ನವದೆಹಲಿ: ಆಲ್ಕೋಹಾಲ್ ಮತ್ತು ಅಸ್ತಮಾ ಸೇರಿದಂತೆ ಇತರ ಉಸಿರಾಟದ ಸಮಸ್ಯೆಗಳನ್ನು ಅಳೆಯುವ ಮಾನವ ಉಸಿರಾಟದ ಸೆನ್ಸಾರ್ವೊಂದನ್ನು ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಜೋಧಪುರದ ಸಂಶೋಧಕ ಅಭ್ಯರ್ಥಿಗಳು ಅಭಿವೃದ್ಧಿ ಪಡಿಸಿದ್ದಾರೆ. ಮೇಕ್ ಇನ್ ಇಂಡಿಯಾ ಅಡಿ ನಿರ್ಮಿಸಲಾದ ಮೊದಲ ಉಸಿರಾಟದ ಸೆನ್ಸಾರ್ ಇದಾಗಿದೆ.
ಈ ಸಾಧನವೂ ಮೆಟಲ್ ಆಕ್ಸೆಡಡ್ಸ್ ಮತ್ತು ನ್ಯಾನೋ ಸಿಲಿಕಾನ್ ನಿಂದ ಕೂಡಿದ್ದು, ಕೊಠಡಿಯ ತಾಪಮಾನದಲ್ಲಿ ಕೆಲಸ ಮಾಡುತ್ತದೆ. ಈ ಸಾಧನವನ್ನು ಪ್ರಾಥಮಿಕವಾಗಿ ಡ್ರಂಕ್ ಅಂಡ್ ಡ್ರೈವ್ (ಕುಡಿದು ಗಾಡಿ ಚಲಾಯಿಸುವ) ಪ್ರಕರಣದಲ್ಲಿ ಆಲ್ಕೋಹಾಲ್ ಅಂಶವನ್ನು ತಿಳಿಯುವ ಉದ್ದೇಶದಿಂದ ತಯಾರಿಸಲಾಗಿದೆ.
ಆದಾಗ್ಯೂ ಇದರ ಸೆನ್ಸಾರ್ ಪದರದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಇದರಿಂದ ಅಸ್ತಮಾ, ಮಧುಮೇಹ ಕೀಟೋ ಆಸಿಡೋಸಿಸ್, ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಸಮಸ್ಯೆ ಮಾಪನ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿನ ಬಾಷ್ಪಶೀಲ ಸಾವಯವ ಸಂಯುಕ್ತಗಳನ್ನು(ವಿಒಸಿ) ವ್ಯಕ್ತಿಯ ಉಸಿರಾಟದ ಮೇಲ್ವಿಚಾರಣೆ ನಡೆಸುತ್ತದೆ.
ವಿಒಸಿ ಎಂಬುದು ಸಾವಯವ ರಾಸಾಯನಿಕ ವೈವಿಧ್ಯಮ ಗುಂಪಾಗಿದ್ದು, ಇದು ಗಾಳಿಯಲ್ಲಿ ಆವಿಯಾಗುತ್ತದೆ. ಪ್ರಸ್ತುತ ಉಸಿರಾಟದ ವಿಶ್ಲೇಷಕಗಳು ಬೃಹತ್ ಪ್ರಮಾಣದಲ್ಲಿರುತ್ತವೆ. ಇದಕ್ಕೆ ಹೀಟರ್ ಅಗತ್ಯವಿರುತ್ತದೆ. ಇದಕ್ಕೆ ವಿದ್ಯುತ್ ಬಳಕೆ ಮತ್ತು ಕಾಯುವಿಕೆ ಅವಧಿ ಹೆಚ್ಚಿದೆ.
ಈ ಹೊಸ ಸೆನ್ಸಾರ್ ಕೊಠಡಿಯ ತಾಪಮಾನದಲ್ಲಿ ಪ್ಲಗ್ ಅಂಡ್ ಪ್ಲೇ ರೀತಿ ಕಾರ್ಯ ನಿರ್ವಹಿಸುತ್ತದೆ. ಈ ಅಭಿವೃದ್ಧಿ ಸಂಶೋಧನೆಯು ಉಸಿರಾಟದ ರೋಗ ಪತ್ತೆ ಮಾಡಿದ ಅದರ ಪ್ರಾಯೋಗಿಕ ಅಳವಡಿಕೆಗೆ ಸಹಾಯ ಮಾಡುತ್ತದೆ ಎಂದು ಐಐಟಿ ಜೋಧಪುರದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ ಸಾಕ್ಷಿ ಧನೆಕರ್ ತಿಳಿಸಿದ್ದಾರೆ.
ಈ ಸೆನ್ಸಾರ್ನಿಂದ ಬರುವ ಮಾಹಿತಿಯನ್ನು ರಾಸ್ಪ್ಬೆರಿ ಪೈಗೆ ಸಂಪರ್ಕಿಸಬಹುದು. ಈ ಡೇಟಾವನ್ನು ವೈದ್ಯರಿಗೆ ಅಥವಾ ಫೋನ್ಗೆ ಕೂಡ ಕಳುಹಿಸಬಹುದು. ಈ ಸಾಧನದ ಹಿಂದಿನ ತಂತ್ರಜ್ಞಾನ ಎಲೆಕ್ಟ್ರಾನಿಕ್ ನೋಸ್ (ಮೂಗು) ಜೊತೆಗೆ ಕೊಠಡಿ ತಾಪಮಾನದ ಆಪರೇಬಲ್ ಹೆಟೆರೊಸ್ಟ್ರಕ್ಚರ್ ಆಗಿದೆ.
ಈ ಸೆನ್ಸಾರ್ ಆಲ್ಕೋಹಾಲ್ನ ಮಾದರಿಯಲ್ಲಿ ಪ್ರತಿಕ್ರಿಯಿಸುತ್ತದೆ. ಜೊತೆಗ ಆಲ್ಕೋಹಾಲ್ ಸಾಂದ್ರತೆಗೆ ತಕ್ಕಂತೆ ಮಾದರಿಯನ್ನು ಬದಲಾಯಿಸುತ್ತದೆ. ಈ ಸೆನ್ಸಾರ್ನಲ್ಲಿ ದಾಖಲಾದ ದತ್ತಾಂಶವನ್ನು ಮೆಷಿನ್ ಲರ್ನಿಂಗ್ ಅಲ್ಗಾರಿದಮ್ ಬಳಕೆ ಮಾಡಿ ಸಂಸ್ಕರಿಸಲಾಗುವುದು. ಈ ಅಭಿವೃದ್ಧಿ ಸಂಶೋಧನೆ ಕುರಿತು ಐಇಇಇ ಸೆನ್ಸಾರ್ ಲೆಟರ್ನಲ್ಲಿ ಪ್ರಕಟಿಸಲಾಗಿದೆ.
ಇದನ್ನೂ ಓದಿ: ಡಯಟ್ನಲ್ಲಿ ಅತಿ ಹೆಚ್ಚು ಪ್ರೋಟೀನ್ ಸೇವಿಸುವುದು ಕೂಡ ಅಪಾಯ: ಅಧ್ಯಯನದಲ್ಲಿ ಬಹಿರಂಗ