ಬೆಂಗಳೂರು: ಡೆಮನ್ಶಿಯಾ (ಬುದ್ದಿಮಾಂದ್ಯತೆ) ಆರೈಕೆಗೆ ಬೆಂಬಲ ಸೇವೆ, ಸಂಶೋಧನೆ ಕಾರ್ಯ, ತರಬೇತಿ, ಸಹಯೋಗದ ಸಲಹೆಗಳಿಗಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಮತ್ತು ಡೆಮನ್ಶಿಯಾ ಇಂಡಿಯಾ ಅಲಯನ್ಸ್ (ಡಿಐಎ) ಒಡಂಬಡಿಕೆಗೆ ಸಹಿ ಹಾಕಿದೆ.
ಈ ಸಹಯೋಗವೂ ಡೆಮನ್ಶಿಯಾ ಹೊಂದಿರುವ ವ್ಯಕ್ತಿಯ ಸಂಪೂರ್ಣ ಜೀವನ ಗುಣಮಟ್ಟ ಮತ್ತು ಹಲವಾರು ವಿಧಾನಗಳ ಮೂಲಕ ಕುಟುಂಬದ ಆರೈಕೆ ಸುಧಾರಣೆಯ ಗುರಿ ಹೊಂದಿದೆ ಎಂದು ನಿಮ್ಹಾನ್ಸ್ ತಿಳಿಸಿದೆ.
ಒಡಂಬಡಿಕೆ ಕುರಿತು ಮಾತನಾಡಿರುವ ಡಿಐಎ, ಸಮಾಜದಲ್ಲಿ ಡೆಮನ್ಸಿಯಾ ಪ್ರಕರಣಗಳು ಬೆಳವಣಿಗೆ ಕಾಣುತ್ತಿದೆ. ಡೆಮನ್ಶಿಯಾ ಹೊಂದಿರುವ ಕುಟುಂಬ ಕಾಳಜಿ ಆರೈಕೆದಾರರಿಗೆ ಬೆಂಬಲವನ್ನು ನೀಡುವುದು ಪ್ರಾಥಮಿಕ ಗುರಿಯಾಗಿದೆ. ನಿಮ್ಹಾನ್ಸ್ ಹಲವು ಸೇವೆ ಮತ್ತು ಚಟುವಟಿಕೆಗಳ ಮೂಲಕ ಡೆಮನ್ಶಿಯಾ ಕಾರಣವನ್ನು ತಿಳಿಸುವ ಪ್ರಯತ್ನ ನಡೆಸಲಿದೆ. ಇದರಲ್ಲಿ ಬೆಂಬಲದ ಗುಂಪು, ಸಮಸ್ಯೆ ಕುರಿತು ಮಾಹಿತಿ, ಸಲಹೆ, ಸಂಶೋಧನೆ ಕಾರ್ಯ, ಶಿಕ್ಷಣ ಕಾರ್ಯಕ್ರಮ, ಸಮಾವೇಶ ಮತ್ತು ಇತರ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ನಿಮ್ಹಾನ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಿಮ್ಹಾನ್ಸ್ ಮತ್ತು ಡಿಐಎ, ಡೈಮನ್ಶಿಯಾ ಸಾರ್ವಜನಿಕ ಆರೋಗ್ರ ಪ್ರಮುಖ ಸಮಸ್ಯೆಯಾಗಿದೆ ಎಂದು ಘೋಷಿಸಿದೆ. ನಿಮ್ಹಾನ್ಸ್ ಮತ್ತು ಡಿಐಎ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆಗೆ ಕರ್ನಾಟಕ ರಾಜ್ಯ ಡೆಮನ್ಶಿಯಾ ಕಾರ್ಯ ಯೋಜನೆ ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಡೆಮನ್ಶಿಯಾ ಕಾರ್ಯ ಯೋಜನೆಯಲ್ಲಿ ಕಾರ್ಯ ನಿರ್ವಹಿಸಲಿದೆ.
ನಿಮ್ಹಾನ್ಸ್ ಮತ್ತು ಡಿಐಎ ಡೆಮನ್ಶಿಯಾ ಆರೈಕೆಯಲ್ಲಿ ಸಾಕ್ಷಿ ಅಭಿವೃದ್ಧಿ ಆಧಾರಿತ ಉತ್ತಮ ಅಭ್ಯಾಸಕ್ಕೆ ಜಂಟಿ ಸಂಶೋಧನೆ ನಡೆಸಲಿದೆ. ಎಲ್ಲ ಸಂಶೋಧನೆಗಳು ಡೆಮನ್ಶಿಯಾ ಪತ್ತೆ, ತಡೆ ಮತ್ತು ನಿರ್ವಹಣೆಯನ್ನು ಒಳಗೊಂಡಿರಲಿದೆ.
ಏನಿದು ಡೆಮನ್ಶಿಯಾ: ಡೆಮನ್ಶಿಯಾ ಎಂಬುದು ವ್ಯಕ್ತಿಯ ನೆನಪಿನ ಶಕ್ತಿ ಮೇಲೆ ಪರಿಣಾಮ ಬೀರುವ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಈ ರೋಗದಲ್ಲಿ ವಯಸ್ಸು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಹೊರತಾಗಿ ಅನೇಕ ದೈಹಿಕ ರೋಗ, ಮಾನಸಿಕ ಅಸ್ವಸ್ಥತೆ ಕೂಡ ಇದಕ್ಕೆ ಕಾರಣ. ಡೆಮೆನ್ಶಿಯಾ ಯುವ ಜನರನ್ನು ಕೂಡ ಕಾಡಬಹುದಾಗಿದೆ. ಇದು ನರಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆಯಾಗಿದೆ
ಈ ಸಮಸ್ಯೆಯ ಸಾಮಾನ್ಯ ಲಕ್ಷಣ ಎಂದರೆ ಮಾತು ಮತ್ತು ನಡುವಳಿಕೆಯಲ್ಲಿನ ಬದಲಾವಣೆ. ಈ ಸಮಸ್ಯೆಗೆ ತುತ್ತಾದ ರೋಗಿಯು ನಿರ್ಧಾರ, ಆಯ್ಕೆ ಮತ್ತು ಚಿಂತಿಸುವ ಸಾಮರ್ಥ್ಯ ನಡೆಸುವ ಸಾಮರ್ಥ್ಯವೂ ಕ್ಷೀಣಿಸುತ್ತದೆ. ಜೊತೆಗೆ ಭಾವನೆಗಳ ಮೇಲೆ ಕೂಡ ನಿಯಂತ್ರಣ ತಪ್ಪುವ ಸಾಧ್ಯತೆ ಇರುತ್ತದೆ. ಇದರ ಪತ್ತೆ ಕೂಡ ಕಷ್ಟವಾಗಿದ್ದು, ನಿರ್ದಿಷ್ಟವಾದ ಸೂಕ್ತ ಚಿಕಿತ್ಸೆ ಇಲ್ಲ. ಇದಕ್ಕೆ ಕೆಲವು ಥೆರಪಿಗಳ ಮೂಲಕ ಗುಣಪಡಿಸಬಹುದಾಗಿದೆ. (ಪಿಟಿಐ)
ಇದನ್ನೂ ಓದಿ: ವಿಶ್ವ ಮಾನಸಿಕ ಆರೋಗ್ಯ ದಿನ: ವಾಸ್ತವಿಕ ನೆಲೆಯಲ್ಲಿ ಪ್ರತಿಯೊಬ್ಬರ ಮಾನಸಿಕ ಆರೋಗ್ಯದ ಕಾಳಜಿ