ಹೈದರಾಬಾದ್ : ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯದ ವ್ಯಾಪಕ ಹರಡುವಿಕೆಯಿಂದಾಗಿ ಪರಿಸರ - ಇಟ್ಟಿಗೆ ಬಳಕೆ ಹೆಚ್ಚಿನ ಮಾನ್ಯತೆ ಪಡೆದುಕೊಂಡಿದೆ.
ಭೂಮಿಯಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಗಂಭೀರ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಜನರು ಯಾವಾಗಲೂ ಪರಿಹಾರಗಳನ್ನು ಹುಡುಕುತ್ತಿದ್ದಾರೆ. ಪರಿಸರ ಸ್ನೇಹಿ ಇಟ್ಟಿಗೆಗಳು ಇದಕ್ಕೆ ಒಂದು ಪರಿಹಾರವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ತುಂಬಿದ ಪ್ಲಾಸ್ಟಿಕ್ ಬಾಟಲಿಗಳನ್ನು "ಪರಿಸರ ಇಟ್ಟಿಗೆಗಳು" ಎಂದು ಕರೆಯಲಾಗುತ್ತದೆ. ಅವುಗಳನ್ನು ಕಟ್ಟಡ ಸಾಮಗ್ರಿಗಳಾಗಿ ಬಳಸಲಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಲು ಅವು ಆರ್ಥಿಕ, ಪರಿಸರ ಸ್ನೇಹಿ ಮತ್ತು ಸೃಜನಶೀಲ ಮಾರ್ಗವಾಗಿವೆ.
ಇಕೋಬ್ರಿಕ್ ಇತಿಹಾಸ : ಇಕೋಬ್ರಿಕ್ಸ್ ನಿರ್ಮಾಣ ಗ್ವಾಟೆಮಾಲಾದಲ್ಲಿ ಪ್ರಾರಂಭವಾಯಿತು. ತದನಂತರ ಇದು ಫಿಲಿಪ್ಪಿನ್ಸ್ ಮೂಲಕ ದಕ್ಷಿಣ ಆಫ್ರಿಕಾಕ್ಕೆ ಬಳಕೆಗೆ ಬಂತು. 2003ರಲ್ಲಿ ಗ್ವಾಟೆಮಾಲಾದ ಪರಿಸರ ಕಾರ್ಯಕರ್ತೆ ಸುಸನ್ನಾ ಹೈಸ್ಸೆ, ಲೇಕ್ ಅಟಿಟ್ಲಾನ್ ಸಮುದಾಯಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯದ ಸಮಸ್ಯೆಯನ್ನು ಪರಿಹರಿಸಲು ಮೊದಲ ಪರಿಸರ ಇಟ್ಟಿಗೆ ನಿರ್ಮಾಣ ವ್ಯವಸ್ಥೆಯನ್ನು ರಚಿಸಿದರು.
ಪ್ರಪಂಚದಾದ್ಯಂತ ಜನರಿಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುವ ಗೋಡೆಯನ್ನು ನಿರ್ಮಿಸಲು ಅವರು ಇಕೋ ಬ್ರಿಕ್ಸ್ಗಳನ್ನು ಬಳಸಿದರು. ಇದರ ಪರಿಣಾಮವಾಗಿ, ದಕ್ಷಿಣ ಆಫ್ರಿಕಾದ ಮೊದಲ ಪಟ್ಟಣಗಳಲ್ಲಿ ಒಂದಾದ ಗ್ರೇಟನ್ನಲ್ಲಿ ಈ ಕಲ್ಪನೆಯ ಆಧಾರದ ಮೇಲೆ ಪರಿಸರ ಗ್ರಾಮ, ಸಮುದಾಯ ಉದ್ಯಾನಗಳು ಮತ್ತು ಶಾಲೆಗಳನ್ನು ರಚಿಸಲಾಯಿತು.
ಇಕೋಬ್ರಿಕ್ ಎಂದರೇನು? : ಇಕೋಬ್ರಿಕ್ಸ್ ಪ್ಲಾಸ್ಟಿಕ್ ತ್ಯಾಜ್ಯ ಮರು - ಪ್ಯಾಕೇಜ್ ಮಾಡುವ ಒಂದು ಮಾರ್ಗವಾಗಿದೆ. ಇದರಿಂದ ಅದು ಗಟ್ಟಿಮುಟ್ಟಾದ ಬಿಲ್ಡಿಂಗ್ ಬ್ಲಾಕ್ ಆಗಿ ಬಳಸಬಹುದಾಗಿದೆ. ಮೂಲಭೂತವಾಗಿ, ನೀವು ಯಾವುದೇ ಗಾತ್ರದ ಪ್ಲಾಸ್ಟಿಕ್ ಬಾಟಲಿಯನ್ನು ತೆಗೆದುಕೊಂಡು ಅದಕ್ಕೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಅಂಚಿನಲ್ಲಿ ತುಂಬಿಸಿ. ಸಾಮಾನ್ಯ ಬಾಟಲ್ ಆಯ್ಕೆಗಳಲ್ಲಿ ಏಕ - ಬಳಕೆಯ ಜ್ಯೂಸ್ ಬಾಟಲಿಗಳು, ಒಂದು ಅಥವಾ ಎರಡು, ಲೀಟರ್ ಸೋಡಾ ಬಾಟಲಿಗಳು ಮತ್ತು ನೀರಿನ ಬಾಟಲಿಗಳನ್ನು ಬಳಕೆ ಮಾಡಬಹುದಾಗಿದೆ.
ಸಿದ್ಧಪಡಿಸಿದ ಉತ್ಪನ್ನವನ್ನು ಕಟ್ಟಡದ ಕುರ್ಚಿಗಳು, ಮೇಜುಗಳು, ಗೋಡೆಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಎಲ್ಲಾ ರೀತಿಯ ಯೋಜನೆಗಳಿಗೆ ಬಳಸಬಹುದು. ಇದು ಬಹಳ ಸರಳವಾದ ಮಾರ್ಗವಾಗಿದೆ. ಇಕೋಬ್ರಿಕ್ ಎನ್ನುವುದು ಮರುಬಳಕೆ ಮಾಡಬಹುದಾದ ಬಿಲ್ಡಿಂಗ್ ಬ್ಲಾಕ್ ಅನ್ನು ರಚಿಸಲು, ಬಳಸಿದ ಪ್ಲಾಸ್ಟಿಕ್‌ನಿಂದ ದಟ್ಟವಾಗಿ ಪ್ಯಾಕ್ ಮಾಡಿದ ಪ್ಲಾಸ್ಟಿಕ್ ಬಾಟಲಿಯಾಗಿದೆ. ಇದನ್ನು ತಯಾರಿ ಮಾಡಲು ನಿಮಗೆ ಬೇಕಾಗಿರುವುದು ಕೋಲು ಮತ್ತು ಬಾಟಲಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಮಾತ್ರವೇ ಆಗಿದೆ.
ಪರಿಸರ ಇಟ್ಟಿಗೆಗಳ ಪ್ರಯೋಜನಗಳು : ಪರಿಸರ ಇಟ್ಟಿಗೆಗಳು ದೀರ್ಘಾಯುಷ್ಯ ಹೊಂದಿವೆ. ಏಕೆಂದರೆ ಅವುಗಳು ಬಾಳಿಕೆ ಬರುವ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ. ನಿಮಗೆ ತಿಳಿದಿರುವಂತೆ ಪ್ಲಾಸ್ಟಿಕ್ 1000 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಬದಲಾಗದೇ ಇರುವುದರಿಂದ ಪರಿಸರ ಇಟ್ಟಿಗೆಗಳು ಒಡೆಯುವುದಿಲ್ಲ.
ಪ್ಲಾಸ್ಟಿಕ್ ನೀರು - ನಿರೋಧಕವಾಗಿದೆ. ಆದ್ದರಿಂದ ನೀವು ಪರಿಸರ ಇಟ್ಟಿಗೆಗಳಿಂದ ತಯಾರಿಸುವ ಯಾವುದೇ ವಸ್ತುವು ನೀರಿನಿಂದ ಸುರಕ್ಷಿತವಾಗಿರುತ್ತದೆ. ತ್ಯಾಜ್ಯದಿಂದ ನಿರ್ಮಿಸಲಾದ ಬ್ಲಾಕ್‌ಗಳು ಮತ್ತು ಕಟ್ಟಡಗಳು ಪ್ರತಿಯೊಬ್ಬರೂ ತಮ್ಮ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಪ್ರೇರೇಪಿಸಬಹುದು. ಬಹಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಡಲಾಗುತ್ತದೆ. ಇದು ಮಾಲಿನ್ಯವನ್ನು ಸೃಷ್ಟಿಸುತ್ತದೆ. ಪರಿಸರ ಇಟ್ಟಿಗೆಗಳು, ಒಂದು ರೀತಿಯಲ್ಲಿ ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ಲಾಸ್ಟಿಕ್ ಎಸೆದರೆ ಅವು ಮೈಕ್ರೋಪ್ಲಾಸ್ಟಿಕ್ ಆಗುತ್ತವೆ. ಪರಿಸರ ಇಟ್ಟಿಗೆಗಳನ್ನು ಬಳಸುವುದರ ಮೂಲಕ ಪ್ಲಾಸ್ಟಿಕ್ ವಿಘಟನೆಯ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡಬಹುದು.
ಪ್ಲಾಸ್ಟಿಕ್ ಬಾಟಲಿ ತಯಾರಿಸುವ ವಿಧಾನ :
1. ಮನೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಸ್ವಚ್ಛಗೊಳಿಸಿ ಮತ್ತು ಒಣಗಿಸಿ. ಯಾವುದೇ ಮರುಬಳಕೆ ಮಾಡಲಾಗದ ವಸ್ತುಗಳು ನಿಮ್ಮ ಪರಿಸರ ಇಟ್ಟಿಗೆಯನ್ನು ತಯಾರಿಸಲು ಬಳಸಬಹುದಾಗಿದೆ.
2. ಪ್ಲಾಸ್ಟಿಕ್ ತ್ಯಾಜ್ಯವನ್ನು ಬಾಟಲಿಗೆ ಸಾಧ್ಯವಾದಷ್ಟು ಬಿಗಿಯಾಗಿ ತುಂಬಿಸಿ. ಅದನ್ನು ಪ್ಯಾಕ್ ಮಾಡಲು ಸಹಾಯ ಮಾಡಲು ಕಡ್ಡಿ ಅಥವಾ ಇತರ ಉದ್ದವಾದ, ಕಿರಿದಾದ ಸಾಧನವನ್ನು ಬಳಸಿ. ಬಾಟಲಿಯನ್ನು ಬಿಗಿಯಾಗಿ ಪ್ಯಾಕ್ ಮಾಡುವವರೆಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸೇರಿಸುವುದನ್ನು ಮುಂದುವರಿಸಿ.
3. ಒಂದು ಕೋಲಿನಿಂದ ಪ್ಲಾಸ್ಟಿಕ್ ಬಾಟಲಿಗೆ ತ್ಯಾಜ್ಯವನ್ನು ತುಂಬಿಸಿ. ಹಳೆಯ-ಶೈಲಿಯ ಮರದ ಚಮಚದ ಹ್ಯಾಂಡಲ್ ಅನ್ನು ಕೂಡಾ ಬಳಸಬಹುದು.
4. ತ್ಯಾಜ್ಯವನ್ನು ಸರಿಯಾಗಿ ತುಂಬಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಪ್ರತಿ ಹಂತದ ನಂತರ ಬಿಗಿಯಾಗಿ ಪ್ಯಾಕ್ ಮಾಡಿ.
5. ಬಾಟಲಿಯು ಬಿಗಿಯಾಗಿ ಮತ್ತು ಸಾಕಷ್ಟು ತುಂಬಿದೆಯೇ ಎಂದು ಪರೀಕ್ಷಿಸಲು ನಿಮ್ಮ ಕೈಯಿಂದ ಅದನ್ನು ಹಿಸುಕಿ ಅಥವಾ ಅದು ನಿಮ್ಮ ತೂಕವನ್ನು ತಡೆಯಬಲ್ಲುದೇ ಎಂದು ನೋಡಲು ಅದರ ಮೇಲೆ ನಿಲ್ಲಿ.
6. ಬಾಟಲ್ ಟಾಪ್ನೊಂದಿಗೆ ಬಿಗಿಯಾಗಿ ಸೀಲ್ ಮಾಡಿ. ಈಗ ನೀವು ನಿಮ್ಮ ಇಕೋ ಬ್ರಿಕ್ ಅನ್ನು ಬಳಸಲು ಸಿದ್ಧರಾಗಿರಿ.
ಇದನ್ನೂ ಓದಿ : ಅಂಗನವಾಡಿ ಕೇಂದ್ರಗಳ ನಿರ್ಮಾಣದಲ್ಲಿ ಇಟ್ಟಿಗೆಗಳಾಗಿ ಪ್ಲಾಸ್ಟಿಕ್ ಬಾಟಲಿಗಳ ಬಳಕೆ..!