ಕಾನ್ಪುರ್: ಐಐಟಿ ಕಾನ್ಪುರ್ನ ಜೈವಿಕ ವಿಜ್ಞಾನ ಮತ್ತು ಜೈವಿಕ ಇಂಜಿನಿಯರಿಂಗ್ ವಿಭಾಗದ ಸಂಶೋಧಕರು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಔಷಧವನ್ನು ಅಭಿವೃದ್ಧಿಪಡಿಸಿದ್ದಾರೆ. ನಿಯಸಿನ್ ಎಂಬ ಈ ಔಷಧವನ್ನು ಈ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತಿದೆ. ಇದಕ್ಕೆ ಕ್ರೈ-ಎಂ ಟೆಕ್ನಾಲಾಜಿ ಬಳಕೆ ಮಾಡಲಾಗಿದೆ. ನಿಯಾಸಿನ್ ಎಂಬ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧಗಳು ಅಣ್ವಿಕ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಅರ್ಥೈಸಿಕೊಳ್ಳುವುದರ ಕುರಿತು ಹೊಸ ನೋಟ ನೀಡಿದೆ.
ಪ್ರೊ ಅರುಣ್ ಕೆ ಶುಕ್ಲಾ ನೇತೃತ್ವದಲ್ಲಿ ತಂಡವು ಈ ಸಂಶೋಧನೆ ನಡೆಸಿದ್ದು, ನಿಯಾಸಿನ್ನಿಂದ ಕಾರ್ಯಚಾಲಿತವಾಗುವ ಅಣ್ವಿಕ ಗ್ರಾಹಕವನ್ನು ಪ್ರಮುಖ ಗುರಿಯಾಗಿಸಿ ದೃಶ್ಯೀಕರಿಸಲಾಗಿದೆ. ಈ ನಿಯಾಸಿನ್ ಅಣ್ವಿಕ ಮಟ್ಟದಲ್ಲಿ ಕೆಲಸ ಮಾಡುತ್ತದೆ ಎಂದಿದ್ದಾರೆ. ಈ ಅಧ್ಯಯನವನ್ನು ನೇಚರ್ ಕಮ್ಯೂನಿಕೇಷನ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಈ ಅಣ್ವಿಕವನ್ನು ತಯಾರಿಸಿದ ಬಳಿಕ ಇಲಿಗಳ ಮೇಲೆ ಪ್ರಯೋಗ ನಡೆಸಲಾಗಿದ್ದು, ಬಳಿಕ ಮಾರುಕಟ್ಟೆಗೆ ತರಲಾಗಿದೆ.
ಯಾವುದೇ ಅಡ್ಡ ಪರಿಣಾಮ ಇಲ್ಲ: ನಿಯಾಸಿನ್ ಮತ್ತು ಇತರ ಸಂಬಂಧಿತ ಔಷಧಿಗಳಿಂದ ಸಕ್ರಿಯಗೊಳಿಸಲಾದ ಪ್ರಮುಖ ಗುರಿ ಅಣ್ವಿಕವಾಗಿ ದೃಶ್ಯೀಕರಿಸಲಾಗಿದೆ. ನಿಯಾಸಿನ್ ಸಾಮಾನ್ಯವಾಗಿ ಕಡಿಮೆ ಮಟ್ಟದಲ್ಲಿ ಕೆಟ್ಟ ಕೊಲೆಸ್ಟ್ರಾಲ್ಗೆ ಬಳಕೆ ಮಾಡಲಾಗುತ್ತದೆ. ಟ್ರೈಗ್ಲೇಸಿರಿಯಡ್ಗಳು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಬಹುತೇಕ ರೋಗಿಗಳಲ್ಲಿ ಕೊಲೆಸ್ಟ್ರಾಲ್ ಔಷಧಗಳು ಕೆರೆತ, ಚರ್ಚದ ದದ್ದಿನಂತಹ ಸಮಸ್ಯೆಗೆ ಕಾರಣವಾಗುತ್ತವೆ. ಇದರಿಂದಾಗುವ ಅಡ್ಡ ಪರಿಣಾಮವನ್ನು ತಡೆಯಲು ರೋಗಿಗಳು ಚಿಕಿತ್ಸೆಯನ್ನು ನಿಲ್ಲಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ.
ಆದರೆ ಇದೀಗ ಆಣ್ವಿಕ ಮಟ್ಟದಲ್ಲಿ ನಿಯಾಸಿನ್‌ನೊಂದಿಗೆ ಗ್ರಾಹಕ ಅಣುವಿನ ಜಿಪಿಆರ್109ಎ ನ ಪರಸ್ಪರ ಕ್ರಿಯೆಯ ದೃಶ್ಯೀಕರಣವು ಹೊಸ ಔಷಧಿಗಳ ಸೃಷ್ಟಿಗೆ ಆಧಾರವಾಗಿದೆ. ಅನಪೇಕ್ಷಿತ ಪ್ರತಿಕ್ರಿಯೆಗಳನ್ನು ಕಡಿಮೆ ಮಾಡುವಾಗ ಔಷಧವು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದೆ. ಈ ಅಧ್ಯಯನದ ಫಲಿತಾಂಶಗಳು ಕೊಲೆಸ್ಟ್ರಾಲ್ ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್‌ನಂತಹ ಇತರ ಪರಿಸ್ಥಿತಿಗಳಿಗೆ ಸಂಬಂಧಿಸಿದ ಔಷಧಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡುತ್ತದೆ.
ಐಐಟಿ ಕಾನ್ಫುರ್ ನಿರ್ದೇಶಕ ಪ್ರೊ. ಎಸ್ ಗಣೇಶ್ ಮಾತನಾಡಿ, ಔಷಧಗಳ ಗ್ರಾಹಕಗಳ ಪ್ರತಿಕ್ರಿಯೆಗಳನ್ನು ಅರ್ಥೈಸಿಕೊಳ್ಳುವುದರ ಮೇಲೆ ಇದು ಅವಲಂಬಿತವಾಗಿದೆ. ಇದು ಹೊಸ ಚಿಕಿತ್ಸೆಯ ಏಜೆಂಟ್ ಅನ್ನು ವಿನ್ಯಾಸ ಮಾಡಲು ಹೊಸ ಅವಕಾಶವನ್ನು ನೀಡುತ್ತದೆ. ಈ ಸಾಧನೆಯು ವಿಶ್ವದ ಆರೋಗ್ಯ ಸವಾಲುಗಳನ್ನು ಆವಿಷ್ಕಾರ ಮತ್ತು ಸಂಶೋಧನೆಯ ಪ್ರಬುದ್ಧತೆಯಿಂದ ಪರಿಹರಿಸುವುದಕ್ಕೆ ಕೊಡುಗೆ ನೀಡಿದೆ ಎಂದರು.
ಇದನ್ನೂ ಓದಿ: ಎಲ್ಡಿಎಲ್ ಹೊಂದಿರುವವರು ಏಕಾಏಕಿ ಸ್ಟಾಟಿನ್ಸ್ಗಳನ್ನು ನಿಲ್ಲಿಸುವುದು ಅಪಾಯಕಾರಿ!