ETV Bharat / health

ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ಉಪ್ಪುನೀರು ಸೇವಿಸಿದ್ರೆ ಆರೋಗ್ಯಕ್ಕೆ ಅಚ್ಚರಿಯ ಲಾಭ! - Warm Salt Water Benefits - WARM SALT WATER BENEFITS

Warm Salt Water Benefits: ಆರೋಗ್ಯದ ಪ್ರಯೋಜನಗಳಿಗಾಗಿ ಅನೇಕ ಜನರು ಬೆಳಗ್ಗೆ ಸಾಮಾನ್ಯ ನೀರು ಮತ್ತು ಬೆಚ್ಚಗಿನ ನೀರನ್ನು ಕುಡಿಯುತ್ತಾರೆ. ಇದರ ಜೊತೆಗೆ ಪ್ರತಿನಿತ್ಯ ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಚಿಟಿಕೆ ಉಪ್ಪು ಹಾಕಿ ಕುಡಿಯುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತಾರೆ ತಜ್ಞರು. ಈ ಬಗೆಗಿನ ಸಂಪೂರ್ಣ ವಿವರಗಳನ್ನು ಅರಿತುಕೊಳ್ಳೋಣ..

WARM SALT WATER USES  BENEFITS OF WARM SALT WATER  WARM SALT WATER GOOD FOR HEALTH  WARM SALT WATER HEALTH BENEFITS
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Sep 2, 2024, 12:15 PM IST

Benefits of Drinking Warm Salt Water on Empty Stomach: ನಾವು ಆರೋಗ್ಯವಾಗಿರಲು ಬಯಸಿದರೆ ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಮುಖ್ಯವಾಗಿದೆ. ವಾಸ್ತವವಾಗಿ, ನೀರು ಕುಡಿಯುವುದರಿಂದ ನಿಮಗೆ ಅನೇಕ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ. ಈ ಕ್ರಮದಲ್ಲಿ ಆರೋಗ್ಯದ ಪ್ರಯೋಜನಗಳಿಗಾಗಿ ಕೆಲವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯುತ್ತಾರೆ. ಹಾಗೆಯೇ.. ಕೆಲವರು ಬಿಸಿನೀರಿನೊಂದಿಗೆ ಜೇನುತುಪ್ಪ ಮತ್ತು ನಿಂಬೆರಸ ಸೇರಿಸಿ ಕುಡಿಯುತ್ತಾರೆ. ಅದೂ ಅಲ್ಲದೇ.. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚನೆಯ ನೀರಿನಲ್ಲಿ ಚಿಟಿಕೆ ಉಪ್ಪು ಹಾಕಿ ಕುಡಿದರೂ ಅತ್ಯುತ್ತಮವಾದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತಾರೆ ತಜ್ಞರು. ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ಉಪ್ಪುನೀರು ಸೇವಿಸಿದರೆ ಆರೋಗ್ಯಕ್ಕೆ ದೊರೆಯುವ ಲಾಭಗಳೇನು ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿದುಕೊಳ್ಳೋಣ.

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ: ಜೀರ್ಣಾಂಗವ್ಯೂಹದ ಆರೋಗ್ಯಕ್ಕೆ ಬೆಚ್ಚಗಿನ ಉಪ್ಪು ನೀರು ತುಂಬಾ ಪ್ರಯೋಜನಕಾರಿ. ನಿರ್ದಿಷ್ಟವಾಗಿ ಹೇಳುವುದಾದರೆ, ಇದು ಹೊಟ್ಟೆಯಲ್ಲಿ ಕರುಳನ್ನು ಚಲಿಸುವಂತೆ ಮಾಡುತ್ತದೆ. ಮತ್ತು ಸರಾಗವಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದಲ್ಲದೆ, ಇದು ವಾಯು ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸುತ್ತೆ: ಉಪ್ಪು ಸೋಡಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್‌ನಂತಹ ಪ್ರಮುಖ ಖನಿಜಗಳನ್ನು ಹೊಂದಿರುತ್ತದೆ. ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಅದು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ.. ಪ್ರತಿದಿನ ಒಂದು ಲೋಟ ಬೆಚ್ಚಗಿನ ಉಪ್ಪು ನೀರನ್ನು ಕುಡಿಯುವುದರಿಂದ ಈ ಖನಿಜಗಳನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಇದು ಚಯಾಪಚಯ ಕ್ರಿಯೆಯು ಸರಾಗವಾಗಿ ನಡೆಯಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

2018 ರಲ್ಲಿ "ಜರ್ನಲ್ ಆಫ್ ಆಯುರ್ವೇದ ಮತ್ತು ಇಂಟಿಗ್ರೇಟಿವ್ ಮೆಡಿಸಿನ್" ನಲ್ಲಿ ಪ್ರಕಟವಾದ ಅಧ್ಯಯನವು ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬೆಚ್ಚಗಿನ ಉಪ್ಪು ನೀರನ್ನು ಕುಡಿಯುವುದರಿಂದ ಎಲೆಕ್ಟ್ರೋಲೈಟ್ ಸಮತೋಲನವನ್ನು ಸುಧಾರಿಸುತ್ತದೆ ಎಂದು ಕಂಡುಹಿಡಿಯಲಾಗಿದೆ. ಈ ಸಂಶೋಧನೆಯಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಮುಖ ಆಯುರ್ವೇದ ತಜ್ಞ ಡಾ. ಅಶೋಕ್ ಕುಮಾರ್ ಭಾಗವಹಿಸಿದ್ದರು.

ದೇಹವನ್ನು ಶುದ್ಧೀಕರಿಸುತ್ತೆ: ಬೆಚ್ಚಗಿನ ಉಪ್ಪು ನೀರು ಉತ್ತಮ ನೈಸರ್ಗಿಕ ನಿರ್ವಿಶೀಕರಣವಾಗಿ ಕಾರ್ಯನಿರ್ವಹಿಸುತ್ತದೆ. ಅದೇನೆಂದರೆ, ಉಪ್ಪಿನಲ್ಲಿರುವ ಖನಿಜಾಂಶಗಳು ದೇಹವನ್ನು ಕಲ್ಮಶ ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕುವ ಮೂಲಕ ದೇಹವನ್ನು ಶುದ್ಧೀಕರಿಸಲು ಮತ್ತು ನಿರ್ವಿಷಗೊಳಿಸಲು ತುಂಬಾ ಸಹಕಾರಿ. ಇದು ಚರ್ಮಕ್ಕೆ ಹಾಗೂ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ವೈದ್ಯರು ಹೇಳುತ್ತಾರೆ.

ದೇಹದ ತೇವಾಂಶ ಕಾಪಾಡಲು ಸಹಾಯ ಮಾಡುತ್ತೆ: ಬೆಚ್ಚಗಿನ ಉಪ್ಪು ನೀರು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲೂ ರಾತ್ರಿ ಮಲಗುವಾಗ ಅಂದ್ರೆ, ಎಂಟು ಗಂಟೆಗಳವರೆಗೆ ನೀರು ಕುಡಿಯದವರ ಸಂಖ್ಯೆಯೇ ಹೆಚ್ಚು. ಇಂತಹ ಸಮಯದಲ್ಲಿ ಬೆಳಗ್ಗೆ ಬೆಚ್ಚಗಿನ ಉಪ್ಪು ನೀರನ್ನು ಕುಡಿಯುವುದು ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. ಎಲೆಕ್ಟ್ರೋಲೈಟ್‌ಗಳು ಸಮತೋಲನದಲ್ಲಿರುತ್ತವೆ. ಮತ್ತು ದೇಹವು ನಿರ್ಜಲೀಕರಣಗೊಳ್ಳುವುದಿಲ್ಲ ಎನ್ನುತ್ತಾರೆ.

ಚರ್ಮದ ಆರೋಗ್ಯಕ್ಕೆ ಒಳ್ಳೆಯದು: ಬೆಚ್ಚಗಿನ ಉಪ್ಪು ನೀರು ದೇಹದಿಂದ ವಿಷವನ್ನು ಹೊರಹಾಕುವ ಮೂಲಕ ಚರ್ಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಮೊಡವೆಗಳಂತಹ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಚರ್ಮವು ಉತ್ತಮ ಹೊಳಪನ್ನು ಪಡೆಯುತ್ತದೆ.

ಉಪ್ಪು ಆರೋಗ್ಯಕ್ಕೆ ಕೆಟ್ಟದ್ದು. ಆದರೆ, ದೈನಂದಿನ ದೇಹದ ಅವಶ್ಯಕತೆಗಳಿಗೆ ಸ್ವಲ್ಪ ಉಪ್ಪು ಸೇವನೆ ಅಗತ್ಯ. ಇಲ್ಲವಾದರೆ.. ಹಲವು ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಅದರ ಭಾಗವಾಗಿ ದೇಹಕ್ಕೆ ಬೇಕಾದಷ್ಟು ಉಪ್ಪನ್ನು ಪಡೆಯಲು ಇದು ತುಂಬಾ ಉಪಯುಕ್ತವಾಗಿದೆ ಎಂದು ಹೇಳಲಾಗುತ್ತದೆ. ಹಾಗೆಯೇ, ಹೆಚ್ಚು ಉಪ್ಪು ತೆಗೆದುಕೊಳ್ಳಬೇಡಿ. ನೀವು ತೆಗೆದುಕೊಳ್ಳುವ ಚಿಟಿಕೆ ಉಪ್ಪು ಕೂಡ ಉತ್ತಮ ಗುಣಮಟ್ಟದ್ದಾಗಿರಬೇಕು ಎನ್ನುತ್ತಾರೆ ತಜ್ಞರು.

ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.