ETV Bharat / health

ಬ್ರೈನ್​ ಕ್ಯಾನ್ಸರ್​ ವಿರುದ್ಧ ಹೊಸ ಚಿಕಿತ್ಸೆ ಅಭಿವೃದ್ಧಿ ಪಡಿಸಿದ ದೆಹಲಿ ಐಐಟಿ - New treatment brain cancer

author img

By ETV Bharat Karnataka Team

Published : Jul 12, 2024, 4:57 PM IST

ಗ್ಲಿಯೊಬ್ಲಾಸ್ಟೊಮಾ ರೀತಿಯ ಕ್ಯಾನ್ಸರ್ ಗೆಡ್ಡೆ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಇಲಿಗಳ ಮೇಲೆ ನಡೆಸಲಾದ ಪೂರ್ವಭಾವಿ ಪ್ರಯೋಗಗಳು ಯಶಸ್ವಿಯಾಗಿದೆ.

delhi-iit-develop-new-treatment-for-deadly-brain-cancer-shows-promise
ಸಾಂದರ್ಭಿಕ ಚಿತ್ರ (ಐಎಎನ್​ಎಸ್​)

ಹೈದರಾಬಾದ್​: ಮಿದುಳು ಕ್ಯಾನ್ಸರ್​ ಎಂಬುದು ಮಾರಾಣಾಂತಿಕವಾಗಿದ್ದು, ಇದಕ್ಕೆ ಹೊಸ ಚಿಕಿತ್ಸೆ ವಿಧಾನವೊಂದನ್ನು ಅಭಿವೃದ್ಧಿಗೊಳಿಸುವಲ್ಲಿ ಐಐಟಿ ದೆಹಲಿ ಒಂದು ಹೆಜ್ಜೆ ಮುಂದೆ ಸಾಗಿದೆ. ಗ್ಲಿಯೊಬ್ಲಾಸ್ಟೊಮಾ ರೀತಿಯ ಕ್ಯಾನ್ಸರ್ ಗೆಡ್ಡೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಇಲಿಗಳ ಮೇಲೆ ನಡೆಸಲಾದ ಪೂರ್ವಭಾವಿ ಪ್ರಯೋಗಗಳು ಯಶಸ್ವಿಯಾಗಿದೆ ಎಂದು ಈ ಕುರಿತು ಸಂಪೂರ್ಣ ವಿವರಣೆಯನ್ನು ಸಂಸ್ಥೆ ತಿಳಿಸಿದೆ.

ಸದ್ಯ ರೋಗಿಗಳಲ್ಲಿ ಗ್ಲಿಯೊಬ್ಲಾಸ್ಟೊಮಾ ಟ್ಯೂಮರ್​ ಅನ್ನು ತೆಗೆದು ಹಾಕಲು ಸರ್ಜರಿ ಮತ್ತು ರೇಡಿಯೇಷನ್​ ಕಿಮೋಥೆರಪಿಯಂತಹ ಚಿಕಿತ್ಸೆಗಳನ್ನು ವೈದ್ಯಕೀಯ ಪದ್ಧತಿಯಲ್ಲಿ ಬಳಕೆ ಮಾಡಲಾಗುತ್ತಿದೆ, ಆದರೆ, ಈ ಚಿಕಿತ್ಸೆಗಳ ಬಳಿಕ ರೋಗಿಗಳು ಬದುಕುಳಿಯುವ ಸಾಧ್ಯತೆ ಕೇವಲ 12 - 18 ತಿಂಗಳಾಗಿದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು ರೋಗಿಗಳ ದೀರ್ಘ ಉಳಿಯುವಿಕೆಗಾಗಿ ಹೊಸ ಚಿಕಿತ್ಸೆಯೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಅಧ್ಯಯನದ ಫಲಿತಾಂಶವನ್ನು ಪ್ರಖ್ಯಾತ ಜರ್ನಲ್​ ಆದ ಬಯೋಮೆಟಿರಿಯಲ್ಸ್​ನಲ್ಲಿ ಪ್ರಕಟಿಸಲಾಗಿದೆ. ಇಲ್ಲಿನ ಬಯೋ ಮಡಿಕಲ್​ ಇಂಜಿನಿಯರಿಂಗ್​ನ ಸಹಾಯಕ ಪ್ರಾಧ್ಯಾಪಕರಾದ ಜಯಂತ್​ ಭಟ್ಟಾಚಾರ್ಯ ಅವರ ಮಾರ್ಗದರ್ಶನದಲ್ಲಿ ಪಿಎಚ್​ಡಿ ವಿದ್ಯಾರ್ಥಿ ವಿಧಿತ್​ ಗೌರ್ ಪ್ರಾಥಮಿಕ ಅಧ್ಯಯನ ನಡೆಸಿದ್ದಾರೆ,

ವಿಧಿತ್​ ಈ ಗಡ್ಡೆಯ ಚಿಕಿತ್ಸೆಗಾಗಿ​ ಇಮ್ಯೂನೊಸೊಮ್ಸ್​ ಎಂಬ ವಿನೂತನ ನ್ಯಾನೊ ಫಾರ್ಮ್ಯೂಲೇಷನ್​ ಅನ್ನು ಅಭಿವೃದ್ಧಿ ಮಾಡಿದ್ದಾರೆ. ಇದು ಶಕ್ತಿಯುತ ಆಂಟಿಬಾಡಿ ಸಿಡಿ 40 ಜೊತೆಗೆ ಆರ್​ಆರ್​ಎಕ್ಸ್​​- 001 ಎಂಬ ಸಣ್ಣ ನ್ಯೂಕ್ಲಿಯರ್​ ಪ್ರತಿಬಂಧಕ ಸಂಯೋಜಿಸಿದ್ದಾರೆ. ಇದು ಮಿದುಳಿನ ಟ್ಯೂಮರ್​​ ಚಿಕಿತ್ಸೆಯ ಸಾಮರ್ಥ್ಯವನ್ನು ಹೆಚ್ಚಿಸಿದೆ. ಇದನ್ನು ಇಲಿಗಳ ಮೇಲೆ ಪ್ರಯೋಗಿಸಿದಾಗ ಟ್ಯೂಮರ್​ ಸಂಪೂರ್ಣವಾಗಿ ಮರೆಯಾಗಿದೆ. ಜೊತೆಗೆ ಮಿದುಳಿನ ಕ್ಯಾನ್ಸರ್​ ವಿರುದ್ಧ ಹೋರಾಡಲು ಶಕ್ತಿಶಾಲಿಯಾದ ಪ್ರತಿರಕ್ಷಣಾ ವ್ಯವಸ್ಥೆ ಕೂಡ ಅಭಿವೃದ್ಧಿಯಾಗಿದೆ. ಮೂರು ತಿಂಗಳ ಅಂತರದ ಬಳಿಕ ಸಹಾಯಕ ಪ್ರಧ್ಯಾಪಕ ಭಟ್ಟಾಚಾರ್ಯ ನೇತೃತ್ವದ ಸಂಶೋಧಕರ ತಂಡ, ಪ್ರಯೋಗಕ್ಕೆ ಒಳಪಡಿಸಿದ ಇಲಿಗೆ ಗ್ಲಿಯೊಬ್ಲಾಸ್ಟೊಮ ಕೋಶವನ್ನು ನೀಡಿ ಮತ್ತೆ ಪ್ರಯೋಗ ನಡೆಸಿದ್ದಾರೆ.

ಆದರೆ, ಹೊಸ ಟ್ಯೂಮರ್​ ಅಭಿವೃದ್ಧಿಯಾಗಿಲ್ಲ ಎಂದು ಐಐಟಿ ದೆಹಲಿ ತಿಳಿಸಿದೆ. ಈ ಕುರಿತು ಮಾತನಾಡಿರುವ ಜಯಂತ್​ ಭಟ್ಟಾಚಾರ್ಯ, ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಬಂದಿದೆ. ಈ ಫಲಿತಾಂಶವು ನಮ್ಮನ್ನು ಮತ್ತಷ್ಟು ಉತ್ಸಾಹಿ ಆಗಿಸಿದೆ. ಅಲ್ಲದೇ ಈ ಫಲಿತಾಂಶದಿಂದಾಗಿ ಗ್ಲಿಯೊಬ್ಲಾಸ್ಟೊಮಾ ಹೊಂದಿರುವ ರೋಗಿಗಳಿಗೆ ಈ ವಿಧಾನದ ಚಿಕಿತ್ಸೆ ಬಳಕೆ ಮಾಡುವ ಮೂಲಕ ಮಾನವ ಪ್ರಯೋಗ ನಡೆಸುವ ಕುರಿತು ತಿಳಿಸಿದ್ದಾರೆ.

ಇದನ್ನೂ ಓದಿ: ರಕ್ತ ಪರೀಕ್ಷೆ ಮೂಲಕ ಕ್ಯಾನ್ಸರ್​, ಅಲ್ಝೈಮರ್​ ಪತ್ತೆ: ವಿನೂತನ ಪರೀಕ್ಷೆ ಹಾದಿಯಲ್ಲಿ ವಿಜ್ಞಾನಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.