ಜೋಧ್ಪುರ್: ದೇಹದ ಉರಿಯೂತದ ಮಟ್ಟವನ್ನು ಪರೀಕ್ಷಿಸಿ ರೋಗವನ್ನು ಪತ್ತೆ ಹಚ್ಚಲು ಸಹಾಯ ಮಾಡುವ ನ್ಯಾನೋಸೆನ್ಸಾರ್ವೊಂದನ್ನು ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಜೋಧ್ಪುರ್ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಉರಿಯೂತ ಮಟ್ಟವನ್ನು ನಿಯಂತ್ರಿಸುವ ಪ್ರೋಟಿನ್ ಸೈಟೊಕಿನ್ಸ್ ಅನ್ನು ಗುರಿಯಾಗಿಸಿ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡಲಾಗಿದ್ದು, 30 ನಿಮಿಷದಲ್ಲೇ ವಿವಿಧ ಬಗೆಯ ರೋಗದ ಪ್ರಗತಿಯ ಪತ್ತೆಗೆ ಇದು ಸಹಾಯ ಮಾಡುತ್ತದೆ.
ಸೈಟೊಕಿನ್ ಪತ್ತೆಗಾಗಿ ಪ್ರಸ್ತುತ ಬಳಸಲಾಗುವ ತಂತ್ರಗಳು ಕಿಣ್ವ ಸಂಯೋಜಿತ ಇಮ್ಯುನೊಸಾರ್ಬೆಂಟ್ ಅಸ್ಸೇ (ಇಎಲ್ಐಎಸ್ಎ) ಮತ್ತು ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಒಳಗೊಂಡಿವೆ. ಇದು ವಿಶ್ವಾಸಾರ್ಹವಾಗಿದ್ದರೂ ಇದರ ಬಳಕೆಯಲ್ಲಿ ಹೆಚ್ಚು ಸಮಯ ವ್ಯರ್ಥವಾಗುತ್ತದೆ. ಇದರ ಬಳಕೆಗೆ ತರಬೇತಿ ಪಡೆದ ಸಿಬ್ಬಂದಿ ಮತ್ತು ದೀರ್ಘ ಸ್ಯಾಂಪಲ್ ಸಿದ್ಧತೆ ಅಥವಾ ವಿಶ್ಲೇಷಣೆ ಬೇಕಾಗುತ್ತದೆ. ಪರೀಕ್ಷೆ ಫಲಿತಾಂಶ ಪಡೆಯಲು ಆರು ಗಂಟೆಗಳ ಕಾಲ ಸಮಯ ಬೇಕಾಗುತ್ತದೆ.
ಹೊಸ ಸೆನ್ಸಾರ್ ಕೇವಲ 30 ನಿಮಿಷಯದಲ್ಲಿ ಪರೀಕ್ಷೆ ಫಲಿತಾಂಶ ನೀಡುತ್ತದೆ. ವೆಚ್ಚವೂ ಪರಿಣಾಮಕಾರಿಯಾಗಿದೆ. ಬಹುಹಂತದ ಸ್ಕ್ಲೆರೋಸಿಸ್, ಮಧುಮೇಹ ಮತ್ತು ಅಲ್ಝೈಮರ್ನಂತಹ ಪರಿಸ್ಥಿತಿ ಅಭಿವೃದ್ಧಿಯ ನಿರ್ಣಯಿಸಲಿದೆ. ಹಾಗೆಯೇ ಮಾಲೆಕ್ಯುಲ್ ಮಟ್ಟ, ನಿಖರತೆ ಮತ್ತು ಆಯ್ಕೆಯನ್ನು ಪತ್ತೆಯನ್ನು ಮಾಡುವ ತಂತ್ರವನ್ನು ಇದರಲ್ಲಿ ಸೇರಿಸಲಾಗಿದೆ.
ಇದರಲ್ಲಿ ಕಡಿಮೆ ಸಾಂದ್ರತೆಗಳಲ್ಲಿ ರೋಗ ಪತ್ತೆ ಹಚ್ಚಲು ರಾಮನ್ ಸ್ಪೆಕ್ಟ್ರೋಸ್ಕೋಪಿ ಬಳಕೆ ಮಾಡಲಾಗಿದೆ. ಪತ್ತೆ ತಂತ್ರಜ್ಞಾನ ಸೆಮಿಕಂಡಕ್ಟರ್ ಪ್ರಕ್ರಿಯೆಯನ್ನು ಆಧರಿಸಿದೆ ಮತ್ತು ಸರ್ಫೆಸ್ಡ್ ಎನ್ಹಾನ್ಸಡ್ ರಾಮನ್ ಸ್ಕ್ಯಾಟರಿಂಗ್ ತತ್ವದ ಮೇಲೆ ಈ ಯಂತ್ರ ಕಾರ್ಯನಿರ್ವಹಿಸುತ್ತದೆ.
ಈ ತಂತ್ರಜ್ಞಾನ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ. ಮೂರು ಬಯೋಮಾರ್ಕ್ಗಳ ಫಲಿತಾಂಶ ಪ್ರೋತ್ಸಾಹದಾಯಕವಾಗಿದೆ. ಉರಿಯುತ ಪರ ಸೈಟೊಕಿನ್ಸ್ ಪತ್ತೆಗೆ ಇದು ಸಹಾಯಕಾರಿಯಾಗಿದೆ ಎಂದು ಐಐಟಿ ಜೋಧ್ಪುರದದದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ.ಅಜಯ್ ಅಗರ್ವಾಲ್ ತಿಳಿಸಿದ್ದಾರೆ.
ಇಲ್ಲಿಯವರೆಗೆ ನಿಯಂತ್ರಿಕ ಸ್ಯಾಂಪಲ್ನೊಂದಿಗೆ ಪರೀಕ್ಷೆ ಮಾಡಲಾಗಿದೆ. ಆದರೆ, ತಂಡದ ಗುರಿ ಈ ತಂತ್ರಜ್ಞಾನದ ಮೂಲಕ ಕ್ಲಿನಿಕಲ್ ಪರೀಕ್ಷೆ ನಡೆಸುವುದಾಗಿದೆ. ಸೆಪ್ಸಿಸ್ ಮತ್ತು ಫಂಗಲ್ ಸೋಂಕಿನ ಆರಂಭಿಕ ಹಂತ ಮತ್ತು ತ್ವರಿತ ರೋಗನಿರ್ಣಯಕ್ಕಾಗಿ ಪತ್ತೆ ಪ್ರೋಟೋಕಾಲ್‌ಗಳನ್ನು ಅಭಿವೃದ್ಧಿಪಡಿಸಲು ಗುಂಪು ಈ ತಂತ್ರವನ್ನು ಬಳಸುತ್ತಿದೆ ಎಂದರು. ಈ ಅಧ್ಯಯನದ ಫಲಿತಾಂಶಗಳನ್ನು ಐಇಇಇ ಅಪ್ಲೈಡ್ ಸೆನ್ಸಿಂಗ್ ಕಾನ್ಫರೆನ್ಸ್ 2023ರಲ್ಲಿ ಪ್ರಕಟಿಸಲಾಗಿದೆ.(ಐಎಎನ್ಎಸ್)
ಇದನ್ನೂ ಓದಿ: ಹೆಚ್ಚುತ್ತಿರುವ ಮೂತ್ರಿಪಿಂಡ ಕಲ್ಲಿನ ಸಮಸ್ಯೆ; ಈ ಬಗ್ಗೆ ಜನರಲ್ಲಿ ಬೇಕಿದೆ ಸಾಮಾನ್ಯ ಅರಿವು