ನವದೆಹಲಿ: ಅಪರೂಪದ ಕಾಯಿಲೆಯಿಂದ 50 ವರ್ಷದ ಕೆನಡಾದ ಮಹಿಳೆ ಬಳಲುತ್ತಿದ್ದು, ಈಕೆ ವಿಚಿತ್ರ ಸಿಂಡ್ರೋಮ್ವೊಂದನ್ನು ಹೊಂದಿದ್ದಾರೆ. ಅದೆಂದರೆ, ಆಕೆಯ ಕರುಳೇ ಆಲ್ಕೋಹಾಲ್ ಅನ್ನು ಉತ್ಪಾದಿಸುತ್ತದೆ. ಮದ್ಯ ಸೇವನೆ ಮಾಡದೆಯೇ ಆಕೆಯ ದೇಹದಲ್ಲಿ ಮದ್ಯ ಉತ್ಪಾದನೆ ಆಗುತ್ತಿದ್ದು, ಇದು ವೈದ್ಯಕೀಯ ಲೋಕವೇ ಬೆರಗಾಗುವ ಪ್ರಕರಣವಾಗಿದೆ ಎಂದು ತಿಳಿಸಲಾಗಿದೆ. ಈ ಪ್ರಕರಣ ಕುರಿತು ಕೆನಡಿಯನ್ ಮೆಡಿಕಲ್ ಅಸೋಸಿಯೇಷನ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಟೊರೊಂಟೊ ಯುನಿವರ್ಸಿಟಿ ವೈದ್ಯರು ಮೌಂಟ್ ಸಿನಾಯ್ ಎಂಬ ಮಹಿಳೆಯಲ್ಲಿ ಆಟೋ ಬ್ರೆವರಿ ಸಿಂಡ್ರೋಮ್ ಅನ್ನು ಪತ್ತೆ ಮಾಡಿದ್ದಾರೆ. ಕರುಳಿನ ಫಂಗಲ್ ಹುದುಗುವಿಕೆ ಮೂಲಕ ಆಲ್ಕೋಹಾಲ್ ಅನ್ನು ತಯಾರಿಸುತ್ತದೆ.
ಕಳೆದೆರಡು ವರ್ಷಗಳಿಂದ ಮಹಿಳೆ ಬೆಳಗಿನ ಸಮಯದಲ್ಲಿ ಆಲ್ಕೋಹಾಲ್ ಸೇವನೆ ಮಾಡದೆಯೇ ತೀವ್ರ ನಿದ್ದೆ ಮತ್ತು ಮಾತಿನ ತೊದಲುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲದೇ ಆಕೆಯ ರಕ್ತದಲ್ಲಿ ಕೂಡ ಆಲ್ಕೋಹಾಲ್ ಮಟ್ಟ ಪತ್ತೆಯಾಗಿದ್ದು, ಉಸಿರಾಟದಲ್ಲೂ ಆಲ್ಕೋಹಾಲ್ ಅಂಶ ಕಂಡುಬಂದಿದೆ.
ಅತಿಯಾದ ಬೆಳಗಿನ ನಿದ್ರೆಯಿಂದಾಗಿ ವೈದ್ಯರ ತಪಾಸಣೆಗೆ ಹೋದಾಗ ಈಕೆ ಮದ್ಯ ಕುಡಿದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾಳೆ ಎಂದು ಪ್ರತಿ ಬಾರಿ ಆಕೆಯ ಮಾತನ್ನು ವೈದ್ಯರು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಕಳೆದ ಐದು ವರ್ಷದಿಂದ ನಿಯಮಿತವಾಗಿ ಮೂತ್ರ ಸೋಂಕು (ಯುಟಿಐ)ಗೆ ಒಳಗಾಗುತ್ತಿದ್ದು, ಈ ಮಹಿಳೆಯ ಪ್ರೋಟಾನ್ ಪಂಪ್ ಇನ್ಹಿಬಿಟರ್ಗಳು ಸಿಪ್ರೊಫ್ಲೋಕ್ಸಾಸಿನ್ ಮತ್ತು ನೈಟ್ರೊಫುರಾಂಟೊಯಿನ್ ಕೋರ್ಸ್ಗೆ ಒಳಗಾಗಿದ್ದಾಳೆ. ಹಾಗೆ ಜಠರಗರುಳಿನ ಹಿಮ್ಮುಖ ಹರಿವು ರೋಗ, ಡೆಕ್ಸ್ಲಾನ್ಸೊಪ್ರಜೋಲ್ನೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ.
ಈ ಹಿಂದೆ ರಜಾ ದಿನಗಳಲ್ಲಿ ಮಹಿಳೆ ವೈನ್ ಸೇವಿಸುತ್ತಿದ್ದಳು. ಆದರೆ, ಇತ್ತೀಚಿನ ವರ್ಷದಲ್ಲಿ ಆಕೆಯ ಧಾರ್ಮಿಕ ನಂಬಿಕೆ ಕಾರಣದಿಂದ ಕುಡಿತವನ್ನು ನಿಲ್ಲಿಸಿದ್ದಳು.
ಆಕೆಯ ನಿಖರ ಸಮಸ್ಯೆ ಏನು ಎಂಬುದನ್ನು ವೈದ್ಯರು ಪತ್ತೆ ಮಾಡುವ ಮೊದಲು ಆಕೆ ಸಮಸ್ಯೆ ಹಿನ್ನೆಲೆ ಅರೆಪ್ರಜ್ಞಾವಸ್ಥೆಗೆ ಒಳಗಾಗಿ ಏಳು ಬಾರಿ ತುರ್ತು ನಿಗಾ ಘಟಕದಲ್ಲಿ ದಾಖಲಾಗಿದ್ದಳು. ಆಟೋ ಬ್ರುವರಿ ಸಿಂಡ್ರೋಮ್ ರೋಗಿಯ ಸಾಮಾಜಿಕ, ಕಾನೂನು ಮತ್ತು ವೈದ್ಯಕೀಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಅಧ್ಯಯನದ ಲೇಖಕರಾಗಿರುವ ಟೊರೊಂಟೊ ಯುನಿವರ್ಸಿಟಿಯ ಡಾ ರಹೆಲ್ ಜೆವುಡೆ ಮಾಹಿತಿ ನೀಡಿದ್ದಾರೆ.
ಯುಟಿಐಗಾಗಿ ನೀಡುತ್ತಿದ್ದ ಪ್ರತಿರೋಧಕ ಚಿಕಿತ್ಸೆ ಮತ್ತು ಡೆಕ್ಸ್ಲಾನ್ಸೊಪ್ರಜೋಲ್ ಬಳಕೆಯು ಕರುಳಿನಲ್ಲಿ ಡೈಸ್ಬಿಒಸಿಸ್ ಈ ಅಪರೂಪದ ರೋಗಕ್ಕೆ ಕಾರಣವಾಗಿದೆ. ಸದ್ಯ ಮಹಿಳೆಗೆ ಆ್ಯಂಟಿ ಫಂಗಸ್ ಚಿಕಿತ್ಸೆ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಆಹಾರ ಪದ್ಧತಿ ನೀಡಲಾಗುತ್ತಿದೆ. (ಐಎಎನ್ಎಸ್)
ಇದನ್ನೂ ಓದಿ: ಭಾರತೀಯರು ತಾವು ಸೇವಿಸುವ ಆಹಾರದ ಗುಣಮಟ್ಟದ ಕುರಿತು ಪ್ರಶ್ನಿಸಬೇಕು: ಝೆರೋಧಾ ಸಿಇಒ ನಿತಿನ್ ಕಾಮತ್