ETV Bharat / health

ಬಲಶಾಲಿಯಾದ ಹೊಳೆಯುವ ಕೂದಲು ಬೇಕಾ ಹಾಗಾದರೆ: ಕನಿಷ್ಠ ವಾರಕ್ಕೊಮ್ಮೆಯಾದರೂ ಬಳಕೆ ಮಾಡಿ ಮೊಟ್ಟೆ - Egg Helps to nurish the hair

ಮೊಟ್ಟೆಯಲ್ಲಿ ಪ್ರೋಟಿನ್​, ವಿಟಮಿನ್​ ಮತ್ತು ಖನಿಜಾಂಶ ಹೆಚ್ಚಿದೆ. ಇದು ಕೂದಲ ಬುಡಕ್ಕೆ ಉತ್ತಮ ಆರೈಕೆ ನೀಡುತ್ತದೆ. ಇದು ಕೂದಲಿನದ ಆಳದಿಂದ ಬಲಗೊಳಿಸಿ ಕೂದಲಿನ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ.

author img

By ETV Bharat Karnataka Team

Published : Jul 8, 2024, 4:20 PM IST

Egg Helps to nurish the hair strong and shiny
ಕೂದಲ ಆರೈಕೆಗೆ ಮೊಟ್ಟೆ (ಸಂಗ್ರಹ ಚಿತ್ರ)

ಹೈದರಾಬಾದ್​: ಇಂದು ಬಹುತೇಕರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಅದು ತಲೆ ಕೂದಲಿನ ಬೆಳವಣಿಗೆ ಮತ್ತು ಕೂದಲು ಉದುರುವಿಕೆ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಎಲ್ಲ ಚಿಕಿತ್ಸೆ ಮತ್ತು ಔಷಧಗಳು ಲಭ್ಯವಿದೆ. ಆದರೆ, ಇದಕ್ಕೆ ಬೇಕಾಗಿರುವುದು ನೈಸರ್ಗಿಕ ಪೋಷಕಾಂಶವಾಗಿದೆ. ಇದು ತಲೆಕೂದಲು ಬೆಳವಣಿಗೆಗೆ ಪರಿಣಾಮಕಾರಿ ಮಾರ್ಗ ಕೂಡ ಹೌದು.

ಮಾರುಕಟ್ಟೆಯಲ್ಲಿ ಕೂದಲ ಬೆಳವಣಿಗೆಗೆ ಲಭ್ಯವಾಗುವ ಉತ್ಪನ್ನಗಳು ಉತ್ತಮವಾಗಿಯೇ ಇದ್ದರೂ, ಅವು ಭವಿಷ್ಯದಲ್ಲಿ ಅಪಾಯಕಾರಿಯಾಗಿವೆ. ಇದೇ ಕಾರಣಕ್ಕೆ ಕೂದಲ ಆರೈಕೆ ಮತ್ತು ಪೋಷಕಾಂಶ ಅಗತ್ಯವಾಗಿದೆ. ಅದಕ್ಕೆ ಮೊಟ್ಟೆ ಉತ್ತಮ ಪರಿಹಾರ ಮಾರ್ಗವಾಗಿದೆ. ಮೊಟ್ಟೆಯಲ್ಲಿ ಪ್ರೋಟಿನ್​, ವಿಟಮಿನ್​ ಮತ್ತು ಖನಿಜಾಂಶ ಹೆಚ್ಚಿದೆ. ಇದು ಕೂದಲ ಬುಡಕ್ಕೆ ಉತ್ತಮ ಆರೈಕೆ ನೀಡುತ್ತದೆ. ಕೂದಲಿನ ಆಳದಿಂದ ಬಲಗೊಳಿಸಿ ಬೆಳವಣಿಗೆಗೆ ಕಾರಣವಾಗುತ್ತದೆ. ಹಾಗಾದರೆ ಈ ಮೊಟ್ಟೆಯನ್ನು ಕೂದಲಿಗೆ ಬಳಕೆ ಮಾಡುವುದು ಹೇಗೆ, ಇದರ ಶುಚಿತ್ವ ಹೇಗೆ ಎಂಬ ಕುರಿತ ಮಾಹಿತಿ ಇಲ್ಲಿದೆ.

ಮೊಟ್ಟೆಯಲ್ಲಿ ಪ್ರೋಟಿನ್​ ಮತ್ತು ಪೋಷಕಾಂಶ ಸಮೃದ್ಧವಾಗಿದ್ದು, ಇದು ಕೂದಲನ್ನು ಅಡಿಯಿಂದ ಮುಡಿವರೆಗೆ ಆರೈಕೆ ಮಾಡುತ್ತದೆ. ಇದರಲ್ಲಿನ ವಿಟಮಿನ್​ ಎ, ವಿಟಮಿನ್​ ಡಿ ಹಾಗೂ ಇ ಕೂದಲಿನ ಬುಡದ ಆರೋಗ್ಯವನ್ನು ಸುಧಾರಣೆ ಮಾಡಿ, ಕೂದಲ ನಷ್ಟವನ್ನು ತಡೆಯುತ್ತದೆ. ಮೊಟ್ಟೆಯ ಪ್ರೋಟನ್​ ಕೂದಲನ್ನು ಮೃದುವಾಗಿ ಹೊಳೆಯುವಂತೆ ಮಾಡುತ್ತದೆ. ಎಣ್ಣೆ ಕೂದಲಿನವರಿಗೆ ಮೊಟ್ಟೆ ಉತ್ತಮವಾಗಿದೆ. ಒಣ ಕೂದಲಿನವರಿಗೆ ಮೊಟ್ಟೆಯ ಹಳದಿ ಭಾಗ ಉತ್ತಮ ಆಯ್ಕೆ. ಇದು ಕೂದಲಿನ ತೇವಾಂಶ ಕಾಪಾಡುವ ಜೊತೆಗೆ ತಲೆಹೊಟ್ಟು ಸಮಸ್ಯೆಯನ್ನು ಕೂಡಾ ನಿವಾರಣೆ ಮಾಡುತ್ತದೆ.

ತಯಾರಿಸುವುದು ಹೇಗೆ: ಒಂದು ಮೊಟ್ಟೆ ತೆಗೆದುಕೊಂಡು ಬಿಳಿ ಮತ್ತು ಹಳದಿ ಭಾಗವನ್ನು ಪ್ರತ್ಯೇಕಿಸಿ. ಎಣ್ಣೆ ಕೂದಲಿನವರು ಬಿಳಿ ಭಾಗ ಬಳಸಬಹುದು. ಶುಷ್ಕ ಕೂದಲಿನ ಸಮಸ್ಯೆ ಇರುವವರು ಹಳದಿ ಭಾಗ ಬಳಸಿ. ಚೆನ್ನಾಗಿ ಮೊಟ್ಟೆ ಭಾಗವನ್ನು ಕಲಸಿ, ನಂತರೆ ಹಚ್ಚಿದರೆ ನಿಮ್ಮ ಸಮಸ್ಯೆ ತುಂಬಾ ಸರಳವಾಗಿ ಬಗೆಹರಿಯುತ್ತದೆ.

ಹಚ್ಚುವ ಮಾರ್ಗ: ಮೊಟ್ಟೆಯನ್ನು ಬುಡಕ್ಕೆ ಹಚ್ಚುವ ಮುನ್ನ ನಿಮ್ಮ ಕೂದಲಿನ ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಇದರಿಂದ ಮೊಟ್ಟೆಯ ಪೋಷಕಾಂಶ ಕೂದಲಿನ ಕಿರುಚೀಲದಲ್ಲಿ ಗ್ರಹಿಸಲು ಸಹಾಯ ಮಾಡುತ್ತದೆ. ಬಳಿಕ ಕೂದಲಿಗೆ ಕೂಡ ಈ ಮೊಟ್ಟೆಯ ಮಿಶ್ರಣ ಹಚ್ಚಿರಿ. ಬಳಿಕ ನಿಧಾನವಾಗಿ ಕೂದಲನ್ನು ಮಸಾಜ್​ ಮಾಡಿ, ಇದರಿಂದ ರಕ್ತ ಪರಿಚನೆ ಸಹಾಯಕವಾಗಿ, ಪೋಷಕಾಂಶ ಗ್ರಹಿಕೆಗೆ ಸಹಾಯವಾಗುತ್ತದೆ. ಬಳಿಕ ಕೂದಲಿನ ಕ್ಯಾಪ್​ ಆಗಿ ಬಿಡಿ. 20 ರಿಂದ 30 ನಿಮಿಷದ ಬಳಿಕ ನೀರಿನಲ್ಲಿ ಶಾಂಪುವಿನೊಂದಿಗೆ ಕೂದಲನ್ನು ತೊಳೆಯಿರಿ. ಯಾವುದೇ ಕಾರಣಕ್ಕೂ ಬಿಸಿ ನೀರಿನ ಬಳಕೆ ಮಾಡಬೇಡಿ. ವಾರಕ್ಕೆ ಒಂದು ಬಾರಿ ಈ ರೀತಿ ಮಾಡುವುದರಿಂದ ಕೂದಲ ಬಲಗೊಳ್ಳುತ್ತದೆ.

ವಿಶೇಷ ಸೂಚನೆ: ಇಲ್ಲಿ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ಈ ಮಾಹಿತಿ ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಮನಿ ಪ್ಲಾಂಟ್ ಮನೆಯಲ್ಲಿದ್ದರೂ ಸಂಪತ್ತಿನ ಕೊರತೆಯೇ? ನಿಮಗೆ ಗೊತ್ತಿಲ್ಲದ 2 ಸಂಗತಿಗಳಿವೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.