ETV Bharat / health

ಬೋಳು ತಲೆ ಸಮಸ್ಯೆ ತಡೆಯುವುದು ಹೇಗೆ? ಈ ಸಲಹೆಗಳನ್ನು ಅನುಸರಿಸಿದರೆ ನಿಮ್ಮ ಕೂದಲು ಉದುರುವುದಿಲ್ಲ! - How To Prevent Premature Baldness

author img

By ETV Bharat Karnataka Team

Published : Jun 29, 2024, 11:28 AM IST

Tips To Prevent Male Pattern Baldness: ಕೆಲವು ಜನರಿಗೆ ವೃದ್ಧಾಪ್ಯದಲ್ಲಿ ತಲೆ ಕೂದಲು ಬೋಳು ಸಮಸ್ಯೆ ಬರುತ್ತದೆ. ಇನ್ನು ಕೆಲವರಿಗೆ ವಯಸ್ಸಾಗದೇ ತಲೆಯಲ್ಲಿ ಕೂದಲು ಉದುರುತ್ತದೆ. ಇದರಿಂದ ಯುವಕರು ಮಾನಸಿಕವಾಗಿ ನೋವು ಅನುಭವಿಸುತ್ತಾರೆ. ಈ ಪರಿಸ್ಥಿತಿ ತಪ್ಪಿಸಲು, ತಜ್ಞರು ಮುಂಚಿತವಾಗಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ತಿಳಿಸುತ್ತಾರೆ.

How To Prevent Premature Baldness  Tips to prevent baldness problem
ಪುರುಷರಿಗೆ ಬೋಳು ತಲೆ ಸಮಸ್ಯೆ ತಡೆಯುವುದು ಹೇಗೆ? ಈ ಸಲಹೆಗಳನ್ನು ಅನುಸರಿಸಿದರೆ ನಿಮ್ಮ ಕೂದಲು ಉದುರುವುದಿಲ್ಲ! (EVT Bharat)

How To Prevent Premature Baldness in Mens: ಇಂದಿನ ಯುವಕರು ಬೋಳು ತಲೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಅನೇಕರು ಖಿನ್ನತೆಗೂ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ. ತಲೆ ಬೋಳಾದ ನಂತರ ಬಳಲುವುದಕ್ಕಿಂತ ಮೊದಲು, ಕೂದಲಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಕೂದಲು ಉದುರುವಿಕೆ, ಬೋಳು ಸೇರಿದಂತೆ ಮುಂತಾದ ಸಮಸ್ಯೆಗಳನ್ನು ತಪ್ಪಿಸಲು, ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರೊಂದಿಗೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಒತ್ತಡ: ಅತಿಯಾದ ಒತ್ತಡದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲ, ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು. ನಿರ್ದಿಷ್ಟವಾಗಿ ದೀರ್ಘಕಾಲದ ಒತ್ತಡವು ಟೆಲೋಜೆನ್ ಎಫ್ಲುವಿಯಮ್ ಎಂಬ ಸ್ಥಿತಿಯನ್ನು ಪ್ರಚೋದಿಸಬಹುದು. ಇದರಿಂದ ಕೂದಲು ವಿಪರೀತವಾಗಿ ಉದುರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಅದನ್ನು ತಪ್ಪಿಸಲು, ಒತ್ತಡ ನಿಯಂತ್ರಣದಲ್ಲಿ ಇರಿಸಬೇಕಾಗುತ್ತದೆ. ಇದಕ್ಕಾಗಿ ಯೋಗ ಮತ್ತು ಧ್ಯಾನ ಕೂಡಾ ಮಾಡಬೇಕಾಗುತ್ತದೆ.

2009 ರಲ್ಲಿ 'ಆರ್ಕೈವ್ಸ್ ಆಫ್ ಡರ್ಮಟಾಲಜಿ' ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕಡಿಮೆ ಮಟ್ಟದ ಒತ್ತಡ ಹೊಂದಿರುವ ಪುರುಷರಿಗಿಂತ ಹೆಚ್ಚಿನ ಒತ್ತಡ ಹೊಂದಿರುವ ಪುರುಷರು ಬೋಳು ಸಮಸ್ಯೆ ಅನುಭವಿಸುವ ಸಾಧ್ಯತೆ 2.6 ಪಟ್ಟು ಹೆಚ್ಚು ಇರುತ್ತದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಖ್ಯಾತ ಚರ್ಮರೋಗ ತಜ್ಞ ಡಾ.ಬ್ರೆಂಡಾ ಫಿಶರ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ಹೆಚ್ಚಿನ ಒತ್ತಡದಲ್ಲಿರುವವರಿಗೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದ್ದು, ಬೋಳು ಬರುವ ಸಾಧ್ಯತೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

ಜೀವನಶೈಲಿಯಲ್ಲಿ ಬದಲಾವಣೆ: ಜೀವನಶೈಲಿಯಲ್ಲಿನ ಬದಲಾವಣೆಯೂ ಬೋಳು ತಲೆಗೆ ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ. ಅದಕ್ಕಾಗಿಯೇ.. ಈ ಸ್ಥಿತಿಯನ್ನು ತಪ್ಪಿಸಲು, ಸರಿಯಾದ ಆಹಾರ, ನಿಯಮಿತವಾಗಿ ವ್ಯಾಯಾಮ ಮತ್ತು ಧೂಮಪಾನವನ್ನು ತ್ಯಜಿಸಲು ಸೂಚಿಸಲಾಗುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಮೂಲಕ ಬೋಳು ಸಮಸ್ಯೆ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ.

ಹಾರ್ಮೋನ್ ಸಮಸ್ಯೆಯಿಂದ ದೂರವಿರಿ: ಪುರುಷರಲ್ಲಿ ಬೋಳು ಕಾಣಿಸಿಕೊಳ್ಳಲು ಹಾರ್ಮೋನ್ ಅಸಮತೋಲನವೂ ಕಾರಣ ಎನ್ನುತ್ತಾರೆ ತಜ್ಞರು. ಪುರುಷರಲ್ಲಿ ವಿಶೇಷವಾಗಿ ಅಧಿಕವಾಗಿರುವ ಟೆಸ್ಟೋಸ್ಟೆರಾನ್ ಹಾರ್ಮೋನ್ ಅನ್ನು 5- ಆಲ್ಫಾ ರಿಡಕ್ಟೇಸ್ ಎಂಬ ಕಿಣ್ವದಿಂದ ಡೈಹೈಡ್ರೊಟೆಸ್ಟೊಸ್ಟೆರಾನ್ (DHT) ಆಗಿ ಪರಿವರ್ತಿಸಲಾಗುತ್ತದೆ. ಈ ಹಾರ್ಮೋನ್ ಕೂದಲು ಕಿರುಚೀಲಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ, ಹಾರ್ಮೋನ್ ಅಸಮತೋಲನ ಉಂಟಾಗದಂತೆ ನೋಡಿಕೊಳ್ಳಲು ಹೇಳಲಾಗುತ್ತದೆ.

ಇವುಗಳಿಂದ ಪ್ರಭಾವಿತವಾಗದಂತೆ ಎಚ್ಚರಿಕೆ ವಹಿಸಬೇಕು: ಕೆಲವು ವೈದ್ಯಕೀಯ ತೊಂದರೆಗಳು, ಚಿಕಿತ್ಸೆಗಳಿಂದಲೂ ಪುರುಷರಿಗೆ ಬೋಳು ಸಮಸ್ಯೆಗೆ ಕಾರಣವಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ಅಲೋಪೆಸಿಯಾ ಏರಿಯಾಟಾ ಮತ್ತು ಥೈರಾಯ್ಡ್ ಅಸ್ವಸ್ಥತೆಗಳು ಕೂದಲು ಉದುರುವಿಕೆಗೆ ಕಾರಣವಾಗುತ್ತವೆ ಎಂದು ಹೇಳಲಾಗುತ್ತದೆ. ಅಲ್ಲದೆ, ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಯಂತಹ ಚಿಕಿತ್ಸೆಗಳು ತಾತ್ಕಾಲಿಕ ಅಥವಾ ಶಾಶ್ವತ ಬೋಳು ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ನೀವು ಈ ಸಮಸ್ಯೆಗಳಿಗೆ ಒಳಗಾಗಬಾರದು ಎಂದು ಹೇಳಲಾಗುತ್ತದೆ. ಕೆಲವರಿಗೆ ಆನುವಂಶಿಕವಾಗಿ ಬೋಳು ಬರುತ್ತದೆ. ಬೋಳು ಹಿರಿಯರಲ್ಲೂ ಇದ್ದರೆ.. ಅದನ್ನು ತಡೆಯುವುದು ಬಹುತೇಕ ಕಷ್ಟ. ಆದರೆ, ಅಂತಹವರು ಮೇಲಿನ ಕ್ರಮಗಳ ಜೊತೆಗೆ ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಸ್ವಲ್ಪ ಮಟ್ಟಿಗೆ ಬೋಳು ಬರುವುದನ್ನು ತಡೆಯಬಹುದು ಎನ್ನುತ್ತಾರೆ ತಜ್ಞರು.

ಕೂದಲಿಗೆ ಹೆಚ್ಚು ಒತ್ತಡ ಹೇರುವ ಹೇರ್ ಸ್ಟೈಲ್​ಗಳನ್ನು ಅನುಸರಿಸುವುದನ್ನು ತಪ್ಪಿಸಿ. ನಿಯಮಿತವಾಗಿ ತಲೆಗೆ ಮಸಾಜ್ ಮಾಡಿ. ಇದು ರಕ್ತ ಪರಿಚಲನೆ ಸುಧಾರಿಸುವಂತೆ ಮಾಡುತ್ತದೆ. ಇದರಿಂದ ಬೋಳು ಬರುವುದು ತಡವಾಗುತ್ತದೆ ಎನ್ನಲಾಗಿದೆ. ನಿಮ್ಮ ಆಹಾರದಲ್ಲಿ ಪ್ರೋಟೀನ್ ಕೊರತೆಯಾಗದಂತೆ ನೋಡಿಕೊಳ್ಳಿ. ಕಾಳುಗಳು, ಚೀಸ್, ಮೀನು, ಮೊಟ್ಟೆ, ಮಾಂಸ ಮತ್ತು ಕೋಳಿಯಂತಹ ಪ್ರೋಟೀನ್-ಭರಿತ ಆಹಾರಗಳನ್ನು ತಿನ್ನಲು ಮರೆಯದಿರಿ. ಇಷ್ಟೆಲ್ಲ ಮುಂಜಾಗ್ರತೆ, ಕ್ರಮಗಳನ್ನು ತೆಗೆದುಕೊಂಡರೂ ಕೂದಲು ಉದುರುವುದು ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ತಲೆ ಸ್ನಾನದ ನಂತರವೂ ಕೂದಲು ಜಿಡ್ಡಿನಂತಿದೆಯೇ? ಹೊಳೆಯುವ ಕೂದಲಿಗೆ ಇಲ್ಲಿದೆ ಟಿಪ್ಸ್‌ - Greasy Hair Prevention Tips

ETV Bharat Logo

Copyright © 2024 Ushodaya Enterprises Pvt. Ltd., All Rights Reserved.