ಹೈದರಾಬಾದ್: ತೀವ್ರತರದ ಎದೆ ನೋವು, ಎಡಗೈ- ಭುಜದ ನೋವು ಹಾಗೇ ದವಡೆ ನೋವು ಹೃದಯಘಾತದ ಮುನ್ಸೂಚನೆಯನ್ನು ತಿಳಿಸುತ್ತದೆ ಎಂಬುದು ಬಹುತೇಕರಿಗೆ ಗೊತ್ತಿದೆ. ಆದರೆ, ಕಾಲಿನ ನೋವು ಕೂಡ ಹೃದಯಾಘಾತದೊಂದಿಗೆ ಸಂಬಂಧವನ್ನು ಹೊಂದಿದೆ ಎಂದು ಹೊಸ ಅಧ್ಯಯನವೊಂದರಲ್ಲಿ ತಜ್ಞರು ತಿಳಿಸಿದ್ದಾರೆ. ದೀರ್ಘಕಾಲದವರೆಗೆ ಕಾಲಿನ ನೋವು ಕಾಣಿಸಿಕೊಳ್ಳುತ್ತಿದ್ದರೆ, ನಿರ್ಲಕ್ಷ್ಯ ಮಾಡಬೇಡಿ ಎಂದಿದ್ದಾರೆ.
ಬಹುತೇಕರಿಗೆ ಆಗ್ಗಿಂದಾಗ್ಗೆ ಕಾಲಿನಲ್ಲಿ ನೋವು ಸಹಜವಾಗಿಯೇ ಕಾಡುತ್ತಿರುತ್ತದೆ. ಆದಾಗ್ಯೂ, ದೀರ್ಘಕಾಲದವರೆಗೆ ಈ ಕಾಲು ನೋವು ಕಾಡಿದರೆ, ಇದಕ್ಕೆ ಕಾರಣ ಬಾಹ್ಯ ಅಪಧಮನಿ ಕಾಯಿಲೆ (ಪಿಎಡಿ) ಆಗಿದೆ. ಪಿಎಡಿ ಎಂಬುದು ದೀರ್ಘ ಕಾಯಿಲೆ ಆಗಿದೆ. ನಮ್ಮ ದೇಹದ ಇತರ ಭಾಗಗಳಲ್ಲಿರುವಂತೆ, ಕೊಲೆಸ್ಟ್ರಾಲ್‌ನ ಸಂಗ್ರಹದಿಂದಾಗಿ ಕಾಲುಗಳು ಅಥವಾ ತೋಳುಗಳಲ್ಲಿನ ಅಪಧಮನಿಗಳು ಮುಚ್ಚಿಹೋಗಬಹುದು. ಫಲಿತಾಂಶವಾಗಿ ಈ ಪ್ರದೇಶಗಳಿಗೆ ರಕ್ತದ ಪರಿಚಲನೆ ಸರಿಯಾಗಿ ಆಗದೇ ಹೋಗಬಹುದು. ಇದರಿಂದ ಈ ಪ್ರದೇಶದಲ್ಲಿನ ಅಂಗಾಂಶಗಳಿಗೆ ಆಮ್ಲಜನಕ ಮತ್ತು ಪೌಷಕಾಂಶ ಪಡೆಯುವುದು ಕಷ್ಟವಾಗುತ್ತದೆ.
ಇದಕ್ಕಿಂತ ಹೆಚ್ಚಾಗಿ ಪಿಎಡಿ ಪರಿಧಮನಿಯ ಕಾಯಿಲೆ (ಸಿಎಡಿ)ಯನ್ನು ಹೆಚ್ಚಿಸುತ್ತದೆ. ಇದರಿಂದ ಪರಿಧಮನಿಯಲ್ಲಿನ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿ, ಇದು ಹೃದಯದ ಸಮಸ್ಯೆಗೆ ಕಾರಣ ಆಗುತ್ತದೆ. ಪಿಎಡಿ ಎಂಬುದು ಸಿಎಡಿ ಆರಂಭಿಕ ಎಚ್ಚರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಬಾಹ್ಯ ಅಪಧಮನಿಯ ರೋಗಗಳನ್ನು ಆರಂಭಿಕ ಹಂತದಲ್ಲೆ ಪತ್ತೆ ಮಾಡಿ, ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯವುದು ಅವಶ್ಯವಾಗಿದೆ.
2017ರಲ್ಲಿ ಪ್ರಕಟವಾದ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಂತೆ, ಪಿಎಡಿ ಹೃದಯಾಘಾತದ ಅಪಾಯವನ್ನು ದುಪ್ಪಟ್ಟು ಮಾಡುತ್ತದೆ ಎಂದು ತಿಳಿಸಲಾಗಿದೆ. ಈ ಅಧ್ಯಯನದಲ್ಲಿ ಗ್ರೀಸ್ನ ಅಥೆನ್ಸ್ ಯೂನಿವರ್ಸಿಟಿಯ ಖ್ಯಾತ ಹೃದಯ ತಜ್ಞ ಡಾ ಜೆಪಿ ಭಾಗಿಯಾಗಿದ್ದರು. ದೀರ್ಘಕಾಲದ ಕಾಲು ನೋಡವ ಹೃದಯದ ರೋಗಕ್ಕೆ ಕಾರಣವಾಗುವ ಅಪಾಯವನ್ನು ಹೊಂದಿದೆ ಎಂದಿದ್ದಾರೆ.
ಪಿಎಡಿ ಲಕ್ಷಣಗಳೇನು?
- ಕಾಲುಗಳಲ್ಲಿ ಕಡಿಮೆ ರಕ್ತ ಪರಿಚಲನೆ
- ಕಾಲಿನಲ್ಲಿರುವ ಕೂದಲುಗಳ ನಷ್ಟ
- ಕಾಲಿನ ತ್ವಚೆಯ ಬಣ್ಣ ಕುಂದುವುದು
- ಕಾಲು ಮರಗಟ್ಟುವಿಕೆ, ನೋವು ಮತ್ತು ಚಳಿಯ ಅನುಭವ
- ಕಾಲಿನಲ್ಲಿ ಮುಳ್ಳು ಚುಚ್ಚಿದ ಅನುಭವ
- ಕಾಲು ಅಥವಾ ಪಾದದಲ್ಲಿ ಮಾಯದ ಗಾಯ
- ವಿಶ್ರಾಂತಿ ಪಡೆಯುವಾಗ ಕಾಲು ಅಥವಾ ಹೆಬ್ಬೆರಳಿನಲ್ಲಿ ಉರಿ ಅಥವಾ ನೋವು
ಪಿಎಡಿಯನ್ನು ಪತ್ತೆ ಮಾಡುವುದು ಹೇಗೆ?: ಹಲವು ವೈದ್ಯಕೀಯ ಪರೀಕ್ಷೆಗಳ ಮೂಲಕ ಹೃದಯ ಆರೋಗ್ಯ ಪರಿಸ್ಥಿತಿಗೆ ಕಾಲು ನೋವು ಕಾರಣವಾ ಎಂದು ನೋಡಬಹುದು. ಎಬಿಐ ಮಾಪನದ ಮೇರೆಗೆ ಕಾಲು ಅಥವಾ ತೋಳಿನ ಒತ್ತಡವನ್ನು ಅಳೆಯಬಹುದು. ಜೊತೆಗೆ ಡೊಪ್ಲರ್ ಅಲ್ಟ್ರಾಸೌಂಡ್, ಸಿಟಿ ಅಂಜಿಯೋಗ್ರಾಫಿ, ಎಂಆರ್ಎ ಸ್ಕಾನಿಂಗ್,ಗಳು ಪಿಎಡಿ ಸಮಸ್ಯೆ ಪತ್ತೆಗೆ ಇರುವ ಮಾರ್ಗವಾಗಿದೆ.
ಒಂದು ವೇಳೆ ನಿಮಗೆ ಪಿಎಡಿ ಪತ್ತೆಯಾದಲ್ಲಿ ನಿಯಮಿತವಾಗಿ ವ್ಯಾಯಾಮಕ್ಕೆ ಒಳಗಾಗುವುದು, ಕಡಿಮೆ ಕೊಬ್ಬಿನ ಆಹಾರ ಸೇವನೆ, ಆರೋಗ್ಯಯುತ ಆಹಾರ ಸೇವನೆ, ತಂಬಾಕಿನಿಂದ ದೂರು ಇರುವ ಜೊತೆಗೆ ಸರಿಯಾದ ನಿದ್ರೆ ಅವಶ್ಯಕವಾಗಿದೆ. ತಜ್ಞರ ಪ್ರಕಾರ ಇವು ಸಮಸ್ಯೆಯನ್ನು ಕೊಂಚ ದೂರಾಗಿಸುವಲ್ಲಿ ಸಹಾಯಕವಾಗಿದೆ.
ಇದನ್ನೂ ಓದಿ: ನಿಮ್ಮ ಲಿವರ್ ಆರೋಗ್ಯವಾಗಿದೆಯೇ? ಸಂದೇಹವಿದ್ದಲ್ಲಿ ಈ ಸುದ್ದಿಯನ್ನೊಮ್ಮೆ ಓದಿ