ಬೆಂಗಳೂರು: ಬೇಸಿಗೆಯಲ್ಲಿ ತಾಪ ಹೆಚ್ಚಾದಂತೆ ದೇಹದಲ್ಲಿ ನೀರಿನ ಅಂಶದ ಕೊರತೆ ಕಾಡುತ್ತದೆ. ಈ ಹಿನ್ನೆಲೆಯಲ್ಲಿ ಈ ಋತುಮಾನದಲ್ಲಿ ಹೆಚ್ಚು ಹೈಡ್ರೇಟ್ ಆಗಿರುವುದು ಅಗತ್ಯ. ಬೇಸಿಗೆಯಲ್ಲಿ ನೀರಿನಾಂಶ ಹೆಚ್ಚಿರುವ ಪೋಷಕಾಂಶ ಭರಿತ ಹಣ್ಣುಗಳ ಸೇವನೆಗೆ ಆದ್ಯತೆ ನೀಡಬೇಕು. ನೀರಿನ ಅಂಶ ಹೆಚ್ಚಿರುವ ತರಕಾರಿ ಮತ್ತು ಹಣ್ಣುಗಳು ನಿರ್ಜಲೀಕರಣ ಸಮಸ್ಯೆ ತಪ್ಪಿಸುವ ಜೊತೆಗೆ ಆರೋಗ್ಯಯುತವಾಗಿರಲು ಸಹಾಯ ಮಾಡುತ್ತದೆ. ಅಂತಹ ಹಣ್ಣುಗಳ ಪಟ್ಟಿ ಇಲ್ಲಿದೆ.
ಕಲ್ಲಂಗಡಿ: ಬೇಸಿಗೆಯಲ್ಲಿ ಅತ್ಯಂತ ಜನಪ್ರಿಯವಾಗಿರುವ ಹಣ್ಣು ಇದಾಗಿದೆ. ಇದು ರುಚಿ ಜೊತೆಗೆ ಪೋಷಕಾಂಶವನ್ನು ಹೊಂದಿದೆ. ಇದರಲ್ಲಿ ಶೇ 90ರಷ್ಟು ನೀರಿನಾಂಶ ಇರುತ್ತದೆ. ಹೃದಯದ ಆರೋಗ್ಯ ಕಾಪಾಡಲು, ತ್ವಚೆಯಲ್ಲಿ ಉಂಟಾಗುವ ಅವಧಿಪೂರ್ವ ಸುಕ್ಕುಗಳಿಂದ ತಪ್ಪಿಸಿಲು ಇದು ಸಹಾಯ ಮಾಡುತ್ತದೆ. ಇದರಲ್ಲಿನ ಅಮಿನೋ ಆಮ್ಲವೂ ರೋಗ ನಿರೋಧಕ ವ್ಯವಸ್ಥೆಗೆ ಸಹಾಯ ಮಾಡುತ್ತದೆ.
ಸ್ಟ್ರಾಬೆರಿ: ಅಧಿಕ ಮಟ್ಟದ ಫ್ಲವೊನೊಯ್ಡ್ಸ್,ಹೈತೊನ್ಯೂಟ್ರಿಯೆಂಟ್ಸ್, ಫೈಬರ್, ವಿಟಮಿನ್ ಸಿ, ಮ್ಯಾಗನಿಸ್, ಪಿಲಾಟ್, ಪೋಟಾಶಿಯಂ ಅನ್ನು ಇದು ಹೊಂದಿದ್ದು, ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ. ಇದರಲ್ಲಿ ಊರಿಯುತ ವಿರೋಧಿ ಶಕ್ತಿ ಇದ್ದು, ಇದು ತ್ವಚೆ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಬೇಸಿಗೆ ಸಮಯದಲ್ಲಿನ ಆರೋಗ್ಯ ಪರಿಸ್ಥಿತಿ ಎದುರಿಸಲು ಇದು ಸಹಾಯ ಮಾಡುತ್ತದೆ.
ಕಿತ್ತಳೆ: ದೇಹವನ್ನು ಹೈಡ್ರೇಟ್ ಮತ್ತು ಚೈತನ್ಯ ನೀಡುವ ಹಣ್ಣು ಇದಾಗಿದೆ, ವರ್ಕ್ಔಟ್ ವೇಳೆ ಈ ಹಣ್ಣು ಸೇವನೆ ಅವಶ್ಯ. ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಹೃದಯದ ಕಾರ್ಯಾಚರಣೆ ವೃದ್ಧಿಸಲು, ತ್ವಚೆ ಆರೋಗ್ಯ ಸುಧಾರಣೆ ಮತ್ತು ವಿಟಮಿನ್ ಸಿ ಸೇರಿದಂತೆ ಅನೇಕ ಪ್ರಯೋಜನಗಳನ್ನು ಇದು ಹೊಂದಿದೆ.
ಮಸ್ಕ್ಮೆಲನ್ (ಕರಬೂಜ ಹಣ್ಣು): ಈ ಹಣ್ಣು ದೇಹಕ್ಕೆ ಹೊರೆಯಾಗುವ ಯಾವುದೇ ಕ್ಯಾಲೋರಿಯನ್ನು ನೀಡದೇ ದೇಹದಲ್ಲಿ ನೀರಿನಾಂಶ ಕಾಪಾಡುವ ಜೊತೆಗೆ ಆರೋಗ್ಯಯುತವಾಗಿ ಇಡುವಲ್ಲಿ ಇದು ಸಹಾಯ ಮಾಡುತ್ತದೆ. ಇದರಲ್ಲೂ ಕೂಡ ಶೇ 90ರಷ್ಟು ನೀರಿನಾಂಶವಿದೆ.
ಲಿಚ್ಚಿ: ಅತಿ ಹೆಚ್ಚು ನೀರಿನಾಂಶ ಇರುವ ಈ ಹಣ್ಣು ಕೂಡ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಬೇಸಿಗೆ ವೇಳೆಯಲ್ಲಿ ಹೆಚ್ಚು ನೀರು ಕುಡಿಯುವ ವ್ಯಕ್ತಿ ನೀವಾಗಿರದಿದ್ದರೆ ಲಿಚ್ಚಿಯನ್ನು ಸೇವಿಸಬಹುದು. ಇದರಲ್ಲಿ ತಂಪು ಮಾಡುವ ಅಂಶ ಇದ್ದು, ದೇಹದ ತಾಪಮಾನವನ್ನು ನಿಯಂತ್ರಿಸುತ್ತದೆ. ಇದನ್ನು ಜ್ಯೂಸ್ ಅಥವಾ ನೇರವಾಗಿ ಸೇವಿಸಬಹುದು.
ಇದನ್ನೂ ಓದಿ: ಇಂಟರ್ಮಿಟ್ಟೆಂಟ್ ಫಾಸ್ಟಿಂಗ್ ಡಯಟ್ನಿಂದ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನವಿಲ್ಲ; ಕಾರಣ ಇದು