ETV Bharat / health

'ಅಂತಾರಾಷ್ಟ್ರೀಯ ಸ್ನಾನ ದಿನ': ಇತಿಹಾಸ, ಪ್ರಯೋಜನ, ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳಿವು! - International Bath Day - INTERNATIONAL BATH DAY

ಅಂತಾರಾಷ್ಟ್ರೀಯ ಸ್ನಾನ ದಿನವನ್ನು ಜೂನ್ 14ರಂದು ಆಚರಿಸಲಾಗುತ್ತದೆ. ಸ್ನಾನ ಕೇವಲ ದೈಹಿಕ ಶುದ್ಧೀಕರಣಕ್ಕೆ ಸೀಮಿತವಾಗಿರದೇ, ಮಾನಸಿಕ ಯೋಗಕ್ಷೇಮವನ್ನೂ ಪೋಷಿಸುತ್ತದೆ.

International Bath Day
ಅಂತಾರಾಷ್ಟ್ರೀಯ ಸ್ನಾನ ದಿನ (Getty Images)
author img

By ETV Bharat Karnataka Team

Published : Jun 14, 2024, 9:35 AM IST

ಪ್ರತೀ ಜೂನ್ 14ರಂದು ಅಂತಾರಾಷ್ಟ್ರೀಯ ಸ್ನಾನ ದಿನವನ್ನು (International Bath Day) ಆಚರಿಸಲಾಗುತ್ತದೆ. ಈ ದಿನವು ಸ್ನಾನದ ಮೇಲಿನ ಪ್ರೀತಿಯನ್ನು ಆಚರಿಸುವ ಗುರಿಯನ್ನು ಹೊಂದಿದೆ. ಸ್ನಾನ ಸಾಮಾನ್ಯ ವಿಷಯವೆನಿಸಿದರೂ ಅತ್ಯಗತ್ಯ.

ಮಾನಸಿಕ ಆರೋಗ್ಯಕ್ಕೂ ಪೂರಕ: ದಿನಕ್ಕೆ ಎರಡು ಬಾರಿ ಸ್ನಾನ ಮಾಡುತ್ತೀರಾ?. ಸ್ನಾನ ಕೇವಲ ದೈಹಿಕ ಶುದ್ಧೀಕರಣಕ್ಕೆ ಸೀಮಿತವಾಗಿಲ್ಲ. ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನೂ ಸುಧಾರಿಸುತ್ತದೆ. ಜೊತೆಗೆ, ನಮ್ಮ ಪ್ರಶಾಂತತೆಯನ್ನೂ ವರ್ಧಿಸುತ್ತದೆ. ಬೆಚ್ಚಗಿನ ನೀರು ಮೈ ಮೇಲೆ ಬೀಳುವುದರಿಂದ ಆರೋಗ್ಯಕ್ಕೂ ಪೂರಕ. ಅಷ್ಟೇ ಅಲ್ಲ, ಎಲೆಕ್ಟ್ರಾನಿಕ್ ಸಾಧನಗಳಿಂದ ಬೇರ್ಪಟ್ಟು, ನಮ್ಮ ಇಂದ್ರಿಯಗಳ ಅನುಭವವನ್ನು ಸಂಪೂರ್ಣವಾಗಿ ಆನಂದಿಸಲು ಇದು ನಮಗೆ ಒಂದು ಕ್ಷಣವನ್ನು ಒದಗಿಸುತ್ತದೆ. ನೀರು ನಮ್ಮ ಚರ್ಮವನ್ನು ಸ್ಪರ್ಶಿಸಿ, ಶಾಂತಿ ಸಿಕ್ಕಂತೆ ಅನಿಸಿದಾಗ ನಾವು ಆ ಕ್ಷಣವನ್ನು ಸಂಪೂರ್ಣವಾಗಿ ಅನುಭವಿಸಬಹುದು.

ಅಂತಾರಾಷ್ಟ್ರೀಯ ಸ್ನಾನ ದಿನದ ಇತಿಹಾಸ: ಶವರ್, ಬಾತ್ ಟಬ್​​ಗಳು, ಸ್ಪೆಷಲೈಸ್ಡ್ ವಾಟರ್ ಟ್ಯಾಪ್ಸ್ ಇಂದಿನ ಆಧುನಿಕ ಬಾತ್​ರೂಮ್​ನ ಒಂದು ಸಾಮಾನ್ಯ ದೃಶ್ಯ. ಆದರೆ ಹಿಂದಿನ ದಿನಗಳಲ್ಲಿ ಜನರಿಗೆ ಸ್ನಾನ ಕಠಿಣ, ಅಹಿತಕರ ಅನುಭವ. ಉದಾಹರಣೆಗೆ, ಸ್ನಾನಕ್ಕೆ ಸೂಕ್ತ ಕೊಳಾಯಿ ವ್ಯವಸ್ಥೆ ಇರಲಿಲ್ಲ. 19ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ಕಂಟೇನರ್ ರೀತಿ ವ್ಯವಸ್ಥೆ ಇರುತ್ತಿತ್ತು. ಪ್ರಪಂಚದ ಇತರ ಪ್ರದೇಶಗಳಲ್ಲಿನ ಜನರು ತಮ್ಮನ್ನು ಸ್ವಚ್ಛಗೊಳಿಸಲು ಸ್ಥಳೀಯ ಕೊಳ ಅಥವಾ ನದಿಯ ಮೊರೆ ಹೋಗುತ್ತಿದ್ದರು. ಪರಿಣಾಮ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು.

ಒಂದು ವಸ್ತುವನ್ನು ನೀರಿನಲ್ಲಿ ಮುಳುಗಿಸುವ ಮೂಲಕ ಅದರ ಪರಿಮಾಣವನ್ನು ನಿಖರವಾಗಿ ಲೆಕ್ಕಹಾಕಬಹುದು ಎಂದು ಹೆಸರಾಂತ ಗ್ರೀಕ್ ವಿಜ್ಞಾನಿ ಆರ್ಕಿಮೆಡೆಸ್ (Archimedes) ಮಾಡಿದ ಆವಿಷ್ಕಾರವನ್ನು ಅಂತಾರಾಷ್ಟ್ರೀಯ ಸ್ನಾನದ ದಿನ ನೆನಪಿಸುತ್ತದೆ. ಅಂದು, ಸ್ನಾನ ಎಂಬ ಪರಿಕಲ್ಪನೆ ಹುಟ್ಟಿಕೊಂಡಿತು. ಈ ಆವಿಷ್ಕಾರವನ್ನು ಮಾಡಿದ ನಂತರ, ಸ್ನಾನದ ಬಗ್ಗೆ ಇತರರಿಗೆ ಹೇಳಲು ಅವರು ಉತ್ಸುಕರಾಗಿದ್ದರು. ಬಾತ್​​​ಟಬ್‌ನಿಂದ ಹೊರಬಂದು ಈ ವಿಚಾರವನ್ನು ಎಲ್ಲರಿಗೂ ಹೇಳಲಿಚ್ಛಿಸಿದರು. ಸಿರಾಕ್ಯೂಸ್‌ನ ಬೀದಿಗಳಲ್ಲಿ ಓಡಿದರು. ಎಲ್ಲರೊಂದಿಗೂ ಈ ವಿಚಾರವನ್ನು ಹಂಚಿಕೊಂಡರು.

ಸ್ನಾನದ ಸಂದರ್ಭ ಗಮನ ಹರಿಸಬೇಕಾದ ವಿಷಯಗಳಿವು:

  • ಸ್ವಚ್ಛ ಟವೆಲ್ ಬಳಸುವುದು.
  • ಸ್ನಾನದ ಬದಲು ಡಿಯೋಡ್ರೆಂಟ್​ ಬಳಸುವುದನ್ನು ನಿಯಂತ್ರಿಸಿ.
  • ಹೆಚ್ಚು ಅಥವಾ ಕಡಿಮೆ ಸ್ನಾನದ ಅಭ್ಯಾಸವನ್ನು ಸರಿಪಡಿಸಿಕೊಳ್ಳಿ.
  • ದಿನಕ್ಕೆರಡು ಬಾರಿ, ಕನಿಷ್ಠ ಒಂದು ಬಾರಿ ಸರಿಯಾಗಿ ಸ್ನಾನ ಮಾಡಿ.
  • ದೇಹದ ಯಾವ ಭಾಗಕ್ಕೆ ಯಾವ ಸೋಪ್​​ ಅಥವಾ ಪ್ರೊಡಕ್ಟ್ಸ್ ಬಳಸಬೇಕೆಂಬುದನ್ನು ಸರಿಯಾಗಿ ತಿಳಿದುಕೊಳ್ಳಿ.
  • ಬಾತ್​​ರೂಮ್,​ ಕರ್ಟೈನ್ಸ್, ಶವರ್​​ ಹೆಡ್ಸ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳಿ.

ಇದನ್ನೂ ಓದಿ: ದೈನಂದಿನ ಆಹಾರದಲ್ಲಿ ಇವುಗಳನ್ನು ಸೇವಿಸುತ್ತಿದ್ದರೆ ನಿಮಗೆ ವಯಸ್ಸೇ ಆಗುವುದಿಲ್ಲ: ಯಂಗ್​ ಆಗಿರುವಂತೆ ನೋಡಿಕೊಳ್ಳುವ ಆ ಆಹಾರಗಳ್ಯಾವವು? - Best Anti Aging Foods

ಪ್ರತಿ ದಿನ ಜೀವನ ಶರವೇಗದಲ್ಲಿ ಸಾಗುತ್ತಿರುವಂತೆ ತೋರುವ ಈ ಜಗತ್ತಿನಲ್ಲಿ, ಸೆಲ್ಫ್​​ ಕೇರ್ ಮತ್ತು ವಿಶ್ರಾಂತಿಗಾಗಿ ಸಮಯ ಮೀಸಲಿಡುವುದು ಕೇವಲ ಐಷಾರಾಮಿ ವಿಚಾರ ಅಲ್ಲ, ಅವಶ್ಯಕತೆಯೂ ಹೌದು. ಸ್ನಾನ ತಮ್ಮನ್ನು ತಾವು ಕಾಳಜಿ ವಹಿಸುವ ಮಾರ್ಗವಾಗಿ ಮತ್ತು ಮೂಲಭೂತ ಹಕ್ಕಾಗಿ ಯುಗಗಳಿಂದಲೂ ರವಾನಿಸಲ್ಪಟ್ಟ ಒಂದು ಸಂಪ್ರದಾಯವಾಗಿದೆ. ವಿಭಿನ್ನ ಸ್ನಾನ ಪದ್ಧತಿಗಳು ಮತ್ತು ಪ್ರತೀ ಸಂಸ್ಕೃತಿಯು ಶುದ್ಧೀಕರಣವನ್ನೇ ತಿಳಿಸುತ್ತದೆ. ಹಿತವಾದ ಸ್ನಾನ ಆತ್ಮಾವಲೋಕನಕ್ಕೆ ಅವಕಾಶ ನೀಡುತ್ತದೆ. ನಕಾರಾತ್ಮಕತೆ ಬಿಡಲು ಸಹಕರಿಸುತ್ತದೆ. ಒಟ್ಟಾರೆ ದೈಹಿಕ ಶುದ್ಧೀಕರಣ ಮಾತ್ರವಲ್ಲದೇ, ಮಾನಸಿಕ ವಿಶ್ರಾಂತಿ, ಮಾನಸಿಕ ಆರೋಗ್ಯಕ್ಕೂ ಸಹಕಾರಿ.

ಪ್ರಪಂಚದಾದ್ಯಂತದ ವಿಭಿನ್ನ ಸ್ನಾನ ಪದ್ಧತಿಯ ಪಟ್ಟಿ:

  • ಫ್ಲೋರಲ್ ಬಾತ್.
  • ಐಸ್ಲ್ಯಾಂಡ್​ನಲ್ಲಿನ ಭೂಶಾಖದ ಪೂಲ್​ ಬಾತ್.
  • ಜಪಾನ್​​ನ ಆನ್​​ಸೆನ್ಸ್ ಬಾತ್.
  • ಭಾರತದಲ್ಲಿನ ಆಯುರ್ವೇದಿಕ್​ ಬಾತ್.
  • ರಷ್ಯಾದಲ್ಲಿನ ಬನ್ಯಾ ಬಾತ್
  • ಥಲಸ್ಸೊಥೆರಪಿ ಸೇರಿ ಮೊದಲಾದವು.

ಇದನ್ನೂ ಓದಿ: ನಿಮ್ಮ ಆಹಾರದಲ್ಲಿ ಬ್ಲ್ಯಾಕ್​ ಸಾಲ್ಟ್ ಉಪಯೋಗಿಸುತ್ತೀರಾ?: ಅದರ ಪ್ರಯೋಜನಗಳೇನೆಂಬುದು ನಿಮಗೆ ಗೊತ್ತೇ? - WHAT IS THE BLACK SALT BENEFITS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.