ETV Bharat / health

ಬೆಳಗ್ಗೆ ಎದ್ದಾಕ್ಷಣ ಈ ಸಮಸ್ಯೆಗಳು ಕಾಡುತ್ತಿವೆಯಾ? ಹಾಗಿದ್ರೆ ಡಯಾಬಿಟಿಸ್​ ಪರೀಕ್ಷೆ ಮಾಡಿಸಿಕೊಳ್ಳಿ​ - Early Morning Diabetes Signs

ಬೆಳಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಕಾಡುವ ಈ ಸೂಚನೆಗಳು ಕಾಣಿಸಿಕೊಂಡರೆ ರಕ್ತದ ಗ್ಲುಕೋಸ್​ ಮಟ್ಟದಲ್ಲಿನ ಏರಿಳಿತವಾಗಿರಬಹುದು. ಅಲ್ಲದೇ, ಈ ಕುರಿತು ತಕ್ಷಣಕ್ಕೆ ತಪಾಸಣೆ ನಡೆಸಿ, ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು.

if you see these symptom in Early Morning its a Diabetes Signs
ಮಧುಮೇಹದ ಲಕ್ಷಣ (Getty Images)
author img

By ETV Bharat Karnataka Team

Published : Jun 5, 2024, 1:37 PM IST

ಹೈದರಾಬಾದ್​: ಬೆಳಗ್ಗೆ ಎದ್ದಾಕ್ಷಣ ಕಾಡುವ ಕೆಲವು ಸೂಚನೆಗಳು ಅನೇಕ ಸಮಸ್ಯೆಗಳ ಲಕ್ಷಣವಾಗಿರುತ್ತವೆ. ಈ ಮೂಲಕವೇ ನಿಮಗೆ ಮಧುಮೇಹ ಇದೆಯಾ ಅಥವಾ ಇಲ್ಲವಾ ಎಂಬುದರ ಕುರಿತು ತಿಳಿಯಬಹುದಾಗಿದೆ. ವಿಶೇಷವಾಗಿ ಬೆಳಗ್ಗೆ ಎದ್ದಾಕ್ಷಣದಲ್ಲಿ ಕಾಡುವ ಈ ಸೂಚನೆಗಳು ರಕ್ತದ ಗ್ಲುಕೋಸ್​ ಮಟ್ಟದಲ್ಲಿನ ಏರಿಳಿತವನ್ನು ತೋರಿಸುತ್ತವೆ. ಇದನ್ನು ನಿರ್ಲಕ್ಷಿಸದೇ ತಕ್ಷಣಕ್ಕೆ ತಪಾಸಣೆ ಮಾಡಿಸಿಕೊಂಡು, ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಯಾವ ರೀತಿ ಸೂಚನೆ ಕಂಡುಬಂದರೆ ಅದು ಮಧುಮೇಹದ ಲಕ್ಷಣ ಎಂಬುದಕ್ಕೆ ಇಲ್ಲಿದೆ ಉತ್ತರ.

ಅತಿಯಾದ ಬಾಯಾರಿಕೆ (ಹೈಪರ್​ಗ್ಲೈಸೆಮಿಯಾ): ಈ ರೀತಿಯ ಲಕ್ಷಣ ಕಾಣಿಸಿಕೊಳ್ಳಲು ಮುಖ್ಯ ಕಾರಣ ಎಂದರೆ ಬೆಳಗ್ಗೆ ಎದ್ದಾಕ್ಷಣ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಿರುವುದು. ಈ ಬದಲಾವಣೆ ಬೆಳಗ್ಗೆ 4 ರಿಂದ 8ಗಂಟೆ ಸುಮಾರಿಗೆ ಕಾಣುತ್ತದೆ. ಅಧಿಕ ಸಕ್ಕರೆ ಮಟ್ಟವೂ ಅತಿಯಾದ ಬಾಯಾರಿಕೆಗೆ ಕಾರಣವಾಗಿದೆ. ಅಧಿಕ ರಕ್ತ ಸಕ್ಕರೆ ಮಟ್ಟವನ್ನು ನಿಯಂತ್ರಿಸದೇ ಹೋದಲ್ಲಿ, ಗ್ಲೂಕೋಸ್​ ಹೆಚ್ಚುತ್ತದೆ. ಈ ಸಂದರ್ಭದಲ್ಲಿ ದ್ರವವನ್ನು ದೇಹ ಬೇಡುತ್ತದೆ. ಇದು ನಿರ್ಜಲೀಕರಣ ಮತ್ತು ಬಾಯಾರಿಕೆಗೆ ಕಾರಣವಾಗುತ್ತದೆ.

ಪದೇ ಪದೇ ಶೌಚಕ್ಕೆ ಹೋಗುತ್ತೀರಾ: ದೇಹದಲ್ಲಿ ಅಧಿಕ ಸಕ್ಕರೆ ಮಟ್ಟ ಇದ್ದಲ್ಲಿ ಪದೇ ಪದೇ ಮೂತ್ರಕ್ಕೆ ಹೋಗುವಂತೆ ಆಗುತ್ತದೆ. ರಾತ್ರಿ ಸಮಯ ಮತ್ತು ಬೆಳಗಿನಜಾವ ಇದು ಹೆಚ್ಚಾಗುತ್ತದೆ. ಗ್ಲುಕೋಸ್​ ಶೋಧಿಸಲು ಕಿಡ್ನಿ ಹೆಚ್ಚು ಯೂರಿನ್​ ಉತ್ಪಾದಿಸುತ್ತದೆ.

ಬೆಳಗಿನ ಆಯಾಸ: ಬೆಳಗ್ಗೆ ಎದ್ದಾಕ್ಷಣವೇ ಆಯಾಸ ಕಾಡಿದರೆ, ಅದು ಅಧಿಕ ಸಕ್ಕರೆ ಮಟ್ಟದ ಸೂಚನೆಯಾಗಿರುತ್ತದೆ. ಗ್ಲುಕೋಸ್​ ಮಟ್ಟ ಕುಸಿದಾಗ ದೇಹವೂ ಶಕ್ತಿಯುತವಾಗಿ ಇರಲು ಸಾಧ್ಯವಾಗುವುದಿಲ್ಲ. ಇದರಿಂದ ಬೆಳಗಿನ ಹೊತ್ತು ಆಯಾಸ ಉಂಟಾಗುತ್ತದೆ. ಪದೇ ಪದೇ ಮೂತ್ರಕ್ಕೆ ಹೋಗುವುದು. ನಿದ್ರೆ ಕೊರತೆ ಕೂಡ ಅನೇಕ ಬಾರಿ ಬೆಳಗಿನ ಆಯಾಸಕ್ಕೆ ಕಾರಣವಾಗುತ್ತದೆ.

ತಲೆನೋವು: ಮಧುಮೇಹ ಹೊಂದಿರುವವರಲ್ಲಿ ಸಾಮಾನ್ಯವಾಗಿ ಕಾಣುವ ಲಕ್ಷಣ ತಲೆನೋವು. ಸಕ್ಕರೆ ಮಟ್ಟ ಹೆಚ್ಚಿದ್ದರೆ ಅದು ಹೈಪರ್​ಗ್ಲೈಸೆಮಿಯಾ ಎಂದು ಕರೆಯುತ್ತಾರೆ. ಇದು ಕಡಿಮೆಯಾದರೆ ಹೈಪೊಗ್ಲೈಸೆಮಿಯಾ ಎಂದು ಕರೆಯುತ್ತಾರೆ. ಇದು ತಲೆನೋವಿಗೆ ಕಾರಣವಾಗುತ್ತದೆ.

ಒಣ ಬಾಯಿ: ಬೆಳಗ್ಗೆ ಎದ್ದಾಕ್ಷಣ ಬಾಯಿ ಒಣಗಿದಂತೆ ಕಾಣುತ್ತದೆ. ಇದಕ್ಕೆ ಪ್ರಮುಖ ಕಾರಣ ಸಕ್ಕರೆ ಮಟ್ಟ ಹೆಚ್ಚಳ. ದೇಹದಲ್ಲಿ ದ್ರವ ನಷ್ಟವಾದರೆ, ನಿರ್ಜಲೀಕರಣಗೊಂಡು ಬಾಯಿ ಒಣಗಿದ ಅನುಭವ ಆಗುತ್ತದೆ.

ಹಸಿವು ಹೆಚ್ಚಳ: ಇನ್ಸುಲಿನ್​ ಕಡಿಮೆ ಆದಾಗ ದೇಹದಲ್ಲಿ ಗ್ಲುಕೋಸ್​ ಮಟ್ಟ ಕಡಿಮೆಯಾಗುತ್ತದೆ. ಹೀಗಾಗಿ ಹಸಿವೆ ಕಾಡುತ್ತದೆ. ಊಟದ ಬಳಿಕವೂ ಪದೇ ಪದೇ ಹಸಿವು ಕಾಡುವುದು ಮಧುಮೇಹದ ಲಕ್ಷಣ. ಬೆಳಗಿನ ಹೊತ್ತು ಈ ಎಲ್ಲಾ ಲಕ್ಷಣಗಳು ಕಾಸಿಕೊಂಡಾಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅಗತ್ಯ. ಆರಂಭಿಕ ಹಂತದಲ್ಲೇ ಈ ಎಲ್ಲಾ ಲಕ್ಷಣಗಳನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡುವುದು ಅಗತ್ಯವಾಗಿದೆ. ಇದರಿಂದ ಆಗಬಹುದಾದ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದಾಗಿದೆ.

ಮುಖ್ಯ ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರರ ಸಲಹೆಯನ್ನು ಆಧರಿಸಿ ಈ ಮಾಹಿತಿ ಸಿದ್ಧಪಡಿಸಲಾಗಿದೆ. ಇದನ್ನು ಅನುಸರಿಸುವ ಮೊದಲು ನಿಮ್ಮ ಆಪ್ತ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ: ಬೆವರುವಿಕೆ ಆರೋಗ್ಯಕ್ಕೆ ಒಳ್ಳೆಯದು; ಆದರೆ, ಅತಿ ಬೆವರುವಿಕೆ ಡೇಂಜರಸ್.. ಹಾಗೇಕೆ ಅಂತೀರಾ? ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.