ಗಾಳಿಯಲ್ಲಿರುವ ಸೂಕ್ಷ್ಮ ಮಲಿನಕಾರಕ ಕಣಗಳು ಗಂಭೀರ ಆರೋಗ್ಯ ಅಪಾಯ ಹೆಚ್ಚಿಸುವ ಎಲ್ಲಾ ಸಾಧ್ಯತೆಗಳಿವೆ. ಈ ವಿಚಾರವನ್ನು ಈಗಾಗಲೇ ಅನೇಕ ಅಧ್ಯಯನಗಳು ತಿಳಿಸಿವೆ. ಇದೀಗ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ವಾಯುಮಾಲಿನ್ಯ ಕ್ಯಾನ್ಸರ್, ಹೃದಯಾಘಾತ ಮತ್ತು ಸಾವಿನ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.
2000ರಿಂದ 2023ರವರೆಗೆ ಪ್ರಕಟವಾದ ಅನೇಕ ಅಧ್ಯಯನಗಳನ್ನು ಸಂಶೋಧಕರು ವಿಶ್ಲೇಷಿಸಿದ್ದು, ವಾಯುಮಾಲಿನ್ಯ ಹೃದಯಾಘಾತ, ಪಾರ್ಶ್ವವಾಯು ಮತ್ತು ಕ್ಯಾನ್ಸರ್ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದೆ.
ಸಂಶೋಧಕರು ಗಮನಿಸಿದಂತೆ, ಗಾಳಿಯ ಮಲಿನಕಾರಕ ಕಣಗಳಿಗೆ (ಪಿಎಂ2.5) ತೆರೆದುಕೊಂಡಾಗ ವಿಷಕಾರಿ ಅಂಶವನ್ನು ಹೊರಹಾಕುವ ಮನುಷ್ಯನ ದೇಹದ ಸಾಮರ್ಥ್ಯ ಕುಗ್ಗುತ್ತದೆ. ಇದು ಉರಿಯೂತ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇತ್ತೀಚಿಗೆ ವಾಯುಮಾಲಿನ್ಯ ಹೃದಯ ರೋಗ ಮತ್ತು ಕ್ಯಾನ್ಸರ್ ಮೇಲೆ ಬೀರುವ ಜಂಟಿ ಪರಿಣಾಮದ ಕುರಿತು ಅಧ್ಯಯನ ನಡೆದಿದೆ. ಹೃದಯದ ಕ್ಯಾನ್ಸರ್ ಮೇಲೆ ವಾಯುಮಾಲಿನ್ಯದ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಹಾಗೆಯೇ ಕಡಿಮೆ ಸಮಯದಲ್ಲಿ ಭಾರೀ ಮಾಲಿನ್ಯಕ್ಕೆ ಒಡ್ಡಿಕೊಂಡಾಗ ಹೃದಯ ಕ್ಯಾನ್ಸರ್ ಸಂತ್ರಸ್ತರ ಮೇಲೆ ತ್ವರಿತ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತಿಳಿಸಿದೆ.
ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಹೋಲಿಸಿದಾಗ ಶ್ರೀಮಂತ ದೇಶಗಳಲ್ಲಿ ವಾಯು ಮಾಲಿನ್ಯದಿಂದಾಗುವ ಸಾವಿನ ಅಪಾಯ 100 ಪಟ್ಟು ಅಧಿಕ ಎಂದು ಅಧ್ಯಯನ ಹೇಳುತ್ತದೆ. ಈ ದೇಶಗಳಲ್ಲಿ ಕ್ಯಾನ್ಸರ್ ಸಂಬಂಧಿತ ಸಾವಿನ ಪ್ರಮಾಣ ಶೇ 65ರಷ್ಟಿದ್ದರೆ, ಹೃದಯ ರೋಗದ ಸಾವಿನ ಪ್ರಮಾಣ ಶೇ 70ರಷ್ಟಿದೆ. ಹೃದಯ ಕ್ಯಾನ್ಸರ್ ಅಪಾಯವನ್ನು ಅರ್ಥಮಾಡಿಕೊಳ್ಳುವಲ್ಲಿ ಪರಿಸರದ ಅಂಶಗಳು ಪ್ರಮುಖವಾಗಿದೆ ಎಂದು ಸಂಶೋಧಕರು ಹೇಳಿದ್ದು, ಹೆಚ್ಚಿನ ಅಪಾಯವನ್ನು ಅಂದಾಜಿಸಬಹುದು ಎಂದಿದ್ದಾರೆ.
ವಾಯುಮಾಲಿನ್ಯವು ಜಾಗತಿಕ ಸಮಸ್ಯೆ. ಜಾಗತಿಕವಾಗಿ ಲಕ್ಷಾಂತರ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಉಸಿರಾಟದ ಸಮಸ್ಯೆಯಿಂದ ಹೃದಯದ ರಕ್ತನಾಳದವರೆಗೆ ಹಲವು ದೈಹಿಕ ಆರೋಗ್ಯ ಸಮಸ್ಯೆಯೊಂದಿಗೂ ಇದು ಸಂಬಂಧ ಹೊಂದಿದೆ. ಹಾಗೆಯೇ ಪಿಎಂ 2.5 ಮಟ್ಟ ಖಿನ್ನತೆ, ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳು ಹಾಗೂ ಮಧುಮೇಹದಂತಹ ಚಯಾಪಚಯ ಅಸ್ವಸ್ಥತೆಗಳೊಂದಿಗೆ ಸಂಬಂಧ ಹೊಂದಿದೆ ಎಂದು ಈ ಹಿಂದಿನ ಅಧ್ಯಯನಗಳು ತೋರಿಸಿವೆ.
ಇದನ್ನೂ ಓದಿ: ಭಾರತದಲ್ಲಿ ರಾತ್ರಿ ಹೊತ್ತು ಏರುತ್ತಿದೆ ತಾಪಮಾನ: ನಿದ್ರೆ, ಆರೋಗ್ಯದ ಮೇಲೆ ಆಗ್ತಿದೆ ಗಂಭೀರ ಪರಿಣಾಮ