮುದ್ರಣ ಕಡ್ಡಾಯ - Packaged Food Items

ETV Bharat Logo

Copyright © 2024 Ushodaya Enterprises Pvt. Ltd., All Rights Reserved.