Benefits of Bajra in Kannada: ಆರೋಗ್ಯಕರ ಆಹಾರಗಳಲ್ಲಿ ಸಜ್ಜೆ ಕೂಡ ಒಂದು. ಇವುಗಳಲ್ಲಿ ಬಿ ಕಾಂಪ್ಲೆಕ್ಸ್ ವಿಟಮಿನ್, ವಿಟಮಿನ್ ಇ, ಖನಿಜಾಂಶಗಳಾದ ಫಾಸ್ಫರಸ್, ಮೆಗ್ನೀಷಿಯಂ, ಸತು ಮತ್ತು ನಾರಿನಂಶ ಹೇರಳವಾಗಿದ್ದು, ಇವು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಸಂಸ್ಕರಿಸಿದ ಆಹಾರ ಸೇವಿಸುವುದರಿಂದ ಹೆಚ್ಚು ಕಾಲ ಹಸಿವಿನಿಂದ ಬಳಲುತ್ತೇವೆ. ಆದರೆ, ಸಜ್ಜೆ ಸೇವನೆ ಮಾಡುವುದರಿಂದ ಏನು ಪ್ರಯೋಜನ? ತೂಕ ಇಳಿಸಿಕೊಳ್ಳಲು ಬಯಸುವವರು ಸಜ್ಜೆಯನ್ನು ಹೇಗೆ ಸೇವಿಸಬೇಕು ಹಾಗೂ ಸಜ್ಜೆಯಿಂದ ಲಭಿಸುವ ಪ್ರಯೋಜನಗಳೇನು ಎಂಬುದರ ಕುರಿತು ಖ್ಯಾತ ಆಹಾರ ತಜ್ಞೆ ಡಾ.ಶ್ರೀಲತಾ ವಿವರಿಸಿದ್ದಾರೆ.
ಗ್ಲುಟನ್ ಮುಕ್ತ: ಸಾಮಾನ್ಯವಾಗಿ ಹೆಚ್ಚಿನ ಧಾನ್ಯಗಳು ಅಂಟಿನ ಗುಣ ಹೊಂದಿರುತ್ತವೆ. ಆದರೆ, ಕೆಲವು ಧಾನ್ಯಗಳು ಗ್ಲುಟನ್ ಮುಕ್ತ (ಅಂಟು ಮುಕ್ತ) ಗುಣ ಹೊಂದಿರುವುದಿಲ್ಲ. ಹೆಚ್ಚಿನ ಜನರಿಗೆ ಗ್ಲುಟನ್ ಹೊಂದಿರುವ ಆಹಾರದಿಂದ ಯಾವುದೇ ಹಾನಿ ಇಲ್ಲ. ಆದರೆ, ಕೆಲವರಿಗೆ ಇದು ದೇಹಕ್ಕೆ ಸೂಕ್ತವಲ್ಲ. ಅವರಿಗೆ ಗ್ಲುಟನ್ ಅಲರ್ಜಿ ಇದೆ. ಆಗ ಕೆಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದರೆ, ಸಜ್ಜೆ ಗ್ಲುಟನ್ ಮುಕ್ತವಾಗಿದೆ. ಹಾಗಾಗಿ ಇದನ್ನು ಎಲ್ಲರೂ ತಿನ್ನಬಹುದು.
ತೂಕ ಹೆಚ್ಚಾಗುವುದನ್ನು ನಿಯಂತ್ರಿಸುತ್ತೆ: ಸಜ್ಜೆ ಹೆಚ್ಚಿನ ಫೈಬರ್ ಹೊಂದಿರುತ್ತದೆ. ಅದು ನೀರಿನಲ್ಲಿ ಅಥವಾ ಹೊಟ್ಟೆಯ ದ್ರವಗಳಲ್ಲಿ ಸುಲಭವಾಗಿ ಕರಗುವುದಿಲ್ಲ. ಆದ್ದರಿಂದ ಇವುಗಳ ನಿಯಮಿತ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಲ್ಲದೇ ನಾರಿನಂಶ ಹೆಚ್ಚಿರುವುದರಿಂದ ಸ್ವಲ್ಪ ತಿಂದರೂ ಹೊಟ್ಟೆ ತುಂಬುತ್ತದೆ. ಇದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು.
ಸಜ್ಜೆ ಹಿಟ್ಟು ಜರಡಿ ಹಿಡಿಯದಲೇ ಬಳಸಿ: ಅನೇಕ ಜನರು ಸಜ್ಜೆಯ ಹಿಟ್ಟನ್ನು ಜರಡಿ ಹಿಡಿದು ಬಳಸುತ್ತಾರೆ. ಇದನ್ನು ಮಾಡಬೇಡಿ. ಜರಡಿ ಹಿಡಿದು ಸಜ್ಜೆ ಹಿಟ್ಟನ್ನು ಬಳಸುವುದರಿಂದ ಕೆಲವು ಜೀವಸತ್ವಗಳು, ಖನಿಜಗಳು ನಮಗೆ ಲಭಿಸುವುದಿಲ್ಲ. ಹಾಗಾಗಿ ಜರಡಿ ಹಿಡಿಯದೇ ಹಿಟ್ಟನ್ನು ಬಳಸಬೇಕು.
ಮೊಳಕೆ ರೂಪದಲ್ಲಿ ಸೇವಿಸಬಹುದು: ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಸಜ್ಜೆಯನ್ನು ಮೊಳಕೆ ರೂಪದಲ್ಲಿಯೂ ಸೇವಿಸಿಬಹುದು. ಮೊಳಕೆಯೊಡೆದ ಸಜ್ಜೆಯನ್ನು ಕೆಲವು ಬೇಯಿಸಿದ ತರಕಾರಿಗಳು ಮತ್ತು ಬಟಾಣಿಗಳೊಂದಿಗೆ ಒಟ್ಟಿಗೆ ಸೇವಿಸಬಹುದು. ಈ ರೀತಿಯಾಗಿ ಸೇವಿಸುವುದರಿಂದ ಪೋಷಕಾಂಶಗಳು ದ್ವಿಗುಣವಾಗುತ್ತವೆ. ಇದನ್ನೂ ಇಡ್ಲಿ ಮತ್ತು ದೋಸೆಯ ಹಿಟ್ಟಿನಲ್ಲಿ ಮಿಕ್ಸ್ ಮಾಡಿ ಸೇವಿಸಬಹುದು.
''ತೂಕ ಇಳಿಸಲು ಬಯಸುವವರಿಗೆ ಸಜ್ಜೆ ಉತ್ತಮ ಆಹಾರವಾಗಿದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ತೂಕ ಇಳಿಸಿಕೊಳ್ಳಬಹುದು. ಹಾಗೆಯೇ ಸಜ್ಜೆಯ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಕಾರಣ ಸಕ್ಕರೆ ಪೀಡಿತರು ತಿನ್ನಬಹುದು. ಸಜ್ಜೆಯಿಂದ ಮಾಡಿದ ಆಹಾರವನ್ನು ಸೇವಿಸಿದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಧಾನವಾಗಿ ಕಡಿಮೆ ಮಾಡುತ್ತದೆ. ದೋಸೆ, ಅನ್ನ, ಚಪಾತಿ ಹೀಗೆ ಯಾವುದರ ಜೊತೆಗೆ ಸಜ್ಜೆಯನ್ನು ದಿನವೂ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು."
-ಡಾ.ಶ್ರೀಲತಾ, ಆಹಾರ ತಜ್ಞೆ
ಹೃದಯಕ್ಕೆ ಒಳ್ಳೆಯದು: ತರಕಾರಿಗಳಲ್ಲಿ ಮೆಗ್ನೀಸಿಯಮ್ ತುಂಬಾ ಹೆಚ್ಚಾಗಿದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಲ್ಲದೇ ಮೆಗ್ನೀಸಿಯಮ್ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ ಮತ್ತು ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
- ಸಜ್ಜೆಯಲ್ಲಿರುವ ಫ್ಲೇವನಾಯ್ಡ್‌ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
- ಚಳಿಗಾಲದಲ್ಲಿ ಸಜ್ಜೆಯಿಂದ ತಯಾರಿಸಿದ ಆಹಾರ ಸೇವಿಸುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು.
- ಸಜ್ಜೆ ಹೆಚ್ಚು ತಿನ್ನುವುದರಿಂದ ಆರೋಗ್ಯಕ್ಕೆ ಉಪಯೋಗವಾಗಿದ್ದು, ಜೊತೆಗೆ ಸಂಸ್ಕರಿಸಿದ ಆಹಾರ, ಬ್ರೆಡ್ ಮತ್ತು ಕೇಕ್ ಸೇವನೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಸಜ್ಜೆಯು ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
- ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸಜ್ಜೆ ಅತ್ಯುತ್ತಮ ಆಹಾರವಾಗಿದೆ. ಜೊತೆಗೆ ತೂಕ ಹೆಚ್ಚಾಗುವುದನ್ನು ನಿಯಂತ್ರಿಸುತ್ತದೆ ಎಂದು ಡಾ.ಶ್ರೀಲತಾ ಸಲಹೆ ನೀಡುತ್ತಾರೆ.
ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.