Health Benefits of Amla Tea: ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಈ ಸೀಸನ್ನಲ್ಲಿ ದೇಹ ನಿಸ್ತೇಜವಾಗುವುದಷ್ಟೇ ಅಲ್ಲ, ರೋಗನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ವೈರಸ್ ಹಾಗೂ ಬ್ಯಾಕ್ಟೀರಿಯಾಗಳು ದೇಹಕ್ಕೆ ಬೇಗ ಸೇರಿಕೊಳ್ಳುತ್ತವೆ.
ಸಾಮಾನ್ಯವಾಗಿ ನೆಗಡಿ, ಕೆಮ್ಮು, ಜ್ವರ ಕಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದು ಕಾಯಿಲೆಗಳ ವಿರುದ್ಧ ಹೋರಾಡುವ ಸಾಮರ್ಥ್ಯ ನೀಡುತ್ತದೆ. ರೋಗನಿರೋಧಕ ಶಕ್ತಿ ಒದಗಿಸುವ ಆಹಾರಗಳಲ್ಲಿ ನೆಲ್ಲಿಕಾಯಿ ಚಹಾ (ಆಮ್ಲಾ ಟೀ) ಕೂಡ ಒಂದು.
ಆಮ್ಲಾ ಟೀಯಿಂದ ಆರೋಗ್ಯಕ್ಕೆ ಲಭಿಸುವ ಲಾಭಗಳೇನು?:
ರೋಗನಿರೋಧಕ ಶಕ್ತಿ ಹೆಚ್ಚುತ್ತೆ: ಆಮ್ಲದಲ್ಲಿ ವಿಟಮಿನ್ ಸಿ ಸಮೃದ್ಧ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರ ಮೂಲಕ ದೇಹ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳ ವಿರುದ್ಧ ಹೋರಾಡುತ್ತದೆ. ಉರಿಯೂತದ ಗುಣಲಕ್ಷಣಗಳು, ನೋಯುತ್ತಿರುವ ಗಂಟಲು ಮತ್ತು ಶೀತಗಳಿಂದ ಉಂಟಾಗುವ ಊತದಂತಹ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ಪೌಷ್ಟಿಕ ತಜ್ಞೆ ಶುಭಾಂಗಿ ತಮ್ಮಾಳ್ವಾರ್ ತಿಳಿಸಿದರು.
ಜೀರ್ಣಕ್ರಿಯೆ ಸುಧಾರಿಸುತ್ತೆ: ನೆಲ್ಲಿಕಾಯಿ ಸೇವನೆಯು ಜೀರ್ಣಕ್ರಿಯೆ ಆರೋಗ್ಯವನ್ನು ಸುಧಾರಿಸುತ್ತದೆ. ಇದು ವಿಶೇಷವಾಗಿ ಮಲಬದ್ಧತೆ ತಡೆಯುತ್ತದೆ. ಇದಲ್ಲದೆ, ಆಮ್ಲಾ ಜೀರ್ಣಕಾರಿ ರಸದ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ಇದರ ಪರಿಣಾಮವಾಗಿ, ಅಜೀರ್ಣ ಮತ್ತು ಉಬ್ಬುವಿಕೆಯಂತಹ ಸಮಸ್ಯೆಗಳು ಕ್ರಮೇಣವಾಗಿ ಕಡಿಮೆಯಾಗುತ್ತವೆ ಎಂದು ತಜ್ಞರು ತಿಳಿಸುತ್ತಾರೆ.
ಕಣ್ಣಿನ ಆರೋಗ್ಯಕ್ಕೆ ಉತ್ತಮ: ಆಮ್ಲಾ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೃಷ್ಟಿ ಸುಧಾರಿಸುತ್ತದೆ ಹಾಗೂ ಗ್ಲುಕೋಮಾದಂತಹ ಕಣ್ಣಿನ ಸಮಸ್ಯೆಗಳನ್ನು ತಡೆಯುತ್ತದೆ. ಅಲ್ಲದೆ, ಆಮ್ಲಾದಲ್ಲಿರುವ ಉರಿಯೂತದ ಗುಣಲಕ್ಷಣಗಳು ಕಣ್ಣಿನ ಉರಿಯೂತ ಹಾಗೂ ಕಣ್ಣು ಕೆಂಪಾಗುವುದು, ತುರಿಕೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತೆ: ಆಮ್ಲಾವು ಹೆಚ್ಚಿನ ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ. ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಜರ್ನಲ್ ಆಫ್ ಆಯುರ್ವೇದ ಮತ್ತು ಇಂಟಿಗ್ರೇಟಿವ್ ಮೆಡಿಸಿನ್‌ನಲ್ಲಿ ಪ್ರಕಟವಾದ 2020ರ ಅಧ್ಯಯನವು ಆಮ್ಲಾವು ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇನ್ಸುಲಿನ್ ಸೂಕ್ಷ್ಮತೆ ಸುಧಾರಿಸಲು ಸಹಾಯ ಮಾಡುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ: ನೆಲ್ಲಿಕಾಯಿಯಲ್ಲಿನ ಉತ್ಕರ್ಷಣ ನಿರೋಧಕಗಳು ಹಾಗೂ ಇತರ ಪೋಷಕಾಂಶಗಳು ಕೆಟ್ಟ ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡುತ್ತದೆ. ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಇದು ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಫ್ರೀ ರಾಡಿಕಲ್ ಹಾನಿ ಕಡಿಮೆ ಮಾಡುತ್ತೆ: ಆಮ್ಲಾದಲ್ಲಿರುವ ವಿಟಮಿನ್ ಸಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಹಣ್ಣಿನಲ್ಲಿ ಪಾಲಿಫಿನಾಲ್‌ಗಳು, ಟ್ಯಾನಿನ್‌ಗಳು, ಫ್ಲೇವನಾಯ್ಡ್‌ಗಳು ಇವೆ. ಇವೆಲ್ಲವೂ ದೇಹವನ್ನು ಆಕ್ಸಿಡೇಟಿವ್ ಒತ್ತಡ ಮತ್ತು ಸ್ವತಂತ್ರ ರಾಡಿಕಲ್ ಹಾನಿಯಿಂದ ರಕ್ಷಿಸಲು ಬಹಳ ಸಹಾಯಕ ಎಂದು ತಜ್ಞರು ಹೇಳುತ್ತಾರೆ.
ಕೂದಲು & ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು: ಆಮ್ಲಾದಲ್ಲಿರುವ ವಿಟಮಿನ್ ಸಿ ಹಾಗೂ ಆ್ಯಂಟಿಆಕ್ಸಿಡೆಂಟ್ ಗುಣಗಳು ಕೂದಲು ಹಾಗೂ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಕೂದಲಿನ ಬುಡವನ್ನು ಗಟ್ಟಿಯಾಗುತ್ತದೆ. ಕೂದಲು ಉದುರುವುದು ಕಡಿಮೆಯಾಗುತ್ತದೆ. ಆಮ್ಲಾದಲ್ಲಿನ ಉರಿಯೂತದ ಗುಣಲಕ್ಷಣಗಳು ಚರ್ಮದ ಕಿರಿಕಿರಿ, ಮೊಡವೆ ಹಾಗೂ ವಯಸ್ಸಿನ ಸುಕ್ಕು ಗಟ್ಟುವುದನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಕ್ಯಾನ್ಸರ್ ತಡೆಗಟ್ಟುವಿಕೆ: ನೆಲ್ಲಿಕಾಯಿಯಲ್ಲಿರುವ ಉತ್ಕರ್ಷಣ ನಿರೋಧಕಗಳು, ಇತರ ಪೋಷಕಾಂಶಗಳು ಕೆಲವು ರೀತಿಯ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ. NIH ಸದಸ್ಯರ ಗುಂಪು ಕೂಡ ಈ ವಿಷಯವನ್ನು ಸ್ಪಷ್ಟಪಡಿಸಿದೆ (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).
ಆಮ್ಲಾ ಟೀ ಸಿದ್ಧಪಡಿಸುವುದು ಹೇಗೆ?: ಒಂದು ಲೋಟ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಒಂದು ಚಮಚ ಒಣಗಿದ ಆಮ್ಲಾ ಪುಡಿ, ಸ್ವಲ್ಪ ಶುಂಠಿ ಬೇರು, ಎರಡು ತುಳಸಿ ಎಲೆಗಳು ಮತ್ತು ಒಂದು ಚಿಟಿಕೆ ಹುರಿದ ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ. ಇದು ಬೆಚ್ಚಗಿರುವಾಗ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಕುಡಿಯಿರಿ. ಅಥವಾ ತಾಜಾ ಆಮ್ಲಾವನ್ನು ಮಿಕ್ಸಿಯಲ್ಲಿ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಇದನ್ನು ನೀರಿನಲ್ಲಿ ಕುದಿಸಿ ಚಹಾದ ರೂಪದಲ್ಲಿಯೂ ತೆಗೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಈ ವೆಬ್ಸೈಟ್ ವೀಕ್ಷಿಸಬಹುದು: https://pubmed.ncbi.nlm.nih.gov/21317655/