ETV Bharat / health

ಕೇರಳದಲ್ಲಿ ನಿಫಾ ಆತಂಕ; ಕೋಯಿಕ್ಕೋಡ್​​ಗೆ ಬಂದಿಳಿದ ಐಸಿಎಂಆರ್​ ತಂಡ - ICMR Team Reached Kozhikode

author img

By ETV Bharat Karnataka Team

Published : Jul 22, 2024, 3:29 PM IST

ಐಸಿಎಂಆರ್​ ತಂಡದಲ್ಲಿ ನಾಲ್ವರು ವೈದ್ಯರು ಮತ್ತು ಇಬ್ಬರು ತಂತ್ರಜ್ಞರು ಇದ್ದು, ಇವರು ಸೋಂಕಿತ ತಡೆ ವಿಧಾನ, ಪರೀಕ್ಷಾ ಸೌಲಭ್ಯ ಮತ್ತು ಚಿಕಿತ್ಸೆ ಪ್ರಕ್ರಿಯೆ ಕುರಿತು ರಾಜ್ಯ ಆರೋಗ್ಯ ಇಲಾಖೆ ಜೊತೆಗೆ ಕಾರ್ಯ ನಿರ್ವಹಿಸಲಿದ್ದಾರೆ.

ICMR Team Reached Kozhikode to take necessary prevention measures of Nipha
ಕೇರಳದಲ್ಲಿ ನಿಫಾ ಆತಂಕ (ಸಂಗ್ರಹ ಚಿತ್ರ)

ಕೋಯಿಕ್ಕೋಡ್​, ಕೇರಳ: ಕೇರಳದಲ್ಲಿ ನಿಫಾ ವೈರಸ್​ ಸೋಂಕಿಗೆ ಭಾನುವಾರ 14 ವರ್ಷದ ಬಾಲಕ ಸಾವನ್ನಪ್ಪಿದ್ದು, ಈ ಬೆನ್ನಲ್ಲೇ ಸೋಂಕು ತಡೆಗೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ (ಐಸಿಎಂಆರ್​) ತಂಡ ಕೋಯಿಕ್ಕೋಡ್​​ಗೆ ಆಗಮಿಸಿದೆ.

ಐಸಿಎಂಆರ್​ ತಂಡದಲ್ಲಿ ನಾಲ್ವರು ವೈದ್ಯರು ಮತ್ತು ಇಬ್ಬರು ತಂತ್ರಜ್ಞರು ಇದ್ದು, ಇವರು ಸೋಂಕಿತ ತಡೆ ವಿಧಾನ, ಪರೀಕ್ಷೆ ಸೌಲಭ್ಯ ಮತ್ತು ಚಿಕಿತ್ಸೆ ಪ್ರಕ್ರಿಯೆ ಕುರಿತು ರಾಜ್ಯ ಆರೋಗ್ಯ ಇಲಾಖೆ ಜೊತೆಗೆ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಸ್ತತ, ಕೋಯಿಕ್ಕೋಡ್​ನ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿರುವ 68 ವರ್ಷದ ವ್ಯಕ್ತಿಯಲ್ಲಿ ನಿಫಾ ಸೋಂಕಿನ ಸಂಶಯ ಎದುರಾಗಿದೆ. ಪ್ರಸ್ತುತ ಅವರ ಪ್ರಾಥಮಿಕ ಪರೀಕ್ಷೆಗಳಲ್ಲಿ ನೆಗೆಟಿವ್​ ಬಂದಿದ್ದು, ಐಸಿಯುನಲ್ಲಿರುವ ಅವರ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ.

ಸುಲಭ ಪರೀಕ್ಷೆ ಮತ್ತು ತಕ್ಷಣದ ಫಲಿತಾಂಶಕ್ಕಾಗಿ ಇಂದು ಕೋಯಿಕ್ಕೋಡ್​ ಮೆಡಿಕಲ್​ ಕಾಲೇಜಿಗೆ ಮೊಬೈಲ್​ ಬಿಎಸ್​ಎಲ್​- 3 ಲ್ಯಾಬೋರೇಟರಿ ಬರಲಿದೆ. ಸಾವನ್ನಪ್ಪಿದ ಬಾಲಕನಿಗೆ ನೇರ ಸಂಪರ್ಕಕ್ಕೆ ಒಳಗಾದ ಆರು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ಫಲಿತಾಂಶ ಕೂಡ ನೆಗೆಟಿವ್​ ಬಂದಿದೆ. ಜೊತೆಗೆ ಬಾಲಕನ ಸಂಪರ್ಕದಲ್ಲಿದ್ದ 330 ಜನರು ಮತ್ತು 68 ಆರೋಗ್ಯ ಕಾರ್ಯಕರ್ತರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಇದರಲ್ಲಿ ಸುಮಾರು 101 ಮಂದಿ ಅಧಿಕ ಅಪಾಯದ ಪಟ್ಟಿಯಲ್ಲಿದ್ದಾರೆ. ಕೇರಳದ ಅನೇಕ ಪ್ರದೇಶದಲ್ಲಿ ನಿಫಾ ಸೋಂಕಿನ ಉಲ್ಬಣದ ಅಪಾಯ ಕಂಡು ಬಂದಿದೆ. ಸೋಂಕು ತಡೆಯುವ ನಿಟ್ಟಿನಲ್ಲಿ ಅನಕ್ಕಯಮ್​ ಮತ್ತು ಪಂಡಿಕ್ಕಡ್​ ಪಂಚಾಯತ್​​ನಲ್ಲಿ ನಿರ್ಬಂಧ ವಿಧಿಸಲಾಗಿದೆ. ಈ ನಡುವೆ ಇಂದು ಆರೋಗ್ಯ ಸಚಿವರು ಸೋಂಕಿನ ತಡೆಗೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.

ನಿಫಾ ಸೋಂಕನ್ನು ವಿಶ್ವ ಆರೋಗ್ಯ ಸಂಸ್ಥೆ ಆದ್ಯತೆಯ ರೋಗಕಾರಕ ಎಂದು ಗುರುತಿಸಿದೆ. ಈ ಸೋಂಕು ಬಾವಲಿ ಕಚ್ಚಿದ ಹಣ್ಣು ಸೇವನೆಯು ಈ ಸೋಂಕು ಹರಡುವಿಕೆಗೆ ಕಾರಣವಾಗಿದೆ. ಈ ಸೋಂಕು ಮಾನವರಲ್ಲಿ ಮೆದುಳಿನ ಉರಿಯೂತದೊಂದಿಗೆ ಮಾರಣಾಂತಿಕ ಜ್ವರಕ್ಕೆ ಕಾರಣವಾಗುತ್ತದೆ. ನಿಫಾ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಕೆಮ್ಮು, ಉಸಿರಾಟ ಸಮಸ್ಯೆ, ಅತಿಸಾರ, ಆಯಾಸ, ವಾಂತಿ, ಸ್ನಾಯು ನೋವು ಮತ್ತು ಆಲಸ್ಯ. ಇನ್ನು ಕೆಲವರಲ್ಲಿ ಈ ಸೋಂಕಿನ ಲಕ್ಷಣಗಳು ಗೋಚರರಹಿತವಾಗಿರುತ್ತದೆ. ಸೋಂಕಿನಿಂದ ಸುರಕ್ಷೆ ಪಡೆಯಲು ಕೈಯ ಶುಚಿತ್ವ ಕಾಪಾಡುವುದು ಮುಖ್ಯ.

ಇದನ್ನೂ ಓದಿ: ಕೇರಳದಲ್ಲಿ ಮತ್ತೆ ನಿಫಾ ವೈರಸ್‌ ಪ್ರತ್ಯಕ್ಷ: 14 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.