ನವದೆಹಲಿ: ಮಲೇರಿಯಾ ಸೋಂಕು ಅನುವಂಶಿಕ ಬದಲಾವಣೆಯೊಂದಿಗೆ ಸಂಬಂಧ ಹೊಂದಿದ್ದು, ವಯಸ್ಸಾಗುವಿಕೆಯೊಂದಿಗೆ ಉಂಟಾಗುತ್ತದೆ ಎಂದು ಅಧ್ಯಯನ ತಿಳಿಸಿದೆ. ಆಫ್ರಿಕಾದಲ್ಲಿ ಮಲೇರಿಯಾ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಅಲ್ಲಿನ ಜನರ ಅನುವಂಶಿಕತೆಯ ರಕ್ತ ಸಂಬಂಧ ಮಾದರಿ ಗಮನಿಸಿ ಈ ಅಧ್ಯಯನ ನಡೆಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ 2023 ವರದಿ ಪ್ರಕಾರ ಸೊಳ್ಳೆಗಳಿಂದ ಹರಡುವ ಮಲೇರಿಯಾ ರೋಗವೂ ಜಾಗತಿಕವಾಗಿ ಶೇ 70ರಷ್ಟು ಹೊರೆ ಹೊಂದಿದೆ. ಭಾರತ ಸೇರಿದಂತೆ 10 ಆಫ್ರಿಕನ್ ದೇಶದಲ್ಲಿ ಈ ರೋಗಗಳ ಪ್ರಭಾವ ಹೆಚ್ಚಿದೆ.
ಆಫ್ರಿಕಾದ ವಿವಿಧ ಪ್ರದೇಶದಲ್ಲಿ ಮಲೇರಿಯಾ ಸಾಂಕ್ರಾಮಿಕ ರೋಗವಾಗಿದೆ, ಅಲ್ಲಿನ 1800 ಜನರ ರಕ್ತದ ಮಾದರಿಗಳ ಜೊತೆಗೆ ಅವರ ಅನುವಂಶಿಕ ಮಾಹಿತಿಯನ್ನು ಕೂಡ ಸಂಗ್ರಹಿಸಲಾಗಿದೆ. ಬಿಳಿ ರಕ್ತ ಕಣದಲ್ಲಿನ ಡಿಎನ್ಎ ಕೂಡಾ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಕಾರಣ ಸೋಂಕಿನ ವಿರುದ್ಧದ ಹೋರಾಟದಲ್ಲಿ ಬಿಳಿ ರಕ್ತ ಕಣಗಳ ಪಾತ್ರ ನಿರ್ಣಾಯಕವಾಗಿದೆ. ಡಿಎನ್ಎಯಲ್ಲಿನ ಟೆಲೋಮಿಯರ್ಸ್ ಉದ್ದವನ್ನು ಲೆಕ್ಕಾಚಾರಕ್ಕೆ ಒಳಪಡಿಸಲಾಗಿದೆ. ಈ ಟೆಲೋಮಿಯರ್ಸ್ ಕ್ರೋಮೋಸೋಮಾದಲ್ಲಿ ಅಂತ್ಯವಾಗುತ್ತದೆ. ಅದು ಕ್ರೋಮೋಸೋಮ್ ಅನ್ನು ಒಟ್ಟಿಗೆ ಅಂಟಿಕೊಳ್ಳದಂತೆ ತಡೆಯುತ್ತದೆ. ಅದರ ಉದ್ದವು ವಯಸ್ಸಿನೊಂದಿಗೆ ಕಡಿಮೆಯಾಗುತ್ತದೆ. ಇದು ಹೃದಯರಕ್ತನಾಳದ ರೋಗ ಮತ್ತು ಅಪಾಯವನ್ನು ಅಂದಾಜು ಮಾಡಲು ಸಹಾಯ ಮಾಡುತ್ತದೆ. ಅಮೆರಿಕದ ಪೆನ್ನಿಸಿಲ್ವೇನಿಯಾ ಯೂನಿವರ್ಸಿಟಿ ಸಂಶೋಧಕರು ಈ ಅಧ್ಯಯನದ ತಂಡದಲ್ಲಿದ್ದಾರೆ.
ಮಲೇರಿಯಾ ಸೋಂಕಿರುವ ಪ್ರದೇಶದಲ್ಲಿರುವ ಜನರ ಬಿಳಿ ರಕ್ತ ಕಣದಲ್ಲಿ ಈ ಟೆಲೋಮಿಯರ್ಸ್ ಕಡಿಮೆ ಇದೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಮಲೇರಿಯಾ ಸೋಂಕಿನಿಂದಾಗಿ ಬಿಳಿ ರಕ್ತ ಕಣಗಳು ಗಂಭೀರವಾಗಿ ಹಾನಿಗೊಂಡಿವೆ. ಈ ಪರಿಸ್ಥಿತಿಯು ಈ ಪ್ರಕ್ರಿಯೆಗೆ ಕಾರಣವಾಗಿತ್ತದೆ. ಈ ಸಂದರ್ಭದಲ್ಲಿ ಅವರಿಗೆ ಹಾನಿಯಾದ ಕಣದ ಬದಲಾಗಿ ಹೊಸ ಕಣಗಳ ಅವಶ್ಯಕತೆ ಇದೆ.
ಅನುವಂಶಿಕತೆ ಮತ್ತು ಪರಿಸರ ಅಂಶಗಳು ಕೂಡ ಟೆಲೋಮಿಯರ್ಸ್ ಉದ್ದದ ಮೇಲೆ ಪ್ರಭಾವ ಬೀರುತ್ತದೆ. ಟೆಲೋಮಿಯರ್ಸ್ ಉದ್ದ ಕಡಿಮೆಯಾಗುವಿಕೆಯಲ್ಲಿನ ಮಲೇರಿಯಾದ ಸಾಮರ್ಥ್ಯದ ಪಾತ್ರವೂ ಇನ್ನು ಅಸ್ವಷ್ಟವಾಗಿದೆ. ಕಡಿಮೆ ಮಲೇರಿಯಾ ಪ್ರದೇಶದಲ್ಲಿ ವಾಸಿಸುವ ಸ್ಥಳೀಯರಿಗೆ ಹೋಲಿಕೆ ಮಾಡಿದಾಗ ಮಲೇರಿಯಾ ಹೆಚ್ಚಿರುವ ಪ್ರದೇಶದಲ್ಲಿನ ಸ್ಥಳೀಯ ವಯಸ್ಕರರಲ್ಲಿ ಬಿಳಿ ರಕ್ತ ಕಣದಲ್ಲಿನ ಟೆಲೋಮಿಯರ್ಸ್ ಕಡಿಮೆ ಉದ್ದ ಕಂಡು ಬಂದಿದೆ ಎಂದು ಅಧ್ಯಯನ ಪತ್ತೆ ಮಾಡಿದೆ. ಮಲೇರಿಯಾ ಸೋಂಕು ಬಿಳಿ ರಕ್ತ ಕಣವನ್ನು ಭಾರಿ ಸಂಖ್ಯೆಯಲ್ಲಿ ಕಡಿಮೆ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಹೊಸ ಬಿಳಿ ರಕ್ತಕಣವನ್ನು ಪುನಃಸ್ಥಾಪಿಸಬೇಕು. ಇದು ಕೂಡ ಟೆಲೋಮಿಯರ್ಸ್ನ ಉದ್ದವನ್ನು ಕಡಿಮೆ ಮಾಡಬಹುದಾಗಿದೆ ಎಂದು ಅಧ್ಯಯನ ತಿಳಿಸಿದೆ.
ಇದನ್ನೂ ಓದಿ: ಈ ಹತ್ತು ಲಕ್ಷಣಗಳು ಕಾಣಿಸಿಕೊಂಡಿವೆಯಾ? ಹಾಗಾದರೆ ಅದು ಮಲೇರಿಯಾ ಅನ್ನೋದು ಕನ್ಫರ್ಮ್: ಏನು ಆ ಲಕ್ಷಣಗಳು?