ನವದೆಹಲಿ: ಸ್ಥೂಲಕಾಯ ಎಂಬುದು ಜಾಗತಿ ಆರೋಗ್ಯ ಸಮಸ್ಯೆಯಾಗಿದ್ದು, ಈ ಸ್ಥೂಲಕಾಯ ನಿರ್ವಹಣೆಗೆ ಔಷಧ ಮತ್ತು ಚುಚ್ಚುಮದ್ದಿನ ರೂಪದಲ್ಲಿ ಹೊಸ ಚಿಕಿತ್ಸೆಗಳು ಲಭ್ಯವಿದೆ. ಆದರೆ, ಈ ಚಿಕಿತ್ಸೆಗಳು ಸರಿಯಾದ ಡಯಟ್ ಮತ್ತು ವ್ಯಾಯಾಮದ ಹೊರತಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.
ಜಾಗತಿಕ ಅಂದಾಜಿನ ಪ್ರಕಾರ, 2.3 ಬಿಲಿಯನ್ ಮಕ್ಕಳು ಮತ್ತು ವಯಸ್ಕರು ಅಧಿಕ ತೂಕ ಮತ್ತು ಸ್ಥೂಲಕಾಯದ ಸಮಸ್ಯೆ ಹೊಂದಿದ್ದಾರೆ. ಇದೇ ರೀತಿಯ ಪರಿಸ್ಥಿತಿ ಮುಂದುವರಿದಲ್ಲಿ 2025ರ ವೇಳೆಗೆ ಸ್ಥೂಲ ಕಾಯ ಹೊಂದಿರುವ ವಯಸ್ಕರ ಸಂಖ್ಯೆ 2.7 ಆಗಲಿದೆ. ಈ ಔಷಧಗಳು ಪ್ರಾಥಮಿಕವಾಗಿ ಮಧುಮೇಹದ ಚಿಕಿತ್ಸೆಗೆ ಅಭಿವೃದ್ಧಿ ಪಡಿಸಲಾಗಿದೆ. ಉದಾಹರಣೆ ಸೆಮಾಗ್ಲುಟೈಡ್ ಮತ್ತು ಇತರ ಜಿಎಲ್ಪಿ ಅಗೊನಿಸ್ಟ್‌ಗಳು, ಇಂಜೆಕ್ಷನ್ ಮತ್ತು ಮಾತ್ರೆ ರೂಪಗಳನ್ನು ಕಾಣಬಹುದಾಗಿದೆ.
ಈ ಔಷಧಗಳು ಹೆಚ್ಚಿನ ಪ್ರಮಾಣದ ತೂಕ ನಷ್ಟಕ್ಕೆ ಸಹಾಯ ಮಾಡುವುದಿಲ್ಲ. ಈ ಔಷಧಗಳ ಜೊತೆಗೆ ಕಡಿಮೆ ಸಕ್ಕರೆ ಮಟ್ಟ, ಕಡಿಮೆ ಕಾರ್ಬೋಹೈಡ್ರೇಟ್ ಡಯಟ್ ಮತ್ತು ಕನಿಷ್ಠ ಪಕ್ಷ ಒಂದು ಗಂಟೆ ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಬಾರಿಯಾಟ್ರಿಕ್ ಲ್ಯಾಪರೊಸ್ಕೋಪಿಕ್ ಸರ್ಜನ್ ಡಾ ಜಿ ಮೊಯಿನಯದ್ದೀನ್ ತಿಳಿಸಿದ್ದಾರೆ.
ತೂಕ ನಷ್ಟದ ಸ್ಪಷ್ಟ ಚಿತ್ರಣವನ್ನು ಕನಿಷ್ಠ 6-7 ತಿಂಗಳ ಬಳಿಕವೇ ಕಾಣಬಹುದಾಗಿದೆ. ಇದು ಕಾಲಾನಂತರದಲ್ಲಿ ನಿಧಾನವಾಗಿ ಪ್ರಗತಿ ಕಾಣುತ್ತದೆ. ಈ ಔಷಧಗಳು ಆರು ವಾರಗಳ ಬಳಿಕ ಕಾರ್ಯಾಚರಣೆ ತೋರಿಸುತ್ತದೆ ಎಂದಿದ್ದಾರೆ. ಈ ಔಷಧಗಳು ಹೆಚ್ಚು ವೆಚ್ಚದ ಹಿನ್ನಲೆ ಜನರು ಇದನ್ನು ದೀರ್ಘವಾದ ಬಳಕೆ ಮಾಡಲು ಸಾಧ್ಯವಿಲ್ಲ. ಇದರ ಜೊತೆಗೆ ಇದು ಗ್ಯಾಸ್ಟೋ ಇಂಟೆಸ್ಟಿನಲ್ ಅಡ್ಡ ಪರಿಣಾಮ ಹೊಂದಿದೆ. ಇದರಿಂದ ಕಿಡ್ನಿ ಮತ್ತು ಮೇದೋಜೀರಕ ಗ್ರಂಥಿ ಮೇಲೆ ಹೆಚ್ಚಿನ ಅಪಾಯ ಇದೆ. ಈ ಔಷಧಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುವುದರಿಂದ ಮತ್ತೆ ತೂಕ ಹೆಚ್ಚಳ ಕಾಣಬಹುದಾಗಿದೆ.
ಬಹುತೇಕ ಪ್ರಕರಣದಲ್ಲಿ ರೋಗಿಗಳು ಔಷಧಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ ಹಿಂದಿನ ರೀತಿಯ ಚಯಾಪಚಯನಕ್ಕೆ ಮರುಕಳಿಸಬಹುದು. ಸಾಮಾನ್ಯ ತಿನ್ನುವ ಅಭ್ಯಾಸ ಮಾಡಿದಾಗ ವರ್ಷದಿಂದ ಆರು ತಿಂಗಳವರೆಗೆ ನಷ್ಟವಾದ ತೂಕವೂ ಮೂರೇ ತಿಂಗಳಲ್ಲಿ ಬರಬಹುದು. ಇಕ್ಲಿನಿಕಲ್ ಮೆಡಿಸಿನ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಕೂಡ ಔಷಧ ನಿಲ್ಲಿಸಿದ ಬಳಿಕವೂ ಹೆಚ್ಚುವರಿ ವ್ಯಾಯಾಮವೂ ಆರೋಗ್ಯಕರ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದು ತಿಳಿಸಲಾಗಿದೆ.
ಅಧ್ಯಯನದ ಫಲಿತಾಂಶದಲ್ಲಿ ತಿಳಿಸಿದಂತೆ, ದೇಹದ ಸ್ಥೂಲಕಾಯತೆಯ ಫಾರ್ಮಾಕೋಥೆರಪಿಯೊಂದಿಗೆ ಮಾತ್ರ ಚಿಕಿತ್ಸೆಯ ಮುಕ್ತಾಯದ ನಂತರ ತೂಕವನ್ನು ಮರಳಿ ಪಡೆಯಬಹುದು. ಈ ಹಿನ್ನೆಲೆಯಲ್ಲಿ ದೇಹ ತೂಕ ನಿವಾರಣೆಗೆ ವ್ಯಾಯಾಮದ ಮೇಲ್ವಿಚಾರಣೆ ಅವಶ್ಯವಾಗಿದೆ.
ಇದನ್ನೂ ಓದಿ: ನಿತ್ಯ ಬೇಡ, ವಾರಕ್ಕೆ ಎರಡೂ ದಿನ ವ್ಯಾಯಾಮ ಮಾಡಿದರೂ ಸಿಗತ್ತೆ ಅದ್ಬುತ ಪ್ರಯೋಜನ: ತಜ್ಞರು