ETV Bharat / health

ಹೃದಯದ ಅಪಾಯ ಕಡಿಮೆ ಮಾಡುವ ಫ್ಲೆಕ್ಸಿಟೇರಿಯನ್​ ಡಯಟ್​ ಬಗ್ಗೆ ನಿಮಗೆಷ್ಟು ಗೊತ್ತು? - ಹೃದಯದ ಅಪಾಯ ಕಡಿಮೆ

ಮಾಂಸಾಧಾರಿತ ಆಹಾರ ಸೇವನೆಗಿಂತ ಸಸ್ಯಾಧಾರಿತ ಆಹಾರ ಸೇವನೆ ಹೃದಯದ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದರ ಬಗ್ಗೆ ಅಧ್ಯಯನವೊಂದು ನಡೆದಿದೆ.

flexitarian diet linked with lower cardiovascular risk

author img

By IANS

Published : Feb 26, 2024, 11:43 AM IST

ನವದೆಹಲಿ: ಫ್ಲೆಕ್ಸಿಟೇರಿಯನ್​​ ಡಯಟ್​ನಿಂದ ಹೃದಯ ರೋಗದ ಅಪಾಯ ಕಡಿಮೆ ಎಂದು ಹೊಸ ಅಧ್ಯಯನವೊಂದು ತೋರಿಸಿದೆ. ಅರೆ ಸಸ್ಯಹಾರಿ ಡಯಟ್​​ ಎಂದು ಕರೆಯಲಾಗುವ ಫ್ಲೆಕ್ಸಿಟೇರಿಯನ್​ ಡಯಟ್​ನಲ್ಲಿ ಸಸ್ಯಾಧಾರಿತ ಆಹಾರ ಸೇವನೆ ಹೆಚ್ಚಿದ್ದು, ಕಡಿಮೆ ಅಥವಾ ಅಪರೂಪಕ್ಕೆ ಮಾಂಸ ಸೇವನೆಯನ್ನು ಒಳಗೊಂಡಿರುತ್ತದೆ.

ಈ ಹೊಸ ಅಧ್ಯಯನವನ್ನು ಜರ್ನಲ್​ ಬಿಎಂಸಿ ನ್ಯೂಟ್ರಿಷನ್​​ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ಮಾಂಸಾಧಾರಿತ ಆಹಾರ ಸೇವನೆಗಿಂತ ಸಸ್ಯಾಧಾರಿತ ಆಹಾರ ಸೇವನೆ ಹೃದಯದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂಬುದನ್ನು ತೋರಿಸಲಾಗಿದೆ.

ಹೃದಯ ಆರೋಗ್ಯದ ಮೇಲೆ ಫ್ಲೆಕ್ಸಿಟೇರಿಯನ್​ ಆಹಾರವೂ ಎಷ್ಟು ಪರಿಣಾಮಕಾರಿ ಎಂಬುದನ್ನು ಪತ್ತೆ ಮಾಡುವ ಉದ್ದೇಶದಿಂದ ಈ ಅಧ್ಯಯನ ನಡೆಸಲಾಗಿದೆ. ಇದಕ್ಕಾಗಿ 25 ರಿಂದ 45 ವರ್ಷದ 94 ಮಂದಿ ಮೇಲೆ ಅಧ್ಯಯನ ಕೈಗೊಳ್ಳಲಾಗಿದೆ. ಭಾಗಿದಾರರು ಅಧ್ಯಯನ ಆರಂಭವಾಗುವ ಒಂದು ವರ್ಷ ಮುಂಚೆ ವೆಗನ್​ ಮತ್ತು ಸರ್ವಭಕ್ಷ ಅಥವಾ ಫ್ಲೆಕ್ಸಿಟೇರಿಯನ್​ ಆಹಾರ ಪದ್ಧತಿಯನ್ನು ಪಾಲಿಸುತ್ತಿದ್ದರು. ಭಾಗಿದಾರರ ಹವ್ಯಾಸ ಮತ್ತು ಜೀವನಶೈಲಿಯ ಅಂಶವನ್ನು ಪ್ರಶ್ನಾವಳಿಗಳ ಮೂಲಕ ಮೌಲ್ಯಮಾಪನ ಮಾಡಲಾಗಿದೆ.

ದಿನವೊಂದಕ್ಕೆ ಭಾಗಿದಾರರೊಬ್ಬರು 50 ಗ್ರಾಂ ಮಾಂಸವನ್ನು ಸೇವಿಸಿದರೆ ಅವರನ್ನು ಫ್ಲೆಕ್ಸಿಟೇರಿಯನ್​ ವರ್ಗಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ. ಇನ್ನು 170 ಗ್ರಾಂ ಮತ್ತು ಅದಕ್ಕಿಂತ ಹೆಚ್ಚಿನ ಮಾಂಸ ಸೇವಿಸುವವರನ್ನು ಸರ್ವಭಕ್ಷಕ ವರ್ಗದಲ್ಲಿ ಗುರುತಿಸಲಾಗಿದೆ. ಇನ್ನು ಪ್ರಾಣಿ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದವರನ್ನು ವೆಗಾನ್​ ಎಂಬ ಮೂರನೇ ವರ್ಗದಲ್ಲಿ ಗುರುತಿಸಲಾಗಿದೆ.

ಅಧ್ಯಯನದ ದಿನಗಳಲ್ಲಿ ಹೃದಯರಕ್ತನಾಳದ ಕಾಯಿಲೆಯ ಬಯೋಮಾರ್ಕರ್‌ನ ಮೌಲ್ಯಮಾಪನ ಮಾಡಲು ಭಾಗಿದಾರರಿಂದ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ. ಹೆಚ್ಚುವರಿಯಾಗಿ ಸಂಶೋಧಕರು ಭಾಗಿದಾರರ ರಕ್ತದ ಒತ್ತಡ, ಬಿಎಂಐ ಮತ್ತು ಅಪಧಮನಿ ಬಿಗಿತನವನ್ನು ಕೂಡಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಫ್ಲೆಕ್ಸಿಟೇರಿಯನ್​​ ಮತ್ತು ವೆಗನ್​ ಭಾಗಿದಾರರಲ್ಲಿ ರಕ್ತದ ಬಯೋಮಾರ್ಕ್​ ವಿಶ್ಲೇಷಿಸಿದಾಗ ಸರ್ವಭಕ್ಷಕ ವರ್ಗದ ಭಾಗಿದಾರರಿಗಿಂತ ಉತ್ತಮ ಹೃದಯದ ಆರೋಗ್ಯ ಕಂಡು ಬಂದಿದೆ. ವಿಶೇಷವಾಗಿ ಅವರಲ್ಲಿ ಒಟ್ಟಾರೆ ಕೊಲೆಸ್ಟ್ರಾಲ್​​ ಮತ್ತು ಎಲ್​ಡಿಎಲ್​ ಮಟ್ಟ ಕಡಿಮೆಯಾಗಿದೆ.

ಸರ್ವಭಕ್ಷಕರಿಗೆ ಹೋಲಿಕೆ ಮಾಡಿದಾಗ ಫ್ಲೆಕ್ಸಿಟೇರಿಯನ್​ ಮತ್ತು ವೆಗಾನ್​ ವರ್ಗದವರಲ್ಲಿ ಕಡಿಮೆ ಉಪವಾಸ ಇನ್ಸುಲಿನ್ ಮಟ್ಟ ಕಂಡು ಬಂದಿದೆ. ಅಂತಿಮವಾಗಿ ಫ್ಲೆಕ್ಸಿಟೇರಿಯನ್​ ಮತ್ತು ವೆಗಾನ್​ ಭಾಗಿದಾರರಲ್ಲಿ ಹೃದಯ ಅಪಾಯದ ಅಂಶ, ರಕ್ತದ ಗ್ಲುಕೋಸ್​ ಮಟ್ಟ, ರಕ್ತದೊತ್ತಡ , ಕೊಲೆಸ್ಟ್ರಾಲ್​ ಮಟ್ಟ ಮತ್ತು ತೂಕಕ್ಕಿಂತಲೂ ಕಡಿಮೆ ಚಯಾಪಚಯ ಸಮಸ್ಯೆಯ ತೀವ್ರತೆ ಕಡಿಮೆ ಕಂಡು ಬಂದಿದೆ.

ಇದನ್ನೂ ಓದಿ: ಹೃದಯಕ್ಕೆ ಮಾರಣಾಂತಿಕವಾಗಬಹುದೇ ಮೇದೋಜ್ಜೀರಕ ಗ್ರಂಥಿ ಕಾಯಿಲೆ; ವೈದ್ಯರು ಹೇಳುವುದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.