ETV Bharat / health

ಭಾರತದ ಈ ರಾಜ್ಯಗಳಲ್ಲಿ ಸ್ತನ ಕ್ಯಾನ್ಸರ್​ ಹೊರೆ ಅಧಿಕ: ಐಸಿಎಂಆರ್​​ ಅಧ್ಯಯನ - Breast Cancer - BREAST CANCER

2025ರ ಹೊತ್ತಿಗೆ ದೇಶದಲ್ಲಿ ಸ್ತನ ಕ್ಯಾನ್ಸರ್​ ಪ್ರಕರಣಗಳು ಗಣನೀಯ ಏರಿಕೆ ಕಾಣಲಿದೆ ಎಂದು ಅಧ್ಯಯನ ತಿಳಿಸಿದೆ.

Breast Cancer burden higher in metro cities especially TN Telangana Karnataka Delhi

author img

By ETV Bharat Karnataka Team

Published : Mar 25, 2024, 11:56 AM IST

ಹೈದರಾಬಾದ್​: ದೇಶದ ಪೂರ್ವ ಮತ್ತು ಈಶಾನ್ಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ದೆಹಲಿಯಲ್ಲಿ ಸ್ತನ ಕ್ಯಾನ್ಸರ್​ ಹೊರೆ ಹೆಚ್ಚಿದೆ ಎಂದು ಐಸಿಎಂಆರ್​ ಅಧ್ಯಯನ ತಿಳಿಸಿದೆ. ಅಷ್ಟೇ ಅಲ್ಲದೇ ಸ್ತನ ಕ್ಯಾನ್ಸರ್​​ ಹೊರೆ 2025ಕ್ಕೆ ಗಣನೀಯ ಏರಿಕೆ ಕಾಣಲಿದೆ ಎಂದು ತಿಳಿಸಿದೆ.

ಈ ತಿಂಗಳಾರಂಭದಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ದೇಶದಲ್ಲಿ 2012ರಿಂದ 2016ರವರೆಗೆ ರಾಜ್ಯ ಮಟ್ಟದಲ್ಲಿ ಸ್ತನ ಕ್ಯಾನ್ಸರ್ ಹೊರೆಯನ್ನು ವರ್ಷಗಳ ನಷ್ಟ ಮತ್ತು ಅಂಗವೈಕಲ್ಯ ಹೊಂದಾಣಿಕೆ ಜೀವನ ವರ್ಷ ಎಂಬ ಆಧಾರದಡಿ ಅಧ್ಯಯನ ಮಾಡಲಾಗಿದೆ. 2016ರಲ್ಲಿ ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್​ ಹೊರೆ ವಯಸ್ಸಿನ ಪ್ರಮಾಣೀಕರಣದ ನಂತರ, 1,00,000 ಮಹಿಳೆಯರಿಗೆ ಅಂಗವೈಕಲ್ಯ ಹೊಂದಾಣಿಕೆಯ ಜೀವನ ವರ್ಷಗಳು 515.4 ಎಂದು ಅಂದಾಜಿಸಲಾಗಿದೆ.

ರಾಜ್ಯ ಮಟ್ಟದ ಈ ಹೊರೆಯ ಮಾಪನ ಹಲವು ವೈವಿಧ್ಯತೆಯನ್ನು ಹೊಂದಿದೆ. ಪೂರ್ವ ಮತ್ತು ಈಶಾನ್ಯ ಪ್ರದೇಶಗಳಿಗೆ ಹೋಲಿಸಿದರೆ ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ದೆಹಲಿ ಹೆಚ್ಚಿನ ಮಟ್ಟದ ಕ್ಯಾನ್ಸರ್​ ಭಾರ ಹೊಂದಿದೆ. ಇದು 2025ರಲ್ಲಿ ಗಣನೀಯ ಹೆಚ್ಚಳ ಕಂಡಿದ್ದು, ಅಂಗವೈಕಲ್ಯ ಹೊಂದಾಣಿಕೆಯ ಜೀವನ ವರ್ಷಗಳು 5.6 ತಲುಪಲಿದೆ ಎಂದು ಐಸಿಎಂಆರ್​ ಹೇಳಿದೆ.

ಅಂಗವೈಕಲ್ಯ ಹೊಂದಾಣಿಕೆಯ ಜೀವನ ವರ್ಷವನ್ನು ರೋಗದ ಒಟ್ಟಾರೆ ಹೊರೆ, ಅನಾರೋಗ್ಯ, ಅಂಗವೈಕಲ್ಯ ಅಥವಾ ಅಕಾಲಿಕ ಸಾವಿನೊಂದಿಗೆ ಲೆಕ್ಕ ಹಾಕಲಾಗಿದೆ. ನಗರ ಪ್ರದೇಶಗಳಿಗೆ ಹೋಲಿಕೆ ಮಾಡಿದಾಗ ವಯಸ್ಸಿನ ಪ್ರಮಾಣೀಕರಣ ಪ್ರಕರಣದ ದರದಲ್ಲಿ ಗ್ರಾಮೀಣ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್​ ಅಭಿವೃದ್ಧಿ ಕಡಿಮೆ ಇದೆ. ಈ ದರ ಮೆಟ್ರೋ ನಗರದಲ್ಲಿ ಜಾಸ್ತಿಯಿದ್ದು, ಭಾರತದ ಇತರೆ ನಗರಗಳಿಗೆ ಹೋಲಿಸಿದಾಗ ಹೈದರಾಬಾದ್​​, ಚೆನ್ನೈ, ಬೆಂಗಳೂರು ದೆಹಲಿಯಲ್ಲಿ ಏರಿಕೆ ಕಂಡಿದೆ.

ಭಾರತದಲ್ಲಿ ಅಂಗವೈಕಲ್ಯ ಹೊಂದಾಣಿಕ ಜೀವನ ವರ್ಷದ ರೋಗದ ಹೊರೆಯು 2025ರ ಹೊತ್ತಿಗೆ 5.6 ಮಿಲಿಯನ್​ ಎಂದು ನಿರೀಕ್ಷಿಸಲಾಗಿದೆ. ಸ್ತನ ಕ್ಯಾನ್ಸರ್​ನಿಂದ ಅಕಾಲಿಕ ಸಾವು 5.3 ಇರಲಿದೆ. 2016ರಲ್ಲಿ ಭಾರತದಲ್ಲಿನ ಮಹಿಳೆಯರ ಸ್ತನ ಕ್ಯಾನ್ಸರ್​​​ ರಾಜ್ಯವಾರು ಹೊರೆಯನ್ನು ರಾಷ್ಟ್ರೀಯ ಕ್ಯಾನ್ಸರ್ ನೋಂದಾವಣೆ (ಎನ್​ಸಿಪಿಆರ್​​) ಕಾರ್ಯಕ್ರಮದ ಅಡಿಯಲ್ಲಿ ದೇಶಾದ್ಯಂತ 28 ಜನಸಂಖ್ಯೆ ಆಧಾರಿತ ಕ್ಯಾನ್ಸರ್ ದಾಖಲಾತಿಗಳ ಡೇಟಾ ಬಳಸಿಕೊಂಡು ಪರಿಶೀಲಿಸಿದೆ.

ಎನ್‌ಸಿಆರ್‌ಪಿ ಅಡಿಯಲ್ಲಿ ಜನಸಂಖ್ಯೆ ಆಧಾರಿತ ಕ್ಯಾನ್ಸರ್ ದಾಖಲಾತಿಗಳ ಡೇಟಾವನ್ನು ಮಾತ್ರ ಅಧ್ಯಯನಕ್ಕೆ ಬಳಕೆ ಮಾಡಲಾಗಿದೆ. ಅದರಲ್ಲೂ ಇವು ನಗರ ಪ್ರದೇಶದ ದತ್ತಾಂಶವಾಗಿದೆ. ಗ್ರಾಮೀಣ ಮಹಿಳೆಯರು ತಮ್ಮ ನಗರ ಪ್ರದೇಶಗಳಿಗಿಂತ ಸ್ತನ ಕ್ಯಾನ್ಸರ್ ಅನ್ನು ಅಭಿವೃದ್ಧಿ ಸಾಧ್ಯತೆ ಕಡಿಮೆ ಮತ್ತು ನಗರ ಮತ್ತು ಮೆಟ್ರೋ ಪ್ರದೇಶಗಳಲ್ಲಿ ಹೈದರಾಬಾದ್, ಚೆನ್ನೈ, ಬೆಂಗಳೂರು ಮತ್ತು ದೆಹಲಿಯಲ್ಲಿ ವಯಸ್ಸಿನ ಪ್ರಮಾಣಿತ ಘಟನೆಗಳ ಪ್ರಮಾಣವು ಹೆಚ್ಚಾಗಿದೆ.

ಸ್ತನ ಕ್ಯಾನ್ಸರ್​​ ಹೊರೆಯಲ್ಲಿ ಸಾಮಾಜಿಕ ಆರ್ಧಿಕ ಅಂಶದ ಕೊಡುಗೆಯೂ ಗಣನೀಯವಾಗಿದ್ದು, ಇದು ಆರೋಗ್ಯ ಸೇವೆ, ತಡೆಗಟ್ಟುವಿಕೆ ಮಾಪನ ಮತ್ತು ಚಿಕಿತ್ಸೆ ಫಲಿತಾಂಶದ ಮೇಲೆ ಪರಿಣಾಮವನ್ನು ಹೊಂದಿದೆ. ಕಡಿಮೆ ಸಾಮಾಜಿಕ ಆರ್ಥಿಕ ಪರಿಸ್ಥಿತಿಯಲ್ಲಿ ಈ ಹೊರೆ ಹೆಚ್ಚಿದೆ. ಔದ್ಯೋಗಿಕ ಮಾನ್ಯತೆ ಮತ್ತು ಆರ್ಥಿಕ ಒತ್ತಡವು ಕ್ಯಾನ್ಸರ್ ಅಪಾಯಗಳನ್ನು ಹೆಚ್ಚಿಸುತ್ತದೆ. ಇದು ಚಿಕಿತ್ಸೆಯ ಲಭ್ಯತೆಯ ಮೇಲೆ ಪರಿಣಾಮ ಬೀರುವ ಜೊತೆಗೆ ಭೌಗೋಳಿಕ ಮತ್ತು ಮಾನಸಿಕ ಅಸಮಾನತೆಗಳು ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತವೆ ಎಂದು ಅಧ್ಯಯನ ತಿಳಿಸಿದೆ. (ಪಿಟಿಐ)

ಇದನ್ನೂ ಓದಿ: ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್​ ಪ್ರಕರಣ ಹೆಚ್ಚಳ: ಪತ್ತೆ ಹೇಗೆ? ರೋಗ ಲಕ್ಷಣಗಳು ಗೊತ್ತೇ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.