ಹೈದರಾಬಾದ್: ಕೊಲೆಸ್ಟ್ರಾಲ್ ಎಂಬುದು ಇಂದು ಬಹುತೇಕರನ್ನು ಕಾಡುತ್ತಿದ್ದು, ಇದು ಹೃದಯ ರೋಗ ಮತ್ತು ಪಾರ್ಶ್ವವಾಯುನಂತಹ ಗಂಭೀರ ಸಮಸ್ಯೆಗೆ ಗುರಿ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ (ಡಿಸ್ಲಿಪಿಡೆಮಿಯಾ)ದ ಅಸಹಜ ಏರಿಳಿತ ತಡೆಯುವ ಉದ್ದೇಶದಿಂದ ದೇಶದಲ್ಲಿ ಮೊದಲ ಬಾರಿಗೆ ಕಾರ್ಡಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ (ಸಿಎಸ್‌ಐ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಕೊಲೆಸ್ಟ್ರಾಲ್ನ ಪರಿಣಾಮ: ರಕ್ತದಲ್ಲಿನ ಕೊಲೆಸ್ಟ್ರಾಲ್, ಅಧಿಕ ಎಲ್ಡಿಎಲ್ (ಕೆಟ್ಟ ಕೊಲೆಸ್ಟ್ರಾಲ್), ಅಧಿಕ ಟ್ರಿಗ್ಲೆಸೆರೈಡ್ಸ್ ಮತ್ತು ಕಡಿಮೆ ಎಚ್ಡಿಎಲ್ ಕೊಲೆಸ್ಟ್ರಾಲ್ (ಉತ್ತಮ ಕೊಲೆಸ್ಟ್ರಾಲ್) ಅನ್ನು ಈ ಡಿಸ್ಲಿಪಿಡೆಮಿಯಾ ಒಳಗೊಂಡಿರುತ್ತದೆ. ಈ ಸಮಸ್ಯೆಗಳು ಹೃದಯಾಘಾತ, ಪಾರ್ಶ್ವವಾಯುನಂತಹ ಸಮಸ್ಯೆಗೆ ಕಾರಣವಾಗುತ್ತದೆ. ಇವು ಆರೋಗ್ಯದ ಸೈಲೆಂಟ್ ಕಿಲ್ಲರ್ ಆಗಿ ಕೆಲಸ ಮಾಡುತ್ತವೆ ಎಂದು ಸಿಎಸ್‌ಐ ಅಧ್ಯಕ್ಷ ಡಾ ಪ್ರತಾಪ್ಚಂದ್ರ ರಥ್ ತಿಳಿಸಿದರು. ಅಧಿಕ ರಕ್ತದೊತ್ತಡ, ಮಧುಮೇಹದಂತಹ ಸಮಸ್ಯೆಗಳಂತೆ ಇವುಗಳ ಲಕ್ಷಣಗಳು ಆರಂಭದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬಿಡುಗಡೆ ಮಾಡಿರುವ ಮಾರ್ಗಸೂಚಿಗಳು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಮಾರ್ಗಸೂಚಿ ಪ್ರಮುಖಾಂಶ: ಹೃದಯ ಸಮಸ್ಯೆ ಅಥವಾ ಅಧಿಕ ರಕ್ತದ ಕೊಲೆಸ್ಟ್ರಾಲ್ ಮಟ್ಟ (ಹೈಪರ್ಕೊಲೆಸ್ಟರಾಲ್ಮಿಯಾ)ಯ ಕುಟುಂಬ ಇತಿಹಾಸ ಹೊಂದಿರುವವರು 18 ವರ್ಷದ ವಯಸ್ಸಿನಲ್ಲಿ ಅಥವಾ ಅದಕ್ಕಿಂತ ಮುಂಚೆ ಮೊದಲ ಲಿಪಿಡ್ ಫ್ರೋಫೈಲ್ ಪರೀಕ್ಷೆ ಅನ್ನು ಮುಗಿಸಬೇಕು
ಯಾವುದೇ ಆರೋಗ್ಯ ಸಮಸ್ಯೆ ಹೊಂದಿರುವ ಸಾಮಾನ್ಯ ಜನರು ಹಾಗೂ ಕಡಿಮೆ ಅಪಾಯ ಹೊಂದಿರುವ ವ್ಯಕ್ತಿಗಳು ಎಲ್ಡಿಸಿ ಕೊಲೆಸ್ಟ್ರಾಲ್ ಮಟ್ಟವನ್ನು 100 ಎಂಜಿ/ಡಿಎಲ್ ಮತ್ತು ಎಚ್ಡಿಎಲ್ ಕೊಲೆಸ್ಟ್ರಾಲ್ ಹೊಂದಿರುವವರು 130 ಎಂಜಿ/ ಡಿಎಲ್ಗಿಂತ ಕಡಿಮೆ ಗುರಿಯನ್ನು ಹೊಂದಬೇಕು.
ಮಧುಮೇಹ, ರಕ್ತದೊತ್ತಡದಂತಹ ಅಧಿಕ ಅಪಾಯ ಹೊಂದಿರುವ ಜನರು ಎಚ್ಚರಿಕೆ ವಹಿಸುವ ಜೊತೆಗೆ ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು 70 ಎಂಜಿ/ ಡಿಎಲ್ ಮತ್ತು ಎಚ್ಡಿಎಲ್ ಕೊಲೆಸ್ಟ್ರಾಲ್ ಹೊಂದಿರದ ಜನರು 100 ಎಂಜಿ/ ಡಿಎಲ್ ಮಟ್ಟವನ್ನು ಕಾಯ್ದುಕೊಳ್ಳಬೇಕು.
ಪಾರ್ಶ್ವವಾಯು ಪೀಡಿತರು, ಹೃದಯಾಘಾತ ಮತ್ತು ದೀರ್ಘ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರು ಅಧಿಕ ಅಪಾಯದಲ್ಲಿದ್ದು, ಅವರು ಕೂಡ ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು 55 ಎಂಜಿ/ ಡಿಎಲ್ ಮತ್ತು ಎಚ್ಡಿಎಲ್ ಕೊಲೆಸ್ಟ್ರಾಲ್ ಹೊರತಾದ ಮಟ್ಟ 85 ಎಂಜಿ/ ಡಿಎಲ್ ಕೆಳಗೆ ಇರಬೇಕು. ಹಾಗೇ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಅನ್ನು ಆಹಾರದಲ್ಲಿ ಕಡಿಮೆ ಸೇವಿಸಬೇಕು. ಹೃದಯದ ಆರೋಗ್ಯ ಕಾಪಾಡಲು ಯೋಗ ಮತ್ತು ವ್ಯಾಯಾಮ ಮಾಡಬೇಕು.
ಇದನ್ನೂ ಓದಿ: ಬೊಜ್ಜಿನಿಂದ 'ಕೆಟ್ಟ ಕೊಲೆಸ್ಟ್ರಾಲ್' ಹೆಚ್ಚು; ಹೃದಯ ಸಮಸ್ಯೆಯ ಎಚ್ಚರಿಕೆ