ETV Bharat / health

ನಿಮಗೆ ಅತಿಯಾದ ಕೂದಲು ಉದುರುತ್ತಿದೆಯೇ? ನೀವು ಸೇವಿಸುವ ಆಹಾರಗಳಲ್ಲಿ ಈ ವಿಟಮಿನ್ ಕೊರತೆಯೇ ಕಾರಣ! - Hair Loss Causes

author img

By ETV Bharat Health Team

Published : Aug 31, 2024, 1:02 PM IST

Best Foods for Prevent Hair Loss: ಕೂದಲು ಉದುರುವ ಸಮಸ್ಯೆಯನ್ನು ಅನೇಕರು ಎದುರಿಸುತ್ತಿದ್ದಾರೆ. ಕೂದಲು ಉದುರಲು ಹಲವು ಕಾರಣಗಳಿವೆ. ಅದರಲ್ಲೂ ವಿಟಮಿನ್ ಕೊರತೆಯಿಂದ ಕೂದಲು ಹೆಚ್ಚು ಉದುರುತ್ತದೆ ಎನ್ನುತ್ತಾರೆ ವೈದ್ಯರು. ಹಾಗಾದರೆ ಆ ವಿಟಮಿನ್ ಯಾವುದು? ನೀವು ಕೆಲವು ಆಹಾರಗಳನ್ನು ಸೇವಿಸಿದರೆ ಈ ಸಮಸ್ಯೆಯನ್ನು ಸುಲಭವಾಗಿ ಪರಿಹಾರ ಮಾಡಿಕೊಳ್ಳುವುದು ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿಯೋಣ ಬನ್ನಿ.

HAIR FALL PREVENTION FOODS  BEST FOODS FOR PREVENT HAIR LOSS  VITAMIN D FOR HAIR LOSS  BEST HAIR GROWTH FOODS
ಸಾಂದರ್ಭಿಕ ಚಿತ್ರ (ETV Bharat)

Vitamin D Good Medicine for Hair Loss Prevention: ನೀವು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಅದಕ್ಕೆ ಅನುವಂಶಿಕತೆ, ನಿದ್ರೆಯ ಕೊರತೆ, ಒತ್ತಡ ಸೇರಿದಂತೆ ಇತರ ಕಾರಣಗಳಿರಬಹುದು. ಇದೆಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ದೇಹದಲ್ಲಿನ 'ವಿಟಮಿನ್ ಡಿ' ಕೊರತೆ ಕೂಡ ಕೂದಲಿನ ಸಮಸ್ಯೆಗೆ ಮುಖ್ಯ ಕಾರಣ ಎನ್ನುತ್ತಾರೆ ತಜ್ಞ ವೈದ್ಯರು. ದೈನಂದಿನ ಆಹಾರದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಅನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಅಲ್ಲದೇ, ವಿಟಮಿನ್ ಡಿ ಸಮೃದ್ಧವಾಗಿರುವ ಕೆಲವು ಆಹಾರಗಳನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.

ನಾವು ಸೇವಿಸುವ ಆಹಾರವು ಒಟ್ಟಾರೆ ಆರೋಗ್ಯಕ್ಕೆ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಬಹಳ ಮುಖ್ಯವಾಗಿದೆ. ಅದರಲ್ಲೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಡಿ ಪಾತ್ರ ತುಂಬಾ ಮಹತ್ವದ್ದಾಗಿದೆ. ಕೂದಲಿನ ಸಮಸ್ಯೆ ತಡೆಯಲು ದೇಹದಲ್ಲಿ ವಿಟಮಿನ್ ಡಿ (Vitamin D) ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಎನ್ನುತ್ತಾರೆ ವೈದ್ಯರು. ವಿಟಮಿನ್ ಡಿ ಕೊರತೆಯು ವಿಶೇಷವಾಗಿ ಕೂದಲು ಉದುರುವಿಕೆ ಮತ್ತು ಅಲೋಪೆಸಿಯಾಕ್ಕೆ ಕಾರಣವಾಗುತ್ತದೆ ಎಂದು ಅನೇಕ ಅಧ್ಯಯನಗಳಿಂದ (National Library of Medicine Report) ತಿಳಿದು ಬಂದಿದೆ. ಇದರಿಂದ ನಿಮ್ಮ ಕೂದಲು ಬೆಳವಣಿಗೆಯನ್ನು ಉತ್ತೇಜಿಸಲು, ಕೂದಲು ಉದುರುವಿಕೆಯನ್ನು ನಿಯಂತ್ರಿಸಲು, ವಿಟಮಿನ್ ಡಿ ಇರುವ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.

"ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಎಸ್ತಟಿಕ್ ಡರ್ಮಟಾಲಜಿ"ನಲ್ಲಿ ಪ್ರಕಟವಾದ 2014ರ ಅಧ್ಯಯನವು ವಿಟಮಿನ್ ಡಿ ಪೂರೈಕೆಯು ಕೂದಲು ಉದುರುವ ಮಹಿಳೆಯರಲ್ಲಿ ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ ಎಂದು ಕಂಡು ಹಿಡಿದಿದೆ. ಯುಕೆನ ನಾಟಿಂಗ್‌ಹ್ಯಾಮ್ ಯೂನಿವರ್ಸಿಟಿ ಹಾಸ್ಪಿಟಲ್ಸ್ ಎನ್​ಹೆಚ್​ಎಸ್​ ಟ್ರಸ್ಟ್‌ನ ಪ್ರಮುಖ ಚರ್ಮರೋಗ ತಜ್ಞ ಡಾ. ಫಿಯೋನಾ ಜೇನ್ ಬಾತ್-ಹೆಕ್ಸ್ಟಾಲ್ (Fiona Jane Bath-Hextall) ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.

ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳು ಯಾವವು?:

ಮೀನು: ವಿಟಮಿನ್ ಡಿ ವಿಶೇಷವಾಗಿ ಸಾಲ್ಮನ್, ಟ್ಯೂನ್, ಮ್ಯಾಕೆರೆಲ್ ಮತ್ತು ಸಾರ್ಡೀನ್‌ಗಳಂತಹ ಮೀನುಗಳಲ್ಲಿ ಸಮೃದ್ಧವಾಗಿದೆ. ಅಲ್ಲದೆ, ಇವುಗಳಲ್ಲಿರುವ ಕ್ಯಾಲ್ಸಿಯಂ, ಪ್ರೊಟೀನ್, ಫಾಸ್ಪರಸ್ ಇತ್ಯಾದಿ ಇತರ ಪೋಷಕಾಂಶಗಳು ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ.

ಅಣಬೆಗಳು: ಇವುಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಕೂಡ ಇದೆ ಎಂದು ತಜ್ಞರು ಹೇಳುತ್ತಾರೆ. ಇದಲ್ಲದೇ ಬಿ1, ಬಿ2, ಬಿ5, ತಾಮ್ರ ಸೇರಿದಂತೆ ಮುಂತಾದ ಪೋಷಕಾಂಶಗಳೂ ಅಣಬೆಯಲ್ಲಿ ಹೇರಳವಾಗಿವೆ. ಹಾಗಾಗಿ ಇವುಗಳನ್ನು ನಿತ್ಯ ಸೇವಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ಹಾಲು ಮತ್ತು ಮೊಸರು: ದೇಹಕ್ಕೆ ವಿಟಮಿನ್ ಡಿ ಒದಗಿಸಲು ಹಾಲು ಮತ್ತು ಮೊಸರು ತುಂಬಾ ಸಹಕಾರಿ ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿರುವ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ಕಿತ್ತಳೆ ಹಣ್ಣು: ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಡಿ ಸಮೃದ್ಧವಾಗಿದೆ. ಇವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಕೂದಲಿನ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದಲ್ಲದೇ, ಮೊಟ್ಟೆಯ ಹಳದಿ ಲೋಳೆ, ಧಾನ್ಯಗಳು, ಚೀಸ್, ಸೋಯಾ ಹಾಲು, ಓಟ್ಸ್​ನಲ್ಲಿ ಸಹ ವಿಟಮಿನ್ ಡಿ ಸಮೃದ್ಧವಾಗಿದೆ. ಹಾಗಾಗಿ ಇವುಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೂ ದೇಹಕ್ಕೆ ಬೇಕಾದಷ್ಟು ವಿಟಮಿನ್ ಡಿ ಸಿಗುತ್ತದೆ ಎನ್ನುತ್ತಾರೆ ತಜ್ಞರು. ಆಹಾರ ಪದಾರ್ಥಗಳ ಹೊರತಾಗಿ.. ಬೆಳಗ್ಗೆ ಕನಿಷ್ಠ ಹದಿನೈದು ನಿಮಿಷಗಳ ಕಾಲ ಸೂರ್ಯನ ಬೆಳಕಿನಲ್ಲಿ ನಿಂತರೆ ಸಾಕಷ್ಟು ವಿಟಮಿನ್ ಡಿ ಪಡೆಯಬಹುದು ಎಂದು ಹೇಳಲಾಗುತ್ತದೆ. ದೈನಂದಿನ ಆಹಾರದಲ್ಲಿ ವಿಟಮಿನ್ ಡಿ ಇರುವ ಆಹಾರಗಳನ್ನು ಸೇರಿಸುವುದರಿಂದ ಕೂದಲಿನ ಸಮಸ್ಯೆಗಳನ್ನು ತಡೆಯಬಹುದು ಎಂದು ವೈದ್ಯರು ಹೇಳುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್​ಸೈಟ್​ಗೆ ಸಂಪರ್ಕಿಸಬಹುದು: (National Library of Medicine Report) : https://pubmed.ncbi.nlm.nih.gov/34553483/

ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.