ETV Bharat / health

ನೀವು ದೈಹಿಕವಾಗಿ ಫಿಟ್ ಆಗಿರಲು ಬಯಸುವಿರಾ? ವೈದ್ಯರು ನೀಡಿದ ಈ ಸಲಹೆಗಳನ್ನು ಇಂದಿನಿಂದಲೇ ಪಾಲಿಸಿ - Fitness Tips - FITNESS TIPS

ಪ್ರತಿಯೊಬ್ಬರಿಗೂ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆ ಅಗತ್ಯ. ಆದರೆ, ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಾಯಕವಾಗುತ್ತದೆ. ದೈಹಿಕವಾಗಿ ಫಿಟ್ ಆಗಿರಲು ವೈದ್ಯರು ಕೆಲವು ಪ್ರಮುಖ ಸಲಹೆಗಳನ್ನು ಇಲ್ಲಿ ನೀಡಿದ್ದಾರೆ.

PHYSICAL EXERCISE  PHYSICAL ACTIVITY ENOUGH FOR HEALTH  NORMAL PHYSICAL ACTIVITY  PHYSICAL ACTIVITY
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Aug 21, 2024, 4:19 PM IST

ಏರೋಬಿಕ್ ವ್ಯಾಯಾಮ, ದೈಹಿಕ ಚಟುವಟಿಕೆಗಳು ಅಥವಾ ವ್ಯಾಯಾಮ ವೃದ್ಧರು ಸೇರಿದಂತೆ ಬಹುತೇಕ ಎಲ್ಲರಿಗೂ ಪ್ರಯೋಜನಕಾರಿ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆನ್ ಏಜಿಂಗ್‌ (NIH)ನಲ್ಲಿ ಪ್ರಕಟವಾದ ಮಾಹಿತಿಯ ಪ್ರಕಾರ, ಪ್ರತೀ ವಾರ ಕನಿಷ್ಠ 150 ನಿಮಿಷಗಳ ಮಧ್ಯಮ ತೀವ್ರತೆಯ ಏರೋಬಿಕ್ ವ್ಯಾಯಾಮ ಮಾಡುವ ಗುರಿ ಹೊಂದಬೇಕು. ಇದರಿಂದ ನಿಮ್ಮ ಹೃದಯದ ಆರೋಗ್ಯ ಉತ್ತಮವಾಗುತ್ತದೆ. ದೈಹಿಕವಾಗಿ ತುಂಬಾ ಶ್ರಮಿಸುವುದರಿಂದ ಬೆವರಿನ ಮೂಲಕ ಅನೇಕ ಕಲ್ಮಶಗಳು ಹೊರಗೆ ಹೋಗುತ್ತವೆ.

ಕನಿಷ್ಠ 150 ನಿಮಿಷಗಳ ಮಧ್ಯಮ ತೀವ್ರತೆಯ ಏರೋಬಿಕ್ ವ್ಯಾಯಾಮವನ್ನು ನೀವು ಒಂದೇ ಬಾರಿಗೆ ಮಾಡಬೇಕಿಲ್ಲ. ಬದಲಿಗೆ ನಿಮ್ಮ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಯನ್ನು ಏಳು ದಿನಗಳವರೆಗೆ ವಿಭಜಿಸಬಹುದು. ನೀವು ತಕ್ಷಣ ಗುರಿ ಸಾಧಿಸಲು ಸಾಧ್ಯವಾಗದಿದ್ದರೆ, ದೈಹಿಕವಾಗಿ ಸಾಧ್ಯವಾದಷ್ಟು ಸಕ್ರಿಯವಾಗಿರಲು ಪ್ರಯತ್ನಿಸಿ. ಏಕೆಂದರೆ ಇದರಿಂದ ಸ್ನಾಯುಗಳನ್ನು ಸದೃಢವಾಗಿಸಲು ಸಾಧ್ಯವಾಗುತ್ತದೆ.

ವಾಕಿಂಗ್ ಮಾಡಿ: ಎಲ್ಲರೂ ವಯಸ್ಸಾದಂತೆ ಸ್ನಾಯುಗಳ ಬಲ ಕಳೆದುಕೊಳ್ಳುತ್ತಾರೆ. ಕೆಲವು ಚಟುವಟಿಕೆಗಳನ್ನು ಕೈಗೊಳ್ಳುವುದು ಕಷ್ಟಕರವೆನಿಸುತ್ತದೆ. ವಯಸ್ಸಾದವರಿಗೆ ಸ್ನಾಯುವಿನ ದ್ರವ್ಯರಾಶಿಯನ್ನು ಕಾಪಾಡಿಕೊಳ್ಳಲು ಮತ್ತು ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ವಯೋವೃದ್ಧರು ವಾಕಿಂಗ್ ಹೋಗಬೇಕು. ಒಂದೆಡೆಯೇ ಕುಳಿತುಕೊಳ್ಳುವುದು ಮತ್ತು ಮಲಗುವುದನ್ನು ತಪ್ಪಿಸಬೇಕು.

ಸ್ವಂತ ಕೆಲಸಗಳನ್ನು ತಾವೇ ಮಾಡಿಕೊಳ್ಳಿ: ಮಕ್ಕಳೊಂದಿಗೆ ಆಟವಾಡಬೇಕು. ಬೇರೆಯವ ಮೇಲೆ ಅವಲಂಬಿತರಾಗದೇ ಸಾಧ್ಯವಾದಷ್ಟು ಸ್ವಂತ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕು. ಆರೋಗ್ಯಕರ ಆಹಾರದ ಜೊತೆಗೆ ವ್ಯಾಯಾಮ ಮಾಡುವುದು ಅವಶ್ಯಕ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಎಂದು ವೈದ್ಯರು ಹೇಳುತ್ತಾರೆ.

ಫನ್​ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ: ನೀವು ವ್ಯಾಯಾಮ ಮಾಡಲು ಪ್ರಾರಂಭಿಸಿದಾಗ, ಏಳು ದಿನಗಳವರೆಗೆ ನಿಯಮಿತವಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ. ನಂತರ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯನ್ನು ಮಾಡುವ ಸಮಯವನ್ನು ಹೆಚ್ಚಿಸಿ. ಜೊತೆಗೆ ಫನ್​ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ. ಯಾವುದೇ ಶ್ರಮದಾಯಕ ವ್ಯಾಯಾಮ ಮಾಡಲು ಎಲ್ಲಾ ವಯಸ್ಕರಿಗೆ ಮತ್ತು ವಿಶೇಷವಾಗಿ ವಯಸ್ಸಾದವರಿಗೆ ವೈದ್ಯರು ಪ್ರಮುಖವಾಗಿ ಕೆಲವು ಸಲಹೆಗಳನ್ನು ನೀಡಿದ್ದಾರೆ.

  • ಆರೋಗ್ಯಕರ ಆಹಾರ ಮತ್ತು ದೈನಂದಿನ ವ್ಯಾಯಾಮ ಮಾಡಲು ಮತ್ತು ನಿರ್ವಹಿಸಲು ಅಲ್ಪಾವಧಿಯ ಗುರಿಗಳನ್ನು ಹೊಂದಿಸಿ.
  • ಹೆಚ್ಚಿನ ದಿನಗಳು ಅಥವಾ ವಾರದಲ್ಲಿ ಏಳು ದಿನಗಳಲ್ಲಿ ಅಂದ್ರೆ, ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ದೈಹಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ.
  • ಸಾಧ್ಯವಾದಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.
  • ಸಕ್ಕರೆ, ಸ್ಯಾಚುರೇಟೆಡ್ ಕೊಬ್ಬು ಮತ್ತು ಸೋಡಿಯಂನಲ್ಲಿ ಕಡಿಮೆ ಇರುವ ಆಹಾರಗಳನ್ನು ಸೇವಿಸಿದರೆ ತುಂಬಾ ಒಳ್ಳೆಯದು.
  • ಪ್ರೋಟೀನ್ ಮತ್ತು ಡೈರಿ ಉತ್ಪನ್ನಗಳು ಮತ್ತು ಕೊಬ್ಬಿನ ಪದಾರ್ಥಗಳಿರುವ ಆಹಾರವನ್ನು ಕಡಿಮೆ ಮಾಡಿ.
  • ನಿತ್ಯ ವ್ಯಾಯಾಮಗಳನ್ನು ಮಾಡುವುದರಿಂದ ದೈಹಿಕ ಆರೋಗ್ಯ ಮತ್ತು ಮಾನಸಿಕ ಸದೃಢವಾಗಿರಲು ಸಾಧ್ಯವಾಗುತ್ತದೆ.

ಜಿಮ್‌ಗೆ ಹೋಗಲೇಬೇಕಿಲ್ಲ, ಹೀಗೆ ಮಾಡಿ: ದೈಹಿಕವಾಗಿ ಫಿಟ್ ಆಗಿರಲು ನೀವು ವೈಯಕ್ತಿಕ ತರಬೇತುದಾರರಿಗೆ ಹೆಚ್ಚಿನ ಹಣ ಖರ್ಚು ಮಾಡುವ ಅಗತ್ಯವಿಲ್ಲ. ಜಿಮ್‌ಗೆ ಹೋಗಲೇಬೇಕಿಲ್ಲ. ನೀವು ಆನಂದಿಸುವ ಚಟುವಟಿಕೆಗಳಲ್ಲಿ ಸಕ್ರಿಯಾಗಿ ತೊಡಗಿಸಿಕೊಂಡರೆ ಸಾಕು. ಇದು ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ. ಉದಾಹರಣೆಗೆ, ಸೈಕ್ಲಿಂಗ್, ತೋಟಗಾರಿಕೆ, ವಾಕಿಂಗ್, ಓಟ, ಈಜು, ನೃತ್ಯ, ವ್ಯಾಕ್ಯೂಮಿಂಗ್ ಮತ್ತು ಸ್ವೀಪಿಂಗ್‌ನಂತಹ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ದಿನವಿಡೀ ಕ್ರಿಯಾಶೀಲರಾಗಿರಲು ಪೂರಕವಾಗುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ವಯಸ್ಸು, ದೇಹದ ಎತ್ತರ, ತೂಕಕ್ಕೆ ಅನುಗುಣವಾಗಿ ದಿನಕ್ಕೆ ಎಷ್ಟು ನೀರು ಕುಡಿಯಬೇಕು? - How much water to drink in a day

ETV Bharat Logo

Copyright © 2025 Ushodaya Enterprises Pvt. Ltd., All Rights Reserved.