ETV Bharat / health

ಕೂದಲು ಉದುರುವುದನ್ನು ತಡೆಯುವುದಕ್ಕೆ, ಬೆಳೆಯುವುದಕ್ಕೆ ಈರುಳ್ಳಿ ಜ್ಯೂಸ್​ ಪರಿಣಾಮಕಾರಿಯೇ?; ಏನ್​ ಹೇಳ್ತಾರೆ ತಜ್ಞರು? - Onion Juice for Hair - ONION JUICE FOR HAIR

ಇತ್ತೀಚಿನ ದಿನಗಳಲ್ಲಿ ಅನೇಕರು ಕೂದಲಿನ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ. ಆಹಾರ ಮತ್ತು ಜೀವನಶೈಲಿಯಿಂದಾಗಿ ಜನರು ಕೂದಲು ಉದುರುವಿಕೆ ಮತ್ತು ಬೋಳು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ತೊಡೆದುಹಾಕಲು ಜನರು ಹೆಚ್ಚಾಗಿ ಈರುಳ್ಳಿ ಜ್ಯೂಸ್​ ಕುಡಿಯಲು ಶಿಫಾರಸು ಮಾಡುತ್ತಿದ್ದಾರೆ. ಆದರೆ, ಕೂದಲು ಬೆಳವಣಿಗೆಯಲ್ಲಿ ಈರುಳ್ಳಿ ಜ್ಯೂಸ್​ ಎಷ್ಟು ಪರಿಣಾಮಕಾರಿ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಬಗ್ಗೆ ತಿಳಿಯೋಣ ಬನ್ನಿ..

BENEFITS OF ONION JUICE  ONION JUICE BENEFITS FOR HAIR  ONION JUICE BENEFITS
ಕೂದಲು ಬೆಳೆಯುವುದಕ್ಕೆ ಈರುಳ್ಳಿ ಜ್ಯೂಸ್​ ಪರಿಣಾಮಕಾರಿಯೇ? (Getty Images)
author img

By ETV Bharat Karnataka Team

Published : Jul 16, 2024, 2:15 PM IST

BENEFITS OF ONION JUICE: ಆಹಾರ ಮತ್ತು ಪರಿಸರವು ನಮ್ಮ ದೇಹ ಮತ್ತು ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಇಂದಿನ ಕಾಲಘಟ್ಟದಲ್ಲಿ ಜನರ ಜೀವನಶೈಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗಳಲ್ಲಿ ಒಂದು ಕೂದಲು ಉದುರುವಿಕೆ ಮತ್ತು ಬೋಳು ತಲೆ. ಹೌದು ಇಂದು ಅನೇಕ ಜನರು ಈ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ. ಅನೇಕ ಬಾರಿ, ಕೂದಲಿನ ಸಮಸ್ಯೆಗಳಿಂದಾಗಿ ಅವರ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಅವರು ತಮ್ಮ ಕೆಲಸದ ಸ್ಥಳದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

BENEFITS OF ONION JUICE  ONION JUICE BENEFITS FOR HAIR  ONION JUICE BENEFITS
ಕೂದಲು ಉದುರುವುದನ್ನು ತಡೆಯುವದಕ್ಕೆ ಈರುಳ್ಳಿ ಜ್ಯೂಸ್​ ಪರಿಣಾಮಕಾರಿಯೇ? (Getty Images)

ಕೂದಲು ಉದುರುವ ಸಮಸ್ಯೆಯನ್ನು ನಿಲ್ಲಿಸಲು ನೀವು ಚರ್ಮಶಾಸ್ತ್ರಜ್ಞರನ್ನು ಸಂಪರ್ಕಿಸಿ ಮತ್ತು ಅದಕ್ಕೆ ಔಷಧಿಗಳನ್ನು ತೆಗೆದುಕೊಳ್ಳಬಹುದು. ಇಂದಿನ ಕಾಲದಲ್ಲಿ ಬೋಳು ತಲೆಯಿಂದ ಮುಕ್ತಿ ಹೊಂದಲು ಕಸಿ ಕೂಡ ಒಂದು ಆಯ್ಕೆಯಾಗಿದೆ. ಆದರೆ, ಆಯುರ್ವೇದ ಮೂಲಕ ಕೂದಲು ಹೊಂದಿರುವುದರ ಬಗ್ಗೆ ನಾವು ಅನೇಕರಿಂದ ಕೇಳಿದ್ದೇವೆ. ತಲೆಗೆ ಈರುಳ್ಳಿ ರಸ ಅಥವಾ ಜ್ಯೂಸ್​ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಹೊಸ ಕೂದಲು ಕೂಡ ಬೆಳೆಯಲು ಪ್ರಾರಂಭಿಸುತ್ತದೆ ಎಂದು ಜನರು ಹೇಳುತ್ತಾರೆ. ಆದರೆ, ಇದು ನಿಜವಾಗಿಯೂ ಸಂಭವಿಸುತ್ತದೆಯೇ ಎಂಬುದರ ಬಗ್ಗೆ ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.

BENEFITS OF ONION JUICE  ONION JUICE BENEFITS FOR HAIR  ONION JUICE BENEFITS
ಕೂದಲು ಬೆಳೆಯುವುದಕ್ಕೆ ಈರುಳ್ಳಿ ಜ್ಯೂಸ್​ ಪರಿಣಾಮಕಾರಿಯೇ? (Getty Images)

ಈರುಳ್ಳಿಯ ಪ್ರಯೋಜನವೇನು?: ಈ ಸಮಸ್ಯೆಯನ್ನು ಆಂಡ್ರೊಜೆನೆಟಿಕ್ ಅಲೋಪೆಸಿಯಾ ಎಂದು ಹೆಸರಿಸಲಾಗಿದೆ. ಇದಲ್ಲದೇ, ಕೆಲವು ಔಷಧಿಗಳ ಅಡ್ಡ ಪರಿಣಾಮಗಳು, ಹಾರ್ಮೋನ್ ಸಮಸ್ಯೆಗಳು, ಪರಿಸರ ಅಥವಾ ನೀರಿನ ಸಮಸ್ಯೆಗಳು ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಯಾರಿಗಾದರೂ ಕೂದಲು ಉದುರುವ ಸಮಸ್ಯೆ ಇದ್ದಲ್ಲಿ ಈರುಳ್ಳಿ ರಸವನ್ನು ಹಚ್ಚಿಕೊಳ್ಳುವುದು ಪ್ರಯೋಜನಕಾರಿ ಎಂದು ಕೆಲವು ವೈದ್ಯಕೀಯ ವರದಿಗಳು ಬಹಿರಂಗಪಡಿಸಿವೆ.

ಈರುಳ್ಳಿ ರಸವು ಅಲೋಪೆಸಿಯಾ, ಕೂದಲು ಉದುರುವಿಕೆ, ತುರಿಕೆ ಅಥವಾ ಶುಷ್ಕತೆ, ತಲೆಹೊಟ್ಟು, ಹೊಸ ಕೂದಲು ಬೆಳೆಯುವುದು ಮತ್ತು ಕೂದಲು ಬಿಳಿಯಾಗುವುದು ಸೇರಿದಂತೆ ಅನೇಕ ರೀತಿಯ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಕೆಲವು ವೈದ್ಯಕೀಯ ವರದಿಗಳು ಸೂಚಿಸುತ್ತವೆ.

ಈರುಳ್ಳಿ ರಸವು ಕೂದಲಿನ ಬೆಳವಣಿಗೆಗೆ ಪರಿಣಾಮಕಾರಿಯೇ ಅಥವಾ ಇಲ್ಲವೇ ಎಂಬುದರ ಕುರಿತು ಹೆಚ್ಚು ಸಂಶೋಧನೆ ಮಾಡಲಾಗಿಲ್ಲ. ಆದರೆ ಜರ್ನಲ್ ಆಫ್ ಡರ್ಮಟಾಲಜಿಯಲ್ಲಿ ಪ್ರಕಟವಾದ ಒಂದು ಸಣ್ಣ ಸಂಶೋಧನೆ ಈರುಳ್ಳಿ ರಸವನ್ನು ನೆತ್ತಿಯ ಮೇಲೆ ಹಚ್ಚಿದರೆ, ಸುಮಾರು ಎರಡು ವಾರಗಳಲ್ಲಿ ಕೂದಲು ಬೆಳವಣಿಗೆ ಪ್ರಾರಂಭವಾಗುತ್ತದೆ ಎಂದು ಬಹಿರಂಗಪಡಿಸಿದೆ. ಈ ಸಂಶೋಧನೆಯಲ್ಲಿ ತೊಡಗಿರುವ ಜನರಲ್ಲಿ, ಸುಮಾರು 74 ಪ್ರತಿಶತದಷ್ಟು ಜನರು 4 ವಾರಗಳಲ್ಲಿ ಸ್ವಲ್ಪ ಕೂದಲು ಬೆಳೆದರೆ, 87 ಪ್ರತಿಶತ ಜನರಿಗೆ ಸುಮಾರು 6 ವಾರಗಳಲ್ಲಿ ಕೂದಲು ಬೆಳೆದಿವೆ.

ಈ ಸಂಶೋಧನೆ ನಡೆಸಿದ ಸಂಶೋಧಕರ ಪ್ರಕಾರ, ಈರುಳ್ಳಿ ರಸವು ಬೇರುಗಳನ್ನು ತಲುಪುತ್ತದೆ ಮತ್ತು ಅವುಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ಪೋಷಕಾಂಶಗಳನ್ನು ಒದಗಿಸುವುದರಿಂದ ಕೂದಲು ಬೆಳೆಯುತ್ತದೆ ಮತ್ತು ಬಲಗೊಳ್ಳುತ್ತದೆ. ಇದಲ್ಲದೇ, ಕೂದಲು ತೆಳುವಾಗುವುದು ಮತ್ತು ಒಡೆಯುವುದು ಸಹ ಕಡಿಮೆಯಾಗುತ್ತದೆ. ವೈದ್ಯರ ಪ್ರಕಾರ, ಆಹಾರದ ಸಲ್ಫರ್ ಕೂದಲು ಮತ್ತೆ ಬೆಳೆಯಲು ಸಹಾಯ ಮಾಡುತ್ತದೆ. ಈರುಳ್ಳಿ ರಸವು ಸಲ್ಫರ್ ಅನ್ನು ಹೊಂದಿರುತ್ತದೆ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.

ತಜ್ಞರು ಹೇಳುವುದೇನೆಂದರೆ..: ವೈದ್ಯರ ಪ್ರಕಾರ ಈರುಳ್ಳಿ ರಸವು ಕೂದಲಿನ ಬೆಳವಣಿಗೆಯಲ್ಲಿ ಮತ್ತು ಕೂದಲು ಒಡೆಯುವಿಕೆಯನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿದೆ. ಆದರೆ ಇದು ಎಲ್ಲರಿಗೂ ಪರಿಣಾಮಕಾರಿ ಎಂದು ಅಗತ್ಯವಿಲ್ಲ. ಈರುಳ್ಳಿ ರಸವನ್ನು ಹಚ್ಚುವುದರಿಂದ ಕೂದಲು ಬೇಗ ಬೆಳೆಯುವುದಿಲ್ಲ. ಫಲಿತಾಂಶಗಳನ್ನು ಪಡೆಯಲು ಹಲವಾರು ವಾರಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳುತ್ತಾರೆ.

ಓದಿ: ಏನೇ ಮಾಡಿದ್ರೂ ಹೊಟ್ಟು, ಕೂದಲು ಉದುರುವ ಸಮಸ್ಯೆ ನಿವಾರಣೆ ಆಗ್ತಿಲ್ಲವೇ?; ಇದೊಂದು ಟಿಪ್ಸ್​ ಪಾಲಿಸಿ - BEST WAYS TO STOP HAIR LOSS

ಓದುಗರ ಗಮನಕ್ಕೆ: ಇಲ್ಲಿ ನೀಡಲಾಗಿರುವ ಎಲ್ಲ ಆರೋಗ್ಯ ಮಾಹಿತಿ ನಿಮ್ಮ ತಿಳಿವಳಿಕೆಗಾಗಿ ಮಾತ್ರವೇ ನೀಡಲಾಗಿದೆ. ವೈಜ್ಞಾನಿಕ ಸಂಶೋಧನೆಗಳು, ಅಧ್ಯಯನಗಳು, ವೈದ್ಯಕೀಯ, ಆರೋಗ್ಯ ವೃತ್ತಿಪರ ಶಿಫಾರಸುಗಳ ಆಧಾರದ ಮೇಲೆ ನಾವು ಈ ಮಾಹಿತಿಯನ್ನು ನಿಮಗೆ ಒದಗಿಸುತ್ತಿದ್ದೇವೆ. ಆರೋಗ್ಯ ಸಮಸ್ಯೆ ಅಧಿಕವಾಗಿದ್ದರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.