ETV Bharat / health

ತಾಪಮಾನದ ಏರಿಕೆಯೊಂದಿಗೆ ಹೆಚ್ಚುತ್ತಿದೆ ಪಾರ್ಶ್ವವಾಯು ಸಾವಿನ ಅಪಾಯ: ಅಧ್ಯಯನ - Deaths From Stroke - DEATHS FROM STROKE

ಇತ್ತೀಚಿನ ವರ್ಷಗಳಲ್ಲಿ ತಾಪಮಾನದಲ್ಲಿ ಗಮನಾರ್ಹ ಬದಲಾವಣೆಯಾಗುತ್ತಿದೆ. ಇದು ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಹೆಚ್ಚು ಕಾಳಜಿಯ ವಿಚಾರವಾಗಿದೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ.

deaths-from-stroke-increasingly-linked-to-temperatures-driven-by-climate-change

author img

By PTI

Published : Apr 11, 2024, 4:05 PM IST

ನವದೆಹಲಿ: ಹವಾಮಾನ ಬದಲಾವಣೆಚಾಲಿತ ತಾಪಮಾನ ಏರಿಕೆಯು ಜಾಗತಿಕವಾಗಿ ಸಾವು ಮತ್ತು ಅಂಗವೈಕಲ್ಯತೆಯೊಂದಿಗೆ ಸಂಬಂಧ ಹೊಂದಿದೆ ಎಂದು ಹೊಸ ಸಂಶೋಧನೆ ತಿಳಿಸಿದೆ. ಮೂರು ದಶಕಗಳ ಜಾಗತಿಕ ದತ್ತಾಂಶದಲ್ಲಿ ಇದು ಕಂಡುಬಂದಿದೆ. 2019ರಲ್ಲಿ ತಾಪಮಾನದಿಂದ 5.2 ಲಕ್ಷ ಪಾರ್ಶ್ವವಾಯು ಪ್ರಕರಣಗಳು ಕಂಡುಬಂದಿವೆ ಎಂದು ವರದಿ ಹೇಳಿದೆ. ಈ ಅಧ್ಯಯನವನ್ನು ಜರ್ನಲ್​ ನ್ಯೂರೋಲಾಜಿಯಲ್ಲಿ ಪ್ರಕಟಿಸಲಾಗಿದೆ.

ವೇಗವಾಗಿ ಹೆಚ್ಚುತ್ತಿರುವ ಅಧಿಕ ತಾಪಮಾನ ಪಾರ್ಶ್ವವಾಯುವಿನ ಹೊರೆ ಕೂಡಾ ಹೆಚ್ಚಿಸಿದೆ. ವಿಶೇಷವಾಗಿ, ಹಿರಿಯ ವಯಸ್ಸಿನವರಲ್ಲಿ ಇದು ಜಾಸ್ತಿ. ಆಫ್ರಿಕಾದಂತಹ ಕಡಿಮೆ ಸಾಮಾಜಿಕ ಜನಸಂಖ್ಯಾ ಸೂಚ್ಯಂಕ ಹೊಂದಿರುವ ದೇಶಗಳಲ್ಲಿ ಅಸಮಾನವಾಗಿದೆ ಎಂದು ಅಧ್ಯಯನ ಕಂಡುಕೊಂಡಿದೆ.

ಭಾರತದಲ್ಲಿ ಅಧಿಕ ತಾಪಮಾನದಿಂದ ಪಾರ್ಶ್ವವಾಯುವಿಗೆ ತುತ್ತಾಗಿ 33 ಸಾವಿರ ಸಾವು ಸಂಭವಿಸಿದೆ. ಇದರಲ್ಲಿ ಶೇ.55ರಷ್ಟು ಅಂದರೆ 18 ಸಾವಿರ ಸಾವು ಅಧಿಕ ತಾಪಮಾನಕ್ಕೆ ಸಂಬಂಧಿಸಿದರೆ, ಶೇ.45ರಷ್ಟು ಅಂದರೆ 15 ಸಾವಿರ ಕಡಿಮೆ ತಾಪಮಾನದ್ದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ತಾಪಮಾನ ಬದಲಾವಣೆಗಳಿಂದ ಉಂಟಾಗುವ ಈ ಪಾರ್ಶ್ವವಾಯುವಿನ ಹೊರೆ ಹೆಚ್ಚಾಗಿ ವಯಸ್ಸಾದವರ ಮೇಲಿದೆ. ಅತಿಯಾದ ತಾಪದಿಂದ ಪಾರ್ಶ್ವವಾಯು ಸಾವಿನ ದರವೂ ಪುರುಷರಲ್ಲಿ ಹೆಚ್ಚಿದೆ. ಪ್ರತಿ ಲಕ್ಷ ಪುರಷರಲ್ಲಿ ಶೇ 7.7ರಷ್ಟು ಪುರುಷರು ಈ ಪರಿಣಾಮಕ್ಕೆ ಒಳಗಾದರೆ, ಲಕ್ಷ ಮಹಿಳೆಯರಲ್ಲಿ ಈ ಪರಿಣಾಮಕ್ಕೆ ಒಳಗಾಗುವವರ ಸಂಖ್ಯೆ ಶೇ.5.9ರಷ್ಟಿದೆ.

ಪ್ರಾದೇಶಿಕವಾರು ಗಮನಿಸಿದಾಗ ಕೇಂದ್ರ ಏಷ್ಯಾದಲ್ಲಿ ತಾಪಮಾನ ಸಂಬಂಧಿ ಪಾರ್ಶ್ವವಾಯು ಸಾವಿನ ಅಪಾಯ ಲಕ್ಷ ಜನಸಂಖ್ಯೆಯಲ್ಲಿ ಶೇ.18ರಷ್ಟಿದೆ. ಭವಿಷ್ಯದಲ್ಲಿ ತಾಪಮಾನದ ಬದಲಾವಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪರಿಣಾಮಕಾರಿ ಆರೋಗ್ಯ ನೀತಿ ಜಾರಿಗೆ ತರುವ ಮತ್ತು ಹವಾಮಾನ ಬದಲಾವಣೆಗೆ ಕಾರಣವಾದ ಪಳೆಯುಳಿಕೆ ಇಂಧನ, ಅರಣ್ಯ ನಾಶ ಮತ್ತು ಕೈಗಾರಿಕಾ ಪ್ರಕ್ರಿಯೆಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ತರುವ ಕುರಿತು ಸಂಶೋಧಕರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಹವಾಮಾನ ಬದಲಾವಣೆಯಿಂದ ಮಾನ್ಸೂನ್ ​​ಮೇಲೆ ಪರಿಣಾಮ: ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.