ETV Bharat / health

ಈ ಅಡುಗೆ ಎಣ್ಣೆ ಬಳಕೆ ಮಾಡುವ ಮುನ್ನ ಇರಲಿ ಎಚ್ಚರ; ಏಕೆಂದರೆ? - ಈ ಅಡುಗೆ ಎಣ್ಣೆ ಬಳಕೆ ಮಾಡುವ

ಅಡುಗೆ ಎಣ್ಣೆಯಲ್ಲಿನ ಕೆಲವು ಅಂಶಗಳು ರಾಸಾಯನಿಕ ಮಾಲಿನ್ಯಕಾರಕಗಳಾಗಿದ್ದು, ಆರೋಗ್ಯಕ್ಕೆ ಹಾನಿಯನ್ನು ಮಾಡಬಹುದು. ಈ ಹಿನ್ನೆಲೆಯಲ್ಲಿ ಎಚ್ಚರವಹಿಸುವುದು ಅಗತ್ಯ ಎಂದು ವೈದ್ಯರು ತಿಳಿಸಿದ್ದಾರೆ.

be carefull using these contaminated cooking oil

author img

By IANS

Published : Feb 12, 2024, 11:46 AM IST

ನವದೆಹಲಿ: ಗ್ಲೈಸಿಡಿಲ್ ಎಸ್ಟರ್‌ಗಳು (ಜಿಇ) ಮತ್ತು 3 ಮೊನೊಕ್ಲೋರೋಪ್ರೊಪೇನ್-1,2 ಡಯೋಲ್ ಎಸ್ಟರ್‌ಗಳ (3-ಎಂಸಿಪಿಡಿ) ನಂತಹ ಕಾರ್ಸಿನೋಜೆನಿಕ್ ಮಾಲಿನ್ಯಕಾರಕ ಇರುವ ಅಡುಗೆ ಎಣ್ಣೆಯನ್ನು ಬಳಕೆ ಮಾಡದಿರುವುದು ಉತ್ತಮ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಸಸ್ಯಾಧಾರಿತ ಎಣ್ಣೆಯಲ್ಲಿನ ಜಿಇ ಮತ್ತು 3 ಎಂಸಿಪಿಡಿ ಮಟ್ಟ ಕಡಿಮೆ ಮಾಡುವುದು ಜಾಗತಿಕ ಸವಾಲಾಗಿದೆ. ಇದು ಜಗತ್ತಿನಾದ್ಯಂತ ಆಹಾರ ಉದ್ಯಮ ಮತ್ತು ತೈಲ ಸಂಸ್ಕರಣಾಗಾರಗಳ ಮೇಲೆ ಪರಿಣಾಮ ಬೀರುವ ನಿರ್ಣಾಯಕ ಸಮಸ್ಯೆಯಾಗಿದೆ.

ಕೈಗಾರಿಕಾ ಸಂಸ್ಕರಣಾ ಪ್ರಕ್ರಿಯೆಯಲ್ಲಿ ಬಣ್ಣ ಅಥವಾ ವಾಸನೆಗಳನ್ನು ತೊಡೆದು ಹಾಕಲು ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ ಜಿಇ ಮತ್ತು 3ಎಂಸಿಪಿಡಿ ತೈಲಗಳಲ್ಲಿ ರೂಪುಗೊಳ್ಳುತ್ತದೆ. ಈ ರೀತಿಯ ಸಾಂದ್ರತೆಗಳು ಅತಿಯಾಗಿ ಪಾಮ್​ ಎಣ್ಣೆ ಮತ್ತು ಪಾಮ್​ ಓಲಿನ್​ ಎಣ್ಣೆ, ಸಂಸ್ಕೃತಿಸಿದ ಸಸ್ಯ ಎಣ್ಣೆಯಲ್ಲಿ ಈ ಮಾಲಿನ್ಯಕಾರಕ ಇರುತ್ತದೆ. ಉದಾಹರಣೆ ಕುಸುಬೆ, ತೆಂಗಿನಕಾಯಿ, ಸೂರ್ಯಕಾಂತಿ, ಅಕ್ಕಿ ಹೊಟ್ಟು, ಸೋಯಾಬೀನ್ ಎಣ್ಣೆ, ಮೀನಿನ ಎಣ್ಣೆಯಲ್ಲಿ ಇರುತ್ತದೆ.

ಇಂತಹ ಎಣ್ಣೆಯನ್ನು ಹಲವು ಅಡುಗೆ ವಿಧಾನದಲ್ಲಿ ಅಂದರೆ, ಕರೆಯಲು, ಬೇಯಿಸಲು, ಗ್ರಿಲ್ಲಿಂಗ್​ ಮತ್ತು ರೋಸ್ಟಿಂಗ್​ ವಿಧಾನದಲ್ಲಿ ಬಳಕೆ ಮಾಡಿದಾಗ ಇದರಲ್ಲಿನ ಕೆಲವು ರಾಸಾಯನಿಕ ಅಂಶಗಳು ಎಣ್ಣೆಯಿಂದ ನೈಸರ್ಗಿಕವಾಗಿ ಆಹಾರದಲ್ಲಿ ಸೇರಿ, ಆರೋಗ್ಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ತೋರಿಸಿದ್ದಾರೆ.

ಭಾರತದಲ್ಲಿ ಕ್ಯಾನ್ಸರ್​ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಈ ನಿಟ್ಟಿನಲ್ಲಿ ಯುರೋಪ್​ನಲ್ಲಿ ಮಿತಿ ಹೇರಿದ ರೀತಿಯ ಕ್ರಮಕ್ಕೆ ಇಲ್ಲೂ ಮುಂದಾಗಬೇಕು ಎಂದು ಕೆಲವು ಆರೋಗ್ಯ ತಜ್ಞರು ಕರೆ ನೀಡಿದ್ದಾರೆ. ಭಾರತದಲ್ಲಿ ಕ್ಯಾನ್ಸರ್​ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ನಿಟ್ಟಿನಲ್ಲಿ ಜಿಇ ಮತ್ತು 3ಎಂಸಿಪಿಡಿಯಂತಹ ಕಾರ್ಸಿನೋಜೆನಿಕ್​ ಮಾಲಿನ್ಯ ಹೊಂದಿರುವ ಅಡುಗೆ ಎಣ್ಣೆಗಳ ಕುರಿತು ತಿಳಿಸಿ ಹೇಳಬೇಕಿದೆ. ಇದರಲ್ಲಿ ಮಾಲಿನ್ಯಕಾರಕಗಳು ದೀರ್ಘಾವಧಿ ಕ್ಯಾನ್ಸರ್​ಗೆ ಕಾರಣವಾಗಬಹುದು ಎಂದು ಗುರುಗ್ರಾಮದ ಫೋರ್ಟಿಸ್​ ಮೆಮೋರಿಯಲ್​ ರಿಸರ್ಚ್​​ ಇನ್ಸುಟಿಟ್ಯೂಟ್​​ನ ಹೆಮಟೋಲಾಜಿ ವಿಭಾಗ ಪ್ರಧಾನ ನಿರ್ದೇಶಕರಾದ ರಾಹುಲ್​ ಭಾರ್ಗವ ತಿಳಿಸಿದ್ದಾರೆ.

ಭಾರತದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್​ ವ್ಯಾಪಕವಾಗಿ ಬಳಕೆಯಾಗುತ್ತಿರುವ ಅಡುಗೆಯೊಂದಿಗೆ ಸಂಬಂಧ ಹೊಂದಿದೆ. ಈ ನಿಟ್ಟಿನಲ್ಲಿ ಸರ್ಕಾರದ ಸಂಸ್ಥೆ ಮತ್ತು ಎಫ್​ಎಸ್​ಎಸ್​ಎಐ ದೇಶದಲ್ಲಿ ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕಿದೆ. ಎಣ್ಣೆಯ ಪ್ಯಾಕೆಟ್​​ಗಳ ಲೇಬಲ್​ ಮೇಲೆ ಜಿಇ ಮತ್ತು 3 ಎಂಸಿಪಿಡಿ ಮಿತಿ ಪ್ರದರ್ಶಿಸುವ ಮೂಲಕ ಆರೋಗ್ಯ ಸುರಕ್ಷತೆ ಆಯ್ಕೆಯನ್ನು ಗ್ರಾಹಕರು ನಡೆಸಲು ನಿರ್ಣಾಯಕರಾಗುತ್ತಾರೆ.

2016 ರಲ್ಲಿ, ಯುರೋಪಿಯನ್ ಆಹಾರ ಸುರಕ್ಷಾ ಪ್ರಾಧಿಕಾರ (ಇಎಫ್​ಎಸ್​ಎ) ಮಾಲಿನ್ಯಕಾರಕಗಳ ತಜ್ಞರ ಸಮಿತಿಯು, ಜಿಇ ಮತ್ತು 3 ಎಂಸಿಪಿಡಿ ಅಪಾಯಗಳನ್ನು ಮೌಲ್ಯಮಾಪನ ಮಾಡಿದೆ. ಈ ವೇಳೆ, ಕಾರ್ಸಿನೋಜೆನಿಕ್ ಮಾಲಿನ್ಯಕಾರಕಗಳು ಡಿಎನ್​ಎ ಹಾನಿ ಮತ್ತು ಕ್ಯಾನ್ಸರ್​​ಗೆ ಕಾರಣವಾಗುವ ಅಪಾಯ ಹೊಂದಿದೆ ಎಂದು ತಿಳಿಸಿತು.

ಭಾರತದಲ್ಲಿ ಟ್ರಾನ್ಸ್​ ಕೊಬ್ಬನ್ನು ನಿಯಂತ್ರಿಸುವಲ್ಲಿ ಭಾರತ ಮುಂದಾಗಿದೆ. ಆದರೆ, ಜಿಇ ಮತ್ತು 3 ಎಂಸಿಪಿಡಿ ಕುರಿತು ಮಾರ್ಗಸೂಚಿ ರೂಪಿಸುವಲ್ಲಿ ಈ ಕ್ರಮವೂ ಸೀಮಿತವಾಗಿದೆ. ಭಾರತವೂ ಇಎಫ್​ಎಸ್​ಎ ಮಾರ್ಗಸೂಚಿಗಳೊಂದಿಗೆ ಹೊಂದಾಣಿಕೆ ಮಾಡಬೇಕು ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಯಾವ ಅಡುಗೆ ಎಣ್ಣೆ ಆರೋಗ್ಯಕ್ಕೆ ಉತ್ತಮ; ತಿಂಗಳಿಗೆ ಎಷ್ಟು ಬಳಕೆ ಮಾಡಬೇಕು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.