ETV Bharat / health

ಸೂಪರ್ ಐಡಿಯಾ: ಮಳೆಗಾಲದಲ್ಲಿ ಇಡೀ ಮನೆ ಕೆಟ್ಟ ವಾಸನೆ ಬರುತ್ತಿದೆಯಾ? ನೈಸರ್ಗಿಕವಾಗಿ ರೂಮ್ ಫ್ರೆಶನರ್ ತಯಾರಿಸೋದು ಹೇಗೆ? - Room Fresheners Making

author img

By ETV Bharat Karnataka Team

Published : Jul 29, 2024, 8:35 PM IST

How To Make Room Fresheners: ಮಳೆಗಾಲದಲ್ಲಿ ಇಡೀ ಮನೆಯೊಳಗೆ ಕೆಟ್ಟ ವಾಸನೆ ಬರುವುದು ಕಾಮನ್​. ಅದನ್ನು ಹೋಗಲಾಡಿಸಲು ಅನೇಕ ಜನರು ರೂಮ್ ಫ್ರೆಶನರ್​ಗಳನ್ನು ಬಳಸುತ್ತಾರೆ. ಆದರೆ, ರೂಮ್ ಫ್ರೆಶನರ್​ಗಳನ್ನು ಅತಿಯಾಗಿ ಬಳಸುವುದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಈಗ ಮನೆಯಲ್ಲಿ ನೈಸರ್ಗಿಕವಾಗಿ ರೂಮ್ ಫ್ರೆಶನರ್ ಅನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ ಬನ್ನಿ.

HOW TO MAKE ROOM FRESHENERS  Room Fresheners  chemical free air freshener  air freshener
ಸೂಪರ್ ಐಡಿಯಾ: ಮಳೆಗಾಲದಲ್ಲಿ ಇಡೀ ಮನೆ ಕೆಟ್ಟ ವಾಸನೆ ಬರುತ್ತಿದೆಯಾ? ನೈಸರ್ಗಿಕವಾಗಿ ರೂಮ್ ಫ್ರೆಶನರ್ ತಯಾರಿಸೋದು ಹೇಗೆ? (ETV Bharat)

How To Make Room Fresheners At Home: ಮನೆಯಲ್ಲಿ ಸರಿಯಾಗಿ ಗಾಳಿಯ ಪ್ರಸರಣ ಆಗದೇ ಇರುವುದು ಮತ್ತು ಮನೆ ಶುಚಿಗೊಳಿಸುವ ಕೊರತೆಯಂತಹ ಕಾರಣಗಳಿಂದ ಕೆಲವೊಮ್ಮೆ ಮನೆಯಿಂದ ಕೆಟ್ಟ ವಾಸನೆ ಬರುತ್ತದೆ. ಅಲ್ಲದೇ ಮಳೆಗಾಲದಲ್ಲಿ ಮನೆಯಲ್ಲಿ ಬಟ್ಟೆ ಒಣಗುವುದರಿಂದ ಅಥವಾ ಇನ್ಯಾವುದೋ ಕಾರಣಗಳಿಂದ ಮನೆಯಲ್ಲಿ ತುಂಬ ದುರ್ವಾಸನೆ ಬರುತ್ತದೆ.

ಹೆಚ್ಚಿನ ಜನರು ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ರೂಮ್ ಫ್ರೆಶನರ್​ಗಳನ್ನು ಬಳಸುತ್ತಾರೆ. ಇವುಗಳನ್ನು ವಿವಿಧ ರಾಸಾಯನಿಕಗಳಿಂದ ತಯಾರಿಸಲಾಗುತ್ತದೆ. ಹಾಗಾಗಿ ರೂಮ್ ಫ್ರೆಶನರ್​ಗಳನ್ನು ಪದೇ ಪದೇ ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಕೆಲವು ಪದಾರ್ಥಗಳನ್ನು ಬಳಸಿಕೊಂಡು ಮನೆಯಲ್ಲಯೇ ರೂಮ್ ಫ್ರೆಶನರ್​ಗಳನ್ನು ಹೇಗೆ ತಯಾರಿಸಬೇಕೆಂದು ನೋಡೋಣ.

ವಿವಿಧ ಸಾರಭೂತ ತೈಲಗಳು: ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಗುಲಾಬಿ, ಲ್ಯಾವೆಂಡರ್, ಲೆಮನ್ ಗ್ರಾಸ್, ಟೀ ಟ್ರೀ ಸೇರಿದಂತೆ ವಿವಿಧ ರೀತಿಯ ಸಾರಭೂತ ತೈಲಗಳು ಲಭ್ಯವಿದೆ. ಇದರಲ್ಲಿ ನಿಮಗೆ ಇಷ್ಟವಾದ ಸುಗಂಧದ ಪ್ಲೆವರ್​ನ ತೈಲವನ್ನು ಆರಿಸಿ. ಸ್ಪ್ರೇ ಬಾಟಲಿಯಲ್ಲಿ ನೀರನ್ನು ಸುರಿಯಿರಿ. ಅದರೊಳಗೆ ಕೆಲವು ಹನಿ ತೈಲವನ್ನು ಸೇರಿಸಿ. ವಾಸನೆ ಬಂದಾಗ ಮನೆಯಲ್ಲಿ ನೀರು ಮಿಶ್ರತ ತೈಲವನ್ನು ಸಿಂಪಡಿಸಿದರೆ ಸಾಕು.

ನಿಂಬೆ ಮತ್ತು ಕಿತ್ತಳೆ ಸಿಪ್ಪೆಗಳ ಚಮತ್ಕಾರ: ಮೊದಲು ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಸುರಿಯಿರಿ. ನಿಂಬೆ, ಕಿತ್ತಳೆ ಸಿಪ್ಪೆಗಳು ಮತ್ತು ಪುದೀನ ಎಲೆಗಳನ್ನು ಸೇರಿಸಿ ಮತ್ತು ಕುದಿಸಿ. ಚೆನ್ನಾಗಿ ಕುದಿಸಿದ ನಂತರ ನೀರನ್ನು ತಣ್ಣಗಾಗಿಸಿ ಸೋಸಿ ಸ್ಪ್ರೇ ಬಾಟಲಿಗೆ ಹಾಕಿ. ಆಗ ಇಡೀ ಮನೆಗೆ ಸ್ಪ್ರೇ ಮಾಡಿದರೆ ಸಾಕು. ನೈಸರ್ಗಿಕವಾಗಿ ಕೆಟ್ಟ ವಾಸನೆ ಹೋಗಲಾಡಿಸಬಹುದು ಎನ್ನುತ್ತಾರೆ ತಜ್ಞರು.

ಗುಲಾಬಿಯಿಂದ ವಾಸನೆ ಮಾಯ: ಪ್ರತಿಯೊಬ್ಬರೂ ಗುಲಾಬಿಗಳ ವಾಸನೆಯನ್ನು ಇಷ್ಟಪಡುತ್ತಾರೆ. ಈಗ, ಈ ಪರಿಮಳಯುಕ್ತ ರೂಮ್ ಫ್ರೆಶನರ್ ಅನ್ನು ಹೇಗೆ ಮಾಡಬೇಕೆಂದು ನೋಡೋಣ. ಮೊದಲು ಒಂದು ಕಪ್ ನೀರಿನಲ್ಲಿ ಗುಲಾಬಿ ದಳಗಳು ಮತ್ತು ಅಡುಗೆ ಸೋಡಾ ಸೇರಿಸಿ ಮತ್ತು ಅದನ್ನು ಸ್ವಲ್ಪ ಬಿಸಿ ಮಾಡಿ. ನಂತರ ಈ ನೀರನ್ನು ಸೋಸಿ ಸ್ಪ್ರೇ ಬಾಟಲಿಯಲ್ಲಿ ಸುರಿಯಿರಿ. ರೂಮಿನಿಂದ ವಾಸನೆ ಬಂದರೆ ಸ್ಪ್ರೇ ಮಾಡಿದರೆ ಸಾಕು.

ನಿಂಬೆ ಸಾರಭೂತ ತೈಲ: ನೀವು ಸ್ವಲ್ಪ ನಿಂಬೆ ಸಾರಭೂತ ತೈಲ ಮತ್ತು ಪುದೀನಾ ಎಣ್ಣೆಯನ್ನು ನೀರಿನಲ್ಲಿ ಕುದಿಸಬಹುದು. ಇದನ್ನು ಸ್ಪ್ರೇ ಬಾಟಲಿಯಲ್ಲಿ ಬಳಸಬಹುದು.

ಕರ್ಪೂರ: ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಸುರಿಯಿರಿ ಮತ್ತು ಅದರಲ್ಲಿ ಕರ್ಪೂರವನ್ನು ಹಾಕಿ ಮೂಲೆಯಲ್ಲಿ ಇರಿಸಿ. ಇಡೀ ಮನೆ ಉತ್ತಮ ವಾಸನೆಯಿಂದ ತುಂಬಿರುತ್ತದೆ. ಈ ರೀತಿ ಮಾಡುವುದರಿಂದ ಸೊಳ್ಳೆಗಳು ಮನೆಗೆ ಬರದಂತೆ ತಡೆಯಲು ಮತ್ತೊಂದು ಉಪಯೋಗವೂ ಇದೆ.

ಮೇಣದಬತ್ತಿಗಳನ್ನು ಬೆಳಗಿಸಿ: ಪ್ರಸ್ತುತ, ವಿವಿಧ ವಿನ್ಯಾಸಗಳು ಮತ್ತು ಮಾದರಿಗಳಲ್ಲಿ ಪರಿಮಳಯುಕ್ತ ಮೇಣದಬತ್ತಿಗಳು ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಲಭ್ಯವಿದೆ. ಅವುಗಳನ್ನು ಮನೆಯಲ್ಲಿ ಬೆಳಗಿಸಿದರೂ ದುರ್ವಾಸನೆ ಮಾಯವಾಗುತ್ತದೆ.

ಇದನ್ನೂ ಓದಿ: ಚಿಂತಿಸುವ ಅಗತ್ಯವಿಲ್ಲ, ನೀರಿನ ಟ್ಯಾಂಕ್​ ಶುಚಿ ಮಾಡುವುದು ಇನ್ನಷ್ಟು ಸುಲಭ?; ಅದು ಹೇಗೆ ಅಂತೀರಾ? - CLEANING TIPS FOR WATER TANK

ETV Bharat Logo

Copyright © 2024 Ushodaya Enterprises Pvt. Ltd., All Rights Reserved.