ETV Bharat / health

ಕಾಲು ಸೆಳೆತದಿಂದ ಬಳಲುತ್ತಿದ್ದೀರಾ? ಹೀಗೆ ಮಾಡಿದರೆ ಸೆಕೆಂಡ್​ಗಳಲ್ಲಿ ನೋವು ಮಾಯ! - Leg Cramps Prevention

author img

By ETV Bharat Health Team

Published : Sep 5, 2024, 10:34 AM IST

Updated : Sep 5, 2024, 11:32 AM IST

Leg Cramps Prevention Tips: ಬಹಳಷ್ಟು ಜನರನ್ನು ಕಾಲು, ಕೈಗಳ ಸೆಳೆತ ಕಾಡುತ್ತಿರುತ್ತದೆ. ಕೆಲವರಿಗೆ ರಾತ್ರಿ ವೇಳೆ ಈ ಬಾಧೆ ಹೆಚ್ಚು. ನೀವೂ ಕೂಡಾ ಇದೇ ಸಮಸ್ಯೆ ಎದುರಿಸುತ್ತಿದ್ದೀರಾ?. ಹೌದು ಎಂದಾದರೆ, ಇದನ್ನು ಹೋಗಲಾಡಿಸುವ ಸುಲಭ ವಿಧಾನವನ್ನು ವೈದ್ಯರು ತಿಳಿಸಿದ್ದಾರೆ.

LEG CRAMPS AT NIGHT  WAYS TO PREVENT LEG CRAMPS AT NIGHT  LEG CRAMPS CAUSES  HOW TO STOP LEG CRAMPS
ಕಾಲು ಸೆಳೆತ (ETV Bharat)

Easy Ways To Prevent Leg Cramps At Night: ಕೆಲವರಿಗೆ ಸಾಮಾನ್ಯವಾಗಿ ದೀರ್ಘಕಾಲ ಕುಳಿತು ಅಥವಾ ಮಲಗಿದ ನಂತರ ಅವರ ಕಾಲುಗಳು ಮತ್ತು ತೋಳುಗಳಲ್ಲಿ ಸೆಳೆತ ಉಂಟಾಗುತ್ತದೆ. ವಿಶೇಷವಾಗಿ ರಾತ್ರಿಯಲ್ಲಿ ಕಾಲು ಸೆಳೆತ ಕಂಡುಬರುತ್ತದೆ. ರಾತ್ರಿಯಲ್ಲಿ ಬರುವ ಈ ಸಮಸ್ಯೆ ನಿದ್ರೆಯ ಜೊತೆಗೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು. ಈ ಸಮಸ್ಯೆ ಏಕೆ ಉಂಟಾಗುತ್ತದೆ? ಇದರಿಂದ ಹೊರಬರಲು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಯೋಣ.

ಕಾಲುಗಳ ಸೆಳೆತಕ್ಕೆ ಕಾರಣಗಳೇನು?: ರಾತ್ರಿ ಕಾಲುಗಳಲ್ಲಿ ಸೆಳೆತಕ್ಕೆ ಹಲವು ಕಾರಣಗಳಿವೆ ಎನ್ನುತ್ತಾರೆ ಖ್ಯಾತ ನರರೋಗ ತಜ್ಞ ಡಾ.ವೇಮುಲ ಶ್ರೀಕಾಂತ್.

ನಿರ್ಜಲೀಕರಣ: ದೇಹವನ್ನು ತೇವಾಂಶದಿಂದಿಡಲು ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ಆದರೆ, ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದೇ ಇದ್ದರೆ ನಿರ್ಜಲೀಕರಣ ಉಂಟಾಗಿ ಕಾಲುಗಳಲ್ಲಿ ಸೆಳೆತ ಉಂಟಾಗುತ್ತದೆ.

ಸ್ನಾಯುವಿನ ಆಯಾಸ: ಕೆಲವು ಅಧ್ಯಯನಗಳ ಪ್ರಕಾರ, ಸ್ನಾಯುಗಳು ಹೆಚ್ಚು ವ್ಯಾಯಾಮ ಮಾಡುವಾಗ ಅಥವಾ ಅತಿಯಾಗಿ ವ್ಯಾಯಾಮ ಮಾಡುವಾಗ ಒತ್ತಡದಲ್ಲಿದ್ದಾಗ ಆಯಾಸ ಉಂಟಾಗುತ್ತದೆ. ರಾತ್ರಿ ವೇಳೆ ಕಾಲು ಸೆಳೆತಕ್ಕೆ ಇದೇ ಕಾರಣವಂತೆ.

ಹೆಚ್ಚು ಹೊತ್ತು ಕುಳಿತುಕೊಳ್ಳುವುದು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕಚೇರಿಗಳಲ್ಲಿ ಕೆಲಸ ಮಾಡುತ್ತಾರೆ. ಮೇಜಿನ ಬಳಿ ದೀರ್ಘಕಾಲ ಕುಳಿತು ಕೆಲಸ ಮಾಡುತ್ತಾರೆ. ಆದಾಗ್ಯೂ, ದೀರ್ಘಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಕಾಲಿನ ಸ್ನಾಯುಗಳಲ್ಲಿ ಒತ್ತಡ ಉಂಟುಮಾಡಬಹುದು. ಇದರ ಪರಿಣಾಮ ರಕ್ತ ಪರಿಚಲನೆ ಕಡಿಮೆಯಾಗುತ್ತದೆ ಮತ್ತು ಕಾಲುಗಳಲ್ಲಿ ಸೆಳೆತಕ್ಕೆ ಕಾರಣವಾಗುತ್ತದೆ.

ವೃದ್ಧಾಪ್ಯ: ವಯಸ್ಸಾದಂತೆ ಈ ಸಮಸ್ಯೆಯ ಸಾಧ್ಯತೆಗಳು ಹೆಚ್ಚು. ಅದರಲ್ಲೂ ಮುಖ್ಯವಾಗಿ, 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕನಿಷ್ಠ ಶೇ 37 ರಷ್ಟು ಜನರು ರಾತ್ರಿ ಕಾಲು ಸೆಳೆತ ಅನುಭವಿಸುತ್ತಾರೆ ಎಂದು ಅನೇಕ ಅಧ್ಯಯನಗಳು ಹೇಳುತ್ತವೆ.

ನರರೋಗ ತಜ್ಞ ಡಾ.ಶ್ರೀಕಾಂತ್ ನೀಡಿರುವ ಪರಿಹಾರೋಪಾಯಗಳು: ರಾತ್ರಿಯ ಕಾಲಿನ ಸೆಳೆತದಿಂದ ಪರಿಹಾರ ಪಡೆಯಲು ನೀವು ಹೆಚ್ಚು ವಿಶ್ರಾಂತಿ ಪಡೆಯಬೇಕು. ತೀವ್ರತರವಾದ ನೋವು ನಿವಾರಿಸಲು ಕಾಲಿನ ಸ್ನಾಯುಗಳ ಸೆಳೆತದ ಪ್ರದೇಶದಲ್ಲಿ ಕೈಯಿಂದ ಮಸಾಜ್ ಮತ್ತು ರೋಲರ್ ಸಹಾಯದಿಂದ ಕಾಲುಗಳಿಗೆ ನಿಧಾನವಾಗಿ ಮಸಾಜ್ ಮಾಡಿ. ಅದೇ ರೀತಿ, ನಿಧಾನವಾಗಿ ತಿರುಗಿಸಿ. ನೋವಿರುವ ಪ್ರದೇಶಕ್ಕೆ ಬೆಚ್ಚಗಿನ ನೀರು ಹಾಕಿದರೆ, ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಇನ್ನೂ ಕೆಲವು ಸಲಹೆಗಳನ್ನು ಪಾಲಿಸಿದರೆ ಈ ಸಮಸ್ಯೆಯನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.

ವ್ಯಾಯಾಮ: ದಿನವೂ ಮಲಗುವ ಮುನ್ನ ಲಘು ವ್ಯಾಯಾಮ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುತ್ತಾರೆ ವೈದ್ಯರು. ಜಾಗಿಂಗ್, ವಾಕಿಂಗ್, ರನ್ನಿಂಗ್, ಸೈಕ್ಲಿಂಗ್ ಮಾಡುವುದರಿಂದ ಸ್ನಾಯುಗಳಿಗೆ ಉತ್ತಮ ವಿಶ್ರಾಂತಿ ಸಿಗುತ್ತದೆ. ಇದರಿಂದ ಕಾಲು ನೋವು ಕಡಿಮೆಯಾಗುವುದಲ್ಲದೆ ಸೆಳೆತವನ್ನೂ ತಡೆಯುತ್ತದೆ.

ಸಾಕಷ್ಟು ನೀರು ಕುಡಿಯುವುದು: ಋತುಮಾನವನ್ನು ಲೆಕ್ಕಿಸದೆ ದೇಹವನ್ನು ತೇವಾಂಶದಿಂದ ಇಡುವುದು ಮುಖ್ಯ. ಇದಕ್ಕಾಗಿ ನೀರು ಮತ್ತು ಇತರ ದ್ರವ ಪದಾರ್ಥಗಳನ್ನು ಹೆಚ್ಚು ತೆಗೆದುಕೊಳ್ಳಬೇಕು. ಇದು ಸ್ನಾಯುಗಳು ಚೆನ್ನಾಗಿ ಕೆಲಸ ಮಾಡಲು ಮತ್ತು ಸೆಳೆತವನ್ನು ತಡೆಯಲು ಸಹಾಯ ಮಾಡುತ್ತದೆ.

ಬೂಟುಗಳನ್ನು ಬದಲಿಸಿ: ಕೆಲವೊಮ್ಮೆ ನೀವು ಧರಿಸುವ ಶೂಗಳು ಸಹ ಈ ಸಮಸ್ಯೆಯನ್ನು ಉಂಟುಮಾಡಬಹುದು. ಅದಕ್ಕಾಗಿಯೇ ಕಾಲಿನ ಸೆಳೆತದಿಂದ ಬಳಲುತ್ತಿರುವವರು ಬಳಸುವ ಶೂಗಳನ್ನು ಒಮ್ಮೆ ಬದಲಿಸಬೇಕು. ಇದರಿಂದ ನೋವಿನ ತೀವ್ರತೆ, ಸಮಸ್ಯೆ ಕ್ರಮೇಣ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಡಾ.ಶ್ರೀಕಾಂತ್.

ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

Last Updated : Sep 5, 2024, 11:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.