ETV Bharat / health

ಅಸ್ತಮಾ-ಸಿಒಪಿಡಿಯಿಂದ ಹೆಚ್ಚುತ್ತಿದೆ ಭಾರತದ ತುರ್ತು ನಿಗಾ ವೆಂಟಿಲೇಟರ್​ ಮಾರುಕಟ್ಟೆ - critical care ventilator market

ಕಳಪೆ ಹವಾಮಾನದ ಜೊತೆಗೆ ವಾಯು ಮಾಲಿನ್ಯ ಪ್ರಕರಣಗಳ ಏರಿಕೆಯು ಶ್ವಾಸಕೋಶ ಸಮಸ್ಯೆ ಪ್ರಕರಣ ಹೆಚ್ಚುತ್ತಿದೆ.

india seeing growth in critical care ventilator services market

author img

By ETV Bharat Karnataka Team

Published : Mar 18, 2024, 2:59 PM IST

ನವದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ಸಿಒಪಿಡಿ (ಕ್ರೊನಿಕ್​ ಅಬ್ಸಟ್ರಕ್ಟಿವ್​ ಪಲ್ಮನರಿ ಡೀಸಿಸ್​) ಮತ್ತು ಅಸ್ತಮಾದಂತಹ ದೀರ್ಘಕಾಲದ ಶ್ವಾಸಕೋಶದ ಸಮಸ್ಯೆಗಳು ದೇಶದ ತುರ್ತುನಿಗಾ ಘಟಕದ​ ವೆಂಟಿಲೇಟರ್​ ಸೇವಾ ಮಾರುಕಟ್ಟೆಯ ಬೆಳವಣಿಗೆಗೆ ಕಾರಣವಾಗುತ್ತಿದೆ. ಈ ಕ್ಷೇತ್ರವೂ 2033ರಲ್ಲಿ ಶೇ 4ರಷ್ಟು ವಾರ್ಷಿಕ ಅಭಿವೃದ್ಧಿ ಕಾಣಲಿದೆ ಎಂದು ವರದಿ ತಿಳಿಸಿದೆ.

ಗ್ಲೋಬಲ್​ ಡೇಟಾ ವರದಿ ಅನುಸಾರ, ಭಾರತದ ದತ್ತಾಂಶ ಮತ್ತು ವಿಶ್ಲೇಷಣೆ ಕಂಪನಿಗಳು ಬಿಡುಗಡೆ ಮಾಹಿತಿ ಅನುಸಾರ, 2023ರಲ್ಲಿ ಏಷ್ಯಾ ಫೆಸಿಫಿಕ್​​ನ ತುರ್ತು ಆರೈಕೆ ವೆಂಟಿಲೇಟರ್​ ಮಾರುಕಟ್ಟೆಯಲ್ಲಿ ಭಾರತವು ಶೇ 21ರಷ್ಟು ಪಾಲನ್ನು ಹೊಂದಿದೆ.

ನಗರೀಕರಣ ಮತ್ತು ಕೈಗಾರಿಕಾ ವಿಸ್ತರಣೆಯಿಂದಾಗಿ ಭಾರತದಲ್ಲಿ ವಾಯು ಮಾಲಿನ್ಯ ಹದಗೆಡುತ್ತಿದೆ. ಇದು ಸಿಒಪಿಡಿಯಂತಹ ಶ್ವಾಸಕೋಶದ ಸಮಸ್ಯೆ ಉಲ್ಬಣಕ್ಕೆ ಕಾರಣವಾಗುತ್ತಿದೆ ಎಂದು ಗ್ಲೋಬಲ್ ​ಡೇಟಾದ ಮೆಡಿಕಲ್​ ಡಿವೈಸ್​ ಅನಾಲಿಸ್ಟ್​​ ಕಾಂಚನ್​ ಚೌಹಾಣ್​ ತಿಳಿಸಿದ್ದಾರೆ.

ಕೋವಿಡ್​ 19 ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಗಂಭೀರ ಉಸಿರಾಟ ಸಮಸ್ಯೆ ಹೊಂದಿರುವವರಲ್ಲಿ ತುರ್ತು ಘಟಕಗಳ ವೆಂಟಿಲೇಟರ್​​ಗಳ ಚಿಕಿತ್ಸೆ ಒತ್ತಡ ಹೆಚ್ಚಿತು. ಇದಕ್ಕೆ ಹೆಚ್ಚುವರಿಯಾಗಿ ಭಾರತದಲ್ಲಿ ಇದೀಗ ಹಿರಿಯ ನಾಗರೀಕರು ಮತ್ತು ಶ್ವಾಸಕೋಶ ಸಮಸ್ಯೆ ಹೊಂದಿರುವವರಲ್ಲಿ ತುರ್ತು ನಿಗಾ ಘಟಕದ ದಾಖಲಾತಿಯಲ್ಲಿ ಏರಿಕೆ ಕಾಣುತ್ತಿದೆ.

ಗಂಭೀರ ಶ್ವಾಸಕೋಶದ ಅನಾರೋಗ್ಯ ಹೊಂದಿರುವ ರೋಗಿಗಳು ತುರ್ತು ಆರೈಕೆ ಮತ್ತು ಯಾಂತ್ರಿಕೃತ ವೆಂಟಿಲೇಟರ್​ ಅವಶ್ಯಕತೆಯನ್ನು ಕೇಳುತ್ತಾರೆ. ಇವುಗಳ ಬೇಡಿಕೆಯು ಇದೀಗ ತುರ್ತು ಆರೈಕೆ ಸೇವೆ ಮತ್ತು ಸಾಧನಗಳು ಅಂದರೆ ವೆಂಟಿಲೇಟರ್​ನ ಅವಶ್ಯಕತೆಯನ್ನು ದೇಶದೆಲ್ಲೆಡೆಯ ಆಸ್ಪತ್ರೆಯಲ್ಲಿ ಹೆಚ್ಚಿಸಿದೆ ಎಂದರು.

ತಂತ್ರಜ್ಞಾನದ ಬೆಳವಣಿಗೆಯಲ್ಲಿ ಆರೋಗ್ಯ ವಲಯವು ಗಮನಾರ್ಹ ಪ್ರಮಾಣದಲ್ಲಿ ಹೊಸ ಅವಿಷ್ಕಾರವನ್ನು ಕಾಣುತ್ತಿದೆ. ಅದರಲ್ಲೂ ವಿಶೇಷವಾಗಿ ಕ್ರಿಟಿಕಲ್​ ಕೇರ್​ ವೆಂಟಿಲೇಟರ್​ನಲ್ಲಿ ಇದರ ಅಭಿವೃದ್ಧಿ ಕಾಣಬಹುದಾಗಿದೆ. ಶ್ವಾಸಕೋಶ ಸಮಸ್ಯೆ ಹೊಂದಿರುವವರಲ್ಲಿ ಮತ್ತು ಹಿರಿಯ ನಾಗರಿಕರಿಗೆ ಹೊಸ ಆವಿಷ್ಕಾರಗಳ ಮೂಲಕ ಸುರಕ್ಷತೆ ಕೈಗೊಳ್ಳುವ ಮೂಲಕ ಆರೋಗ್ಯ ಸುಧಾರಣೆ ಕ್ರಮಕ್ಕೆ ಸರ್ಕಾರಗಳು ಮುಂದಾಗಬೇಕಿದೆ ಎಂದು ತಿಳಿಸಿದರು.

ಭಾರತದಲ್ಲಿ ಚಳಿಗಾಲ ಸಂದರ್ಭ ಸೇರಿದಂತೆ ವರ್ಷಾದಾದ್ಯಂತ ಕಳಪೆ ಹವಾಮಾನದ ಜೊತೆಗೆ ವಾಯು ಮಾಲಿನ್ಯ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಇದು ಶ್ವಾಸಕೋಶ ಸಂಬಂಧಿ ರೋಗಗಳ ಉಲ್ಬಣತೆಗೆ ಕಾರಣವಾಗುತ್ತಿದೆ. ಇದು ಜನರು ಮತ್ತು ಸರ್ಕಾರದ ಮೇಲೆ ಆರೋಗ್ಯದ ವೆಚ್ಚದ ಹೊರೆಯನ್ನು ಹೆಚ್ಚಿಸುತ್ತಿದೆ. (ಐಎಎನ್​ಎಸ್​)

ಇದನ್ನೂ ಓದಿ: ಬೆಂಗಳೂರಿನ ಮಹಿಳೆಯರಲ್ಲಿ ಹೆಚ್ಚುತ್ತಿದೆ ಶ್ವಾಸಕೋಶದ ಕ್ಯಾನ್ಸರ್​​.. ವೈದ್ಯರು ಏನಂತಾರೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.