ETV Bharat / health

ಪೌಷ್ಟಿಕಾಂಶಯುಳ್ಳ ಸಸ್ಯಾಧಾರಿತ ಮಾಂಸ ಹೃದಯ ಆರೋಗ್ಯಕ್ಕೆ ಬಲು ಉಪಯೋಗಿ: ಅಷ್ಟಕ್ಕೂ ಏನಿದು ಸಸ್ಯಾಧಾರಿತ ಮಾಂಸ? - plant based meat benefits

author img

By IANS

Published : Jun 27, 2024, 12:56 PM IST

ಸಸ್ಯಾಧಾರಿತ ಮಾಂಸವೂ ಅಧಿಕ ಸಂಸ್ಕರಿತ ಸಸ್ಯವಾಗಿದ್ದು, ಡಯಟ್​ನಲ್ಲಿ ಮಾಂಸಕ್ಕೆ ಬದಲಾಗಿ ಇದನ್ನು ಬಳಕೆ ಮಾಡಲಾಗುವುದು. ಈ ಮೂಲಕ ಹೃದಯ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

Eating plant-based meat alternatives benefits against cardiovascular disease risk factors
ಸಸ್ಯಾಧಾರಿತ ಮಾಂಸ (ಐಎಎನ್​ಎಸ್​)

ನವದೆಹಲಿ: ಸಸ್ಯಾಧಾರಿತ ಮಾಂಸ ಸೇವಿಸುವುದರಿಂದ ಹೃದಯರಕ್ತನಾಳ ಸಮಸ್ಯೆ ದೂರ ಮಾಡಿಕೊಳ್ಳಬಹುದು. ಇದು ರೋಗದ ಅಪಾಯದ ವಿರುದ್ಧ ಹೋರಾಡುತ್ತದೆ. ಅಲ್ಲದೇ, ಕೊಲೆಸ್ಟ್ರಾಲ್​ ಮಟ್ಟ ಮತ್ತು ರಕ್ತದೊತ್ತಡ ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗಿದೆ ಎಂದು 1970ರಲ್ಲಿ ಪ್ರಕಟವಾದ ಸಂಶೋಧನಾ ವಿಶ್ಲೇಷಣೆ ವರದಿಯೊಂದು ತಿಳಿಸಿದೆ.

ಸಸ್ಯಾಧಾರಿತ ಮಾಂಸವೂ ಅಧಿಕ ಸಂಸ್ಕರಿತ ಸಸ್ಯವಾಗಿದ್ದು, ಡಯಟ್​ನಲ್ಲಿ ಮಾಂಸಕ್ಕೆ ಬದಲಾಗಿ ಇದನ್ನು ಬಳಕೆ ಮಾಡಲಾಗುವುದು. ಜೊತೆಗೆ ಇದರಲ್ಲಿ ಅಗಾಧ ಪೋಷಕಾಂಶ ಗುಣ ಹೊಂದಿದೆ ಎಂದು ಕೆನಡಿಯನ್​ ಜರ್ನಲ್​ ಕಾರ್ಡಿಯಾಲಾಜಿಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಲಾಗಿದೆ. ಇದರಲ್ಲಿನ ಪೋಷಕಾಂಶ ಸಂಬಂಧಿತ ಅಂಶಗಳು ಹೃದಯ ಆರೋಗ್ಯದ ಆಹಾರದ ಮಾದರಿಗೆ ಉಪಯುಕ್ತವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಈ ಸಸ್ಯಾಧಾರಿತ ಮಾಂಸ ಮಾರುಕಟ್ಟೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡಿದ್ದು, ಹೆಚ್ಚು ಹೆಚ್ಚು ಜನರು ಈ ಸಸ್ಯಾಧಾರಿತ ಮಾಂಸದ ಬರ್ಗರ್​ ಸವಿಯುತ್ತಿದ್ದಾರೆ. ಮತ್ತೊಂದು ಅಚ್ಚರಿ ಅಂಶ ಎಂದರೆ, ಹೃದಯ ರಕ್ತನಾಳದಲ್ಲಿ ಅಪಾಯ ಹೊಂದಿರುವರು ಮಾಂಸದ ಬದಲಾಗಿ ಇದನ್ನು ಬಳಕೆ ಮಾಡುವುದರಿಂದ ಅವರ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಪಡೆಯಬಹುದು ಎಂದು ಕೆನಡಾದ ಬ್ರಿಟಿಷ್​ ಕೊಲಂಬಿಯಾ ಯುನಿವರ್ಸಿಟಿಯ ಪ್ರಮುಖ ಲೇಖಕ ಮ್ಯಾಥ್ಯೂ ನಗ್ರ ತಿಳಿಸಿದ್ದಾರೆ.

ಆದಾಗ್ಯೂ, ಪ್ರಸ್ತುತ ತಿಳಿದಿರುವುದನ್ನು ಗುರುತಿಸಲು ಮತ್ತು ಭವಿಷ್ಯದ ಸಂಶೋಧನೆಗೆ ನಿರ್ದೇಶನವನ್ನು ಒದಗಿಸಲು ಲಭ್ಯವಿರುವ ಲೇಖನಗಳನ್ನು ಪರಿಶೀಲಿಸಲು ನಾವು ಪ್ರಯತ್ನಿಸಿದ್ದೇವೆ ಎಂದಿದ್ದಾರೆ. 1970ರಿಂದ 2023ದಲ್ಲಿ ಮಾಂಸಕ್ಕೆ ಬದಲಾಗಿ ಸಸ್ಯ ಆಧಾರಿತ ಪರ್ಯಾಯ ಕುರಿತು ಪ್ರಕಟವಾದ ಅಧ್ಯಯನವನ್ನು ಸಂಶೋಧಕರು ವಿಶ್ಲೇಷಿಸಿದ್ದು, ಇವುಗಳನ್ನು ಪೋಷಕಾಂಶ, ಅವುಗಳ ಸಂಯುಕ್ತ ಮತ್ತು ಕೊಲೆಸ್ಟ್ರಾಲ್​ ಮಟ್ಟ ಮತ್ತು ಅಧಿಕ ರಕ್ತದೊತ್ತಡದಂತಹ ಹೃದಯ ರೋಗದ ಅಪಾಯದ ಅಂಶದ ಮೇಲಿನ ಪರಿಣಾಮವನ್ನು ಗಮನಿಸಲಾಗಿದೆ.

ಅವರ ವಿಶ್ಲೇಷಣೆಯು ಸರಾಸರಿಯಾಗಿದೆ ಎಂದು ತೋರಿಸಿದ್ದು, ಸಸ್ಯಾಧಾರಿತ ಪರ್ಯಾಯಗಳು ಹೃದಯ ಆರೋಗ್ಯವನ್ನು ಕಾಪಾಡುವ ಪೋಷಕಾಂಶವನ್ನು ಹೊಂದಿದೆ. ಆದಾಗ್ಯೂ ಇದರಲ್ಲಿನ ಸೋಡಿಯಂ ಅಂಶಗಳು ಕಾಳಜಿದಾಯಕವಾಗಿದೆ. ಅಷ್ಟೇ ಅಲ್ಲ ಈ ಪರ್ಯಾಯಗಳು ಅಧಿಕ ರಕ್ತದೊತ್ತಡವನ್ನು ಹೆಚ್ಚಿಸುವುದಿಲ್ಲ. ಬದಲಾಗಿ ಇದು ಹೃದಯರಕ್ತನಾಳದ ಅಪಾಯದ ಅಂಶವನ್ನು ಸುಧಾರಣೆ ಮಾಡಿ, ಕೊಲೆಸ್ಟ್ರಾಲ್​ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಎಂಬುದನ್ನು ಪರೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ. ಈ ಪರ್ಯಾಯಗಳಯ ಹೃದಯ ಆಘಾತ ಅಥವಾ ಪಾರ್ಶ್ವವಾಯು ಅಪಾಯದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬ ಕುರಿತು ದೀರ್ಘಕಾಲದ ಸಂಶೋಧನಾ ಮೌಲ್ಯಮಾಲನೆ ಕೊರತೆ ಸದ್ಯಕ್ಕೆ ಇದೆ ಎಂದಿದ್ದಾರೆ ಸಂಶೋಧಕರು

ಮಾಂಸವನ್ನು ಅದರಲ್ಲೂ ಕೆಂಪು ಮಾಂಸವನ್ನು ಕಡಿಮೆ ಅಥವಾ ಅದಕ್ಕೆ ಹೊರತಾಗಿ ಹುಡುಕಾಟ ನಡೆಸುತ್ತಿರುವವರಿಗೆ ಈ ಸಸ್ಯಾಧಾರಿತ ಪರ್ಯಾಯಗಳು ಉತ್ತಮ ಹೃದಯ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ಲೇಖಕರು ತಿಳಿಸಿದ್ದಾರೆ. ಈಗಾಗಲೇ ಮಾಂಸ ಸೇವನೆಯನ್ನು ಮಿತಿಗೊಳಿಸಿದವರು, ಅದ್ಬುತ ಪ್ರೋಟಿನ್​ ಮೂಲಗಳಿಗೆ ಹಾಗೂ ಆರೋಗ್ಯಕರ ಆಹಾರ ಮಾದರಿಗೆ ಸರಿದೂಗಿಸಲು ಇವುಗಳ ಬಳಕೆ ಮಾಡಬಹುದಾಗಿದೆ. ಕಡಿಮೆ ಸ್ಯಾಚುರೇಡೆಟ್​ ಕೊಬ್ಬು, ಸೋಡಿಯಂ ಇದರಲ್ಲಿದೆ ಎಂದು ಅವರು ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ದುಬೈನಲ್ಲಿ ಶೇ 100ರಷ್ಟು ಸಸ್ಯ ಆಧಾರಿತ ಮಾಂಸ ಕಾರ್ಖಾನೆ ಓಪನ್​.. ಏನಿದು ಸಸ್ಯಾಧಾರಿತ ಮಾಂಸ?​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.