ಹೈದರಾಬಾದ್: ಅನೇಕ ಬಾರಿ ವ್ಯಕ್ತಿ ಕಾಣಿಸದಿದ್ದರೂ, ಆತನ ಧ್ವನಿ ಮೂಲಕ ಪತ್ತೆ ಮಾಡಬಹುದು. ನಿತ್ಯದ ಬದುಕಿನಲ್ಲಿ ಮಾತು ಪ್ರಮುಖ ಪಾತ್ರವಹಿಸುತ್ತದೆ. ಮಾತಿನ ಮೂಲಕವೇ ನಮ್ಮ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಬಹುದು. ಕೆಲವು ಶಿಕ್ಷಕರು, ಗಾಯಕರು ಸೇರಿದಂತೆ ಉದ್ಯೋಗಗಳಿಗೆ ಮಾತು, ಧ್ವನಿಯೇ ಬಂಡಾವಳ. ಆದರೂ, ಕೂಡ ಬಹುತೇಕ ಮಂದಿ ಈ ಬಗ್ಗೆ ಹೆಚ್ಚಿನ ಗಮನ ನೀಡುವುದಿಲ್ಲ.
ಕೆಲವು ಸಂದರ್ಭದಲ್ಲಿ ಧ್ವನಿಯಲ್ಲಿ ಕಿರಿಕಿರಿ, ನೋವು ಸೇರಿದಂತೆ ಹಲವು ಕಾರಣದಿಂದ ಮಾತು ಸರಿಯಾಗಿ ಆಡಲು ಸಾಧ್ಯವಾಗುವುದಿಲ್ಲ. ಕೆಲವು ಸಂದರ್ಭದಲ್ಲಿ ಧ್ವನಿ ತಕ್ಷಣಕ್ಕೆ ಕ್ಷೀಣವಾಗುತ್ತದೆ. ಕೆಲವು ವೇಳೆ ಪದೆ ಪದೇ ಗಂಟಲು ಸರಿ ಮಾಡಿಕೊಳ್ಳಬೇಕಾಗುತ್ತದೆ. ಈ ಎಲ್ಲ ಲಕ್ಷಣಗಳು ಗಂಟಲು ಸಮಸ್ಯೆಯ ಸೂಚನೆ. ವಿಶೇಷವಾಗಿ ದೊಡ್ಡ ಧ್ವನಿಯಲ್ಲಿ ಮಾತನಾಡುವುದು ಈ ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲೂ ಶಿಕ್ಷಕರು ಈ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಶೀತ ಮತ್ತು ಇತರೆ ಸೋಂಕು ಕೂಡ ಗಂಟಲು ಸಮಸ್ಯೆಗೆ ಕಾರಣವಾಗುತ್ತದೆ. ಹೊಟ್ಟೆಯಲ್ಲಿರುವ ಕೆಲವು ಆಮ್ಲಗಳು ಕೂಡ ಕೆಲವು ಬಾರಿ ಗಂಟಲು ಸಮಸ್ಯೆಗೆ ಕಾರಣವಾಗುತ್ತದೆ. ಗಂಟಲು ಕ್ಯಾನ್ಸರ್ ಕೂಡ ಅಪಾಯಕಾರಿ. ಇದರಿಂದ ಮಾತಿನ ಶೈಲಿ ಸಂಪೂರ್ಣವಾಗಿ ಬದಲಾಗುತ್ತದೆ. ಯಾವುದೇ ಶೀತ, ಸೋಂಕಿನ ಸಮಸ್ಯೆಯಿಲ್ಲದೆ, ವಾರನುಗಟ್ಟಲೆ ಗಂಟಲ ಸಮಸ್ಯೆ ಕಾಡಿದರೆ, ತಕ್ಷಣಕ್ಕೆ ವೈದ್ಯರ ಸಂಪರ್ಕಕ್ಕೆ ಒಳಗಾಗಬೇಕು.
ಗಮನ ನೀಡಿ: ಬಹುತೇಕ ಪ್ರಕರಣಗಳಲ್ಲಿ ಕೆಲವು ದಿನದ ಬಳಿಕ ಧ್ವನಿ ಸರಿಯಾಗುತ್ತದೆ. ಇಂದು ವೇಳೆ ಇದು ಸರಿಕಾಣದೇ ಧ್ವನಿ ಮಟ್ಟ ಕಡಿಮೆಯಾದರೆ, ಗಡಸುತನ ಹೋಗದೇ ಇದ್ದರೆ, ಇದು ಕ್ರಮೇಣವಾಗಿ ಧ್ವನಿ ಪೆಟ್ಟಿಗೆಯನ್ನು ಹಾನಿ ಮಾಡುತ್ತದೆ. ಇದಕ್ಕೆ ಇರುವ ರಕ್ಷಣೆ ಎಂದರೆ, ಮುನ್ನೆಚ್ಚರಿಕೆ ವಹಿಸುವುದಾಗಿದೆ.
ಸಾಕಷ್ಟು ನೀರು ಕುಡಿಯಿರಿ: ಗಂಟಲು ಸರಿ ಇಲ್ಲದೇ ಹೋದಾಗ, ಸಾಕಷ್ಟು ದೊಡ್ಡ ಧ್ವನಿಯಲ್ಲಿ ಮಾತನಾಡಬೇಡಿ. ಹೆಚ್ಚು ನೀರು ಸೇವಿಸಿ. ಧ್ವನಿಪೆಟ್ಟಿಗೆಯನ್ನು ತೇವದಿಂದ ಕೂಡಿರುವಂತೆ ನೋಡಿಕೊಳ್ಳಿ. ಇದರಿಂದ ಮಾತು ಮೆದುವಾಗಲು ಸಹಾಯವಾಗುತ್ತದೆ.
ಧೂಮಪಾನದಿಂದ ದೂರ ಇರಿ: ತಂಬಾಕು, ನಿಕೋಟಿನ್, ರಾಸಾಯನಿಕಗಳು ಊರಿಯುತ ಮತ್ತು ಊತಗಳಿಗೆ ಕಾರಣವಾಗುತ್ತವೆ. ಇದು ಬಾಯಿ, ಮೂಗು, ಗಂಟಲು ಮತ್ತು ಶ್ವಾಸಕೋಶದ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿಗರೇಟ್, ಬೀಡಿ, ರೋಲ್ಸ್ ಮತ್ತು ಅಗೆಯುವ ತಂಬಾಕಿನಿಂದ ದೂರವಿರಿ. ಇದು ಆರೋಗ್ಯಕ್ಕೆ ಕೂಡ ಹಾನಿಕಾರಕ.
ಆಲ್ಕೋಹಾಲ್ ಬಗ್ಗೆ ಇರಲಿ ಎಚ್ಚರ: ಆಲ್ಕೋಹಾಲ್ ಸೇವನೆಗೆ ಕೂಡ ನಿರ್ಬಂಧ ವಿಧಿಸಬೇಕು. ಆಲ್ಕೋಹಾಲ್ ಹೊಟ್ಟೆಯಲ್ಲಿನ ನೀರಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ಧ್ವನಿ ಪೆಟ್ಟಿಗೆ ಮೇಲೆ ಗಂಭೀರ ಪರಿಣಾಮ ಬಿರುತ್ತದೆ. ಕಾಫಿ ಕೂಡ ತುಂಬಾ ನಿಷ್ಪರಿಣಾಮಕಾರಿಯಾಗಿದೆ. ಇವುಗಳನ್ನು ಕುಡಿದಾಗಲೆಲ್ಲಾ ನೀರು ಕೂಡ ಕುಡಿಯಲೇಬೇಕು.
ಟೋನ್ ಮಾಡಿ: ಗಟ್ಟಿಯಾಗಿ ಕೂಗುವುದು ಮತ್ತು ಗಟ್ಟಿಯಾಗಿ ಮಾತನಾಡುವುದರಿಂದ ಧ್ವನಿ ಪೆಟ್ಟಿಗೆ ಮೇಲೆ ಅನಗತ್ಯ ಒತ್ತಡ ಉಂಟಾಗುತ್ತದೆ. ಕೆಲವು ವೇಳೆ ಗಂಟಲು ಹಾನಿಯಾಗುತ್ತದೆ. ಈ ಹಿನ್ನೆಲೆ ಮೆಲು ಮಾತಿನಲ್ಲಿ ಮಾತನಾಡಬೇಕು. ಗಟ್ಟಿಯಾಗಿ ಮಾತನಾಡುವ ಸಂದರ್ಭದಲ್ಲಿ ಸ್ವಲ್ಪ ಧ್ವನಿ ಏರಿಸಿ ಮತ್ತು ನಿಧಾನವಾಗಿ ಅದನ್ನು ಕಡಿಮೆ ಮಾಡಿ.
ಸಿದ್ಧತೆ ಅಗತ್ಯ: ಯಾವುದೇ ಪಾಠ, ಪ್ರವಚನ, ಹಾಡುವ ಮುನ್ನ ಕುತ್ತಿಗೆ ಮತ್ತು ಭುಜದ ಸ್ಟ್ರೇಚಿಂಗ್ ವ್ಯಾಯಾಮ ಮಾಡಿ. ಕಡಿಮೆ ಮತ್ತು ಹೆಚ್ಚಿನ ಧ್ವನಿಯ ಮಾತುಗಳನ್ನು ವಿಧ ವಿಧ ರೀರಿ ಅಭ್ಯಾಸ ಮಾಡಿ.
ಎದೆ ಊರಿಯೂತ ಕಡಿಮೆ ಮಾಡಿ: ಎದೆ ಉರಿಯೂತ ಹೊಂದಿರುವವಲ್ಲಿ ಕೂಡ ಗಂಟಲಿನ ಸಮಸ್ಯೆ ಕಾಡುತ್ತದೆ. ಇದಕ್ಕೆ ತಜ್ಞರಿಂದ ಸೂಕ್ತ ಚಿಕಿತ್ಸೆ ಅವಶ್ಯ.
ವಿಶ್ರಾಂತಿ ನೀಡಿ: ಧ್ವನಿ ಹಾಳಾದಾಗ ಅಥವಾ ದೀರ್ಘ ಮಾತನಾಡಿದಾಗ, ಅಥವಾ ಗಟ್ಟಿ ಮಾತನಾಡಿದಾಗ ಕೆಲವು ಸಮಯ ವಿಶ್ರಾಂತಿ ನೀಡಿ.
ಪ್ರಮುಖ ಸೂಚನೆ: ಇಲ್ಲಿ ನೀಡಿರುವ ಮಾಹಿತಿಗಳು ಸಂಶೋಧನೆ ಮತ್ತು ಅಧ್ಯಯನಗಳ ಆಧರಿಸಿ ನೀಡಲಾಗಿದೆ. ಆದರೆ ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ಪಾರ್ಶ್ವವಾಯು ಅಪಾಯ ತಪ್ಪಿಸಲು ಈ ಅಂಶಗಳ ಬಗ್ಗೆ ಇರಲಿ ಗಮನ: ನಿಯಂತ್ರಣವೂ ಅತಿ ಮುಖ್ಯ