ETV Bharat / health

ವಿಶ್ವ ಹದಿಹರೆಯದವರ ಮಾನಸಿಕ ಸ್ವಾಸ್ಥ್ಯ ದಿನ: ಬೇಕಿದೆ ಯುವ ಮನಸ್ಸುಗಳ ದುಗುಡ ಅರಿಯುವ ಪ್ರಯತ್ನ - ಮಾನಸಿಕ ಸ್ವಾಸ್ಥ್ಯ ದಿನ

ಹದಿಹರೆಯದ ಮಾನಸಿಕ ಆರೋಗ್ಯವು ಮುಂದಿನ ಜೀವನಕ್ಕೆ ಬುನಾದಿ ಆಗಿರುವ ಹಿನ್ನೆಲೆ ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದೆ.

ensure-teens-being-supported-their-mental-well-being

author img

By ETV Bharat Karnataka Team

Published : Mar 2, 2024, 12:05 PM IST

ಹೈದರಾಬಾದ್​: ಹದಿಹರೆಯದವರು ಎದುರಿಸುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮತ್ತು ನಿವಾರಣೆ ಪ್ರಯತ್ನ ನಡೆಸುವ ಉದ್ದೇಶದಿಂದ ಜಾಗತಿಕವಾಗಿ ಮಾರ್ಚ್​ 2 ಅನ್ನು ವಿಶ್ವ ಹದಿಹರೆಯದವರ ಮಾನಸಿಕ ಸ್ವಾಸ್ಥ್ಯ ದಿನವಾಗಿ ಆಚರಣೆ ಮಾಡಲಾಗುತ್ತಿದೆ.

ಈ ಕುರಿತು ಪ್ರತಿಯೊಬ್ಬರಿಗೆ ಅರಿವು ಮೂಡಿಸುವುದು. ಹದಿಹರೆಯದವರಿಗೆ ಅವರ ಮಾನಸಿಕ ಆರೋಗ್ಯಕ್ಕೆ ಅಗತ್ಯ ಬೆಂಬಲ ಮತ್ತು ಆರೈಕೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನವನ್ನು ಈ ದಿನದಂದು ನಡೆಸಲಾಗುತ್ತದೆ.

ದಿನದ ಇತಿಹಾಸ: 2020ರಲ್ಲಿ ಹೊಲಿಸ್ಟರ್​​​ ಈ ದಿನವನ್ನು ಸ್ಥಾಪಿಸಿದರು. ಹದಿಹರೆಯದವರ ಮಾನಸಿಕ ಆರೋಗ್ಯದ ಉದ್ದೇಶದಿಂದ ಈ ದಿನಕ್ಕೆ ಬುನಾದಿ ಹಾಕಲಾಯಿತು. ಅಲ್ಲದೇ, ಮಾರ್ಚ್​ 2ರಂದು ಈ ದಿನಾಚರಣೆಗಾಗಿ ನಿಗದಿ ಮಾಡಲಾಯಿತು.

ಹೊಲಿಸ್ಟಾರ್​ ಕಾನ್ಫಿಡೆನ್ಸ್​ ಪ್ರೊಜೆಕ್ಟ್​​​: ಹದಿಹರೆಯದವರ ಆತ್ಮವಿಶ್ವಾಸ, ಅನುಕೂಲತೆ ಮತ್ತು ಸಾಮರ್ಥ್ಯವನ್ನು ವೃದ್ಧಿಗೊಳಿಸಿ ಇದರ ನಿರ್ಮಾಣಕ್ಕೆ ಸಹಾಯ ಮಾಡುವ ಉದ್ದೇಶದಿಂದ ವರ್ಷದ 365 ದಿನಗಳ ಹೊಲಿಸ್ಟರ್​ ಕಾನ್ಫಿಡೆನ್ಸ್​ ಪ್ರಾಜೆಕ್ಟ್​ ಆರಂಭಿಸಲಾಯಿತು. ಹೊಲಿಸ್ಟರ್​​ ಕಾನ್ಫಿಡೆನ್ಸ್​ ನಿಧಿಯು ಹದಿಹರೆಯದವರ ಮಾನಸಿಕ ಆರೋಗ್ಯ, ಯುವ ಕಪ್ಪು ವರ್ಣೀಯರಿಗೆ ಸಮಾನತೆ, ಸ್ಥಳೀಯ ಮತ್ತು ಬಿಐಪಿಒಸಿ ಬಣ್ಣದ ಜನರು, ಎಲ್​ಜಿಬಿಟಿಕ್ಯೂ ಯುವಕರಿಗೆ ಸುರಕ್ಷತೆ ಒದಗಿಸಲು ಕೆಲಸ ಮಾಡುತ್ತಿರುವ ಲಾಭ ರಹಿತ ಸಂಸ್ಥೆಯಿಂದ ಸಹಾಯ ಮಾಡಲಾಗುತ್ತೆ.

ಮಾನಸಿಕ ಆರೋಗ್ಯ ಫೌಂಡೇಶನ್​ ವರದಿಯಲ್ಲಿನ ಅಂಶಗಳು:

  • ಶೇ 20ರಷ್ಟು ಹದಿಹರೆಯದವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಅನುಭವ
  • ಶೇ 50ರಷ್ಟು ಮಾನಸಿಕ ಆರೋಗ್ಯದ ಸಮಸ್ಯೆಗಳು 14ನೇ ವಯಸ್ಸಿನಲ್ಲಿ ಪ್ರಾರಂಭವಾದರೆ, ಶೇ 75ರಷ್ಟು 24ನೇ ವಯಸ್ಸಿನಲ್ಲಿ ಆರಂಭ
  • 5 ರಿಂದ 16 ವರ್ಷದ ಶೇ 10ರಷ್ಟು ಮಕ್ಕಳು ಮತ್ತು ಹದಿ ಹರೆಯದವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯು ಕ್ಲಿನಿಕಲಿ ಪತ್ತೆಯಾಗಿದೆ. ಇನ್ನು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುವ ಶೇ 70ರಷ್ಟು ಮಕ್ಕಳು ಮತ್ತು ಹದಿಹರೆಯದವರಿಗೆ ಚಿಕ್ಕ ವಯಸ್ಸಿನಲ್ಲಿ ಸರಿಯಾದ ಮಾರ್ಗದರ್ಶನ ಸಿಕ್ಕಿಲ್ಲ

ಏನು ಮಾಡಬೇಕು: ಹದಿಹರೆಯದವರ ಮಾನಸಿಕ ಆರೋಗ್ಯ ಮೇಲೆ ಹೆಚ್ಚಿನ ಗಮನ ನೀಡಬೇಕಿದೆ. ಕಾರಣ ಈ ವಯಸ್ಸಿನಲ್ಲಿ ಮಕ್ಕಳು ಹೆಚ್ಚು ಸ್ವತಂತ್ರರು ಮತ್ತು ಸಾಮರ್ಥ್ಯ ಹೊಂದಿದವರು ಆಗಿರುತ್ತಾರೆ. ಹದಿವಯಸ್ಸಿನಲ್ಲಿ ಅವರು ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳ ಅನುಭವವನ್ನು ಪಡೆಯುತ್ತಾರೆ. ಅವರಿಗೆ ಬೆಂಬಲ, ಪ್ರೋತ್ಸಾಹ ಮತ್ತು ಆರಾಮದಾಯಕತೆ, ಸುರಕ್ಷಿತ ವಾತಾವರಣದ ಮುಕ್ತ ಅನುಭವ ಆಗಬೇಕಿದೆ. ದುರದೃಷ್ಟವಶಾತ್​, ಅನೇಕ ಮಕ್ಕಳು ಅಂತಹ ವಾತಾವರಣವನ್ನು ಪಡೆಯುವುದಿಲ್ಲ. ಭಾವನಾತ್ಮಕವಾಗಿ ತಮ್ಮೊಳಗೆ ತೊಳಲಾಟ ಅನುಭವಿಸುತ್ತಾರೆ. ಇದು ಅವರಲ್ಲಿ ಅನೇಕ ನಕಾರಾತ್ಮಕ ಪರಿಣಾಮ ಮೂಡಿಸುತ್ತದೆ. ವಿಶೇಷವಾಗಿ ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಿ ಮಾನಸಿಕ ಆರೋಗ್ಯದ ವಿಚಾರ ಕುರಿತು ಆರಂಭದ ವಯಸ್ಸಿನಲ್ಲಿ ಅರಿಯುವುದು ಬಹಳಷ್ಟು ಪ್ರಯೋಜನಕಾರಿಯಾಗಲಿದೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರತಿಕ್ರಿಯೆ: ಹದಿಹರೆಯದ ವಯಸ್ಸಿನ ಆರೋಗ್ಯ ಅವಶ್ಯಕತೆ ಕುರಿತು ಸರ್ಕಾರಗಳಿಗೆ ಸಹಾಯ ಮಾಡುವ ಸಾಧನ ಮತ್ತು ಕಾರ್ಯಕ್ರಮ ರೂಪಿಸುವ ನಿಟ್ಟಿನಲ್ಲಿ ಡಬ್ಲ್ಯೂಎಚ್​ಒ ಕಾರ್ಯ ನಿರ್ವಹಿಸುತ್ತಿದೆ. ಎಚ್​ಎಟಿ ಮೂಲಕ ಡಬ್ಲ್ಯೂಎಚ್​ಒ- ಯುನಿಸೆಫ್​​​ ಹದಿಹರೆಯದವರ ಮಾನಸಿಕ ಆರೋಗ್ಯಕ್ಕಾಗಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಬಲಪಡಿಸಲು ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಮಾನಸಿಕ ಆರೋಗ್ಯ ಪರಿಸ್ಥಿತಿ ತಡೆಗಟ್ಟುವ ಮತ್ತು ಮಾನಸಿಕ ಆರೋಗ್ಯ ಉತ್ತೇಜಿಸುವ ಕಾರ್ಯಕ್ರಮಗಳ ಮೂಲಕ ಪ್ರಯತ್ನ ನಡೆಸುತ್ತಿದೆ. ಈ ಸಂದರ್ಭದಲ್ಲಿ ಹದಿಹರೆಯವರು ಆಲ್ಕೊಹಾಲ್ ಮತ್ತು ಮಾದಕವಸ್ತುಗಳ ಹಾನಿಕಾರಕ ಬಳಕೆ ಹಾಗೂ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸ್ವಯಂ-ಹಾನಿ ಮತ್ತು ಇತರ ಅಪಾಯಕಾರಿ ನಡವಳಿಕೆಗಳನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿರುತ್ತಾರೆ.

ಭಾರತದಲ್ಲಿ ಯುವ ಜನತೆಯ ಮಾನಸಿಕ ಆರೋಗ್ಯದ ಜಾಗೃತಿ: ಭಾರತದಲ್ಲಿ 18 ರಿಂದ 24 ವರ್ಷದ ಶೇ 50ರಷ್ಟು ಮಕ್ಕಳು ಕಳಪೆ ಮಾನಸಿಕ ಆರೋಗ್ಯ ಹೊಂದಿದ್ದಾರೆ ಎಂದು ಸೇಪಿಯನ್ ಲ್ಯಾಬ್ಸ್ ಸೆಂಟರ್ ಫಾರ್ ದಿ ಹ್ಯೂಮನ್ ಬ್ರೈನ್ ಅಂಡ್ ಮೈಂಡ್ ವರದಿ ತಿಳಿಸಿದೆ. ಮೆಂಟಲ್​ ಸ್ಟೇಟ್​ ಆಫ್​ ಇಂಡಿಯಾ; ಇಂಟರ್ನೆಟ್​​- ಎನೇಬಲ್ಡ್​ ಯೂಥ್​​ ಎಂಬ ವರದಿಯಲ್ಲಿ ಸಾಂಕ್ರಾಮಿಕತೆ ಬಳಿಕ ದೇಶದ ಯುವಜನತೆಯ ಮಾನಸಿಕ ಆರೋಗ್ಯ ಕುಸಿಯುತ್ತಿದೆ ಎಂದು ತಿಳಿಸಲಾಗಿದೆ.

2020ರಲ್ಲಿ ಯುವಜನತೆಯ ಸರಾಸರಿ ಎಂಎಚ್​ಕ್ಯೂ 28 ಆಗಿದ್ದು, 2023ರಲ್ಲಿ ಇದು 20ಕ್ಕೆ ಕುಸಿದಿದೆ. ಕಡಿಮೆ ಆದಾಯದ ಗುಂಪಿನಲ್ಲಿ ಎಂಎಚ್​ಕ್ಯೂ ಕುಸಿದಿದೆ ಎಂದು ಸೇಪಿಯನ್​ ಲ್ಯಾಬ್ಸ್​​ ಪತ್ತೆ ಮಾಡಿದೆ.

ಪ್ರೊಜೆಕ್ಟ್​ ಉದಯ​: ಭಾರತದಲ್ಲಿ ಹದಿಹರೆಯದವರ ಮೇಲಿನ ಮೊದಲ ಅಧ್ಯಯನ ಉದಯ​ ಆಗಿದೆ. ಇದು ಬಿಹಾರ ಮತ್ತು ಉತ್ತರ ಪ್ರದೇಶ (ಉದಯ)ದಲ್ಲಿನ ಹದಿಹರೆಯದವರು ಮತ್ತು ಯುವ ಜನತೆ ಜೀವನ ಅರ್ಥೈಸಿಕೊಳ್ಳುವ ಸಮಗ್ರ ಸಂಶೋಧನೆ ಆಗಿದೆ. 10-14ಕಿರಿಯ ಮತ್ತು 15-19ರ ಹಿರಿಯ ಪರಿಸ್ಥಿತಿಯಲ್ಲಿ ಮಟ್ಟಗಳು, ಮಾದರಿಗಳು ಮತ್ತು ಪ್ರವೃತ್ತಿ ಸ್ಥಾಪಿಸಿದೆ. ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಮತ್ತು ಡೇವಿಡ್ ಮತ್ತು ಲುಸಿಲ್ ಪ್ಯಾಕರ್ಡ್ ಫೌಂಡೇಶನ್‌ನ ಆರ್ಥಿಕ ಬೆಂಬಲದೊಂದಿಗೆ ಜನಸಂಖ್ಯಾ ಮಂಡಳಿ ಇದನ್ನು ಮುನ್ನಡೆಸುತ್ತಿದೆ.

ರಾಷ್ಟ್ರೀಯ ಕಿಶೋರ್​ ಸ್ವಾಸ್ಥ್ಯ ಕಾರ್ಯಕ್ರಮ: 2014ರಲ್ಲಿ ಈ ರಾಷ್ಟ್ರೀಯ ಕಾರ್ಯಕ್ರಮ ಆರಂಭವಾಗಿದ್ದು, ಇದು ಭಾರತದಲ್ಲಿನ ಹದಿಹರೆಯದವರ ಮಾನಸಿಕ ಆರೋಗ್ಯ ಸೇರಿದಂತೆ ಅವರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ.

ಇದನ್ನೂ ಓದಿ: ಹದಿಹರೆಯದಲ್ಲಿ ಎದುರಾಗುವ ಬೆದರಿಕೆಗಳಿಂದ ಮಾನಸಿಕ ಸಮಸ್ಯೆಗಳು ಸೃಷ್ಟಿ: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.