ನವದೆಹಲಿ: ಪ್ರೋಟಿನ್ಗಳ ಅತಿ ಹೆಚ್ಚು ಸೇವನೆ ಗ್ಯಾಸ್ಟ್ರೊ ಮತ್ತು ಕಿಡ್ನಿ ಸಮಸ್ಯೆಯೊಂದಿಗೆ ಸಂಬಂಧಿಸಿಲ್ಲದಿದ್ದರೂ, ಅಧಿಕ ಮಟ್ಟದ ಕಾರ್ಬೋಹೈಡ್ರೇಟ್ ಸೇವನೆ ದೇಹಕ್ಕೆ ಗಂಭೀರ ಹಾನಿಯನ್ನು ಉಂಟು ಮಾಡುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಭಾರತದಲ್ಲಿ ಪ್ರೋಟಿನ್ ಸೇವನೆ ಸಾಮಾನ್ಯವಾಗಿ ಕಡಿಮೆ ಇದೆ. ಅಧಿಕ ಪ್ರೊಟೀನ್ ಡಯಟ್ ಆರೋಗ್ಯಕರ ಕಿಡ್ನಿಗೆ ಹಾನಿ ಮಾಡುವುದಿಲ್ಲ ಎಂದಿದ್ದಾರೆ.
ಜರ್ನಲ್ ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷಿಯನ್ನಲ್ಲಿ ಪ್ರಕಟವಾದ ದೊಡ್ಡ ವಿಶ್ಲೇಷಣೆ ಪ್ರಕಾರ, ಅಧಿಕ ಪ್ರೋಟಿನ್ ಡಯಟ್ ಕಡಿಮೆ ದೀರ್ಘಾವಧಿ ಕಿಡ್ನಿ ಸಮಸ್ಯೆ(ಸಿಕೆಡಿ)ಯೊಂದಿಗೆ ಸಂಬಂಧ ಹೊಂದಿದೆ. ಈ ಸಂಬಂಧ ನಾನ್ಚಂಗ್ ಯುನಿವರ್ಸಿಟಿ ಸಂಶೋಧಕರು ಅಧ್ಯಯನ ಮಾಡಿದ್ದಾರೆ. ಅಧ್ಯಯನದಲ್ಲಿ ಸಿಕೆಡಿ ಅಪಾಯವೂ ಅಧಿಕ ಮಟ್ಟದ ಸಸದ್ಯ ಅಥವಾ ಪ್ರಾಣಿಗಳ ಪ್ರೋಟಿನ್ ಸೇವನೆಯೊಂದಿಗೆ ಸಂಬಂಧ ಹೊಂದಿದೆ.
ಆಸಿಡ್ ರಿಫ್ಲುಕ್ಸ್ಗೆ ಕಾರಣವಾಗಬಹುದು: ಅಧಿಕ ಕಾರ್ಬೋಹೈಡ್ರೇಟ್ ಡಯಟ್ಗಳು ಆಸಿಡ್ ರಿಫ್ಲುಕ್ಸ್ಗೆ ಕಾರಣವಾಗಬಹುದು. ಅಧಿಕ ಕಾರ್ಬೋ ಹೈಡ್ರೇಟ್ ಆಹಾರವೂ ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಅನಿಯಂತ್ರಣ, ದೀರ್ಘಾವಧಿ ರೋಗಕ್ಕೆ ಕಾರಣವಾಗಬಹುದು ಎಂದು ಮೆಟೊಬಾಲಿಕ್ ಹೆಲ್ತ್ ಕೋಚ್ ಶಶಿಕಾಂತ್ ಅಯ್ಯಂಗಾರ್ ತಿಳಿಸಿದ್ದಾರೆ.
ಶಿಫಾರಸು ಮಾಡಿದ ಪ್ರಮಾಣದ ಪ್ರೋಟಿನ್ ಕಿಡ್ನಿ ಆರೋಗ್ಯಕ್ಕೆ ಯಾವುದೇ ಅಪಾಯವನ್ನು ಉಂಟು ಮಾಡುವುದಿಲ್ಲ ಎಂದು ಹೈದರಾಬಾದ್ನ ಇಂಧ್ರಪ್ರಸ್ಥ ಅಪೋಲೋ ಆಸ್ಪತ್ರೆಯ ವೈದ್ಯರಾದ ಸುಧೀರ್ ಕುಮಾರ್ ಎಕ್ಸ್ನಲ್ಲಿ ತಿಳಿಸಿದ್ದಾರೆ.
18 ವರ್ಷ ಮೇಲ್ಪಟ್ಟವರು ತೂಕಕ್ಕೆ ಅನುಗುಣವಾಗಿ 1 ಗ್ರಾಂ, 1.3 ಗ್ರಾಂ, 1.6ಗ್ರಾಂ ಪ್ರೋಟಿನ್ ಸೇವನೆ ಮಾಡಬಹುದು. ಇದು ಅವರ ಸಾಮಾನ್ಯ, ಸಾಧಾರಣೆ ಮತ್ತು ತೀವ್ರತೆ ದೈಹಿಕ ಚಟುವಟಕೆ ಮೇಲೂ ಅವಲಂಬಿತವಾಗಿದೆ ಎಂದು ಪ್ರಖ್ಯಾತ ನರರೋಗತಜ್ಞರು ತಿಳಿಸಿದ್ದಾರೆ.
ಐಸಿಎಂಆರ್ - ಎನ್ಐಎನ್ ಮಾರ್ಗಸೂಚಿ ಏನು ಹೇಳುತ್ತೆ?: ಇತ್ತೀಚಿಗೆ ಐಸಿಎಂಆರ್ - ಎನ್ಐಎನ್ ಬಿಡುಗಡೆ ಮಾಡಿದ ಮಾರ್ಗಸೂಚಿ ಶಿಫಾರಸು ಮಾಡಿದಂತೆ ಆರೋಗ್ಯಯುತ ಪುರುಷರು ದಿನಕ್ಕೆ ಅವರ ದೇಹದ ಒಂದು ಕೆಜಿ ತೂಕಕ್ಕೆ 0.83 ಗ್ರಾಂನಂತೆ ಮತ್ತು ಮಹಿಳೆಯರು 97.5ರಷ್ಟು ಪ್ರೋಟಿನ್ ಸೇವನೆ ಮಾಡಬಹುದು. ಆದಾಗ್ಯೂ ಬಹುತೇಕ ಭಾರತೀಯರು ಈ ಗುರಿಯನ್ನು ಮುಟ್ಟುವುದು ಬಲು ಅಪರೂಪವಾಗಿದೆ.
ಒಟ್ಟಾರೆ ಸಮತೋಲಿತ ಆಹಾರವೂ ಉತ್ತಮ ಗುಣಮಟ್ಟದ ಮತ್ತು ಪ್ರಮಾಣದ ಪ್ರೋಟಿನ್ ಹೊಂದಿರುತ್ತದೆ. ಆದರೆ, ಅಧಿಕ ಪ್ರೋಟಿನ್ಗಳು ಅಥವಾ ಕಮರ್ಷಿಯಲ್ ಪೂರಕಗಳು ಹಾನಿಕಾರಕವಾಗಬಲ್ಲದು.
ವಯಸ್ಕರು ದೇಹದ ತೂಕದ ಕೆಜಿಗೆ 1-2 ಎಂಜಿ ಪ್ರೋಟಿನ್ ಸೇವನೆ ಮಾಡಬಹುದು. ಇದು ದೈಹಿಕ ಚಟುವಟಿಕೆ, ವಯಸ್ಸು, ಲಿಂಗ ಮತ್ತು ಇತರೆ ಅಂಶವನ್ನು ಆಧಾರಿಸಿದೆ. ಪ್ರಾಣಿಗಳು ಮತ್ತು ಸಸ್ಯಗಳ ಪ್ರೋಟಿನ್ಗಳು ಸ್ವಲ್ಪ ಗುಣಮಟ್ಟದಲ್ಲಿ ಭಿನ್ನವಾಗಿರುತ್ತದೆ. ಈಗಾಗಲೇ ಕಿಡ್ನಿ ಸಮಸ್ಯೆ ಹೊಂದಿರುವವರಲ್ಲಿ ಇದು ಮತ್ತಷ್ಟು ಹಾನಿಕಾರಕವಾಗಬಹುದು ಎಂದಿದ್ದಾರೆ ವೈದ್ಯರು.
ಅಧಿಕ ಪ್ರೊಟೋನ್ ಸೇವನೆ ಅಡ್ಡ ಪರಿಣಾಮಕ್ಕೆ ಕಾರಣವಾಗಿತ್ತದೆ. ಇದರ ಪ್ರಮುಖ ಅಪಾಯ ಎಂದರೆ ಕಿಡ್ನಿ ಹಾನಿ, ವಿಶೇಷವಾಗಿ ಈಗಾಗಲೇ ಕಿಡ್ನಿ ಸಮಸ್ಯೆ ಹೊಂದಿರುವವರಲ್ಲಿ ಇದರ ಅಪಾಯ ಹೆಚ್ಚು. ಅಧಿಕ ಪ್ರೋಟಿನ್ಗಳು ಯುರಿಕ್ ಆಸಿಡ್ ಏರಿಕೆಗೆ ಕಾರಣವಾಗಿ, ಇದು ಕಿಡ್ನಿಯಲ್ಲಿ ಕಲ್ಲು ರೂಪುಗೊಳ್ಳಲು ಕಾರವಾಗಬಹುದು ಪ್ರೋಟಿನ್ ಸಮೃದ್ಧ ಡಯಟ್ ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರೋ ಸಮಸ್ಯೆಗೆ ಕಾರಣವಾಗಬಹುದಾಗಿದೆ ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಎಚ್ಚರ.. ಎಚ್ಚರ.. ಬಾಡಿ ಬಿಲ್ಡಿಂಗ್ಗೆ ಹೆಚ್ಚುವರಿಯಾಗಿ ಪೂರಕ ಪ್ರೋಟೀನ್ ಸೇವಿಸುವುದು ಡೇಂಜರ್; ತಜ್ಞರ ವಾರ್ನಿಂಗ್