ಹೈದರಾಬಾದ್: ದೇಹಕ್ಕೆ ವೈರಾಣುಗಳು ಪ್ರವೇಶವಾದಾಗ ನಮ್ಮ ಪ್ರತಿರಕ್ಷಣಾ ಕೋಶಗಳು ಅವುಗಳ ವಿರುದ್ಧ ಹೋರಾಡಿ, ನಾಶ ಮಾಡುತ್ತದೆ. ಪ್ರತಿರಕ್ಷಣಾ ಕೋಶಗಳು ವೈರಸ್ ಕೊಲ್ಲುವಲ್ಲಿ ಉತ್ತಮವೇ ಆಗಿದ್ದರೂ ಕೆಲವು ಸಂದರ್ಭದಲ್ಲಿ ಅಂಗಾಂಶಗಳ ಮೇಲೆ ಅದು ಹಾನಿ ಮಾಡಿದರೆ, ಇದು ಸಮಸ್ಯೆಗೆ ಕಾರಣವಾಗುತ್ತದೆ. ಇಂತಹ ಪ್ರಕರಣಗಳು ದೀರ್ಘಕಾಲದ ಹೆಪಟೈಟಿಸ್ ಬಿ ಸೋಂಕಿನಲ್ಲಿ ಆಗುತ್ತಿದೆ ಎಂಬುದನ್ನು ಮ್ಯುನಿಚ್ ಟೆಕ್ನಿಕಲ್ ಯುನಿವರ್ಸಿಟಿ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಅಲ್ಲದೇ ಇಂತಹ ಸ್ಥಿತಿಯಲ್ಲಿ ಕೆಲವು ರೋಗ ನಿರೋಧಕ ಕೋಶಗಳು ಸುಪ್ತ ಸ್ಥಿತಿಗೆ ಹೋಗುವುದು ಪತ್ತೆಯಾಗಿದೆ.
ಹೆಪಟೈಟಿಸ್ ಬಿ ಎಂಬುದು ಸಾಮಾನ್ಯ ಸಮಸ್ಯೆಯಾಗಿದೆ. ಇದರಿಂದ ಜಗತ್ತಿನೆಲ್ಲೆಡೆ 25 ಕೋಟಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದರ ಸಾಮಾನ್ಯ ಅಡ್ಡ ಪರಿಣಾಮ ಎಂದರೆ ಯಕೃತ್ತಿನ ಹಾನಿಯಾಗಿದೆ. ವೈರಸ್ ಇದಕ್ಕೆ ಕಾರಣವಲ್ಲ. ಯಕೃತ್ ಹಾನಿ ಆಗುವುದು ವೈರಸ್ ಬದಲಾಗಿ ಸೋಂಕಿತ ಕೋಶಗಳು ರೋಗ ನಿರೋಧಕ ವ್ಯವಸ್ಥೆ ಮೇಲೆ ನಡೆಸುವ ದಾಳಿಯಿಂದಾಗಿದೆ. ಇವು ಉರಿಯೂತದ ಪ್ರಗತಿಗೆ ಕಾರಣವಾಗುತ್ತದೆ. ಇದು ಗಾಯ ಮತ್ತು ಯಕೃತ್ ಅಂಗಾಂಶ ಗಟ್ಟಿಯಾಗುವಂತೆ (ಫೈಬ್ರೊಸಿಸ್) ಮಾಡುತ್ತದೆ. ಬಳಿಕ ಕ್ಯಾನ್ಸರ್ಗೆ ದಾರಿ ಮಾಡುತ್ತದೆ.
ಕೆಲವು ರೋಗ ನಿರೋಧಕ ಕೋಶಗಳು ಹೆಪಟೈಟಿಸ್ ವೈರಸ್ ಅನ್ನು ಪತ್ತೆ ಮಾಡಿ ತೊಡೆದು ಹಾಕುವ ಸಾಮರ್ಥ್ಯ ಹೊಂದಿದೆ ಎಂದು ಕಂಡು ಬಂದಿದೆ. ಇದಕ್ಕಾಗಿ ಸುಪ್ತ ಸ್ಥಿತಿಯಲ್ಲಿಯೇ ಇರುತ್ತದೆ. ಯಕೃತ್ತಿನ ಮೈಕ್ರೊವಾಸ್ಕುಲೇಚರ್‌ನಲ್ಲಿರುವ ಕೆಲವು ಜೀವಕೋಶಗಳು ಈ ಸುಪ್ತ ಸ್ಥಿತಿಯನ್ನು ನಿರ್ಧರಿಸುತ್ತವೆ ಎಂದು ಇತ್ತೀಚೆಗೆ ಅಧ್ಯಯನದಲ್ಲಿ ಕಂಡು ಬಂದಿದೆ. ಇದಕ್ಕೆ ಕಾರಣ ಏನು ಎಂಬುದು ಇದೀಗ ಬಹಿರಂಗಗೊಂಡಿದೆ. ಹೆಪಟೈಟಿಸ್ ಬಿ ವೈರಸ್ ಹೆಪಟಿಸೈಟ್ಸ್ನಿಂದ ಸೋಂಕಿಗೆ ಒಳಗಾಗಿರುತ್ತದೆ. ಇದರ ಹೊರೆ ಯಕೃತ್ ಅಂಗಾಂಶದಲ್ಲಿ ಹೆಚ್ಚಿರುತ್ತದೆ. ಇದರ ಕೆಲವು ಕೋಶಗಳು ರಕ್ತದ ಪೂರೈಕೆ ಮಾಡುವ ನಾಳದ ಪೊರೆಯಲ್ಲಿ ತೇಳುವಾಗಿ ಅಂಟಿಕೊಂಡಿರುತ್ತದೆ. ರಕ್ತದ ಮೂಲಕ ಯಕೃತ್ತನ್ನು ಪ್ರವೇಶಿಸುವ ರೋಗನಿರೋಧಕ ಕೋಶಗಳು ಈ ಪೊರೆಯ ಮೂಲಕ ಹಾದು ಸೋಂಕಿತ ಜೀವಕೋಶಗಳನ್ನು ತಲುಪುತ್ತವೆ.
ಈ ಸಮಯದಲ್ಲಿ ಕೆಲವು ರೋಗ ನಿರೋಧಕ ಕೋಶಗಳು ಹೊರಗಿನ ಪೊರೆಯ ಕೋಶದೊಂದಿಗೆ ಘರ್ಷಣೆ ನಡೆಸುತ್ತದೆ. ವಿಶೇಷವಾಗಿ ಸೈಟೊಟೊಕ್ಸಿಕ್ ಟಿ ಕೋಶಗಳು ಸೋಂಕಿತ ಕೋಶಗಳನ್ನು ನಾಶ ಮಾಡುತ್ತದೆ. ಅವುಗಳು ನಿದ್ರೆಗೆ ಜಾರುವಂತೆ ಮಾಡುತ್ತದೆ. ಈ ಪ್ರಕ್ರಿಯೆ ಯಕೃತ್ನ ರಕ್ಷಣೆ ಉದ್ದೇಶದಿಂದ ನಡೆಯಬಹುದು ಎಂದು ಸಂಶೋಧಕರು ನಂಬಿದ್ದಾರೆ. ಸೋಂಕಿತ ಸಮಯದಲ್ಲಿ ರೋಗ ನಿರೋಧಕ ಕೋಶಗಳು ಹೆಚ್ಚು ವೃದ್ಧಿಯಾಗುವುದಿಲ್ಲ. ಹಾಗೇ ಸೋಂಕಿತ ಕೋಶಗಳ ಮೇಲೆ ದಾಳಿ ಮಾಡಿದಾಗ ಯಕೃತ್ತು ಹೆಚ್ಚು ಹಾನಿಗೊಳಗಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಯಕೃತ್ ಆರೋಗ್ಯ ಕಾಪಾಡುವುದು ಅತ್ಯವಶ್ಯ; ಕಾರಣ ಇದು!